Subscribe to Updates
Get the latest creative news from FooBar about art, design and business.
Author: roovari
14 March 2023, Bengaluru: Sanchaya presents the play ‘Ondu Matteradu’ on 16th of March 2023 evening at 7.30pm at Rangashankara, Bengaluru. An anthology of 3 different stories. This collaborative work by three young directors is uniquely presented. Original Story : Olangana Author: Jayanth Kaikini Script, Design & Direction: Sumadhura Rao About the play: Jayanth Kaikini is a renowned Kannada author known for his depiction of struggles of contemporary life. “Olangana” is one such work of his with a gripping story line. The story is set against the backdrop of scenic Ankola in Uttara Kannada District. It portrays the agony and…
14 ಮಾರ್ಚ್ 2023 ಮಂಗಳೂರು: ಕರಾವಳಿ ಮೂಲದ ಕೊಂಕಣಿ ಕವಿ ಮೆಲ್ವಿನ್ ರೊಡ್ರಿಗಸ್ ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ಸಲಹಾ ಮಂಡಳಿಯ ಸಂಚಾಲಕರಾಗಿ 09.03.2023ರಂದು ಆಯ್ಕೆಯಾಗಿದ್ದಾರೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿ ಮಾನ್ಯತೆ ಪಡೆದಿರುವ ಭಾರತದ ಎಲ್ಲಾ ಭಾಷೆಗಳ ಸುಮಾರು 99 ಪ್ರತಿನಿಧಿಗಳು ಭಾಗವಹಿಸಿದ್ದ ಸಾಹಿತ್ಯ ಅಕಾಡೆಮಿಯ ಸಾಮಾನ್ಯ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಇವರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಐದು ವರ್ಷಗಳವರೆಗೆ ಇವರು ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಕೊಂಕಣಿ ಸಲಹಾ ಮಂಡಳಿಯ ನೇತೃತ್ವ ವಹಿಸಲು ಗೋವಾ ರಾಜ್ಯದ ಹೊರಗಿನವರೊಬ್ಬರು ಆಯ್ಕೆಯಾಗಿರುವುದು ಸಾಹಿತ್ಯ ಅಕಾಡೆಮಿಯ ಇತಿಹಾಸದಲ್ಲಿ ಇದೇ ಮೊದಲು. ಕರ್ನಾಟಕ ರಾಜ್ಯಕ್ಕೆ ಈ ಮನ್ನಣೆ ಪ್ರಾಪ್ತವಾಗಿದೆ. ಸಾಹಿತ್ಯ ಅಕಾಡೆಮಿಯಲ್ಲಿ ನಡೆದ ಚುನಾವಣೆಯಲ್ಲಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹರಿಯಾಣದ ಮಾಧವ ಕೌಶಿಕ್ ಮತ್ತು ಉಪಾಧ್ಯಕ್ಷರಾಗಿ ಹೊಸದಿಲ್ಲಿಯ ಕುಸುಮ ಶರ್ಮ ಆಯ್ಕೆಯಾಗಿದ್ದಾರೆ. ಕವಿತಾ ಟ್ರಸ್ಟ್ ನ ಸ್ಥಾಪಕರಾಗಿರುವ ಇವರು ಕೊಂಕಣಿ ಕಾವ್ಯ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸುತ್ತಾ ಬಂದಿದ್ದಾರೆ. ಆರು ಕವನ ಸಂಕಲನಗಳು, ಎರಡು ಪ್ರಬಂಧ ಸಂಕಲನಗಳು,…
14-03-2023,ಮಂಗಳೂರು: ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ ಸರಣಿ ಕಾರ್ಯಕ್ರಮ ದಿನಾಂಕ 12-03-2023 ರಂದು ಶ್ರೀ ಮಹಾಮ್ಮಾಯ ದೇವಸ್ಥಾನದ ಆವರಣದಲ್ಲಿ ಜರಗಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ನಡೆದ ಕೆ. ದಿವಾಕರ ದಾಸ್ ಅವರ ಸಂಮಾನ ಕಾರ್ಯಕ್ರಮದಲ್ಲಿ ಸಿಎ. ಶಿವಾನಂದ ಪೈ ಅಧ್ಯಕ್ಷರಾಗಿದ್ದರು.ಹಿಂದಿನ ಕಾಲದಲ್ಲಿ ಇಲ್ಲಿನ ಜನರ ಮನೋರಂಜನೆಗೆ ಇದ್ದದ್ದು ಯಕ್ಷಗಾನ. ಇದರಿಂದ ಅಪಾರ ಪುರಾಣ ಜ್ಞಾನವನ್ನು ಕರಾವಳಿಯ ಜನತೆ ಹೊಂದಿದ್ದರು.ಈ ಸಂಘ ತಾಳಮದ್ದಳೆಯ ಮೂಲಕ ಜನರ ಮನರಂಜನೆಗೂ, ಮನೋವಿಕಾಸಕ್ಕೂ ಕಾರಣವಾಗಿ 100 ವರ್ಷ ಪೂರೈಸಿರುವುದು ಅತ್ಯಂತ ಸಂತೋಷ ಎಂದರು. ಕೆ. ದಿವಾಕರ ದಾಸ್ ಇವರ ಅಭಿನಂದನೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಗೈದರು.ವೇಷಧಾರಿಯಾಗಿ, ಪ್ರಸಾದನ ತಯಾರಿಕೆಯ ಉದ್ಯಮಿಯಾಗಿ, ಯಕ್ಷಗಾನ ಸಂಘಟಕನಾಗಿ ಕಲಾ ಸೇವೆಯನ್ನು ಮಾಡಿದವರು ದಿವಾಕರ ದಾಸ್. ಅವರು ವಾಗೀಶ್ವರಿ ಸಂಘದಲ್ಲಿ ಸಲ್ಲಿಸಿದ ಸೇವೆಗಾಗಿ ಅವರನ್ನು ಸಂಮಾನಿಸುತ್ತಿದ್ದೇವೆ ಎಂದರು. ಸಂಮಾನಕ್ಕೆ ಉತ್ತರವಾಗಿ ದಿವಾಕರ ದಾಸ್ ತಾನು ಇಲ್ಲಿ ಗೈದ ಅಳಿಲ ಸೇವೆಯನ್ನು ಗುರುತಿಸಿ ಸಂಮಾನಿಸಿದ್ದಕ್ಕೆ ಕೃತಜ್ಞತೆಗಳನ್ನು…
14-03-2023,ಪುತ್ತೂರು: ಮಹಿಳಾ ಮಣಿಗಳಿಂದ ಅಂತ:ಪುರ ಗೀತೆಗಳ ಅಭಿನಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು 11-03-2023ರಂದು “ನಾಟ್ಯ ರಂಗ” ಪುತ್ತೂರು, ಇಲ್ಲಿ ನಾಟ್ಯರಂಗದ ನಿರ್ದೇಶಕಿ ವಿದುಷಿ ಮಂಜುಳ ಸುಬ್ರಹ್ಮಣ್ಯ ಇವರ ನಿರ್ದೇಶನದಲ್ಲಿ ವಿಶೇಷವಾಗಿ ಆಚರಿಸಲಾಯಿತು. ನಾಟ್ಯರಂಗದ ಮಹಿಳಾ ವಿದ್ಯಾರ್ಥಿಗಳು ಅಂತ:ಪುರ ಗೀತೆಗಳ ಅಭಿನಯ ಪ್ರದರ್ಶಿಸಿದರು. ಜೊತೆಗೆ ಅತಿಥಿಗಳಾಗಿ ಯುವ ಸಾಧಕ ಕಲಾವಿದೆಯರಾದ ಶ್ರೇಯಾ ಆಚಾರ್ಯ ಹಾಗೂ ಹೇಮ ಸ್ವಾತಿ ತಮ್ಮ ಕಲಾ ಪಯಣದ ಹಾದಿಯನ್ನು ತಮ್ಮದೇ ಪದಗಳಲ್ಲಿ ವರ್ಣಿಸುತ್ತಾ ಪ್ರೇಕ್ಷಕರನ್ನು ರಂಜಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದ ನಾಟ್ಯರಂಗದ ನಿರ್ದೇಶಕಿ ವಿದುಷಿ ಮಂಜುಳ ಸುಬ್ರಹ್ಮಣ್ಯ ಮಾತಾಡುತ್ತಾ, “ನಮ್ಮ ನಾಟ್ಯರಂಗ ನೃತ್ಯ, ರಂಗಭೂಮಿ ಚಟುವಟಿಕೆಗಳಿಗೆ ಮೀಸಲು. ಇಲ್ಲಿನ ಕಲಿಕೆ ಮಕ್ಕಳಿಗೆ ಮಾತ್ರ ಸೀಮಿತವಾಗಿರದೆ,ಇಲ್ಲಿ ಮಹಿಳೆಯರೂ ನೃತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದೆಲ್ಲಾ ನೃತ್ಯ ಅಥವಾ ಇನ್ಯಾವುದೇ ಕಲಾಪ್ರಕಾರಗಳನ್ನು ಎಳವೆಯಲ್ಲೇ ಕಲಿತು ರೂಢಿಸಬೇಕೆಂಬ ಚಿಂತನೆ ಇತ್ತು. ಆದರೆ, ಕಲಿಕೆಗೆ ವಯಸ್ಸಿನ ಹಂಗು ಇಲ್ಲ ಎಂಬುದನ್ನು ಇಂದು ನಾಟ್ಯರಂಗದ ಈ ಮಹಿಳೆಯರು ಅದನ್ನು ನಿಜವಾಗಿಸಿದ್ದಾರೆ. ಇವರು ಛಲ…
14-03-2023,ಮಂಗಳೂರು: ನೀನಾಸಂ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ನುಡಿದಂತೆ ’ಪ್ರತಿಯೊಬ್ಬನೂ ಮೊದಲು ತಾನಿದ್ದ ಜಾಗದಿಂದಲೇ ತನ್ನ ರಂಗಕಾಯಕವನ್ನು ಆರಂಭಿಸಬೇಕು. ಕಲೆಯ ತುಡಿತ ಇದ್ದವ ಮಾತ್ರ ಶ್ರೇಷ್ಠ ಕಲಾವಿದನಾಗಿ ಬೆಳೆಯಬಲ್ಲ. ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ. ಆರೋಗ್ಯಕರ ಸಮಾಜ ನಿರ್ಮಾಣದ ಕನಸು ಹೊತ್ತ ಕಲಾಭಿಯ ಈ ಪ್ರಾಮಾಣಿಕ ಪ್ರಯತ್ನ ಶ್ಲಾಘನೀಯ’ ಎಂದು ಯಕ್ಷ ರಂಗಾಯಣ ಕಾರ್ಕಳ ಇದರ ನಿರ್ದೇಶಕರಾದ ಡಾ. ಜೀವನ್ ರಾಂ ಸುಳ್ಯ ಹೇಳಿದರು. ಅವರು ನಗರದ ಕ್ರಿಯಾಶೀಲ ಸಂಸ್ಥೆ ಕಲಾಭಿ(ರಿ.) ಮಂಗಳೂರು, ಕಲಾಭಿ ಥಿಯೇಟರ್ ಆಶ್ರಯದಲ್ಲಿ ಹಮ್ಮಿಕೊಂಡ ‘ಅ ಪಪೆಟ್ ಜರ್ನಿ’ ಉಚಿತ ಕಾರ್ಯಾಗಾರವನ್ನು 11.03.2023 ರಂದು ಉದ್ಘಾಟಿಸಿ ಮಾತನಾಡಿದರು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕರಾದ ಭರತ್ ಶೆಟ್ಟಿ ಶುಭ ಹಾರೈಸಿದರು. ಕಲಾಭಿಯ ಅಧ್ಯಕ್ಷ ಸುರೇಶ್ ಬಿ. ಸ್ವಾಗತಿಸಿದರು. ದೇವಿ ದಯಾಲ್ ಅರ್ತ್ ಮೂವರ್ಸ್ ಮಾಲಕರಾದ ಜಗದೀಶ್ ಶೆಟ್ಟಿ, ಕಲಾ ಪೋಷಕ ಉಮೇಶ್, ಕಲಾಭಿ ಉಪಾಧ್ಯಕ್ಷ ಸುಮನ್ ಕದ್ರಿ, ಪಪೆಟ್ ಕಾರ್ಯಾಗಾರದ ನಿರ್ದೇಶಕ ಶ್ರವಣ್ ಹೆಗ್ಗೋಡು, ಕಳರಿ ಪಟು ಗಣೇಶ್…
13-03-2023, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 2021 ನೇ ಸಾಲಿನ ವಿವಿಧ ಕೃತಿಗಳಿಗೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. 49 ವಿಭಾಗಗಳಿಗೆ ಆಯ್ಕೆಯಾದ 53 ಕೃತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಳ್ಯದ ಹಿರಿಯ ಸಾಹಿತಿ ಡಾ. ಚಂದ್ರಶೇಖರ್ ದಾಮ್ಲೆ, ಸಾಹಿತಿ ಡಾ. ದೀಪಾ ಫಡ್ಕೆ, ಲೇಖಕಿ ಸ್ಮಿತಾ ಅಮೃತರಾಜ್, ಡಾ. ಮುರಳಿಮೋಹನ್ ಚೂಂತಾರು, ಬಿ. ಸತ್ಯವತಿ ಎಸ್.ಭಟ್ ಕೊಳಚಪ್ಪು, ರಾಜಶ್ರೀ ರೈ ಪೆರ್ಲ, ಡಾ. ಎಚ್. ಜೆ. ಶ್ರೀಧರ್ ಆ.ಬ್ರ.ಸಂತೋಷ ಕುಮಾರ್, ಶಾಂತಿನಾಥ ಕೆ.ಹೋತಪೇತಿ ಇವರ ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ಮಾರ್ಚ್ 12 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣ ರಾಜ ಪರಿಷತ್ತಿನ ಮಂದಿರದಲ್ಲಿ ಸಮಾರಂಭವು ನಡೆಯಿತು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ್ ಜೋಶಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮವನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ನಿರಂಜನ ವಾನಳ್ಳಿ ಉದ್ಘಾಟಿಸಿದರು.ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಂ ರಾಯಪುರ ಇವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ…
13-03-2023,ಮಂಗಳೂರು: ಜನಪದರು ಸಾಂಸ್ಕೃತಿಕ ವೇದಿಕೆ ಪ್ರಸ್ತುತ ಪಡಿಸುವ,ಮುದೇನೂರು ಸಂಗಣ್ಣ ರಚನೆಯ ‘ಸೂಳೆ ಸಂಕವ್ವ’ನಾಟಕವು ಇದೇ ಬರುವ 14-03-2023 ರಂದು ಬೆಂಗಳೂರಿನ ರಂಗಶಂಕರದಲ್ಲಿ ಪ್ರದೇಶನ ಗೊಳ್ಳಲಿದೆ ನಾಟಕದ ಬಗ್ಗೆ ಮುದೇನೂರು, ಸಂಘಣ್ಣನವರ ಅಪರೂಪದ ನಾಟಕ ಸೂಳೆ ಸಂಕಪ್ಪ 12 ನೇ ಶತಮಾನದ ಬಸವ ಕ್ರಾಂತಿಯ ಸಮಸಮಾಜ , ಅಂಗತಾರತಮ್ಯ ,ಮೇಲು ಕೀಳುಗಳ ವಿರುದ್ಧ ದನಿ ಎತ್ತುವ ಅಂಶವುಳ್ಳ ಕಲ್ಯಾಣ ನಗರಿಯ ವೇಶ್ಯೆ ಒಬ್ಬಳು ಆನುಭವ ಮಂಟಪದ ಅರಿವಿನಿಂದ ಹಂಗುಗಿತ್ತಿಯ ಬದುಕನ್ನು ದಿಕ್ಕರಿಸಿ ಮುಖ್ಯ ವಾಹಿನಿಗೆ ಬಂದು ಗೌರವಯುತ ಜೀವನ ನಡೆಸುವ ಪುರಷ ಸಮಾಜದ ದೌರ್ಜನ್ಯಗಳನ್ನು ವಿರೋಧಿಸುವ ಶರಣೆಯಕಥೆ ನಿರ್ದೇಶಕ ರಾಮಕೃಷ್ಣ ಬೆಳತ್ತೂರು ರಾಮಕೃಷ್ಣ ಬೆಳತ್ತೂರು ಕನ್ನಡ ರಂಗ ಭೂಮಿಯ ಯುವ ಉತ್ಸಾಹಿ , ರಂಗಕರ್ಮಿಗಳು, ಕಲೆಯೇ ಜೀವನ ಕಾಯಕವಾಗಿಸಿಕೊಂಡವರು ಔಪಚಾರಿಕ ರಂಗ ಶಿಕ್ಷಣ ಪಡೆದರೂ ಅನುಭವದ ಮೂಲಕವೇ ಶ್ರೇಷ್ಟತೆ ಸಾಧಿಸಿದ್ದಾರೆ, ಕಾಡುಗೋಡಿ ಬೆಳತ್ತೂರಿನ ಇವರು ಎರಡು ದಶಕಗಳಿಗಿಂತ ಹೆಚ್ಚುಕಾಲ ರಂಗ ಭೂಮಿಯಲ್ಲಿ ತೊಡಗಿದ್ದಾರೆ.ಖ್ಯಾತ ರಂಗಕರ್ಮಿ ಮೇಕಪ್ ನಾಣಿ. ಅವರ ಮೆಚ್ಚಿನ ಶಿಷ್ಯರೂ ಹೌದು…
ಲಾಡ್ಜ್ ಪ್ರೊಫೆಷನಲ್ ಗ್ರೂಪ್ ಇವರ ವತಿಯಿಂದ ಫೆ.19ರಂದು ಜೆ.ಪಿ. ನಗರ 7ನೇ ಹಂತದಲ್ಲಿ ಭಕ್ತಿ ಗಂಧರ್ವ ವಿದ್ವಾನ್ ಎಂ.ಎಸ್. ದೀಪಕ್ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಯನ್ನು ನಡೆಸಲಾಯಿತು. ಪಕ್ಕ ವಾದ್ಯದಲ್ಲಿ ಪಿಟೀಲು ವಿದ್ವಾನ್ ಶಂಕರ್ ರಾಜನ್ ಹಾಗು ಮೃದಂಗ ವಿದ್ವಾನ್ ಫಣೀಂದ್ರ ಭಾಸ್ಕರ್ ಇವರು ವಾದ್ಯ ಸಹಕಾರ ನೀಡಿದರು. ಈ ಕಚೇರಿಯನ್ನು ಬಹಳ ವಿಭಿನ್ನವಾಗಿ ಆಯೋಜಿಸಲಾಗಿತ್ತು. ಹಾಡುಗಾರಿಕೆಯೊಂದಿಗೆ ಸಂವಾದ ಹಾಗೂ ಪ್ರಶ್ನೋತ್ತರಗಳಿಂದ ಕೂಡಿದ ಕಾರಣ ಸಭಿಕರಿಗೆ ಗಾನ ರಸದೌತಣದ ಜೊತೆಗೆ ಸಂಗೀತದ ಜ್ಞಾನಾರ್ಜನೆಯು ನಡೆಯಿತು. ವಿದ್ವಾನ್ ದೀಪಕ್ ರವರು ಬಹಳ ಸೊಗಸಾಗಿ ಯುಗ ಯುಗಗಳಿಂದಲೂ ಸಂಗೀತಕ್ಕೆ ಇರುವ ಮಹತ್ವ ಹಾಗೂ ಅದು ಮೂಡಿಸಿದ ಛಾಪಿನ ಬಗ್ಗೆ ಮಾಹಿತಿ ನೀಡಿ ಓಂಕಾರವೇ ಸಂಗೀತದ ಮೂಲ ಎಂದು ವಿವರಿಸುತ್ತಾ, ಭರತನ ನಾಟ್ಯ ಶಾಸ್ತ್ರ ಈಗಲೂ ಹೇಗೆ ಪ್ರಸ್ತುತ ಎಂಬದನ್ನು ತಿಳಿಸಿದರು. ಮಾತೇ ಸರಸ್ವತಿಯಿಂದ ಆದಿಯಾಗಿ, ಸತ್ಯ ಯುಗದಲ್ಲಿ ನಾರದರು-ಗಂಧರ್ವ-ಕಿನ್ನರರು ಸಂಗೀತದ ಜ್ಞಾನ ಪಸರಿಸಿದರೆ, ತ್ರೇತಾಯುಗದಲ್ಲಿ ರಾಮ ಲಕ್ಷ್ಮಣ ಹನುಮರ ಮೈತ್ರಿಗೆ ಕಾರಣವೇ ಸಂಗೀತ.…
13 ಮಾರ್ಚ್ 2023, ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ರಾಣಿ ಅಬ್ಬಕ್ಕ ಅಧ್ಯಯನ ಪೀಠ ಹಮ್ಮಿಕೊಂಡ ಸರಣಿ ಉಪನ್ಯಾಸ ಕಾರ್ಯಕ್ರಮವು ಸುರತ್ಕಲ್ ನ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ಬಾಲಚಂದ್ರ ಕೆ. ಇವರ ಅಧ್ಯಕ್ಷತೆಯಲ್ಲಿ ದಿನಾಂಕ 11-03-2023ರಂದು ನಡೆಯಿತು. “ಮಹಿಳೆಯರಿಗಿಂತ ಮಿಗಿಲಾದ ಶಕ್ತಿ ಇನ್ನೊಂದಿಲ್ಲ. ಪುರುಷನಿಗೆ ಪ್ರತಿಯೊಂದು ಸಂದರ್ಭ ಆಧಾರವಾಗಿ ನಿಂತವರು ಮಹಿಳೆಯರು, ಮಾತೆಯರು ಜಗತ್ತಿನ ಸರ್ವಶಕ್ತಿಯಾಗಿದ್ದಾರೆ. ರಾಣಿ ಅಬ್ಬಕ್ಷ ಸ್ವಾಭಿಮಾನಕ್ಕೆ ಹೆಸರಾದ ಮಹಿಳೆ, ಪ್ರಥಮ ಸ್ವಾತಂತ್ರ ಹೋರಾಟಗಾರ್ತಿಯಾಗಿ ತುಳುನಾಡಿನ ಮಣ್ಣಿಗೆ ಕೀರ್ತಿ ತಂದವರು” ಎಂದು ಬಾಲಚಂದ್ರ ಕೆ. ಅಭಿಪ್ರಾಯಪಟ್ಟರು. “ಸ್ವಾಭಿಮಾನದ ಸಂಕೇತ ರಾಣಿ ಅಬ್ಬಕ್ಕ” ವಿಷಯದ ಕುರಿತು ಮಾತನಾಡಿದ ಗೋವಿಂದದಾಸ ಕಾಲೇಜಿನ ಉಪನ್ಯಾಸಕಿ ಅಕ್ಷತಾ ನವೀನ್ ಶೆಟ್ಟಿ, ಮಾತೃ ಮೂಲ (ಅಳಿಯಕಟ್ಟು) ಕುಟುಂಬ ಪದ್ಧತಿಯ ತುಳುನಾಡಿನ ಬದುಕಿನಲ್ಲಿ ಪುರುಷ ಪಧಾನ ವ್ಯವಸ್ಥೆಯನ್ನು ಮೆಟ್ಟಿನಿಂತು ವಿದೇಶಿಯರೊಂದಿಗೆ ಹೋರಾಡಿದ ವೀರ ವನಿತೆ ಅಬ್ಬಕ್ಕ ಎಂದರು. ಶ್ರೀ ಬಾಲಚಂದ್ರ ಕೆ., ಉಪನ್ಯಾಸಕಿ ಶ್ರೀಮತಿ ಅಕ್ಷತಾ ನವೀನ್ ಶೆಟ್ಟಿ, ಗೋವಿಂದದಾಸ ಪದವಿಪೂರ್ವ ಕಾಲೇಜಿನ ಆಂಗ್ಲ ಉಪನ್ಯಾಸಕಿ ಶ್ರೀಮತಿ…
13-03-2023,ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಉಡುಪಿ ತಾಲೂಕು ಘಟಕ ದಿಂದ ಅಮೇರಿಕಾ ಕನ್ನಡ ಸಾಹಿತ್ಯ ರಂಗ ಸಂಸ್ಥೆಯ ಶಶಿಕಲಾ ಚಂದ್ರಶೇಖರ್ ಅವರೊಂದಿಗೆ ಮಾತುಕತೆ ಕಾರ್ಯಕ್ರಮವು ಉಡುಪಿಯ ಕೊಡವೂರಿನ ಭಾಮ ಆರ್ಟ್ ಗ್ಯಾಲರಿಯಲ್ಲಿ ನಡೆಯಿತು . ಶಶಿಕಲಾ ಚಂದ್ರಶೇಖರ್ ಮಾತನಾಡಿ ಕಲೆ, ಸಂಸ್ಕೃತಿ ಮತ್ತು ಕನ್ನಡ ಸಾಹಿತ್ಯದ ಕುರಿತಾದ ಹಲವು ಕಾರ್ಯಕ್ರಮಗಳು ನಿರಂತರವಾಗಿ ಅಮೆರಿಕದಲ್ಲಿ ನಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಕನ್ನಡ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ ಎಂದರು. ಪ್ರಸಿದ್ಧ ಸಾಹಿತಿ ವೈದೇಹಿಯವರು ತಾವು ಅಮೆರಿಕಕ್ಕೆ ಹೋದ ಸಂದರ್ಭದಲ್ಲಿ ಸಾಹಿತ್ಯ ಕಾರ್ಯಕ್ರಮದ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಕವಯಿತ್ರಿ ಜ್ಯೋತಿ ಮಹದೇವ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಾಹಿತಿ ಶಶಿಕಲಾ ಚಂದ್ರಶೇಖರ್ ರವರನ್ನು ಕಸಾಪ ವತಿಯಿಂದ ಗೌರವಿಸಿ, ಅಭಿನಂದಿಸಲಾಯಿತು