Subscribe to Updates
Get the latest creative news from FooBar about art, design and business.
Author: roovari
ಉದ್ಯಾವರ : ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಸುವರ್ಣ ಸಂಭ್ರಮ ವರ್ಷದ ಜನವರಿ ತಿಂಗಳ ಕಾರ್ಯಕ್ರಮವಾಗಿ ಹುತಾತ್ಮ ದಿನದ ಅಂಗವಾಗಿ ನಾದ ಮಣಿನಾಲ್ಕೂರು ಅವರಿಂದ ಶಾಂತಿ, ಪ್ರೀತಿ, ಸೌಹಾರ್ದತೆಯಾಸೆಯ ಹಾಡುಗಾರಿಕೆ ‘ಕತ್ತಲ ಹಾಡು’ ಕಾರ್ಯಕ್ರಮ ದಿನಾಂಕ 30-01-2024 ಮಂಗಳವಾರ ಸಂಜೆ ಗಂಟೆ 6.00ಕ್ಕೆ ಉದ್ಯಾವರ ಹಿಂದೂ ಸಾರ್ವಜನಿಕ ರುದ್ರಭೂಮಿ ‘ಮುಕ್ತಿಧಾಮ’ದಲ್ಲಿ ಜರಗಲಿದೆ. ಕಾರ್ಯಕ್ರಮದ ಪ್ರಾರಂಭದಲ್ಲಿ ಉಡುಪಿ ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರಾದ ಡಾ. ನಿಕೇತನ ಗಾಂದೀಜಿಯವರ ಬಗ್ಗೆ ಕೆಲ ಮಾತುಗಳನ್ನು ಆಡಲಿದ್ದಾರೆ. ಈ ವಿಶಿಷ್ಠ ಕಾರ್ಯಕ್ರಮಕ್ಕೆ ತಾವು ಸಾಕ್ಷೀಗಳಾಗಬೇಕು ಎಂದು ಉದ್ಯಾವರ ಫ್ರೆಂಡ್ಸ್ ಸರ್ಕಲ್ ಸಂಸ್ಥೆಯ ಅಧ್ಯಕ್ಷರಾದ ತಿಲಕ್ ರಾಜ್ ಸಾಲಿಯಾನ್, ಗೌರವಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅಬಿದ್ ಆಲಿ ಮತ್ತು ಕೋಶಾಧಿಕಾರಿಯಾದ ಪ್ರೇಮ್ ಮಿನೆಜಸ್ ತಿಳಿಸಿದ್ದಾರೆ.
ಉಡುಪಿ : ರಾಗ ಧನ ಉಡುಪಿ (ರಿ) ಇವರು ನಡೆಸುವ 36ನೆಯ ‘ಶ್ರೀ ಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವ -2024’ವು ದಿನಾಂಕ 02-02-2024ರಿಂದ 04-02-2024ರವರೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ದಿನಾಂಕ 02-02-2024ರಂದು ಸಂಜೆ 5 ಗಂಟೆಗೆ ಎಂ.ಆರ್.ಪಿ.ಎಲ್.ನ ಮಾನವ ಸಂಪನ್ಮೂಲ ಪ್ರಬಂಧಕ ಶ್ರೀ ಕೃಷ್ಣ ಹೆಗ್ಡೆ ಮೀಯಾರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ರಾಗ ಧನ ಇದರ ಉಪಾಧ್ಯಕ್ಷರಾದ ಪ್ರೊ. ಆರ್.ಎಲ್. ಭಟ್ ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಡಾ. ಶ್ರೀಕಿರಣ್ ಹೆಬ್ಬಾರ್ ವಹಿಸಲಿದ್ದಾರೆ. ನಂತರ ಚಿಲ್ಕುಂದ ಸಹೋದರಿಯರಾದ ಶ್ರೀಮತಿ ಲಕ್ಷ್ಮಿ ನಾಗರಾಜ್ ಹಾಗೂ ಶ್ರೀಮತಿ ಇಂದು ನಾಗರಾಜ್ ಅವರಿಂದ ಸಂಗೀತ ಕಛೇರಿ ನಡೆಯಲಿದೆ. ಬೆಂಗಳೂರಿನ ಶ್ರೀ ಬಿ.ಕೆ. ರಘು ವಯೊಲಿನ್ ಹಾಗೂ ಬೆಂಗಳೂರಿನ ಶ್ರೀ ಅನಿರುದ್ಧ ಭಟ್ ಮೃದಂಗದಲ್ಲಿ ಸಹಕರಿಸಲಿದ್ದಾರೆ. ದಿನಾಂಕ 03-02-2024ರಂದು ಅಪರಾಹ್ನ 2.15ಗಂಟೆಗೆ…
ಬ್ರಹ್ಮಾವರ : ಬ್ರಹ್ಮಾವರದ ಅಜಪುರ ಕರ್ನಾಟಕ ಸಂಘ (ರಿ.) ಮತ್ತು ಹಿರಿಯ ನಾಗರಿಕರ ವೇದಿಕೆ (ರಿ.) ಜಂಟಿಯಾಗಿ ಆಯೋಜಿಸಿದ ಸಂಘದ ಸಂಸ್ಥಾಪಕರ ಸಂಸ್ಮರಣಾ ಕಾರ್ಯಕ್ರಮ ಮತ್ತು ನೀಲಾವರ ಸೋಮೇಶಯ್ಯ ದತ್ತಿನಿಧಿ ಗಮಕವಾಚನ ಕಾರ್ಯಕ್ರಮವು ದಿನಾಂಕ 30-01-2024ರ ಮಂಗಳವಾರದಂದು ಸಂಜೆ ಗಂಟೆ 4.00ರಿಂದ ಬ್ರಹ್ಮಾವರದ ಹಿರಿಯ ನಾಗರಿಕರ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ‘ರಾಘವಾಂಕನ ಹರಿಶ್ಚಂದ್ರ ಚರಿತ್ರೆ’ ಕಥಾಭಾಗದ ಗಮಕವನ್ನು ಗಂಗೊಳ್ಳಿಯ ಸರಸ್ವತಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ಎಚ್. ಸುಜಯೀಂದ್ರ ಹಂದೆ ವಾಚಿಸಲಿದ್ದು, ಪಡುಬಿದ್ರೆಯ ಗಣಪತಿ ಪ್ರೌಢಶಾಲೆಯ ಅಧ್ಯಾಪಕರಾದ ಡಾ. ರಾಘವೇಂದ್ರ ರಾವ್ ಪ್ರವಚನಕಾರರಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಶ್ರೀ ಬೈಕಾಡಿ ದಿನಕರ ಶೆಟ್ಟಿ, ಶ್ರೀ ನಿತ್ಯಾನಂದ ಶೆಟ್ಟಿ ಹಾರಾಡಿ ಹಾಗೂ ಅಜಪುರ ಕರ್ನಾಟಕ ಸಂಘ (ರಿ.), ಬ್ರಹ್ಮಾವರ ಇದರ ಸರ್ವ ಸದಸ್ಯರು ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರತಿಷ್ಟಿತ ಪಂಕಜಶ್ರೀ ಪುರಸ್ಕಾರಕ್ಕಾಗಿ 2023ನೆಯ ಸಾಲಿಗೆ ಚನ್ನಗಿರಿಯ ಶ್ರೀಮತಿ ಸರೋಜಾ ನಾಗರಾಜ್ ಮತ್ತು 2024ನೆಯ ಸಾಲಿಗೆ ಬೆಂಗಳೂರಿನ ಶ್ರೀಮತಿ ಕೆ.ವಿ. ರಾಜೇಶ್ವರಿಯವರನ್ನು ಆಯ್ಕೆ ಮಾಡಲಾಗಿದೆ. ನಾಡೋಜ ಡಾ. ಮಹೇಶ ಜೋಶಿಯವರ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ಅನೇಕ ಹೆಸರುಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಯಾವುದೇ ಅರ್ಜಿ, ಶಿಪಾರಸ್ಸುಗಳಿಗೆ ಗಮನ ಕೊಡದೆ ಅರ್ಹರನ್ನು ಪಾರದರ್ಶಕವಾಗಿ ಆಯ್ಕೆಯನ್ನು ಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶ್ರೀಮತಿ ಎ. ಪಂಕಜಾ ಅವರು ಈ ಪ್ರಶಸ್ತಿಯನ್ನು ಸ್ಥಾಪನೆ ಮಾಡಿದ್ದು 2013ನೆಯ ಸಾಲಿನಿಂದಲೂ ಈವರೆಗೂ ಹತ್ತು ಪ್ರಮಖ ಬರಹಗಾರ್ತಿಯರು ಈ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. 2023ನೆಯ ಸಾಲಿನ ಪಂಕಜಶ್ರೀ ಪುರಸ್ಕಾರಕ್ಕೆ ಪಾತ್ರರಾಗಿರುವ ಕೆ.ಜಿ. ಸರೋಜಾ ನಾಗರಾಜ್ ಅವರು ಮೂಲತ: ದಾವಣಗೆರೆ ಜಿಲ್ಲೆಯ ಚನ್ನಗಿರಿಯವರು. ತಮ್ಮ ಹದಿಮೂರನೆಯ ವರ್ಷದಿಂದಲೂ ಬರವಣಿಗೆಯನ್ನು ನಿರಂತರವಾಗಿ ನಡೆಸುತ್ತಾ ಬಂದವರು. ‘ಸೂರ್ಯನ ಪಿಸುಮಾತು’, ‘ಹಸಿಮಣ್ಣಿನಲ್ಲಿ ಹೊಸ ಹೆಜ್ಜೆ’, ‘ಬಿಂಕದ ಕಾಡಿಗೆ’ ಸೇರಿದಂತೆ ಇವರ ಏಳು ಕೃತಿಗಳು ಈವರೆಗೂ ಪ್ರಕಟವಾಗಿದ್ದು, ದೃಶ್ಯ…
ಉಡುಪಿ : ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ನಕ್ಷತ್ರ ನಕ್ಕ ರಾತ್ರಿ’ ಎಂಬ ಕವನ ಸಂಕಲನ ಹಾಗೂ ‘ಇರವಿನ ಅರಿವು’ ಎಂಬ ವಿಮರ್ಶಾ ಸಂಕಲನ ಪುಸ್ತಕಗಳನ್ನು ಕನ್ನಡದ ಪ್ರಸಿದ್ಧ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಉಡುಪಿಯ ಅಜ್ಜರಕಾಡಿನ ಪಾರ್ಕ್ ಬಳಿ ಇರುವ ಐತಿಹಾಸಿಕ ಸ್ಥಳ ರೇಡಿಯೋ ಟವರ್ ಬಳಿಯಲಿ ದಿನಾಂಕ 25-01-2024ರಂದು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದ ಪ್ರಸಿದ್ಧ ಜಾದೂ ಕಲಾವಿದರಾದ ಪ್ರೊ. ಶಂಕರ್, ಲೇಖಕಿ ಪೂರ್ಣಿಮಾ ಜನಾರ್ದನ್, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ಅಪ್ನಾ ಹಾಲಿಡೇಸ್ ಆಡಳಿತ ನಿರ್ದೇಶಕರಾದ ನಾಗರಾಜ್ ಹೆಬ್ಬಾರ್, ಸ್ಮಿತಾ ಕಾಯ್ಕಿಣಿ, ನಿರೂಪಕ ಅವಿನಾಶ್ ಕಾಮತ್, ಕಲಾವಿದೆ ಪದ್ಮಾಸಿನಿ ಉದ್ಯಾವರ, ರಾಘವೇಂದ್ರ ಪ್ರಭು ಕರ್ವಾಲು ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು : ಸ್ವರ ಲಯ ಸಾಧನ ಫೌಂಡೇಶನ್, ಕಲಾ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಆಶ್ರಯದಲ್ಲಿ ಆಯೋಜಿಸಿರುವ ‘ಸ್ವರ ಸಂಕ್ರಾಂತಿ ಉತ್ಸವ-24’ ಇದರ ಅಂಗವಾಗಿ ಸಂಗೀತ ಕಛೇರಿಯು ದಿನಾಂಕ 15-01-2024ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ನಿಡಸೊಸಿ ಶ್ರೀ ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನದ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಅವರು, “ಸ್ವರ ಸಂಕ್ರಾಂತಿ ಉತ್ತಮ ಪರಿಕಲ್ಪನೆ ಅದ್ಭುತವಾಗಿ ಮೂಡಿಬಂದಿದೆ. ಈ ಮೂಲಕ ಸಂಸ್ಕೃತಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಂಗೀತದ ಮೂಲಕ ಮಕ್ಕಳನ್ನು ಭವಿಷ್ಯಕ್ಕೆ ಅಣಿಯಾಗಿಸುತ್ತಿರುವ ಕಾರ್ಯ ಶ್ಲಾಘನೀಯ” ಎಂದರು. ಈ ಸಮಾರಂಭದಲ್ಲಿ ‘ಸ್ವರ ರತ್ನ ಪ್ರಶಸ್ತಿ’ ಸ್ವೀಕರಿಸಿದ ವಿದ್ವಾನ್ ವಿಟ್ಠಲ ರಾಮಮೂರ್ತಿ ಮಾತನಾಡುತ್ತಾ “ಸಂಗೀತ ಎಲ್ಲಾ ಮನಸ್ಸುಗಳಿಗೆ ಮುದ ನೀಡುತ್ತದೆ. ಸಂಗೀತಕ್ಕೆ ಮಕ್ಕಳನ್ನು ಸೆಳೆಯುವಂತೆ ಮಾಡಬೇಕು. ಸಂಗೀತ ಅಭ್ಯಾಸ ಮಾಡುವುದರಲ್ಲಿ ತೃಪ್ತಿ ಇದೆ. ಇಂದಿನ ಪೀಳಿಗೆ ಸಂಗೀತ ಕಲಿಯುವತ್ತ ಹೆಚ್ಚು ಆಕರ್ಷಿತರಾಗಬೇಕು. ಸಂಗೀತ ಪಯಣ ಆನಂದಿಸುವುದರ ಜತೆಗೆ ಹೊಸತನದೊಂದಿಗೆ…
ಮಡಿಕೇರಿ : ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ 81ನೇ ಪುಸ್ತಕ ಹಾಗೂ ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಬರೆದಿರುವ 6ನೇ ಪುಸ್ತಕ ‘ಪೂ ಬಳ್ಳಿ’ ಕೃತಿಯ ಬಿಡುಗಡೆ ಕಾರ್ಯಕ್ರಮವು ದಿನಾಂಕ 19-01-2024ರಂದು ನಡೆಯಿತು. ಕೃತಿ ಬಿಡುಗಡೆಗೊಳಿಸಿದ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಮಾತನಾಡುತ್ತಾ, “ಜ್ಞಾನ ಸಂಪಾದನೆ ಮತ್ತು ಸಂಸ್ಕೃತಿಯ ಉಳಿವಿಗೆ ಪುಸ್ತಕ ಓದುವ ಹಾಗೂ ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ವಿಶಿಷ್ಟವಾಗಿರುವ ಕೊಡವ ಭಾಷೆಯ ಮೇಲಿನ ಅಭಿಮಾನದಿಂದ ಅನೇಕರು ಕೊಡವ ಪುಸ್ತಕವನ್ನು ಹೊರತರುತ್ತಿದ್ದಾರೆ. ಆ ಮೂಲಕ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪ್ರಯತ್ನಿಸುತ್ತಿದ್ದಾರೆ. ನಮ್ಮ ಪೂರ್ವಜರು ನೀಡಿರುವ ಸಂದೇಶವನ್ನು ಲೇಖಕಿ ತಮ್ಮ ‘ಪೂ ಬಳ್ಳಿ’ ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಇದು ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮತ್ತು ಪ್ರೇರಣೆ ನೀಡುವಂತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯ ಸಾಹಿತಿ ಉಳ್ಳಿಯಡ ಡಾಟಿ ಪೂವಯ್ಯ ಮಾತನಾಡಿ, “ಸಾಹಿತ್ಯಕ್ಕೆ ಎಂದಿಗೂ ಸಾವಿಲ್ಲ. ಯಾವುದೇ ಲಾಭವನ್ನು ನಿರೀಕ್ಷೆ ಮಾಡದೆ, ಸ್ವಾರ್ಥ ಮನೋಭಾವನೆಯನ್ನು…
ಸುರತ್ಕಲ್ : ಬೆಂಗಳೂರಿನ ವೀರಲೋಕ ಪ್ರಕಾಶನ, ಸುರತ್ಕಲ್ಲಿನ ಗೋವಿಂದದಾಸ ಕಾಲೇಜು ಮತ್ತು ಉಡುಪಿ ಲೇಖಕಿಯರ ಮತ್ತು ವಾಚಕಿಯರ ಸಂಘ ಇವುಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದ ‘ದೇಸಿ ಕಥಾ ಕಮ್ಮಟ’ವು ದಿನಾಂಕ 03-02-2024 ಮತ್ತು 04-02-2024ರಂದು ಗೋವಿಂದದಾಸ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲೆಯ ಯುವ ಕಥೆಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಮ್ಮಟವನ್ನು ಆಯೋಜಿಸಲಾಗಿದೆ. ಭಾಗವಹಿಸುವವರಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ಕಮ್ಮಟದಲ್ಲಿ ಭಾಗವಹಿಸಲು ಮೊದಲು ನೋಂದಾಯಿಸಿದ 40 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಆಸಕ್ತರು ಲೇಖಕಿಯರು ಮತ್ತು ವಾಚಕರ ಸಂಘ, ಉಡುಪಿ ಮತ್ತು ಗೋವಿಂದ ದಾಸ ಕಾಲೇಜಿನ ಕನ್ನಡ ವಿಭಾಗದ ಡಾ. ಸಂತೋಷ್ ಆಳ್ವ ಅವರನ್ನು ಸಂಪರ್ಕಿಸಬಹುದಾಗಿದೆ. ಕಮ್ಮಟದಲ್ಲಿ ಭಾಗವಹಿಸುವವರಿಗೆ ಊಟದ ವ್ಯವಸ್ಥೆ ಮಾಡಲಾಗುವುದು.
ಬೆಂಗಳೂರು : ಕೆ. ಮೋಹನ್ ನಿರ್ದೇಶನದ ಬೆಂಗಳೂರಿನ ತ್ಯಾಗರಾಜ ನಗರದಲ್ಲಿರುವ ಯಕ್ಷದೇಗುಲಕ್ಕೆ ಯಕ್ಷಗಾನದ ಮೂಲ ಸತ್ವ ತಿಳಿದುಕೊಳ್ಳಲು ಅಮೇರಿಕದ ಡಾ. ಮಾರ್ಷಲ್ ಗಂಜ್ ಮತ್ತು ತಂಡದವರು ದಿನಾಂಕ 23-01-2024ರಂದು ಆಗಮಿಸಿದರು. ಕಳೆದ 45 ವರ್ಷದಿಂದ ಯಕ್ಷಗಾನ ಪ್ರದರ್ಶನ, ಕಮ್ಮಟ, ತರಬೇತಿ, ಕಾರ್ಯಗಾರ, ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ ಹೀಗೆ ಗುಣಾತ್ಮಕ ಪ್ರದರ್ಶನ ನೀಡುತ್ತಾ ಬಂದಿರುವ ಈ ಸಂಸ್ಥೆಯಲ್ಲಿ ಪ್ರಿಯಾಂಕ ಕೆ. ಮೋಹನ ನಿರ್ದೇಶನದಲ್ಲಿ ಸಂಪ್ರದಾಯ ಕೊಡಂಗಿ ನೃತ್ಯ, ಬಾಲಗೋಪಾಲ, ಪೀಠಿಕಾ ಸ್ತ್ರೀವೇಷ, ಕೃಷ್ಣನ ಒಡ್ಡೋಲಗ, ರಾಜವೇಷದ ಒಡ್ಡೋಲಗ, ಯುದ್ಧ ನೃತ್ಯ, ಅಭಿನಯ, ಮಾತುಗಾರಿಕೆ ಬಗ್ಗೆ ಎರಡು ಗಂಟೆಗಳ ಕಾಲ ಪ್ರಾತ್ಯಕ್ಷಿಕೆ ಮತ್ತು ಕಂಸವಧೆ ಪ್ರಸಂಗದ ಒಂದು ಭಾಗವನ್ನು ಪ್ರದರ್ಶಿಸಲಾಯಿತು. ಕನ್ನಡದಲ್ಲಿ ಮಾಡಿದ ಈ ಪ್ರಾತ್ಯಕ್ಷಿಕೆಯ ಎಲ್ಲಾ ಭಾಗವನ್ನು ಆಂಗ್ಲ ಭಾಷಾ ಸಂವಹನದೊಂದಿಗೆ ಪ್ರದರ್ಶಿಸಲಾಯಿತು. ಸಮಾಜ ಶಾಸ್ತ್ರದಲ್ಲಿ ಪಿ.ಎಚ್.ಡಿ. ಪಡೆದ ಮಾರ್ಷಲ್ ಗಂಜ್ ಅವರ ತಂಡದಲ್ಲಿ ಆಮೇರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಕೆನಡಿ ಸ್ಕೂಲ್ ಗವರ್ನಮೆಂಟ್‌ನಲ್ಲಿ ನಾಯಕತ್ವ, ಸಂಘಟನೆ ಮತ್ತು ನಾಗರಿಕ ಸಮಾಜದಲ್ಲಿ ಹಿರಿಯ…
ಮೂಡಬಿದ್ರೆ : ಮೂಡುಬಿದ್ರೆ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ‘ನ್ಯಾನೋ ಕಥಾ ಕಮ್ಮಟ’ವು ದಿನಾಂಕ 04-02-2024ರಂದು ಮೂಡಬಿದ್ರೆಯ ಕನ್ನಡ ಭವನದಲ್ಲಿ ನಡೆಯಲಿದೆ. ಭಾಗವಹಿಸಲು ಆಸಕ್ತರಿರುವ ಸಾಹಿತ್ಯಾಸಕ್ತರಿಗೆ ಹೆಸರು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಕಾರ್ಯಕ್ರಮವು ಪೂರ್ವಾಹ್ನ 10 ಗಂಟೆಗೆ ಪ್ರಾರಂಭವಾಗಿ 12 ಗಂಟೆಗೆ ಮುಕ್ತಾಯವಾಗಲಿದೆ. ಆಸಕ್ತ ಸ್ಪರ್ಧಾಳುಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ. ಈ ಕೆಳಗಿನ ಮೊಬೈಲ್ ಸಂಖ್ಯೆಗೆ ತಮ್ಮ ಹೆಸರನ್ನು ಮತ್ತು ಪರಿಚಯವನ್ನು ಕಳುಹಿಸಿಕೊಡಬಹುದು ಮೊ.9731317635.