Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಕನ್ನಡ ಯುವಜನ ಸಂಘ (ರಿ.) ಇದರ ವತಿಯಿಂದ ಡಾ. ಎಸ್.ಎಲ್. ಭೈರಪ್ಪರವರ ‘ಪರ್ವ’ ಕಾದಂಬರಿಯ ಒಂದು ವಿಶ್ಲೇಷಣೆಯನ್ನು ದಿನಾಂಕ 19 ಸೆಪ್ಟೆಂಬರ್ 2024ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಕನ್ನಡ ಯುವಜನ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಲೇಖಕರು, ಕಲಾವಿದರು ಹಾಗೂ ಖ್ಯಾತ ವಕೀಲರಾದ ಶ್ರೀ ನೊಣವಿನಕೆರೆ ರಾಮಕೃಷ್ಣಯ್ಯ ಇವರು ಉಪನ್ಯಾಸ ನೀಡಲಿದ್ದು, ಕನ್ನಡ ಯುವಜನ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ ರೆಡ್ಡಿ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಕನ್ನಡ ಯುವಜನ ಸಂಘದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಮಹಾಂತೇಶ ದೇಗಾವಿ ಇವರು ಪ್ರಸ್ತಾವನೆ ನೀಡಲಿದ್ದಾರೆ.
ಗುಂಡ್ಮಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ, ಸಾಸ್ತಾನ ರೋಟರಿ ಕ್ಲಬ್ ಸಹಕಾರದಲ್ಲಿ ಗುಂಡ್ಮಿ ಸಾಲಿಗ್ರಾಮದ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ದಿನಾಂಕ 15 ಸೆಪ್ಟೆಂಬರ್ 2024ರಂದು ಜಿ. ಸರೋಜಮ್ಮ ಪ್ರಾಯೋಜಿತ ಪುಂಡಲೀಕ ಹಾಲಂಬಿ ದತ್ತಿ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಇವರಿಗೆ ‘ಪುಂಡಲೀಕ ಹಾಲಂಬಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪತ್ರಕರ್ತ ಎಸ್. ಜನಾರ್ದನ ಮರವಂತೆ ಪ್ರಶಸ್ತಿ ಪ್ರದಾನ ಮಾಡಿದರು. ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ. ಕುಂದರ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯ ಭಾಷಣ ಮಾಡಿದರು. ಶಿಕ್ಷಕ ನರೇಂದ್ರ ಕುಮಾರ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ, ಹಾಲಂಬಿ ಅವರ ಪತ್ನಿ ಜಿ. ಸರೋಜಮ್ಮ, ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್, ಗೋಳಿಗರಡಿ ಮೇಳದ…
ಕುಂಬಳೆ : ತೆಂಕುತಿಟ್ಟು ಯಕ್ಷಗಾನದ ತವರೂರು ಕುಂಬಳೆಯ ಕಣಿಪುರ ಕ್ಷೇತ್ರದಲ್ಲಿ ದಿನಾಂಕ 29 ಸೆಪ್ಟೆಂಬರ್ 2024ರಂದು ಇಡೀ ದಿನ ವಿಶೇಷ ಭಜನಾ ಕಮ್ಮಟ ಜರುಗಲಿದೆ. ಕನ್ನಡದ ಖ್ಯಾತ ಗಾಯಕ ಶ್ರೀ ಶಂಕರ್ ಶ್ಯಾನುಭೋಗ್ ಸಾರಥ್ಯದಲ್ಲಿ ಜರಗುವ ಕಮ್ಮಟವನ್ನು ಕಾಸರಗೋಡಿನ ಜನಪ್ರಿಯ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿಯ ಸಹ ಸಂಸ್ಥೆಗಳಾದ ನಾರಿ ಚಿನ್ನಾರಿ ಮತ್ತು ಸ್ವರ ಚಿನ್ನಾರಿ ಆಯೋಜಿಸಿದೆ. ಕನ್ನಡದ ಖ್ಯಾತ ಗಾಯಕ ಶ್ರೀ ಶಂಕರ್ ಶ್ಯಾನುಭೋಗ್ ನೇತೃತ್ವದಲ್ಲಿ ನಡೆಯುವ ಭಕ್ತಿರಸ ಕಾರ್ಯಾಗಾರವು ಭಜನೆ, ಭಾವಗೀತೆ ಕಲಿಕೆಗೆ ಸೀಮಿತವಾಗಿದ್ದು. ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಜರುಗಲಿದೆ. ಕನ್ನಡನಾಡಿನ ದಾಸ ಪರಂಪರೆಯ ಗಾಯನ ಮತ್ತು ಭಾವಗೀತೆಗಳನ್ನು ವಿನೂತನ ಧಾಟಿಯಲ್ಲಿ ಕಲಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ. ಇದರಲ್ಲಿ ಪಾಲ್ಗೊಳ್ಳುವವರಿಗೆ ಹಾಡುವುದಕ್ಕಿಂತ ಭಿನ್ನವಾಗಿ ಹೊಸ ರಾಗ, ಶೈಲಿ ಕಲಿಯುವ ಅವಕಾಶ ಒದಗಲಿದೆ. ಬೆಳಿಗ್ಗೆ ಉದ್ಘಾಟನೆಗೊಂಡು ಸಂಜೆ 4ರ ತನಕ ನಡೆಯುವ ‘ಭಕ್ತಿರಸ’ ಗಾಯನ ಕಲಿಕಾ ಕಮ್ಮಟದಲ್ಲಿ ಕುಂಬಳೆ ಸಮೀಪದ ಸುಮಾರು 500 ಭಜನಾರ್ಥಿಗಳು ಪಾಲ್ಗೊಳ್ಳುವುದನ್ನು ಕಣಿಪುರ ಕ್ಷೇತ್ರದಲ್ಲಿ ನಡೆದ ಭಜಕರ…
ಬದಿಯಡ್ಕ : ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯದ ಸಭಾಂಗಣದಲ್ಲಿ ದಿನಾಂಕ 15 ಸೆಪ್ಟೆಂಬರ್ 2024ರಂದು ಬೆಂಗಳೂರಿನ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ, ಕೇಂದ್ರ ಕಚೇರಿ, ಹಾಸನ, ಕಾಸರಗೋಡು ಜಿಲ್ಲಾ ಘಟಕ, ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ಕಾಸರಗೋಡಿನ ವಿಸ್ಡಮ್ ಇನ್ಸ್ಟಿಟ್ಯೂಷನ್ಸ್ ನೆಟ್‌ವರ್ಕ್ ಸಂಯುಕ್ತ ಆಶ್ರಯದಲ್ಲಿ ಕೇರಳ-ಕರ್ನಾಟಕ ಸ್ಪಂದನ ಸಿರಿ ಕೃಷಿ, ಕನ್ನಡ ಶಿಕ್ಷಣ, ಸಂಸ್ಕೃತಿ ಸಮ್ಮೇಳನವು ನಡೆಯಿತು. ಈ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮೈಸೂರು ‘ಯಾರು ಏನೇ ಹೇಳಿದರೂ ಕೃಷಿಕರು ದೇಶದ ಕಾಯಕ ಯೋಗಿಗಳು. ಕೃಷಿಕರು ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡುತ್ತಾರೆ. ದೇಶದ ಪ್ರಗತಿಯಲ್ಲಿ ಅವರ ಕೊಡುಗೆ ಮಹತ್ವ ಪಡೆದಿದೆ. ಸಾಹಿತ್ಯ, ಶಿಕ್ಷಣ, ಕೃಷಿ, ಸಂಸ್ಕೃತಿ ಎಂಬ ಪ್ರಧಾನ ಅಂಶಗಳನ್ನು ಸೇರಿಸಿಕೊಂಡು ನಡೆಯುವ ಈ ಸಮ್ಮೇಳನವು ಯಾವ ಅಖಿಲ ಭಾರತ ಮಟ್ಟದ ಸಮ್ಮೇಳನಕ್ಕೂ ಕಡಿಮೆಯಲ್ಲ’ ಎಂದು ಶ್ಲಾಘಿಸಿದರು. ಶಿಕ್ಷಣ ತಜ್ಞ ವಿ.ಬಿ.…
ಬೆಳ್ತಂಗಡಿ : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ.) ಬೆಳ್ತಂಗಡಿ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇವರ ಸಹಯೋಗದಲ್ಲಿ ಯಕ್ಷಗಾನ ಮಹೋಪಾಧ್ಯಾಯ ನೆಡ್ಲೆ ನರಸಿಂಹ ಭಟ್ ಅವರ ಸಂಸ್ಮರಣೆಗಾಗಿ ‘ಯಕ್ಷಾವತರಣ-5’ ಎಂಬ ಯಕ್ಷಸಾಂಗತ್ಯ ತಾಳಮದ್ದಳೆ ಸಪ್ತಾಹ ಹಾಗೂ ‘ಯಶೋ’ ಯಕ್ಷನಮನ – ಗಾನ ನೃತ್ಯ ಚಿತ್ರ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ದಿನಾಂಕ 23-09-2024ರಿಂದ 30-09-2024ರವರೆಗೆ ಬೆಳ್ತಂಗಡಿ ಲಯ್ಲಾದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ದಿನಾಂಕ 23 ಸೆಪ್ಟೆಂಬರ್ 2024ರಂದು ‘ಭೀಷ್ಮಪರ್ವ’, ದಿನಾಂಕ 24 ಸೆಪ್ಟೆಂಬರ್ 2024ರಂದು ‘ಇಂದ್ರತಂತ್ರ – ಪ್ರಹ್ಲಾದಶಾಪ’, ದಿನಾಂಕ 25 ಸೆಪ್ಟೆಂಬರ್ 2024ರಂದು ‘ಶಲ್ಯ ಸಾರಥ್ಯ’, ದಿನಾಂಕ 26 ಸೆಪ್ಟೆಂಬರ್ 2024ರಂದು ‘ವಾಮನ ಚರಿತ್ರೆ’, ದಿನಾಂಕ 27 ಸೆಪ್ಟೆಂಬರ್ 2024ರಂದು ‘ಕರ್ಣಭೇದನ’, ದಿನಾಂಕ 28 ಸೆಪ್ಟೆಂಬರ್ 2024ರಂದು ‘ಅಗ್ನಿಪರೀಕ್ಷೆ – ನಿಜಪಟ್ಟಾಭಿಷೇಕ’, ದಿನಾಂಕ 29 ಸೆಪ್ಟೆಂಬರ್ 2024ರಂದು ‘ಗುರುದಕ್ಷಿಣೆ’, ದಿನಾಂಕ 30 ಸೆಪ್ಟೆಂಬರ್…
ಮೂಡುಬಿದಿರೆ : ಸಮಾಜಮಂದಿರ ಸಭಾ (ರಿ.) ಮೂಡುಬಿದಿರೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ, ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲೆ, ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಇವುಗಳ ಆಶ್ರಯದಲ್ಲಿ ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಇವರಿಗೆ ಅಭಿನಂದನ ಸಮಾರಂಭವನ್ನು ದಿನಾಂಕ 21 ಸೆಪ್ಟೆಂಬರ್ 2024ರಂದು ಬೆಳಗ್ಗೆ 10-00 ಗಂಟೆಗೆ ಮೂಡುಬಿದಿರೆಯ ಸಮಾಜಮಂದಿರ ಸಭಾದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟನೆ ಮಾಡಲಿರುವರು. ಮಾಜಿ ಸಚಿವರಾದ ಶ್ರೀ ಕೆ. ಅಭಯಚಂದ್ರ ಜೈನ್ ಇವರು ಅಧ್ಯಕ್ಷತೆ ವಹಿಸಲಿದ್ದು, ವಿಶ್ರಾಂತ ಕುಲಪತಿಗಳಾದ ಪ್ರೊ. ಬಿ.ಎ. ವಿವೇಕ ರೈ ಇವರು ಅಭಿನಂದನ ನುಡಿಗಳನ್ನಾಡಲಿರುವರು. ಇದೇ ಸಂದರ್ಭದಲ್ಲಿ ಮೊಗಸಾಲೆಯವರಿಗೆ ಗೌರವ ಸನ್ಮಾನ ನಡೆಯಲಿದ್ದು, ಅವರ ಏಳು ಕೃತಿಗಳನ್ನು ಕನ್ನಡ ಸಾಹಿತ್ಯ ನಾಡೋಜ ಡಾ. ಮಹೇಶ್ ಜೋಶಿ ಇವರು ಲೋಕಾರ್ಪಣೆಗೊಳಿಸಲಿರುವರು. ಸಭಾ ಕಾರ್ಯಕ್ರಮದ ಬಳಿಕ ಮೊಗಸಾಲೆಯವರ ಕೃತಿ ಸಮೀಕ್ಷೆ ಮತ್ತು ಕೃತಿಗಳನ್ನು ಸಂಪಾದಿಸಿದ ಲೇಖಕರಾದ ಡಾ.…
ಬೆಂಗಳೂರು : ಕಳೆದ 45 ವರ್ಷದಿಂದ ಸದಾ ಚಟುವಟಿಕೆಯಿಂದಿರುವ ಬೆಂಗಳೂರಿನ ಪ್ರತಿಷ್ಠಿತ ‘ಯಕ್ಷದೇಗುಲ’ ತಂಡ ಕೊಡಮಾಡುವ ‘ಯಕ್ಷದೇಗುಲ ಪ್ರಶಸ್ತಿ-2024’ ಕ್ಕೆ ಹಿರಿಯ ಯಕ್ಷಗಾನ ಕಲಾವಿದ ಆರ‍್ಗೋಡು ಮೋಹನ್‌ದಾಸ್ ಶೆಣೈ ಆಯ್ಕೆಯಾಗಿದ್ದಾರೆ. ಕಳೆದ 42 ವರ್ಷಗಳ ಪರ್ಯಂತ ಯಕ್ಷಗಾನ ರಂಗದಲ್ಲಿ ಸುಧೀರ್ಘ ಸೇವೆಯನ್ನು ಸಲ್ಲಿಸಿರುವ ಆರ‍್ಗೋಡು ಮೋಹನ್‌ದಾಸ್ ಶೆಣೈಯವರಿಗೆ ದಿನಾಂಕ 05 ಅಕ್ಟೋಬರ್ 2024ರಂದು ಬೆಂಗಳೂರಿನ ಗವಿಪುರಂ (ಚಾಮರಾಜ ಪೇಟೆ) ಇಲ್ಲಿನ ಉದಯಭಾನು ಕಲಾಸಂಘದ ಸಭಾಂಗಣದಲ್ಲಿ ನಡೆಯುವ ಯಕ್ಷದೇಗುಲದ ಯಕ್ಷಗಾನ ಉತ್ಸವದಲ್ಲಿ ಪ್ರಶಸ್ತಿ ನೀಡಲಾಗುವುದೆಂದು ಯಕ್ಷದೇಗುಲದ ನಿರ್ದೇಶಕರಾದ ಕೆ. ಮೋಹನ್ ಇವರು ತಿಳಿಸಿರುತ್ತಾರೆ.
ಉಡುಪಿ : ಉಡುಪಿಯ ರಾಗ ಧನ ಸಂಸ್ಥೆಯು ಹಮ್ಮಿಕೊಂಡಿರುವ ‘ರಾಗರತ್ನ ಮಾಲಿಕೆ -28’ನೇ ಕಾರ್ಯಕ್ರಮ ದಿನಾಂಕ 14 ಸೆಪ್ಟೆಂಬರ್ 2024ರಂದು ಮಣಿಪಾಲದ ಮಣಿಪಾಲ್ ಡಾಟ್ ನೆಟ್ ಸಭಾಂಗಣದಲ್ಲಿ ನಡೆಯಿತು. ಒಂದು ಹೃದ್ಯವಾದ ಕೊಳಲಿನ ತುತ್ತುಕಾರದೊಂದಿಗೆ ಮೃದುವಾದ ಚಿತ್ರವೀಣೆಯ ಉಲಿತ, ಉಡುಪಿ ಮಣಿಪಾಲದ ಸಂಗೀತಾಸಕ್ತರಿಗೆ ತುಂಬು ಸಂತಸವನ್ನು ನೀಡಿದವರು ಚಿತ್ರವೀಣಾ ಗಣೇಶ್ ಚೆನ್ನೈ ಮತ್ತು ಕೊಳಲಿನಲ್ಲಿ ಡಾ. ವಿಜಯ ಗೋಪಾಲ್ ಚೆನ್ನೈ. ಎರಡು ಬೇರೆ ಬೇರೆ ವಾದ್ಯಗಳ ಮಾಧುರ್ಯದ ಅಂಶಗಳನ್ನು ಹದವಾಗಿ ಬೆರೆಸಿ ನೀಡಿದ ಈ ಜೋಡಿ ಸಭಿಕರನ್ನು ಅಕ್ಷರಶಃ ಸಂಮೋಹನಗೊಳಿಸುವಲ್ಲಿ ಯಶಸ್ವಿಯಾಯಿತು. ನವರಾಗರ ಮಾಲಿಕಾ ವರ್ಣ, ಗಾನಮೂರ್ತಿ (ಗಾನಮೂರ್ತೇ) ಆರಭಿ (ಪಂಚ ರತ್ನ) ಆನಂದ ಭೈರವಿ (ಮರಿವೇರೆ) ಕೃತಿಗಳಲ್ಲದೆ ಪ್ರಧಾನವಾಗಿ ಹಂಸಾನಂದಿಯನ್ನು (ಪಾವನಗುರು ಪವನಪುರ) ಆಯ್ದುಕೊಳ್ಳಲಾಯಿತು. ಒಮ್ಮೆ ಪಕ್ಕವಾದ್ಯದವರಾಗಿ ಮತ್ತೊಮ್ಮೆ ಸಹವಾದಕರಾಗಿ ಪರಸ್ಪರ ಅರಿತುಕೊಂಡು ಒಬ್ಬರಿಗೊಬ್ಬರು ಪೂರಕವಾಗಿ, ಈ ಕಲಾವಿದರು ಪರ್ಯಾಯವಾಗಿ ನೀಡಿದ ಆಲಾಪನೆಯ ಶ್ರಾವ್ಯತೆ, ಸ್ವರ ಕಲ್ಪನೆಗಳ ನಡೆ ಬೇಧಗಳು, ಎಲ್ಲೂ ಅಪಸ್ವರವಿಲ್ಲದ ನುಡಿತಗಳು ಶ್ರೋತೃಗಳ ಮುಕ್ತ ಪ್ರಶಂಸೆಗೆ ಪಾತ್ರವಾದವು.…
ಬೆಳ್ತಂಗಡಿ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು ತುಳು ಸಂಘ ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ತುಳು ಸಾಹಿತ್ಯ ರಚನಾ ಕಮ್ಮಟಕ್ಕೆ ದಿನಾಂಕ 13 ಸೆಪ್ಟೆಂಬರ್ 2024ರ ಶುಕ್ರವಾರದಂದು ವಾಣಿ ಕಾಲೇಜಿನ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಜಿಲ್ಲಾ ಅಧ್ಯಕ್ಷ ತಾರಾನಾಥ ಗಟ್ಟಿ ಮಾತನಾಡಿ “ದ್ರಾವಿಡ ಭಾಷಾ ವರ್ಗದಲ್ಲಿ ತುಳುವಿಗೆ ವಿಶಿಷ್ಟವಾದ ಸ್ಥಾನ, ಸತ್ವ ಹಾಗೂ ಭಾಷಾ ಸಂಪತ್ತಿದೆ. ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವ ನಿಟ್ಟಿನ ಪ್ರಯತ್ನಕ್ಕೆ ಈಗ ಹೆಚ್ಚಿನ ಮಹತ್ವ ಬಂದಿದೆ. ಈಗಾಗಲೇ ಪಾಲ್ತಾಡಿ ರಾಮಕೃಷ್ಣ ಅಚಾರ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪ್ರೌಢ ಶಾಲಾ ಮಟ್ಟದಲ್ಲಿ ಒಂದು ಪಾಠವಾಗಿ ತುಳು ಬಂತು. ಕಳೆದ ಶೈಕ್ಷಣಿಕ ಅವಧಿಯಲ್ಲಿ ಜಿಲ್ಲೆಯಲ್ಲಿ 333 ಮಕ್ಕಳು ತುಳು ಪಾಠದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಅವರೆಲ್ಲರನ್ನು ಅಕಾಡೆಮಿ ಪುರಸ್ಕರಿಸಿದೆ.” ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ…
ಬೆಂಗಳೂರು: ದ್ರಾವಿಡ ಭಾಷಾ ಅನುವಾದಕರ ಸಂಘ ನೀಡುವ ಪ್ರಶಸ್ತಿಗೆ ಈ ಬಾರಿ ಅನುವಾದಕಿ ಗೌರಿ ಕಿರುಬನಂದನ್ ಆಯ್ಕೆಯಾಗಿದ್ದಾರೆ. ದ್ರಾವಿಡ ಭಾಷಾ ಅನುವಾದಕರ ಸಂಘ (ಡಿ. ಬಿ. ಟಿ. ಎ.) ಪ್ರತಿ ವರ್ಷ ಈ ಪ್ರಶಸ್ತಿ ನೀಡುತ್ತಿದೆ. ಗೌರಿ ಕಿರುಬನಂದನ್ ಅವರು ತೆಲುಗು ಭಾಷೆಯ ‘ಇರು ಕೋಡುಗಳ್’ ಕೃತಿಯನ್ನು ತಮಿಳು ಭಾಷೆಗೆ ಅನುವಾದ ಮಾಡಿದ್ದರು. ಈ ಕೃತಿಗೆ ಡಿ. ಬಿ. ಟಿ. ಎ. -2024ರ ಪ್ರಶಸ್ತಿ ಸಂದಿದೆ. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಡಾ. ಪಾರ್ವತಿ ಐತಾಳ್, ಕೆ. ಕೆ. ರಂಗಾಧರನ್ ಹಾಗೂ ಕೆ. ಪ್ರಭಾಕರನ್ ಇದ್ದರು. ಪ್ರಶಸ್ತಿ 11,111 ನಗದು ಹಾಗೂ ಪಾರಿತೋಷಕ ಹೊಂದಿದೆ. ದಿನಾಂಕ 26 ಸೆಪ್ಟೆಂಬರ್ 2024ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿ ನಾಡೋಜ ಹಂಪನಾಗರಾಜಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಂಗಕಲಾವಿದೆ ಲಕ್ಷ್ಮೀಚಂದ್ರಶೇಖರ್ ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಿ. ಬಿ. ಟಿ. ಎ. ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ತಿಳಿಸಿದ್ದಾರೆ.