Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳೂರು ಕ್ವಿಜಿಂಗ್ ಫೌಂಡೇಶನ್ ವತಿಯಿಂದ ಆಗಸ್ಟ್ 13ರಂದು ಪಾಂಡೇಶ್ವರ ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ‘ಅಲ್ಟಿಮೇಟ್ ಇಂಡಿಯಾ ರಸಪ್ರಶ್ನೆ’ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯು ಶಾಲಾ ಮಕ್ಕಳಿಗಾಗಿ (10ನೇ ತರಗತಿಯವರೆಗೆ) ಮತ್ತು ಮುಕ್ತ ಹೀಗೆ ಎರಡು ವಿಭಾಗದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳಿಗೆ ಬೆಳಗ್ಗೆ 10 ಗಂಟೆಗೆ ಮತ್ತು ಸಾರ್ವಜನಿಕರಿಗೆ ಅಪರಾಹ್ನ 2 ಗಂಟೆಗೆ ಸ್ಪರ್ಧೆ ನಡೆಯಲಿದೆ. ರಸ ಪ್ರಶ್ನೆಯು ಭಾರತಕ್ಕೆ ಕೇಂದ್ರೀಕೃತವಾಗಿದೆ. ಎರಡೂ ವಿಭಾಗದಲ್ಲೂ ಮುಕ್ತ ಪ್ರವೇಶವಿದೆ. ರಸ ಪ್ರಶ್ನೆ ಇಂಗ್ಲಿಷ್‌ನಲ್ಲಿ ನಡೆಯಲಿದ್ದು, ಮೊದಲಿಗೆ ಲಿಖಿತ ಸುತ್ತು ನಡೆಯಲಿದೆ. ಆಯ್ಕೆಯಾದ ಮೊದಲ 6 ತಂಡಗಳು ಅಂತಿಮ ಸ್ಪರ್ಧೆಗೆ ಅರ್ಹತೆ ಪಡೆಯಲಿವೆ. ಫೈನಲ್‌ನಲ್ಲಿ ‘ಪೆಹಚಾನ್ ಕೌನ್’, ‘ಹಿಟ್ ಲಿಸ್ಟ್ ಕ್ರಾಸ್ ಕನೆಕ್ಷನ್’ ಮತ್ತು ‘ತೂ ತೂ ಮೈಮೈ’ನಂತಹ ಆಸಕ್ತಿದಾಯಕ ಸುತ್ತಗಳಿವೆ. ಸಾರ್ವಜನಿಕರ ವಿಭಾಗದಲ್ಲಿ ಮೊದಲ ಮೂರು ತಂಡಗಳಿಗೆ ಒಟ್ಟು ರೂ.50,000/- ಮೌಲ್ಯದ ನಗದು ಬಹುಮಾನ ದೊರೆಯಲಿದ್ದು, ಶಾಲಾ ರಸಪ್ರಶ್ನೆ ವಿಭಾಗದಲ್ಲಿ ವಿಜೇತರಿಗೆ 30 ಸಾವಿರ ರೂ.…
ಮಂಗಳೂರು : ಹಿರಿಯ ಸಾಹಿತಿ ಡಾ.ವಾಮನ ನಂದಾವರ ಅವರ ಬಹುಮಾನಿತ ‘ಸಿಂಗದನ’ ಕೃತಿಯ ಮೂರನೇ ಮುದ್ರಣವನ್ನು ನಗರದ ಬಲ್ಲಾಳ್ ಬಾಗ್‌ನ ಪತ್ತುಮುಡಿ ಸೌಧದಲ್ಲಿ ದಿನಾಂಕ 05-08-2023ರಂದು ಮೈಸೂರು ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ನಿಕಟಪೂರ್ವ ಯೋಜನ ನಿರ್ದೇಶಕ ಡಾ. ಬಿ. ಶಿವರಾಮ ಶೆಟ್ಟಿ ಬಿಡುಗಡೆಗೊಳಿಸಿದರು. ಅವರು ಮಾತನಾಡುತ್ತಾ “ನಮಗೆ ಸಂಶೋಧನೆಯ ಬದಲು, ಸಂಶೋಧನ ವಿಷಯದ ಆಯ್ಕೆ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಾಹಿತಿ ಡಾ. ವಾಮನ ನಂದಾವರ ಅವರ ‘ಸಿಂಗದನ’ ಪುಸ್ತಕ ಜಾನಪದ ಸಂಶೋಧನೆಗೆ ದಿಕ್ಕೂಚಿ ಕೃತಿ. ಸಂಶೋಧನಾರ್ಥಿಗಳಿಗೆ ಬೇಕಾಗುವ ಅನೇಕ ಸಂಗತಿಗಳನ್ನು ಈ ಕೃತಿ ಹೊಂದಿದೆ. ನಮ್ಮತನವನ್ನು ತೋರಿಸುವ ಪ್ರಯತ್ನ, ದೇಸೀಯತೆ, ಸಾಂಸ್ಕೃತಿಕ ನೆಲೆಯಲ್ಲಿ ತುಳುವಿನ ವಿವೇಚನ ಮಾಡುವ ಚಿಂತನೆ ಈ ಪುಸ್ತಕದಲ್ಲಿ ಕಾಣಬಹುದು. ‘ಸಿಂಗದನ’’ ಕೃತಿಗೆ ಮೂರನೇ ಮರುಹುಟ್ಟು ಪ್ರಾಪ್ತವಾಗಿದೆ. 104 ಪುಟಗಳನ್ನು ಹೊಂದಿದ ಅಷ್ಟದಳದ ನಾಲ್ಕು ಲೇಖನವನ್ನು ಈ ಪುಸ್ತಕ ಹೊಂದಿದೆ. ಈ ನೆಲದ ತೌಳವ ಸಂಸ್ಕೃತಿ, ಭೂತಾರಾಧನೆಯ ಹುಟ್ಟು, ಪ್ರಸರಣ, ಮಡಿವಾಳ ಜಾತಿಗೆ…
ಮಂಗಳೂರು : ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ಕಲ್ಲಾಪು ಬಳಿಯ ‘ಕದಿಕೆ’ ತುಳುಚಾವಡಿಯಲ್ಲಿ ‘ಆಷಾಢದ ಆಶಯ’ ಸಂವಾದ ಕಾರ್ಯಕ್ರಮ ದಿನಾಂಕ 03-08-2023ರಂದು ಜರಗಿತು. ಪ್ರತಿಷ್ಠಾನದ ಪ್ರಧಾನ ಸಂಚಾಲಕರಾದ ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿಯವರು ಮಾತನಾಡುತ್ತಾ “ಸೂರ್ಯ ಹಾಗೂ ಚಂದ್ರರ ಚಲನೆಯನ್ನು ಅನುಸರಿಸಿ ಅವರವರ ಪದ್ಧತಿಯಂತೆ ಕಾಲದ ಪರಿಗಣನೆ ನಡೆಯುತ್ತದೆ. ತುಳುವರ ಆಟಿ ಆಚರಣೆಗಳು ಚಾಂದ್ರಮಾನ ಪದ್ಧತಿಯ ಆಷಾಢ ತಿಂಗಳಿಗೆ ಅನ್ವಯಿಸುವುದಿಲ್ಲ. ಆದ್ದರಿಂದ ಆಟಿ ಆಟಿಯೇ; ಅದನ್ನು ಆಷಾಢವೆಂದು ತಿಳಿಯುವುದು ಸರಿಯಲ್ಲ. ಪ್ರತೀ ಸಂಕ್ರಾಂತಿಯ ಮರುದಿನದಿಂದ ಸೌರಮಾನಿಗಳ ಹೊಸ ತಿಂಗಳು ಆರಂಭವಾದರೆ ಹುಣ್ಣಿಮೆ – ಅಮಾವಾಸ್ಯೆಗಳ ತಿಥಿಯನ್ನನುಸರಿಸಿ ಚಾಂದ್ರಮಾನಿಗಳು ತಿಂಗಳ ಲೆಕ್ಕಾಚಾರ ಮಾಡುತ್ತಾರೆ.” ಎಂದವರು ವಿಶ್ಲೇಷಿಸಿದರು. ಪದಾಧಿಕಾರಿಗಳಾದ ಪಿ.ಡಿ.ಶೆಟ್ಟಿ, ಲಕ್ಷ್ಮೀನಾರಾಯಣ ರೈ ಹರೇಕಳ, ಲಾಲಿತ್ಯ, ವಿಷ್ಣುಸ್ಮರಣ್ ರೈ, ವಿಜಯಲಕ್ಷ್ಮಿ ಬಿ. ಶೆಟ್ಟಿ, ನಮಿತಾ ಶಾಮ್, ಸುಮಾ ಪ್ರಸಾದ್, ಗೀತಾ ಜ್ಯುಡಿತ್ ಮಸ್ಕರೇನ್ಹಸ್,…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಯಶವಂತ ಚಿತ್ತಾಲರ 95ನೆಯ ಜನ್ಮ ದಿನದ ಹಿನ್ನೆಯಲ್ಲಿ ಹಮ್ಮಿಕೊಂಡ ಪುಷ್ಪನಮನ ಕಾರ್ಯಕ್ರಮ ದಿನಾಂಕ 03-08-2023ರಂದು ನಡೆಯಿತು. ಚಿತ್ತಾಲರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು “ಕನ್ನಡ ಕಥಾಲೋಕಕ್ಕೆ ಬಹಳ ದೊಡ್ಡ ಕೊಡುಗೆಯನ್ನು ನೀಡಿದ ಯಶವಂತ ಚಿತ್ತಾಲರು. ಅದುವರೆಗೂ ಕನ್ನಡ ಸಾಹಿತ್ಯಕ್ಕೆ ಅಪರಿಚಿತವಾಗಿದ್ದ ಕಾರ್ಪೂರೇಟ್ ಲೋಕದ ಅನುಭವವನ್ನು ಪರಿಚಯಿಸಿದವರು. ಹನೇಹಳ್ಳಿಯ ಹುಲುಸಾದ ಅನುಭವವನ್ನು ಮತ್ತು ಮುಂಬೈ ಮಾಯಾನಗರಿಯ ಆತಂಕಗಳನ್ನು ತಮ್ಮ ವಿಶಿಷ್ಟ ಕಥನದ ಮೂಲಕ ಹಿಡಿದಿಟ್ಟ ಚಿತ್ತಾಲರು ಕನ್ನಡ ಸಾಹಿತ್ಯ ಲೋಕದ ಸೀಮೆಯನ್ನು ವಿಸ್ತರಿಸಿದರು. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಇರುವ ಸಣ್ಣ ಊರು ಹನೇಹಳ್ಳಿಯಲ್ಲಿ ದಿನಾಂಕ 03-08-1928 ರಂದು ಹುಟ್ಟಿ ಬೆಳೆದವರು ಯಶವಂತ ವಿಠೋಬಾ ಚಿತ್ತಾಲರು. ಕುಮಟಾ, ಧಾರವಾಡ, ಮುಂಬಯಿ, ನ್ಯೂಜರ್ಸಿ (ಅಮೆರಿಕಾ)ಗಳಲ್ಲಿ ಓದು ಮುಗಿಸಿದ ಇವರು ರಸಾಯನ ವಿಜ್ಞಾನದ ಶಾಖೆಯಾದ ಪಾಲಿಮಾರ್ ತಂತ್ರಜ್ಞಾನದಲ್ಲಿ ತಜ್ಞತೆಯ ಸಂಪಾದನೆಯ ಜೊತೆಗೆ ಮುಂಬಯಿ ವಿಶ್ವವಿದ್ಯಾನಿಲಯದ ಪ್ಲ್ಯಾಸ್ಟಿಕ್ ವಿಭಾಗದಲ್ಲಿ…
ಮಂಗಳೂರು : ಕಲಾಶ್ರೀ ಕುಸಾಲ್ದ ಕಲಾವಿದೆರ್ ಕುಡ್ಲ-ಬೆದ್ರ ಇದರ 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಈ ವರ್ಷದ ಹೊಸ ನಾಟಕದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮವು ದಿನಾಂಕ 11-08-2023ರ ಸಂಜೆ 5.00ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಅತಿಥಿ ಅಭ್ಯಾಗತರ ಸಮ್ಮುಖದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ. ಸಭಾಕಾರ್ಯಕ್ರಮದ ಬಳಿಕ ರಮೇಶ್ ಮಿಜಾರ್ ಸಾರಥ್ಯದ ಸಂದೀಪ್ ಶೆಟ್ಟಿ ರಾಯಿ ರಚಿಸಿ, ನಟಿಸಿ, ನಿರ್ದೇಶಿಸಿದ ಸುಧಾಕರ್ ಶೆಟ್ಟಿ ಬೆದ್ರ ಇವರ ಸಂಗೀತವಿರುವ ‘ನಾಲಾಯಿ ಮಗುರುಗಿ’ ತುಳು ಹಾಸ್ಯಮಯ ಪ್ರಶಸ್ತಿ ವಿಜೇತ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕದಲ್ಲಿ ಕಲಾವಿದರಾಗಿ ಕಾಮಿಡಿ ಎಕ್ಸ್ ಪ್ರೆಸ್ ಖ್ಯಾತಿಯ ಪ್ರವೀಣ್ ಮರ್ಕಮೆ, ಬಲೆ ತೆಲಿಪಾಲೆ ಖ್ಯಾತಿಯ ಸಂದೀಪ್ ಶೆಟ್ಟಿ ರಾಯಿ, ನಿರಂಜನ್ ಎಸ್. ಕೊಂಡಾಣ, ಮನೀಷ್ ಉಪ್ಪಿರ, ಪೃಥ್ವಿನ್ ಪೊಳಲಿ, ಹೊನ್ನಯ ಅಮೀನ್,ಪ್ರಭಾಕರ್ ಕರ್ಕೇರ, ಪ್ರತೀಕ್ ಸಾಲಿಯಾನ್, ಸವ್ಯರಾಜ್ ಕಲ್ಲಡ್ಕ, ದಿನೇಶ್ ಕುದ್ಕೊಳ್ಳಿ, ಸೂರಜ್ ಪೂಂಜ, ಶ್ರೀಮತಿ ಅಶ್ವಿನಿ ಹಾಗೂ ಕುಮಾರಿ ಭಾಮಿತಾ ಅಭಿನಯಿಸಲಿದ್ದಾರೆ.
ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ಆಶ್ರಯದಲ್ಲಿ ಸಂಗೀತ ವರ್ಷಧಾರೆ ‘ಮಳೆ ಹಾಡುಗಳ ಕಲರವ’ ಕಾರ್ಯಕ್ರಮವು ದಿನಾಂಕ 12-08-2023ನೇ ಶನಿವಾರ ಪೂರ್ವಾಹ್ನ 11-00ರಿಂದ ನಡೆಯಲಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಶ್ರೀನಾಥ ರೈ ಬಾಳಿಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಂಸ್ಥೆಯ ಉಪಪ್ರಾಂಶುಪಾಲರಾದ ಶ್ರೀಮತಿ ಉಮಾಕುಮಾರಿ ಉಪಸ್ಥಿತರಿರುವರು. ಸುಳ್ಯದ ಭಾವನಾ ಸುಗಮ ಸಂಗೀತ ಬಳಗ (ರಿ.) ಇದರ ಶ್ರೀ ಕೆ.ಆರ್ ಗೋಪಾಲಕೃಷ್ಣ ಮತ್ತು ಬಳಗ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದು, ಕ.ಸಾ.ಪ ಸುಳ್ಯ ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಹಾಗೂ ವಿದ್ಯಾಬೋಧಿನೀ ಪ್ರೌಢ ಶಾಲೆ ಬಾಳಿಲ ಇದರ ಆಶ್ರಯದಲ್ಲಿ ಸಂಗೀತ ವರ್ಷಧಾರೆ ‘ಮಳೆ ಹಾಡುಗಳ ಕಲರವ’ ಕಾರ್ಯಕ್ರಮವು ದಿನಾಂಕ 09-08-2023ನೇ ಬುಧವಾರ ವಿದ್ಯಾಬೋಧಿನೀ ಪ್ರೌಢ ಶಾಲೆ ಬಾಳಿಲದಲ್ಲಿ ಪೂರ್ವಾಹ್ನ 11.00ರಿಂದ ನಡೆಯಲಿದೆ. ವಿದ್ಯಾಬೋಧಿನೀ ಎಜ್ಯುಕೇಶನಲ್ ಸೊಸೈಟಿ (ರಿ.) ಬಾಳಿಲ ಇದರ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ರಾವ್ ಯು. ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಂಸ್ಥೆಯ ಸಂಚಾಲಕರಾದ ಶ್ರೀ ಪಿ.ಜಿ.ಎಸ್.ಎನ್.ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶಾಲೆಯ ಮುಖ್ಯಶಿಕ್ಷಕರಾದ ಶ್ರೀ ಯಶೋಧರ ನಾರಾಲು ಉಪಸ್ಥಿತರಿರುವರು. ಸುಳ್ಯದ ಭಾವನಾ ಸುಗಮ ಸಂಗೀತ ಬಳಗ (ರಿ.) ಇದರ ಶ್ರೀ ಕೆ.ಆರ್ ಗೋಪಾಲಕೃಷ್ಣ ಮತ್ತು ಬಳಗ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದು, ಕ.ಸಾ.ಪ ಸುಳ್ಯ ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮಂಗಳೂರು : ಮಂಗಳೂರು ಗಮಕ ಕಲಾ ಪರಿಷತ್ತಿನ ಮನೆ ಮನೆ ಗಮಕದ 5ನೇ ಪಲ್ಲವದ ಕಾರ್ಯಕ್ರಮ ದಿನಾಂಕ 31-07-2023ರಂದು ಮಂಗಳೂರಿನ ಅತ್ತಾವರದ ಅಭಿಷ್ ಪರ್ಲ್ ನಲ್ಲಿರುವ ಶ್ರೀಯುತ ಪ್ರಸನ್ನಕುಮಾರ್ ಇವರ ಮನೆಯಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಶಾರದಾ ವಿದ್ಯಾನಿಕೇತನ ಪಿ.ಯು. ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ಸುರೇಶ್ ರಾವ್ ಅತ್ತೂರು ಇವರು ವಾಚನ ಮಾಡಿದರೆ ಶಕ್ತಿ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ವಿದ್ವಾನ್ ರವಿಶಂಕರ್ ಹೆಗಡೆ ದೊಡ್ನಳ್ಳಿ ವ್ಯಾಖ್ಯಾನಿಸಿದರು. ಜೈಮಿನಿ ಭಾರತದ ‘ಚಂದ್ರಹಾಸ ಚರಿತ್ರೆ’ಯನ್ನು ಆಯ್ಕೆ ಮಾಡಿಕೊಂಡಿದ್ದು ರಸಪೂರ್ಣವಾದ ವಾಚನ ವಿದ್ವತ್ ಪೂರ್ಣವಾದ ವ್ಯಾಖ್ಯಾನ ಸೇರಿದ ಶೋತೃಗಳ ಮನಸೆಳೆಯಿತು. ಆತಿಥೇಯರಾದ ಶ್ರೀ ಪ್ರಸನ್ನ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ, ಗಮಕಲಾ ಪರಿಷತ್ತಿನ ಖಜಾಂಚಿಗಳಾದ ಶ್ರೀಮತಿ ಚಂದ್ರಿಕಾ ಸುರೇಶ್ ವಂದಿಸಿದರು.
ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹುದು?| ಚಿತ್ರವಿಲ್ಲದ ಭಿತ್ತಿ ಸೊಗಸಹುದದೆಂತು?|| ನಿತ್ಯಸತ್ತ್ವವೇ ಭಿತ್ತಿ, ಜೀವಿತ ಕ್ಷಣಚಿತ್ರ| ತತ್ತ್ವವೀ ಸಂಬಂಧ – ಮಂಕುತಿಮ್ಮ|| ಚಿತ್ರವೊಂದಕ್ಕೆ ಗೋಡೆ ಬೇಕೇ ಬೇಕು. ಚಿತ್ರವಿಲ್ಲದ ಗೋಡೆಯು ಕೂಡ ಸೊಗಸಾಗಿ ಕಾಣೋದಿಲ್ಲ. ಒಂದಕ್ಕೊಂದು ಸಂಬಂಧ. ಹೊರಗಿನ ಜಗತ್ತನ್ನು ವಿವಿಧ ರೀತಿಯಿಂದ ನೋಡುವವ ಕಲಾವಿದ. ತನ್ನ ಅನುಭವಗಳನ್ನು ವಿವಿಧ ರೀತಿಯಲ್ಲಿ ಸಂಯೋಜನೆಗೊಳಿಸಿ ತಿಳಿಸುವ ಪ್ರಯತ್ನ ಕಲಾವಿದರದು. ನಾಲ್ಕು ಗೋಡೆಗಳ ಮಧ್ಯೆ ರಚಿಸಿದ ಕಲಾವಿದನ ಕಲಾಕೃತಿಗಳನ್ನು ಸಮುದಾಯಕ್ಕೆ ತಲುಪಿಸುವಲ್ಲಿ, ಕಲೆಗೊಂದು ಮೌಲ್ಯವನ್ನು ತಂದುಕೊಡುವಲ್ಲಿ ಕಲಾ ಗ್ಯಾಲರಿಗಳ ಪಾತ್ರ ದೊಡ್ಡದು. ಕಲಾವಿದನ ಕಲಾಕೃತಿ ನೋಡುಗ ಇಲ್ಲದೆ ಸಾಫಲ್ಯವಾಗುವುದಿಲ್ಲ. ಕಲಾವಿದ ಸೃಷ್ಟಿ ಮಾಡಿದರೆ ಅದರಿಂದ ಪ್ರಭಾವಿತರಾಗುವವರು ನೋಡುಗರು.ಇವರಿಬ್ಬರ ಮಧ್ಯೆ ಸಂಪರ್ಕಸೇತುವಾಗಿ ಕೆಲಸ ಮಾಡುವುದು ಕಲಾ ಗ್ಯಾಲರಿ. ಇಂಥಹ ಒಂದು ಕಲಾ ಗ್ಯಾಲರಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ‘ಆರ್ಟ್ಮಾ ಆರ್ಟ್ ಗ್ಯಾಲರಿ’ ಅನ್ನುವ ಹೆಸರಿನಲ್ಲಿ ತಲೆಯೆತ್ತಿದೆ. ಜನನಿಬಿಡ ಸ್ಥಳವಾದರೂ ಗ್ಯಾಲರಿ ಒಳ ಆವರಣ ಪ್ರಶಾಂತವಾಗಿ ಹಳ್ಳಿ ಮನೆಯ ಮಾಳಿಗೆಯನ್ನು ನೆನಪಿಸುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅಪಾರ ಪ್ರೀತಿ ಇರುವ…
ಪುತ್ತೂರು: ಡಿಸೆಂಬರ್ -2023ರಲ್ಲಿ ನಡೆಯಲಿರುವ ‘ಶ್ರೀ ಆಂಜನೇಯ 55’ರ ಸಂಭ್ರಮಕ್ಕೆ ಪೂರಕವಾಗಿ, ಸಂಘದ ಅಧ್ಯಕ್ಷರಾದ ಶ್ರೀ ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ರೂಪುಗೊಂಡು ಪ್ರಾರಂಭವಾದ ‘ಯಕ್ಷ ಬಾನುಲಿ ಸರಣಿ ತಾಳಮದ್ದಳೆ’ ಎಂಬ ಕಾರ್ಯಕ್ರಮದಡಿಯಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ದಿನಾಂಕ 04-08-2023ರಂದು ವಿವೇಕಾನಂದ ಕಾಲೇಜಿನ ಆಡಳಿತಕ್ಕೊಳಪಟ್ಟ ರೇಡಿಯೋ ಪಾಂಚಜನ್ಯದಲ್ಲಿ ‘ಯಕ್ಷ ದಾಂಪತ್ಯ’ ತಾಳಮದ್ದಳೆಯ ಕೊನೆಯ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಆನಂದ್ ಸವಣೂರು, ಶ್ರೀ ನಿತೀಶ್ ಎಂಕಣ್ಣಮೂಲೆ, ಚೆಂಡೆ ಮದ್ದಳೆಗಳಲ್ಲಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ ಮತ್ತು ಶ್ರೀ ಶ್ರೀಪತಿ ಭಟ್ ಉಪ್ಪಿನಂಗಡಿ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಮತಿ ಜಯಂತಿ ಹೆಬ್ಬಾರ್ (ಶ್ರೀ ಕೃಷ್ಣ), ಶ್ರೀಮತಿ ಪ್ರೇಮಲತಾ ರಾವ್ (ಸತ್ಯಭಾಮಾ), ಶ್ರೀ ರಾಮಚಂದ್ರ ಭಟ್ (ವಿಷ್ಣು) ಮತ್ತು ಶ್ರೀ ಅಚ್ಯುತ ಪಾಂಗಣ್ಣಾಯ (ಲಕ್ಷ್ಮೀ) ಸಹಕರಿಸಿದರು. ತೇಜಸ್ವಿನಿ ಕೆಮ್ಮಿಂಜೆ ಹಾಗೂ ಪ್ರಶಾಂತ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸುಮಾರು 55 ಕಲಾವಿದರನ್ನು ಜೊತೆಗೂಡಿಸಿ ಹತ್ತು ಕಂತುಗಳಲ್ಲಿ ಮೂಡಿಬಂದ ಈ ವಿನೂತನ ಕಾರ್ಯಕ್ರಮದ ಧ್ವನಿ…