Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು: ಪರಿಣತ ಅಭಿನಯ- ಹರಿತ ನೃತ್ಯ ಪಾಂಡಿತ್ಯದಲ್ಲಿ ಪಂದನಲ್ಲೂರು ಬಾನಿಯಲ್ಲಿ ಹೆಸರು ಮಾಡಿರುವ ‘’ಉಷಾಸ್ ಫೌಂಡೇಶನ್ ‘ ನೃತ್ಯಸಂಸ್ಥೆಯ ಕಲಾತ್ಮಕ ನಿರ್ದೇಶಕಿ, ಗುರು ಕಲೈಮಾಮಣಿ ಡಾ. ಸಂಗೀತಾ ಕಪಿಲನ್ ಅವರ ನುರಿತ ಗರಡಿಯಲ್ಲಿ ರೂಪುಗೊಂಡ ನೃತ್ಯ ಪ್ರತಿಮೆ ಕು. ರಿಷಾ ಪ್ರಶಾಂತ್ ಕುಮಾರ್. ಕಳೆದ ಹತ್ತುವರ್ಷಗಳಿಂದ ನಿಷ್ಠೆಯಿಂದ ಅವರಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ನಂದಿನಿ ಮತ್ತ್ತು ಪ್ರಶಾಂತ್ ಕುಮಾರ್ ಪುತ್ರಿ ಬಹುಮುಖ ಪ್ರತಿಭೆಯ ರಿಷಾ, ಇದೇ ಮೇ ತಿಂಗಳ 21 ಭಾನುವಾರದಂದು ಮಲ್ಲೇಶ್ವರದ ‘ಸೇವಾಸದನ’ದಲ್ಲಿ ಸಂಜೆ 5.30 ಗಂಟೆಗೆ ತನ್ನ ನೃತ್ಯದ ಕಲಾಸೊಬಗನ್ನು ಪ್ರದರ್ಶಿಸಲು ವಿದ್ಯುಕ್ತವಾಗಿ ರಂಗಪ್ರವೇಶ ಮಾಡುತ್ತಿದ್ದಾಳೆ. ಆಕೆಯ ನೃತ್ಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ. ಕು. ರಿಷಾ ಬಾಲಪ್ರತಿಭೆ. ನಾಲ್ಕುವರ್ಷದ ಮಗು ಸಂಗೀತದಲೆಗಳಿಗೆ ಹೆಜ್ಜೆ ಹಾಕುತ್ತ ಕುಣಿಯುವ ಪರಿ ತಂದೆ-ತಾಯಿಯರಿಗೆ ಅವಳಲ್ಲಿ ಅಡಗಿದ್ದ ಸುಪ್ತಪ್ರತಿಭೆ ಅರಿವಾಯಿತು. ತಂದೆ-ಪ್ರಶಾಂತ್ ಕುಮಾರ್ ತಾಯಿ ನಂದಿನಿ ಮಗುವನ್ನು ಡಾ. ಸಂಗೀತಾ ಕಪಿಲನ್ ಅವರಲ್ಲಿ ಭರತನಾಟ್ಯ ಕಲಿಯಲು ಸೇರಿಸಿದರು. ಅಲ್ಲಿಂದ ರಿಷಾಗೆ ಕ್ರಮಬದ್ಧ…
ಪಾಂಬೂರು : ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವ ಪಾಂಬೂರಿನ ಪರಿಚಯ ಪ್ರತಿಷ್ಠಾನವು ವಸಂತ ಕಲಾ ಸೌರಭ : ಬಹುಮುಖಿ ಸಾಂಸ್ಕೃತಿಕ ಉತ್ಸವವನ್ನು ಇದೇ ಮೇ 17ರಿಂದ ಮೇ 20ರವರೆಗೆ ಪಾಂಬೂರು ರಂಗಪರಿಚಯದಲ್ಲಿ ಆಯೋಜಿಸಿದೆ. ಮೇ 17ರಂದು ಬುಧವಾರ, ಖ್ಯಾತ ಸಾಹಿತಿ ಹಾಗೂ ಕವಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ಭಾಷಾ ಸಂಚಾಲಕರಾಗಿರುವ ಮಾನ್ಯ ಮೆಲ್ವಿನ್ ರೊಡ್ರಿಗಸ್ ರವರೊಂದಿಗೆ ಮುಖಾಮುಖಿ, ವಾಚನ, ಗಾಯನ, ಕಥಾಪ್ರಸ್ತುತಿಯ ‘ಕವಿತಾರಂಗ್’ ಕಾರ್ಯ ಕ್ರಮ ಜರಗಲಿದೆ. ಖ್ಯಾತ ಸಿತಾರ್ ಕಲಾವಿದ ಉಸ್ತಾದ್ ರಫೀಕ್ ಖಾನ್ ರವರ ಸಂಗೀತ ನಿರ್ದೇಶನದಲ್ಲಿ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ. ಮೇ 18ರಂದು ಮಂಗಳೂರು ಸಂತ ಅಲೋಶಿಯಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ರಂಗಗೀತೆಗಳು ಹಾಗೂ ಹ್ಯಾಂಗ್‌ಆನ್ ನಾಟಕ ಪ್ರದರ್ಶನಗೊಳ್ಳಲಿದೆ. ಮೇ 19 ಮತ್ತು 20ರಂದು ಕನ್ನಡ ಸಿನೆಮಾ ರಂಗದ ಸೃಜನಶೀಲ ನಿರ್ದೇಶಕ ಮಂಸೋರೆಯವರ ‘ಮಂಸೋರೆ ಸಿನೆಹಬ್ಬ’ ಜರಗಲಿದೆ. ಮೇ 19ರಂದು ಇತ್ತೀಚೆಗೆ ಅತೀ ಚರ್ಚಿತ ‘19.20.21’ ಹಾಗೂ ಮೇ 20ರಂದು ರಾಷ್ಟ್ರ…
ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಹಾಗೂ ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಇವುಗಳ ಜಂಟಿ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಮೇ 14ರಂದು ಬೆಳಿಗ್ಗೆ ‘ರಜಾರಂಗು-ರಂಗ ಮಂಚ’ ಜ್ಞಾನರಂಜನಾ ಶಿಬಿರವನ್ನು ಗುರುಗಳಾದ ಕೊಯಿಕೂರು ಸೀತಾರಾಮ ಶೆಟ್ಟಿ ರಜಾರಂಗು ರಂಗ ಮಂಚ ಗೋಡೆಗೆ ಮಕ್ಕಳೊಂದಿಗೆ ಚಿಟ್ಟೆ ಅಂಟಿಸುವ ಮುಖೇನ ಉದ್ಘಾಟಿಸಿದರು. “ರಜಾರಂಗು ಶಿರೋನಾಮೆಯಡಿಯಲ್ಲಿ ಅನೇಕಾನೇಕ ಸಂಪನ್ಮೂಲ ವ್ಯಕ್ತಿಗಳು ಸಂಪರ್ಕಿಸಿ ದಾಖಲೆಯನ್ನು ಸಾಧಿಸಿದ ಶಿಬಿರವಿದು. ರೋಹಿತ್ ಎಸ್. ಬೈಕಾಡಿ ನೇತೃತ್ವದ ಶಿಬಿರ ಪಕ್ವತೆಯನ್ನು ಸಾಧಿಸುವುದು ಎಂಬುದು ಸಾಬೀತಾಗಿದೆ. ಈ ನಿಟ್ಟಿನಲ್ಲಿ ಚಿಣ್ಣರಿಗೆ ಆಟದ ಮೂಲಕ ಪಠ್ಯೇತರ ಚಟುವಟಿಕೆಗಳ ಪಾಠವನ್ನು ಅರಿವಿಲ್ಲದಂತೆಯೇ ಬೋಧಿಸುತ್ತಾ ಮುನ್ನಡೆದು ರಂಗವನ್ನು ಕಲ್ಪಿಸುವ ಕಾರ್ಯವೇ ರಂಗ ಮಂಚವಾಗಿರುತ್ತದೆ. 15 ದಿನಗಳ ನಿರಂತರ ದಿನ ಪೂರ್ತಿ ಮೈಮರೆತು ಒಂದಿಷ್ಟು ಕಲಿತು ಹೊರನಡೆದರೆ ಸಂಸ್ಥೆಯ ಕೆಲಸ ಸಾರ್ಥಕವಾಗುತ್ತದೆ” ಎಂದು ಅಭಿಪ್ರಾಯಪಟ್ಟರು. “ಬದುಕನ್ನು ಕಲಿಸುವ ಶಿಬಿರ ಬೆಳೆದು ಬೆಳೆದು ಇತಿಹಾಸವನ್ನು ಸೃಷ್ಟಿಸಿದೆ. ಹಿಂದಿನ ಅನೇಕ ಶಿಬಿರದಲ್ಲೂ ಹೊಸ ಹೊಸ ಪರಿಕಲ್ಪನೆಯಲ್ಲಿ…
ನಮ್ಮ ಮನಸ್ಸಿಗೊಂದು ಭಾಷೆಯಿದೆ. ನಾವು ಯೋಚಿಸುವುದು, ಕನಸು ಕಾಣುವುದು ಈ ಭಾಷೆಯಲ್ಲೇ. ಅದು ನಮ್ಮ ಮಾತೃಭಾಷೆ. ಕನ್ನಡದಲ್ಲಿ ಮಾತನಾಡುವವರು ಕನ್ನಡ ಪುಸ್ತಕ ಓದುವವರು ಕಡಿಮೆಯಾಗುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಈ ಕಾಲದಲ್ಲಿ ಕನ್ನಡದಲ್ಲಿ ಪುಸ್ತಕ ಪ್ರಕಟಿಸುತ್ತಿರುವ ಪ್ರಕಾಶಕರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಹಾಗಾದರೆ ಓದುವವರೂ ಇರಲೇ ಬೇಕಲ್ಲಾ. 100 ವರ್ಷಗಳ ಹಿಂದೆ ಖ್ಯಾತ ಸಾಹಿತಿ ಎ.ಆರ್. ಕೃಷ್ಣ ಶಾಸ್ತ್ರಿಗಳು ಕನ್ನಡಿಗರು ಕನ್ನಡವನ್ನು ನಿರ್ಲಕ್ಷಿಸುತ್ತಿರುವುದನ್ನು ಕಂಡು ದುಃಖದಿಂದ “ನಿಮಗೆ ಕನ್ನಡ ಬೇಡವೆಂದಾದರೆ ಈಚೆ ಅರಬೀ ಸಮುದ್ರವಿದೆ. ಆಚೆ ಬಂಗಾಳಕೊಲ್ಲಿ ಇದೆ. ಗುಡಿಸಿ ಹಾಕಿ” ಎಂದು ಹೇಳಿದ್ದರು. ಕನ್ನಡ ಇನ್ನಷ್ಟು ಸಮೃದ್ಧವಾಗಿ ಬೆಳೆಯಿತೇ ವಿನಃ ಯಾರೂ ಅದನ್ನು ಗುಡಿಸಿ ಹಾಕುವ ಕೆಲಸ ಮಾಡಿಲ್ಲ. ಅದು ಕನ್ನಡದ ಶಕ್ತಿ. ಇಂದು ಅಂತರ್ಜಾಲ ಮುಂತಾದ ಹೊಸ ಹೊಸ ತಂತ್ರಜ್ಞಾನ ಸ್ಪರ್ಧೆಯಲ್ಲಿಯೂ ಕನ್ನಡ ಹಿಂದುಳಿದಿಲ್ಲ. ಹೊಸ ಪೀಳಿಗೆಯ ಯುವ ಸಮುದಾಯವು ಹೊಸ ಹುಮ್ಮಸ್ಸಿನಿಂದ ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವುದನ್ನು ಕಂಡಾಗ ಖುಷಿಯಾಗುತ್ತಿದೆ. ಹಾಗೆಯೇ ತಮ್ಮ ಮಾತೃಭಾಷೆಯಲ್ಲಿ ಕವನ, ಕತೆ, ಕಾದಂಬರಿಗಳನ್ನು ಬರೆದು…
ಕಾಸರಗೋಡು : ಕಾಸರಗೋಡಿನ ಮಂಗಲ್ಪಾಡಿಯ ಪರಂಕಿಲದ ಭಜನ ಮಂದಿರದಲ್ಲಿ ಕಲಾಕುಂಚ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ದಿನಾಂಕ 21-05-2023ರಂದು ‘ವ್ಯಂಗ್ಯಚಿತ್ರ ರಚನಾ ಶಿಬಿರ’ ನಡೆಯಲಿದೆ. ಖ್ಯಾತ ವ್ಯಂಗ್ಯಚಿತ್ರಗಾರ ವಿರಾಜ್ ಅಡೂರು ನಿರ್ದೇಶನದಲ್ಲಿ ನಡೆಯುವ ಈ ಶಿಬಿರದಲ್ಲಿ 5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಭಾಗವಹಿಸಬಹುದು. ಶಿಬಿರಕ್ಕೆ ಸೇರಲಿಚ್ಚಿಸುವ ಶಿಬಿರಾರ್ಥಿಗಳು ಡ್ರಾಯಿಂಗ್ ಪುಸ್ತಕ, ಪೆನ್ಸಿಲ್, ಕ್ರೆಯಾನ್ಸ್ ರಬ್ಬರ್ ಗಳನ್ನು ತಾವೇ ತರಬೇಕು. ಶಿಬಿರವು ಬೆಳಿಗ್ಗೆ 9-30ರಿಂದ ಸಂಜೆ 4-00ರವರೆಗೆ ನಡೆಯಲಿರುವುದು. ಈ ಶಿಬಿರವು ಸಂಪೂರ್ಣ ಉಚಿತವಾಗಿದ್ದು ಶಿಬಿರಾರ್ಥಿಗಳಿಗೆ ಉಪಾಹಾರ ಹಾಗೂ ಭೋಜನದ ವ್ಯವಸ್ಥೆಯನ್ನು ಸಂಘಟಕರೇ ಆಯೋಜಿಸಲಿದ್ದಾರೆ. ಹೆಚ್ಚಿನ ವಿವರಗಳಿಗಾಗಿ 8281283091 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಕಾಸರಗೋಡು ಗಡಿನಾಡಿನ ಸಾಹಿತ್ಯ ಚಟುವಟಿಕೆಯಲ್ಲಿ ಸದಾ ನಿರತರಾಗಿರುವ ಶ್ರೀ ವಿರಾಜ್ ಅಡೂರು ಇವರು ಕೃಷಿ, ಶಿಕ್ಷಣ, ವ್ಯಂಗ್ಯಚಿತ್ರ, ಸಾಹಿತ್ಯ ಸಾಮಾಜಿಕ ಸಂಘಟನೆ, ಪತ್ರಿಕೋದ್ಯಮ, ಶಿಬಿರ ಸಂಯೋಜನೆ ಶಿಬಿರದ ಸಂಪನ್ಮೂಲ ವ್ಯಕ್ತಿ ಹೀಗೆ ಕ್ರಿಯಶೀಲರಾಗಿರುವ ಇವರು ಪ್ರಜಾವಾಣಿ ಪತ್ರಿಕೆಯ ವರದಿಗಾರರು. ಚುಟುಕುಟುಕು ಇವರ ಸ್ವರಚಿತ ಕವನ ವಾಚನವು ಮಂಗಳೂರು ಆಕಾಶವಾಣಿಯಿಂದ ಅನೇಕ…
ಹೊಸಕೋಟೆ: ಹೊಸಕೋಟೆಯ ಜನಪದರು ಸಾಂಸ್ಕೃತಿಕ ವೇದಿಕೆ, ಪ್ರತಿ ತಿಂಗಳ ಎರಡನೇ ಶನಿವಾರದಂದು ಸಂಜೆ ಆಯೋಜಿಸುವ ನಾಟಕ ಸರಣಿ ರಂಗ ಮಾಲೆ -70 ದಿನಾಂಕ 13-05-2023 ರಂದು ನಡೆಯಿತು . ಈ ಬಾರಿ ಬೆಂಗಳೂರು ಬಿಂಕ ಬಿನ್ನಾಣಿಗರು ರಂಗ ತಂಡವು ಸಂಸ್ಕೃತದ ಮಹಾ ಕವಿ ಭಾಸ ನ “ದೂತ ಘಟೋತ್ಕಜ ” ನಾಟಕವನ್ನು ಯುವ ನಿರ್ದೇಶಕ ಶಿವು ಹೊನ್ನಿಗನಹಳ್ಳಿ ನಿರ್ದೇಶನದಲ್ಲಿ ಪ್ರದರ್ಶಿಸಿತು. ನಾಟಕ ಉದ್ಘಾಟನೆ ಮಾಡಿದ ವೇದಿಕೆ ಅಧ್ಯಕ್ಷ ಕೆ.ವಿ ವೆಂಕಟರಮಣಪ್ಪ, ಪಾಪಣ್ಣ ಕಾಟಂ ನಲ್ಲೂರು ಮಾತನಾಡುತ್ತಾ ‘ಭಾರತೀಯ ಮಹಾಕಾವ್ಯ ಮಹಾಭಾರತ . ವಿಶ್ವಕ್ಕೆ ಜೀವನ ಮೌಲ್ಯಗಳಾದ ‘ಭಾತೃತ್ವ- ಸಹ ಬಾಳ್ವೆ- ನ್ಯಾಯ-ಧಮ೯ – ಶಾಂತಿ ಸಂದೇಶಗಳನ್ನು ನೀಡುತ್ತದೆ. ಪ್ರಭುತ್ವದಲ್ಲಿ ಯುದ್ಧ ಅದರ ನಶ್ವರತೆ – ನಿರರ್ಥಕತೆಯನ್ನು ಸಾರುತ್ತಲೆ ಬಂದಿದೆ ಎಂದರು’.ನಾಟಕ ನೆರೆದ ಪ್ರೇಕ್ಷಕರನ್ನು ಮೋಡಿ ಮಾಡಿತು. ನಿರ್ದೇಶಕ ಶಿವು ಹೊನ್ನಿಗನಹಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಿದರು. ವೇದಿಕೆ ಪದಾಧಿಕಾರಿಗಳಾದ ‘ಜಗದೀಶ್ ಕೆಂಗನಾಳ್ . ಸಿದ್ದೇಶ್ವರ ದೊಡ್ಡ ಬನಹಳ್ಳಿ. ಎಂ.ಸುರೇಶ್ ಚಲಪತಿ ಮಮತ, ಮುನಿರಾಜು…
ಕಾಸರಗೋಡು : ಗಡಿ ಪ್ರದೇಶವಾದ ಕಾಸರಗೋಡಿನಲ್ಲಿ ಕಳೆದ 17 ವರ್ಷಗಳಿಂದ ಕನ್ನಡ ನಾಡು ನುಡಿ ಸಂಸ್ಕೃತಿಗಾಗಿ ದುಡಿಯುತ್ತಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ 2022-23ನೇ ವರ್ಷದ ‘ರಂಗಚಿನ್ನಾರಿ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ. ಅದರಂತೆ ‘ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಪ್ರಶಸ್ತಿ’ಗೆ ಖ್ಯಾತ ಯಕ್ಷಗಾನ ಕಲಾವಿದ ಶ್ರೀ ಪಿ. ಲಕ್ಷ್ಮೀನಾರಾಯಣ ಭಟ್ ಆಯ್ಕೆಯಾಗಿದ್ದಾರೆ. ‘ರಂಗಚಿನ್ನಾರಿ ಪ್ರಶಸ್ತಿ’ಗೆ ಕಥೆಗಾರ, ಸಾಹಿತಿ ವಿಠಲ ಗಟ್ಟಿ ಉಳಿಯ ಮತ್ತು ಖ್ಯಾತ ವಾಗ್ಮಿ ಶ್ರೀಮತಿ ಜಯಲಕ್ಷ್ಮೀ ಕಾರಂತ ಅವರನ್ನು ಆರಿಸಲಾಗಿದೆ. ಪ್ರಶಸ್ತಿಯು ತಲಾ ಐದು ಸಾವಿರ ರೂ. ನಗದು, ಸ್ಮರಣಿಕೆ, ಫಲತಾಂಬೂಲ ಹೊಂದಿದೆ. ಯುವ ಪ್ರತಿಭೆಗಳಿಗೆ ನೀಡುವ ‘ರಂಗಚಿನ್ನಾರಿ ಯುವ ಪ್ರಶಸ್ತಿ’ಗೆ ಜಾನಪದ ಕಲಾವಿದ ಸುಜಿತ್ ಕುಮಾರ್ ಹಾಗೂ ಸಂಗೀತ ಕಲಾವಿದೆ ಬಿ. ಮೇಧಾ ಕಾಮತ್ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ 2,500 ರೂ. ನಗದು, ಸ್ಮರಣಿಕೆ, ಫಲತಾಂಬೂಲ ಹೊಂದಿದೆ. ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಪ್ರಶಸ್ತಿ ನಗದನ್ನು ದಿ. ಹರಿರಾಯ ಕಾಮತ್ ಸ್ಮಾರಕವಾಗಿ ನೀಡಲಾಗುವುದು.…
ಉಡುಪಿ: ಉಡುಪಿ ಯಕ್ಷಗಾನ ಕಲಾರಂಗವು ಸಹೃದಯಿ ಕಲಾ ಪೋಷಕ ಮಟ್ಟಿ ಮುರಲೀಧರ ರಾವ್ ಮತ್ತು ಅರ್ಥಧಾರಿ, ಪಂಡಿತ ಪೆರ್ಲ ಕೃಷ್ಣ ಭಟ್ ನೆನಪಿನಲ್ಲಿ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಅನುಕ್ರಮವಾಗಿ ಅರ್ಥಧಾರಿ, ಪತ್ರಕರ್ತ, ಲೇಖಕ, ವಿಮರ್ಶಕ, ಸಂಘಟಕ ಶ್ರೀಕರ ಭಟ್ ಹಾಗೂ ಅರ್ಥಧಾರಿ, ಸಂಶೋಧಕ, ಲೇಖಕ, ಪ್ರವಚನಕಾರ ಡಾ. ಪಾದೆಕಲ್ಲು ವಿಷ್ಣು ಭಟ್ ಆಯ್ಕೆಯಾಗಿದ್ದಾರೆ. ಸಂಸ್ಥೆಯ ತಾಳಮದ್ದಲೆ ಸಪ್ತಾಹ ಮೇ 21 ರಿಂದ 27ರ ವರೆಗೆ ನಡೆಯಲಿದ್ದು, ಮೇ 27 ಶನಿವಾರ ಸಂಜೆ 5.00 ಗಂಟೆಗೆ ಶಿರ್ವದ ಮಹಿಳಾ ಸೌಧದಲ್ಲಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು ರೂ. 20,000/- ನಗದು ಪುರಸ್ಕಾರ ಒಳಗೊಂಡಿರುತ್ತದೆ.
ಕಾಸರಗೋಡು: ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ದಿನಾಂಕ 06-05-2023 ಕಾಸರಗೋಡಿನ ಕುಂಬಳೆಯಲ್ಲಿ ಗಡಿ ಉತ್ಸವ ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮವು ಅದ್ದೂರಿಯಿಂದ ನಡೆಯಿತು. ಗೀತಾರವರ ಪ್ರಾರ್ಥನಾ ನಂತರ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಸದ್ರಿ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀ ಮತಿ ರಾಣಿ ಪುಷ್ಪಲತಾ ದೇವಿಯವರು ಗಡಿನಾಡಿನಲ್ಲಿ ಆಗುತ್ತಿರುವ ಕನ್ನಡ ಭಾಷೆಗೆ ಸಿಗುವ ಮಾನ್ಯತೆ ಇಳಿಮುಖವಾಗುವಾಗ ಕೇರಳ ಗಡಿ ಪ್ರದೇಶದ ಹಲವಾರು ಕಡೆ ಕನ್ನಡ ಭಾಷೆಯ ಉನ್ನತೀಕರಣಕ್ಕಾಗಿ ಹಾಕುತ್ತಿರುವ ಈ ಹೆಜ್ಜೆಗಳು ಸಾರ್ಥಕವಾಗಲಿ ಎಂದು ಆಶಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊಫೆಸರ್ ರಾಧಾಕೃಷ್ಣ ಬೆಳ್ಳೂರು ಮಾತನಾಡಿ ಕಾಸರಗೋಡಿನಲ್ಲಿ ಮೂರು ಮಾದರಿಯ ಕನ್ನಡ ಹೋರಾಟ ನಡೆದಿದೆ. ಒಂದನೆಯದು ಬೀದಿಗಿಳಿದು ನಡೆಸುವ ಹೋರಾಟ. ಅದರ ಕಾವು ಈಗ ತಗ್ಗುತ್ತಾ ಬಂದಿದೆ. ಎರಡನೆಯದು ಸಾಹಿತ್ಯಕ ಮತ್ತು ಸಾಂಸ್ಕೃತಿಕವಾದ ಹೋರಾಟ. ಅದು ಮುಂದಿನ ತಲೆಮಾರಿಗೆ…
ಉಡುಪಿ : ಮಾಹೆ ಮಣಿಪಾಲದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ವತಿಯಿಂದ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ -2023ಕ್ಕೆ ಲೇಖಕ ಶಂಕರ್ ಸಿಹಿಮೊಗ್ಗೆ ಅವರ ‘ಇರುವೆ ಮತ್ತು ಗೋಡೆ’ ಅಪ್ರಕಟಿತ ಕವನ ಸಂಕಲನ ಆಯ್ಕೆಯಾಗಿದೆ. ಪ್ರಶಸ್ತಿಯು 10,000 ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಮಲೆನಾಡು ಶಿವಮೊಗ್ಗದಲ್ಲಿ ಜನಿಸಿದ ಶ್ರೀ ಶಂಕರ್ ಸಿಹಿಮೊಗ್ಗೆಯವರು ಶ್ರೀ ಗೋವಿಂದರಾಜು ಹಾಗೂ ಶ್ರೀಮತಿ ನಾಗಮ್ಮನವರ ಸುಪುತ್ರ. ಪ್ರಸ್ತುತ ತನ್ನ ಜನ್ಮದಾತರು ಹಾಗೂ ಬಾಳ ಗೆಳತಿ ಅನುಷಾ ಹೆಗ್ಡೆಯವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಟೆಲಿಕಮ್ಯೂನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಇವರು ಖಾಸಗಿ ಕಂಪೆನಿಯೊಂದರಲ್ಲಿ ಸೀನಿಯರ್ ಸ್ಟಾಫ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆ, ಚಾರಣ ಮತ್ತು ನಾಟಕ ಮುಂತಾದ ಸೃಜನಶೀಲ ಕಾರ್ಯಗಳು ಇವರ ಹವ್ಯಾಸ. ವಿದ್ಯಾರ್ಥಿಯಾಗಿರುವಾಗಲೇ ರಂಗಭೂಮಿ ತರಬೇತಿಯನ್ನು ಪಡೆದುಕೊಂಡು ‘ನೀನಾಸಂ’ ಶಿಬಿರಗಳಲ್ಲಿ ಭಾಗವಹಿಸಿ, ಅಲ್ಲಿ ನಡೆಯುವ ಸಾಹಿತ್ಯ ಸಂವಾದ, ವಿಮರ್ಶೆಗಳಲ್ಲಿ ಪಾಲ್ಗೊಂಡು ತನ್ನ ಕಲಿಕೆಯ ಮೇಲೆ…