Author: roovari

ಸುಬ್ರಹ್ಮಣ್ಯ: ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ 16 ನವೆಂಬರ್ 2025ರಂದು ವಳಲಂಬೆ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಈ ಸಂಬಂಧ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಪಂಜ ಹೋಬಳಿಯ ಗುತ್ತಿಗಾರು, ನಾಲ್ಕೂರು, ದೇವಚಳ್ಳ, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು, ಕೂತ್ಕುಂಜ, ಮುರುಳ್ಯ, ಐವತೊಡ್ಲು, ಪಂಬೆತ್ತಾಡಿ ಹಾಗೂ ಸುಳ್ಯ ಹೋಬಳಿಯ ಕಲ್ಮಡ್ಕ, ಕಳಂಜ, ಬಾಳಿಲ, ಅಮರ ಮುನ್ನೂರು, ಅಮರ ಪಡೂರು, ನೆಲ್ಲೂರು ಕೆಮ್ರಾಜೆ ಮತ್ತು ಮಡಪ್ಪಾಡಿ ಗ್ರಾಮಗಳ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಹಾಗೂ ಭಾಷೆಗೆ ಸಂಬಂಧಿಸಿದ ಕವನಗಳ ಜೊತೆಗೆ ತಮ್ಮ ಸ್ವ-ಪರಿಚಯವನ್ನು ಕಳುಹಿಸಬಹುದು. ಕವನ ಕಳುಹಿಸಲು ಅಕ್ಟೋಬರ್ 23ಕೊನೆಯ ದಿನ. ಆಯ್ಕೆಯಾದ ವಿದ್ಯಾರ್ಥಿಗಳು ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಅವಕಾಶ ಇದೆ. ಕವನಗಳನ್ನು ಕಳುಹಿಸುವವರು ಯೋಗೀಶ್ ಹೊಸೊಳಿಕೆ ಅವರ ಮೊಬೈಲ್ ಸಂಖ್ಯೆ 9449576632ಗೆ ವಾಟ್ಸ್ಆ್ಯಪ್ ಮೂಲಕ ಕಳುಹಿಸಬೇಕೆಂದು ಸಮ್ಮೇಳನದ ಸಂಘಟನಾ ಸಮಿತಿಯ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಪಂಜ ಹೋಬಳಿ…

Read More

ಮಡಿಕೇರಿ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ತ್ರೈ ಮಾಸಿಕ ‘ಕೊಡವೋಲೆ’ ಸಂಚಿಕೆ ಪ್ರಕಟಿಸಲಾಗುತ್ತಿದ್ದು ಸ್ವ-ರಚಿತ ಬರಹಗಳನ್ನು ಆಹ್ವಾನಿಸಲಾಗಿದೆ. ಆ ದಿಸೆಯಲ್ಲಿ ಈವರೆಗೆ ಎಲ್ಲಿಯೂ ಪ್ರಕಟವಾಗದ ತಮ್ಮ ಸ್ವಂತ ರಚನೆಯ ಕೊಡವ ಭಾಷೆಯಲ್ಲಿ ರಚಿಸಿದ ಕಥೆ, ಕವನ, ಚುಟುಕ, ವೈಚಾರಿಕ ಲೇಖನ, ನಗೆಹನಿ, ಪ್ರಬಂಧ, ಸಂಶೋಧನಾ ಲೇಖನಗಳನ್ನು ಕಚೇರಿ ಮೊಬೈಲ್ ಸಂಖ್ಯೆ – 8762942976 ಅಥವಾ ಇ-ಮೇಲ್ [email protected] ಗೆ ನುಡಿ ಫಾಂಟ್ ಅಲ್ಲಿ ಟೈಪ್ ಮಾಡಿ ಇಲ್ಲವೆ ಕೈ ಬರಹದಲ್ಲಿ ಅಚ್ಚುಕಟ್ಟಾಗಿ ಬರೆದು 10 ನವೆಂಬ‌ರ್ 2025 ರೊಳಗೆ ಅಧ್ಯಕ್ಷರು/ ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಬಳಿ ಮಡಿಕೇರಿ-571201 ಈ ಕಚೇರಿಗೆ ತಲುಪಿಸಬಹುದು . ಅರ್ಹವಾದುದ್ದನ್ನು ‘ಕೊಡವೋಲೆ’ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಬರಹಗಾರರು ಬರೆದು ಕಳುಹಿಸುವಾಗ ಹೆಸರು ಮತ್ತು ಪೂರ್ಣ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ಬ್ಯಾಂಕ್ ಖಾತೆಯ ವಿವರವುಳ್ಳ ಪಾಸ್‌ಬುಕ್ ಪ್ರತಿಯನ್ನು ನೀಡಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಅಕಾಡೆಮಿ ಕಚೇರಿ…

Read More

ಮಂಗಳೂರು : ಗಾನ ನೃತ್ಯ ಅಕಾಡೆಮಿ (ರಿ.) ಮಂಗಳೂರು ಇವರು ಪ್ರಸ್ತುತ ಪಡಿಸುವ ಗುರು ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯ ಅನಂತಕೃಷ್ಣ ಸಿ.ವಿ. ಇವರ ‘ಭರತನಾಟ್ಯ ರಂಗಪ್ರವೇಶ’ವು ದಿನಾಂಕ 25 ಅಕ್ಟೋಬರ್ 2025ರಂದು ಸಂಜೆ ಗಂಟೆ 5-15ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾಶ್ರೀ ಗುರು ಉಳ್ಳಾಲ ಮೋಹನ್ ಕುಮಾರ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ಬೋಳೂರು ಎಸ್.ಡಿ.ಎಂ. ಸ್ಕೂಲಿನ ಪ್ರಾಂಶುಪಾಲರಾದ ಶ್ರೀಮತಿ ಜೋಯ್ ಜೀವನ್ ಪೈ, ಡಾ. ಸಾಗರ್ ಟಿ.ಎಸ್. ಮತ್ತು ಡಾ. ಕಿಶೋರ್ ಕುಮಾರ್ ಉಬ್ರಂಗಳ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭರತನಾಟ್ಯ ಕಾರ್ಯಕ್ರಮಕ್ಕೆ ನಟುವಾಂಗಂನಲ್ಲಿ ಗುರು ವಿದ್ಯಾಶ್ರೀ ರಾಧಾಕೃಷ್ಣ, ಹಾಡುಗಾರಿಕೆಯಲ್ಲಿ ಚೆನ್ನೈಯ ವಿದ್ವಾನ್ ಶ್ರೀಕಾಂತ್ ಗೋಪಾಲ ಕೃಷ್ಣನ್, ಮೃದಂಗದಲ್ಲಿ ಬೆಂಗಳೂರಿನ ವಿದ್ವಾನ್ ವಿನಯ್ ನಾಗರಾಜನ್, ವೀಣೆಯಲ್ಲಿ ಚೆನ್ನೈಯ ವಿದ್ವಾನ್ ಅನಂತನಾರಾಯಣ ಮತ್ತು ಕೊಳಲಿನಲ್ಲಿ ಬೆಂಗಳೂರಿನ ವಿದ್ವಾನ್ ರಘುನಂದನ್ ಇವರುಗಳು ಸಹಕರಿಸಲಿದ್ದಾರೆ.

Read More

ಕಲಬುರಗಿ: ಕಲಬುರಗಿಯ ಖ್ಯಾತ ಕಲಾವಿದ, ಸಾಂಪ್ರದಾಯಿಕ ಕುಸುರಿ ಕೆತ್ತನೆಯಲ್ಲಿ ಹೆಸರು ಮಾಡಿರುವ ಚಂದ್ರಶೇಖರ ವೈ. ಶಿಲ್ಪಿ ಇವರು ಭಾರತ ಸರ್ಕಾರದ ಜವಳಿ ಸಚಿವಾಲಯ ನೀಡುವ 2024ನೇ ‘ರಾಷ್ಟ್ರೀಯ ಶಿಲ್ಪಕಲಾ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆಗಿರುವ ಶ್ರೀಯುತರು ಕೆತ್ತನೆ ಮಾಡಿರುವ ಅಪರೂಪದ ಕಲಾ ನೈಪುಣ್ಯತೆ ಹೊಂದಿರುವ ದ್ವಾರಬಾಗಿಲಿಗೆ ಈ ಪ್ರಶಸ್ತಿ ದೊರೆತಿದ್ದು, 09 ಡಿಸೆಂಬರ್ 2025 ರಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Read More

ಮಂಗಳೂರು : ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇದರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಏಕದಿನ ಸಾಹಿತ್ಯ ಅಭಿಯಾನ ದಿನಾಂಕ 17 ಅಕ್ಟೋಬರ್ 2025ರಂದು ಮುಲ್ಕಿ ಕಾರ್ನಾಡ್ ಇಲ್ಲಿರುವ ಸಿ.ಎಸ್.ಐ. ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ರೇಖಾ ಸುದೇಶ್ ರಾವ್ ಸ್ವಾಗತಿಸಿ, ಶಾಲಾ ಶಿಕ್ಷಕಿ ಶ್ರೀಮತಿ ಎಲಿಜಬೆತ್ ಪುಷ್ಪಲತಾ ಬಂಗೇರ ಕಾರ್ಯಕ್ರಮದ ಉದ್ಘಾಟನೆಗೈದರು. ಕಾರ್ಯಾಧ್ಯಕ್ಷರು ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಶ್ರೀ ಉಮೇಶ್ ರಾವ್ ಕುಂಬ್ಳೆ ಪ್ರಾಸ್ತಾವಿಕ ನುಡಿಗಳನಾಡಿ, ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ನಡೆಸಿದರು. ಅಂದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿರುವ ಕೊಳ್ಚಪ್ಪೆ ಗೋವಿಂದ ಭಟ್ ಸಾಹಿತ್ಯದ ಬಗೆಗಿನ ಮಾಹಿತಿ ವಿದ್ಯಾರ್ಥಿಗಳಿಗೆ ತಿಳಿಸಿ, ವಿದ್ಯಾರ್ಥಿಗಳ ಗುಂಪು ರಸ ಪ್ರಶ್ನೆ ನಡೆಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಲಾಯಿತು. ಉದ್ಘಾಟಕರು, ಕಾರ್ಯಕ್ರಮದ ನಿರೂಪಕರು ಆದ ಶ್ರೀಮತಿ ಎಲಿಜಬೆತ್ ಪುಷ್ಪಲತಾ ಬಂಗೇರ ಇವರಿಗೆ ಶಾಲು ಹೊದಿಸಿ…

Read More

ಬೆಂಗಳೂರು : ದಿ. ಡಾ. ಮಂಜುನಾಥ ಭಟ್ ಹಿರೇಮನೆ ಬೆಂಗಳೂರು ಇವರ ಸ್ಮರಣಾಂಜಲಿ, ಸ್ಮೃತಿ ಗೌರವ ಮತ್ತು ಯಕ್ಷಗಾನ ಪ್ರದರ್ಶನವನ್ನು ದಿನಾಂಕ 24 ಅಕ್ಟೋಬರ್ 2025ರಂದು ಸಂಜೆ 6-00 ಗಂಟೆಗೆ ಹಿರೇಮನೆ ಶ್ರೀ ಮಹಾಗಣಪತಿ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದೆ. ಸ್ಮರಣಾಂಜಲಿ, ಸ್ಮೃತಿ ಗೌರವ ಕಾರ್ಯಕ್ರಮದಲ್ಲಿ ರವೀಂದ್ರ ಭಟ್ ಐನಕೈ, ಬಿ.ಆರ್. ಗಣಪತಿ ರಾವ್, ಹೆಚ್.ವಿ. ಶ್ರೀಧರ ಭಟ್, ಟಿ.ಡಿ. ಲಕ್ಷ್ಮೀನಾರಾಯಣ ಭಟ್, ತಿರುಮಲ ಶರ್ಮ ಮತ್ತು ರಾಘವೇಂದ್ರ ಶರ್ಮ ಇವರುಗಳು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಡಗುತಿಟ್ಟಿನ ಶ್ರೇಷ್ಠ ಭಾಗವತರಾದ ಕೊಳಗಿ ಕೇಶವ ಹೆಗಡೆ ಮತ್ತು ಉಪನ್ಯಾಸಕರಾದ ವಿದ್ವಾನ್ ದತ್ತಮೂರ್ತಿ ಭಟ್ ಇವರಿಗೆ ಸ್ಮೃತಿ ಗೌರವಾರ್ಪಣೆ ಹಾಗೂ ಶಿವಮೊಗ್ಗದ ನಾಟ್ಯಶ್ರೀ ಕಲಾ ತಂಡ ಮತ್ತು ಪ್ರಸಿದ್ಧ ಕಲಾವಿದರಿಂದ ‘ಕಂಸ ದಿಗ್ವಿಜಯ – ಕಂಸವಧೆ’ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.

Read More

ಮಂಚಿ :  ದ. ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮಿತಿ, ದ. ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಇವರು ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಇವರ ಸಹಕಾರದೊಂದಿಗೆ ಆಯೋಜಿಸಿದ,’ಕಲಾ ನಿಧಿ-25′ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 18 ಅಕ್ಟೋಬರ್ 2025 ರಂದು ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಇಲ್ಲಿ ನಡೆಯಿತು. ಖ್ಯಾತ ಹಿರಿಯ ಚಿತ್ರಕಲಾವಿದ ಗಣೇಶ್ ಸೋಮಯಾಜಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ತುಕಾರಾಮ ಪೂಜಾರಿ ಮಾತನಾಡಿ “ವಿದ್ಯಾರ್ಥಿಗಳು ಕಲೆ ಸಾಹಿತ್ಯ ಸಂಸ್ಕೃತಿ ಮುಂತಾದ ವಿಷಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸೃಜನಶೀಲವಾಗಿ ಆಲೋಚಿಸಬೇಕು. ಆಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ” ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಶಿಕ್ಷಣ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕರು ಜಿ. ಎಸ್. ಶಶಿಧರ್ ಮಾತನಾಡಿ “ಸಾವಿರ ಪದಗಳಲ್ಲಿ ಹೇಳುವುದನ್ನು ಒಂದು ಕಲಾಕೃತಿ ಮೂಲಕ ತಿಳಿಸಬಹುದು. ಭಾವನೆಗಳನ್ನು ಪ್ರಸ್ತುತಪಡಿಸಲು ಒಂದು…

Read More

ಕಾಸರಗೋಡು : ಯಕ್ಷಗಾನ ಕ್ಷೇತ್ರಕ್ಕೆ ಅಪರೂಪವೆನಿಸಿದ ಶ್ರೀ ಪುರಂದರದಾಸರು ರಚಿಸಿದ ‘ಅನಸೂಯಾ ಚರಿತ್ರೆ’ ಯಕ್ಷಗಾನ ಪ್ರಸಂಗವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರಕಟಿಸಿದ್ದು, ಇದರ ಲೋಕರ್ಪಣಾ ಸಮಾರಂಭವು ದಿನಾಂಕ 18 ಅಕ್ಟೋಬರ್ 2025ರಂದು ಕಾಸರಗೋಡಿನ ಸಿರಿಬಾಗಿಲಿನಲ್ಲಿರುವ ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಿತು. ಶ್ರೀ ಸುಬ್ರಮಣ್ಯ ಮಠದ ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳವರು ಲೋಕಾರ್ಪಣೆಗೊಳಿಸಿ “ದಾಸ ಶ್ರೇಷ್ಠ ಶ್ರೀಪುರಂದರದಾಸರು ರಚಿಸಿದ ಯಕ್ಷಗಾನ ಪ್ರಸಂಗವನ್ನು ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು ಶ್ರಮವಹಿಸಿ ಸಂಪಾದಿಸಿದ್ದಾರೆ. ಈ ಅಮೂಲ್ಯ ಕೃತಿಯನ್ನು ಸಿರಿಬಾಗಿಲು ಪ್ರತಿಷ್ಠಾನವು ಪ್ರಕಾಶನಗೊಳಿಸಿ, ಇಂದು ನಮ್ಮಿಂದ ಲೋಕಾರ್ಪಣೆಗೊಳಿಸಿದ್ದಾರೆ. ಪ್ರತಿಯೊಬ್ಬರ ನೆನಪಿನಲ್ಲಿರುವ, ಕೇಳಿದಷ್ಟು ಮತ್ತೂ ಮತ್ತೂ ಕೇಳಬೇಕೆನಿಸುವ ದಾಸರ ಪದಗಳು ಶ್ರೇಷ್ಠವಾದವು. ಅಂತಹದ್ದರಲ್ಲಿ, ಯಕ್ಷಗಾನ ಸಾಹಿತ್ಯ ಕ್ಷೇತ್ರಕ್ಕೆ ಸೇರ್ಪಡೆಗೊಂಡ ಅತ್ಯಂತ ಪ್ರಾಚೀನ ಕಾಲದ ಈ ಕೃತಿಯಿಂದ ಮತ್ತಷ್ಟು ಯಕ್ಷಗಾನ ಕಲೆಯು ಬೆಳೆಯಲಿ, ಬೆಳಗಲಿ. ಹೆಚ್ಚಿನ ಪ್ರಸಂಗ ಪದ್ಯಗಳನ್ನು ಕಂಠಪಾಠ ಹೊಂದಿರುವ ಭಾಗವತ ಶ್ರೇಷ್ಠರು ರಾಮಕೃಷ್ಣ ಮಯ್ಯರು. ಅಂಥವರ ನೇತೃತ್ವದ ಸಿರಿಬಾಗಿಲು ಪ್ರತಿಷ್ಠಾನದ…

Read More

ಸಾಗರ : ಹಂಪಿ ಕನ್ನಡ ವಿಶ್ವವಿದ್ಯಾಲಯದ ಶ್ರೀರಂಗ ದತ್ತಿನಿಧಿ ನಾಟಕ ವಿಭಾಗ ಹಾಗೂ ನಮ್ಮ ರಂಗ ಸ್ವರೂಪ ಟ್ರಸ್ಟ್ (ರಿ.) ಸಾಗರ ಇದರ ಸಹಯೋಗದಲ್ಲಿ ಶ್ರೀರಂಗರ ನಾಟಕಗಳ ಕುರಿತ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ಶ್ರೀರಂಗರ ‘ಸಾವಿತ್ರಿ’ ನಾಟಕ ಪ್ರದರ್ಶನವನ್ನು ದಿನಾಂಕ 27 ಮತ್ತು 28 ಅಕ್ಟೋಬರ್ 2025ರಂದು ಸಾಗರ ಶ್ರೀನಾಗರದ ನೃತ್ಯ ಭಾಸ್ಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 27 ಅಕ್ಟೋಬರ್ 2025ರಂದು ಮಧ್ಯಾಹ್ನ 2-30 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಇವರು ಅಧ್ಯಕ್ಷತೆ ವಹಿಸಲಿದ್ದು, ರಂಗಕರ್ಮಿಗಳಾದ ಡಾ. ಎ. ಮುರಿಗೆಪ್ಪ ಇವರು ಉದ್ಘಾಟನೆ ಮಾಡಲಿದ್ದಾರೆ. ಸಾಗರದ ನಮ್ಮ ರಂಗ ಸ್ವರೂಪ ಟ್ರಸ್ಟ್ ಇದರ ಅಧ್ಯಕ್ಷರಾದ ಎಂ.ಎಸ್. ಚಂದ್ರಶೇಖರ ಇವರ ಉಪಸ್ಥಿತಿಯಲ್ಲಿ ಶ್ರೀರಂಗ ದತ್ತಿನಿಧಿ ಇದರ ಸಂಚಾಲಕರಾದ ಡಾ. ವೀರೇಶ ಬಡಿಗೇರ ಇವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಮಧ್ಯಾಹ್ನ 3-30 ಗಂಟೆಗೆ ನಡೆಯುವ ಗೋಷ್ಠಿ 1ರಲ್ಲಿ ಹಿರಿಯ ಸಾಹಿತಿ…

Read More

ಬಾಗಲಕೋಟೆ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ ಮತ್ತು ಆಕೃತಿ ಕನ್ನಡ ಪ್ರಕಾಶನ ಬೆಂಗಳೂರು ಇವರ ಸಹಯೋಗದಲ್ಲಿ ‘ಮೂಡಲ ಮನೆ’ ಖ್ಯಾತಿಯ ಹೂಲಿ ಶೇಖರ್ ಇವರ ‘ಸ್ವಾತಂತ್ರ್ಯದ ಕಿಡಿಗಳು’ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 26 ಅಕ್ಟೋಬರ್ 2025ರಂದು ಬೆಳಗ್ಗೆ 10-30 ಗಂಟೆಗೆ ಬಾಗಲಕೋಟೆಯ ನವನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ನಾಟಕಕಾರರಾದ ಡಾ. ಡಿ.ಎಸ್. ಚೌಗಲೆ ಇವರು ಕೃತಿ ಬಿಡುಗಡೆ ಮಾಡಲಿದ್ದು, ಬಾಗಲಕೋಟೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶಿವಾನಂದ ಶೆಲ್ಲಿಕೇರಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ. ಬಸು ಬೇವಿನಗಿಡದ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಾಹಿತಿಗಳಾದ ಡಾ. ವಾಯ್ ಎಂ. ಯಾಕೊಳ್ಳಿ ಮತ್ತು ಡಾ. ಚಂದ್ರಶೇಖರ್ ಹೆಗಡೆ ಇವರು ಕೃತಿ ಪರಿಚಯ ಮಾಡಲಿದ್ದಾರೆ.

Read More