Author: roovari

ಕೋಣಾಜೆ : ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ) ಇವರ ದೇವಕಿಯಮ್ಮ ದತ್ತಿನಿಧಿ ಕಾರ್ಯಕ್ರಮದಲ್ಲಿ ‘ಜೀವ-ಭಾವಕೆ ಗಾನ ಸಮ್ಮಿಲನ’ವು ದಿನಾಂಕ 07-10-2023ನೇ ಶನಿವಾರ ಅಪರಾಹ್ನ ಘಂಟೆ 3ಕ್ಕೆ ಅಸೈಗೋಳಿಯ ಅಭಯ ಆಶ್ರಯದಲ್ಲಿ ನಡೆಯಲಿದೆ. ಸಾಹಿತಿ ಬಿ.ಎಂ. ರೋಹಿಣಿಯವರ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಳ್ಳಿ ಶ್ರೀನಾಥ್ ಹೆಗಡೆಯವರು ವಹಿಸಲಿರುವರು. ನಂತರ ನಡೆಯಲಿರುವ ‘ಗಾನ ಸಮ್ಮಿಲನ’ದಲ್ಲಿ ಕು. ಮೇಧಾ ಉಡುಪ ಕೊಳಲು ವಾದನಕ್ಕೆ ವಿದ್ವಾನ್ ಸುನಾದ ಕೃಷ್ಣ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ‘ಭಾವಗಾನ’ದಲ್ಲಿ ಹಾಡುವವರು ಆಶಾ ಶೆಣೈ, ರತ್ನಾವತಿ ಜೆ. ಬೈಕಾಡಿ, ಉಷಾ ಎಂ., ವನಜಾಕ್ಷಿ ಉಳ್ಳಾಲ, ಸುಮಂಗಲಾ ಕೃಷ್ಣಾಪುರ, ಗೀತಾ ಮಲ್ಯ, ಅದಿಸ್ವರೂಪ, ಲಗ್ಮ, ಶುಭ, ಅ.ನಾ. ಪೂರ್ಣಿಮಾ ಮತ್ತು ಆಕೃತಿ ಭಟ್. ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಈ ಕಾರ್ಯಕ್ರಮಕ್ಕೆ ಆದರದ ಸ್ವಾಗತ ಕೋರಿದ್ದಾರೆ.

Read More

ಮಂಗಳೂರು : ಪಡೀಲ್‌ನ ಆತ್ಮಶಕ್ತಿ ಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಮಾಜಿಕ ಸೇವಾ ಸಂಸ್ಥೆ ‘ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್‌’ ಆರಂಭವಾಗಿ 20 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ದ್ವಿದಶಮ ಆಚರಣೆ ನಿಮಿತ್ತ ಪದವಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಎ4 ಶೀಟ್‌ನಲ್ಲಿ ಪ್ರಬಂಧವನ್ನು ಮೂರು ಪುಟಕ್ಕೆ ಮೀರದಂತೆ ಬರೆದು ದಿನಾಂಕ 15-10-2023ರೊಳಗೆ ಅಧ್ಯಕ್ಷರು, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್, ಆತ್ಮಶಕ್ತಿ ಸೌಧ, ಬೈರಾಡಿಕೆರೆ ಬಳಿ, ಪಡೀಲ್, ಮಂಗಳೂರು, ಇವರಿಗೆ ಸಲ್ಲುವಂತೆ ಕಳುಹಿಸಿಕೊಡಬೇಕು. ಪ್ರಬಂಧದ ವಿಷಯ ‘ಸಮಾಜ ಸೇವೆ ಇಂದಿನ ಅಗತ್ಯ’. ವಿದ್ಯಾರ್ಥಿಗಳು ತಮ್ಮ ಪ್ರಬಂಧದೊಂದಿಗೆ ಶಾಲಾ ಪ್ರಾಚಾರ್ಯರಿಂದ ಕಲಿಕೆ ದೃಢೀಕೃತ ಪತ್ರವನ್ನು ಲಗತ್ತಿಸಲು, ಶಾಲಾ ವಿಳಾಸ, ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಲು ಸೂಚಿಸಲಾಗಿದೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು. ಮಾಹಿತಿಗೆ ಮೊ.9880051038, 9164229115 ಅಥವಾ 9900487611 ಸಂಪರ್ಕಿಸಬಹುದು.

Read More

ಮಂಗಳೂರು : ಅಖಿಲ ಭಾರತ ಬ್ಯಾರಿ ಪರಿಷತ್ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಬ್ಯಾರಿ ಅಧ್ಯಯನ ಪೀಠ ಇದರ ಜಂಟಿ ಆಶ್ರಯದಲ್ಲಿ ‘ಬ್ಯಾರಿ ಭಾಷಾ ದಿನಾಚರಣೆ -2023’ ದಿನಾಂಕ 03-10-2023ರ ಮಂಗಳವಾರ ನಗರದ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಾನಪದ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಕೆ. ಚಿನ್ನಪ್ಪ ಗೌಡ ಇವರು ಮಾತನಾಡುತ್ತಾ “ತನ್ನ ಭಾಷೆಯನ್ನು ಪ್ರೀತಿಸುವ ವ್ಯಕ್ತಿ ಬೇರೆ ಭಾಷೆಯನ್ನು ದ್ವೇಷಿಸುವುದಿಲ್ಲ ಹಾಗೂ ದ್ವೇಷಿಸಬಾರದು. ಭಾಷೆ, ದೇವರು, ಆಚರಣೆ ಮುಂತಾದವು ಜನರನ್ನು ಜೋಡಿಸುತ್ತವೆಯೇ ಹೊರತು ದ್ವೇಷ ಭಾವವನ್ನು ಹುಟ್ಟುಹಾಕುವುದಿಲ್ಲ” ಎನ್ನುತ್ತಾ ಸಾಹಿತ್ಯ ಕ್ಷೇತ್ರಕ್ಕೆ ಬ್ಯಾರಿ ಸಾಹಿತ್ಯದ ಕೊಡುಗೆಯನ್ನು ಶ್ಲಾಘಿಸಿದರು. ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎ. ಮಹಮ್ಮದ್ ಹನೀಫ್‌, ಬ್ಯಾರಿ ಭಾಷೆಯ ಇತಿಹಾಸ ಮತ್ತು ಸಾಹಿತ್ಯದ ಶ್ರೀಮಂತಿಕೆಯನ್ನು ವಿವರಿಸಿದರು. ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷರಾದ ಯು.ಎಚ್‌. ಖಾಲಿದ್ ಉಜಿರೆ ಇವರ ಅಧ್ಯಕ್ಷತೆಯಲ್ಲಿ ನಡೆದ…

Read More

ಮೈಸೂರು: ನಾಡಹಬ್ಬ ಮೈಸೂರು ದಸರಾ ಪ್ರಯಕ್ತ ದಿನಾಂಕ 17-10-2023 ರಿಂದ 21-10-2023ರ ವರೆಗೆ ವಿವಿಧ ವೇದಿಕೆಗಳಲ್ಲಿ ದಸರಾ ಕವಿಗೋಷ್ಠಿ ಪ್ರಯುಕ್ತ ಚಿಗುರು, ಯುವ, ಪ್ರಾದೇಶಿಕ ಕವಿಗೋಷ್ಠಿ ಮತ್ತು ಮಹಿಳಾ ಕವಿಗೋಷ್ಠಿಗಳನ್ನು ಆಯೋಜಿಸಲಾಗಿದೆ. ಕವಿಗೋಷ್ಠಿಯಲ್ಲಿ ಕವಿತೆಗಳನ್ನು ವಾಚಿಸಲು ಬಯಸುವ ಕವಿ-ಕವಯತ್ರಿಯರು ತಮ್ಮ ಸ್ವ-ರಚಿತ ಮೂರು ಕವಿತೆಗಳು ಮತ್ತು ಭಾವಚಿತ್ರವುಳ್ಳ ಸ್ವ-ವಿವರಗಳನ್ನು ಅಕ್ಟೋಬರ್ 7 ರೊಳಗೆ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಹಾಗೂ ದಸರಾ ಕವಿಗೋಷ್ಠಿ ಉಪ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೊ.ವಿಜಯಕುಮಾರಿ ಎಸ್‌.ಕರಿಕಲ್ ಮೊ.ಸಂ.: 94487 97992 ಅಥವಾ ಇಮೇಲ್ [email protected] ಕಳುಹಿಸಿಕೊಡಬಹುದು. ಮಾಹಿತಿಗಾಗಿ ದಸರಾ ಕವಿಗೋಷ್ಠಿ ಉಪ ಸಮಿತಿಯ ಕಾರ್ಯದರ್ಶಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಗಿರಿಧರ್ ಮೊ.ಸಂ.:94808 73100 ಅನ್ನು ಸಂಪರ್ಕಿಸಬಹುದು ಎಂದು ದಸರಾ ಕವಿಗೋಷ್ಠಿ ಉಪ ಸಮಿತಿ ಉಪ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಂಗಳೂರು : ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಮತ್ತು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳು ಹಾಗೂ ಸಮಾಜದ ಬಂಧುಗಳಲ್ಲಿ ಸಂಸ್ಕೃತಿ, ಪರಂಪರೆಗಳ ಅರಿವಿನ ಜಾಗೃತಿಗಾಗಿ ‘ವಿಶ್ವಕರ್ಮ ಕಲಾ ಸಿಂಚನ -2023’ ಎಂಬ ಹೆಸರಿನಲ್ಲಿ ದಿನಾಂಕ 08-10-2023ರಂದು ನಗರದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ವಿಶ್ವಕರ್ಮ ಶ್ರೀ ಕಾಳಿಕಾಂಬೆಯ ಭಕ್ತಿಗೀತೆಗಳ ಗಾಯನದ-ಭಕ್ತಿ ಸಿಂಚನ, ವಿಶ್ವ ಬ್ರಾಹ್ಮಣರ ಕಲೆ, ಸಂಸ್ಕೃತಿ, ಪರಂಪರೆಗಳ ಕುರಿತಾದ ರಸಪ್ರಶ್ನೆ ಸ್ಪರ್ಧೆ – ಜ್ಞಾನ ಸಿಂಚನ ಹಾಗೂ ವಿಶ್ವಬ್ರಾಹ್ಮಣರ ಕಲೆ, ಸಂಸ್ಕೃತಿಗಳ ಕುರಿತಾದ ಛಾಯಾಚಿತ್ರ ಸ್ಪರ್ಧೆ – ಚಿತ್ರ ಸಿಂಚನವನ್ನು ಎಸೆಸೆಲ್ಸಿವರೆಗಿನ ಎಳೆಯರು ಹಾಗೂ ಪಿಯುಸಿ ಮತ್ತು ಮೇಲ್ಪಟ್ಟ ಹಿರಿಯರಿಗಾಗಿ ಏರ್ಪಡಿಸಲಾಗಿದೆ. ಸ್ಪರ್ಧೆಗಳನ್ನು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀ ಕೆ. ಕೇಶವ ಆಚಾರ್ಯ ಅವರು ಬೆಳಗ್ಗೆ 9.30ಕ್ಕೆ ಉದ್ಘಾಟಿಸಲಿದ್ದಾರೆ. ಶಿಲ್ಪಿ ಆನಂದ ಆಚಾರ್ಯ ಸುರತ್ಕಲ್, ಶ್ರೀ ವಿ. ಜಯ ಆಚಾರ್ಯ ಉರ್ವ, ಶ್ರೀಮತಿ…

Read More

ಮಂಗಳೂರು : ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ಉದ್ಘಾಟನಾ ಸಮಾರಂಭ ಮತ್ತು ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮವು ನಗರದ ಫಿಝಾ ಬೈ ನೆಕ್ಸಸ್ ಮಾಲ್‌ನಲ್ಲಿ ದಿನಾಂಕ 03-10-2023ರಂದು ಜರುಗಿತು. ಕಣಚೂರು ಮೆಡಿಕಲ್ ಕಾಲೇಜಿನ ಅಧ್ಯಕ್ಷ ಡಾ.ಯು.ಕೆ. ಮೋನು ಕಣಚೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉದ್ಯಮಿ ಯು.ಬಿ. ಮುಹಮ್ಮದ್ ಲಾಂಛನ ಅನಾವರಣಗೊಳಿಸಿದರು. ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀ ರಾಯ್ ಕ್ಯಾಸ್ಟಲಿನೊ, ಅಬ್ದುಲ್ ಸತ್ತಾರ್ ಆರಂಗಳ, ಕಾರ್ಪೊರೇಟರ್ ಅಬ್ದುಲ್ ಲತೀಫ್, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಮೋಹನ್ ಪ್ರಸಾದ್ ಭಾಗವಸಿದ್ದರು. ವಿವಿಧ ಕ್ಷೇತ್ರದ ಸಾಧಕರಾದ ಸಾಹಿತಿ ಮುಹಮ್ಮದ್ ಬಡ್ಡೂರು, ಪ್ರೊ.ಇಬ್ರಾಹೀಂ ಬ್ಯಾರಿ, ಇಸ್ಮಾಯಿಲ್ ಮೂಡುಶೆಡ್ಡೆ, ಸತೀಶ್ ಸುರತ್ಕಲ್, ರಹೀಮ್ ಬಿ.ಸಿ.ರೋಡ್ ಅವರನ್ನು ಸನ್ಮಾನಿಸಲಾಯಿತು. ಬ್ಯಾರಿ ಸಂಗೀತ ರಸಮಂಜರಿ, ಬ್ಯಾರಿ ಕವ್ವಾಲಿ, ಕಿರು ಹಾಸ್ಯ ಪ್ರಹಸನಗಳು ಪ್ರದರ್ಶನಗೊಂಡಿತು. ಬಹುಭಾಷಾ ಸಂಗೀತ ಸೌಹಾರ್ದ ಸಂಗಮದಲ್ಲಿ ಬ್ಯಾರಿ, ತುಳು, ಕೊಂಕಣಿ,…

Read More

ಸಾಧಿಸುವ ಛಲ ಇದ್ದರೆ ಅಸಾಧ್ಯವಾದದನ್ನು ಸಾಧಿಸಬಹುದು. ಯಾವುದೇ ಕಲಾ ಸಾಧನೆ ಮಾಡಲು ಛಲ ಇದ್ದರೆ ಅಲ್ಲಿ ವಯೋಮಿತಿಯು ತಡೆಯಾಗುವುದಿಲ್ಲ. ಕಠಿಣ ಪರಿಶ್ರಮ ಹಾಗೂ ಅಭ್ಯಾಸದಿಂದ ಯಾವುದು ಕೂಡ ಅಸಾಧ್ಯವಲ್ಲ. ಹೀಗೆ ಯಕ್ಷಗಾನದಲ್ಲಿ ತೊಡಗಿಸಿಕೊಂಡು ಕಿರಿಯ ವಯಸ್ಸಿನಲ್ಲಿ ಸಾಧನೆಯ ಶಿಖರ ಏರಿದ ಯುವ ಕಲಾವಿದೆ ಇವರು ಕಡಬ ತಾಲೂಕಿನ ಆಲಂಕಾರಿನ ಯೋಗೀಶ್ ಆಚಾರ್ಯ ಹಾಗೂ ಶ್ಯಾಮಲ ದಂಪತಿಗಳ ಸುಪುತ್ರಿಯಾಗಿ 05.10.2004 ರಂದು ಶ್ರೇಯಾ.ಎ ಅವರ ಜನನ. ಪುತ್ತೂರಿನ ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ದ್ವಿತೀಯ ಬಿ.ಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಶ್ರೇಯಾ.ಎ ಇವರ ಯಕ್ಷಗಾನದ ಗುರುಗಳು:- ನಾಟ್ಯದ ಗುರುಗಳು:- ಲಕ್ಷ್ಮಣ ಆಚಾರ್ಯ ಎಡಮಂಗಲ. ಚಂದ್ರಶೇಖರ್ ಸುಳ್ಯಪದವು. ಭಾಗವತಿಕೆಯ ಗುರುಗಳು:- ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ. ಗೋವಿಂದ ನಾಯಕ್ ಪಾಲೆಚ್ಚಾರ್. ಹರೀಶ್ ಭಟ್ ಬೊಳಂತಿಮೊಗರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಮಾತಿನಂತೆ ಇವರು ಪ್ರಾಥಮಿಕ ಹಂತದಿಂದಲೂ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಯಕ್ಷಗಾನ, ಭರತನಾಟ್ಯ, ಸಂಗೀತ, ಯೋಗ, ಭಜನೆ, ಚಿತ್ರಕಲೆ, ಭಾಷಣ ಹೀಗೆ ತನ್ನನ್ನು ತಾನು…

Read More

ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ‘ಬಂಗಾರ್ ಪರ್ಬದ ಸರಣಿ ವೈಭವೊ-7’ ಕಾರ್ಯಕ್ರಮವು ಕಂಕನಾಡಿ ಗರೋಡಿಯ ಸರ್ವಮಂಗಳ ಸಭಾಭವನದಲ್ಲಿ ದಿನಾಂಕ 28-09-2023ರಂದು ನಡೆಯಿತು. ದೀಪ ಬೆಳಗಿಸಿ ‘ಆಟ-ಕೂಟ–ನಲಿಕೆ’ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಚಿಲಿಂಬಿ ಸಾಯಿ ಮಂದಿರದ ಮುಕ್ತೇಸರರಾದ ಶ್ರೀ ವಿಶ್ವಾಸ ಕುಮಾರ್ ದಾಸ್‌ ಇವರು “ತುಳುವನ್ನು ನಾವು ಬಹಳ ಹಚ್ಚಿಕೊಂಡು ಕೃಷಿ ಮಾಡುವ ಭಾಷೆ, ನಮ್ಮ ಮಾತೃಭಾಷೆಯನ್ನು ನಾವೇ ಕಾಪಾಡಿಕೊಂಡು ಬರಬೇಕು. ಹಾಗಾಗಿ ನಾನು ತುಳು ಭಾಷಾ ಕಾರ್ಯಕ್ರಮಗಳಿಗೆ ಕೂಡಲೇ ಸ್ಪಂದಿಸುತ್ತೇನೆ. ತುಳು ಭಾಷೆ, ಸಂಘಟನೆಗಳಿಗೆ ನಮ್ಮ ದೇವಾಲಯದಲ್ಲಿ ಬಹಳ ಅವಕಾಶ ಮಾಡಿಕೊಟ್ಟು, ತುಳು ಕೂಟದ ಸರಣಿ ಕಾರ್ಯಕ್ರಮವನ್ನು ನಮ್ಮಲ್ಲಿಯೂ ನಡೆಸಲು ಈ ಮೂಲಕ ಆಹ್ವಾನಿಸುತ್ತೇನೆ. ನನ್ನ ಧರ್ಮಪತ್ನಿ ಲಾವಣ್ಯ ದಾಸ್ ಕೂಡಾ ತುಳು ನಾಟಕ, ಯಕ್ಷಗಾನ ತಂಡಗಳನ್ನು ಕಟ್ಟಿಕೊಂಡು ದೇಶವಿದೇಶಗಳಲ್ಲಿ ಭಾಷಾ ಪ್ರಸರಣಕ್ಕಾಗಿ ಶ್ರಮ ಪಡುತ್ತಿದ್ದಾರೆ. ತುಳುಕೂಟದ ನಿರಂತರ ಐವತ್ತು ವರ್ಷಗಳ ಸಾಧನೆಗಾಗಿ ಕೂಟವನ್ನು ಅಭಿನಂದಿಸುತ್ತೇನೆ” ಎಂದರು. ಮಾಜಿ ವಿಧಾನ ಸಭಾ ಸದಸ್ಯರಾದ ಶ್ರೀ ಜೆ.ಆರ್. ಲೋಬೊ…

Read More

ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಯ ಉದ್ಘಾಟನಾ ಸಮಾರಂಭವವು ದಿನಾಂಕ 1-10-2023ರಂದು ಮಂಗಳೂರಿನ ಬಳ್ಳಾಲ್‌ಬಾಗಿನಲ್ಲಿರುವ ಲೋಕಯ್ಯ ಶೆಟ್ಟಿ ರಸ್ತೆಯಲ್ಲಿನ ಶ್ರೀ ದುರ್ಗಾ ಕಾಂಪ್ಲೆಕ್ಸ್, 3ನೇ ಮಹಡಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಇವರು “ಭಾರತೀಯ ಕಲೆಗಳು ವ್ಯಕ್ತಿತ್ವ ವಿಕಸನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಹೀಗಾಗಿ ಇಂತಹ ಕಲೆಗಳನ್ನು ಬೆಳೆಸುವುದು ಪ್ರತಿಯೊಬ್ಬನ ಕರ್ತವ್ಯ” ಎಂದು ತಿಳಿಸಿದರು. ಸಿಮ್ ಟೆಕ್ನಾಲಜೀಸ್ ಗ್ರೂಪಿನ ಮಾಲೀಕರಾದ ನವೀನ್ ಕಿಲ್ಲೆ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ್ ಶೆಟ್ಟಿ, ಸಿಂಫನಿ ಸಂಸ್ಥೆಯ ಮಾಲೀಕರಾದ ಶ್ರೀ ಲಾಯ್ ನೊರೊನ್ಹಾ, ಸಂಗೀತ ಗುರುಗಳೂ, ಕಲಾವಿದರೂ ಆದ ವಿದ್ವಾನ್ ಅನೀಶ್ ವಿ. ಭಟ್, ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಅಧ್ಯಕ್ಷರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಪ್ರಸಿದ್ಧ ನಾಗಸ್ವರ ವಿದ್ವಾಂಸ ವಿದ್ವಾನ್ ನಾಗೇಶ್ ಎ. ಬಪ್ಪನಾಡು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಕಾಡೆಮಿಯ ಕಾರ್ಯದರ್ಶಿ…

Read More

ದಕ್ಷಿಣ ಕೊರಿಯಾ: ಮಂಗಳೂರಿನ ಗಾನ ನೃತ್ಯ ಅಕಾಡೆಮಿಯ ನಿರ್ದೇಶಕಿ ಗುರು ವಿದ್ಯಾಶ್ರೀ ರಾಧಾಕೃಷ್ಣ ಮತ್ತು ತಂಡದವರು ದಕ್ಷಿಣ ಕೊರಿಯಾದಲ್ಲಿ ದಿನಾಂಕ 06-10-2023ರಿಂದ 12-10-2023ರವರೆಗೆ ನಡೆಯಲಿರುವ ‘ಸಾರಂಗ ಫೆಸ್ಟಿವಲ್’ನಲ್ಲಿ ನೃತ್ಯ ಪ್ರದರ್ಶನ ನೀಡುವ ಮೂಲಕ ಭಾರತವನ್ನು ಪ್ರತಿನಿಧಿಸಲಿರುವರು. ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಐಸಿಸಿಆರ್ ದಾಖಲಿತ ಪ್ರತಿನಿಧಿಯಾಗಿರುವ ಇವರು ದಕ್ಷಿಣ ಕೊರಿಯಾದ ‘ಸಾರಂಗ’ ಉತ್ಸವದಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ನೃತ್ಯ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಯನ್ನು ನೀಡಲಿದ್ದಾರೆ. ಇವರೊಂದಿಗೆ ಸಹಕಲಾವಿದರಾಗಿ ರಶ್ಮಿ ಉಡುಪ, ಅಂಕಿತ ರೈ, ಮೇಘ ಮಲರ್ ಪ್ರಭಾಕರ್, ತ್ವಿಶಾ ಶೆಟ್ಟಿ, ದಿಶಾ ಗಿರೀಶ್, ಪೂರ್ವಿ ಕೃಷ್ಣ ಹಾಗೂ ತಾಂತ್ರಿಕ ಸಹಕಾರಕ್ಕಾಗಿ ರಾಧಾಕೃಷ್ಣ ಭಟ್ ಇವರುಗಳು ಭಾಗವಹಿಸಲಿದ್ದಾರೆ.

Read More