Subscribe to Updates
Get the latest creative news from FooBar about art, design and business.
Author: roovari
15 ಏಪ್ರಿಲ್ 2023, ಮಂಗಳೂರು: ಕೆ.ಕೆ. ಹೆಬ್ಬಾರ್ (ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್) ರು ಜೂನ್ 15,1911ರಂದು ಉಡುಪಿಯ ಕಟ್ಟoಗೇರಿಯಲ್ಲಿ ತುಳು ಭಾಷಿಕ ಬ್ರಾಹ್ಮಣ ಕುಟುಂಬದಲ್ಲಿ ಶ್ರೀ ನಾರಾಯಣ ಹೆಬ್ಬಾರ್ ಮತ್ತು ಸೀತಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. 1935ರಲ್ಲಿ ಶ್ರೀಮತಿ ಯಮುನಾರೊಂದಿಗೆ ಇವರ ವಿವಾಹವಾಯಿತು. ಮೂವರು ಮಕ್ಕಳಲ್ಲಿ ಮಗ ‘ರನ್ನ’, ಹೆಣ್ಣು ಮಕ್ಕಳು ರೇಖಾ ಮತ್ತು ರಜನಿ. ತಮ್ಮ ತಂದೆಯವರು ಆಗೊಮ್ಮೆ ಈಗೊಮ್ಮೆ ಗಣೇಶ ವಿಗ್ರಹಗಳನ್ನು ನಿರ್ಮಿಸುತ್ತಿದ್ದುದ್ದನ್ನು ಗಮನಿಸುತ್ತಿದ್ದ ಬಾಲಕ ಕೃಷ್ಣ ಹೆಬ್ಬಾರ್ ಆಗಿನಿಂದಲೇ ಕಲೆಯತ್ತ ಒಲವು ಬೆಳೆಸಿಕೊಂಡಿದ್ದರು. ಕಲಾವಿದರ ಕುಟುಂಬದಲ್ಲಿ ಜನಿಸಿದ ಕೃಷ್ಣ ಹೆಬ್ಬಾರ್ 1940ರಿಂದ 1945ರ ತನಕ ಮುಂಬಯಿಯ ಪ್ರತಿಷ್ಠಿತ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ಕಲಾ ಪದವಿ ಪಡೆದು, ಪ್ಯಾರಿಸ್ ನಲ್ಲಿ ಹೆಚ್ಚಿನ ಕಲಾ ಅಧ್ಯಯನ ನಡೆಸಿದರು. ತಮ್ಮ ಜೀವನದುದ್ದಕ್ಕೂ ಹೆಬ್ಬಾರ್ ಹಲವು ಪ್ರಶಸ್ತಿಗಳನ್ನು ಗಳಿಸಿದರು. ಭಾರತ ಸರಕಾರದಿಂದ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿ ಜೊತೆಗೆ ‘ಅಕ್ಯಾಡಮಿ ಆಫ್ ಫೈನ್ ಆರ್ಟ್ಸ್’ (ಕೊಲ್ಕತ್ತಾ), ‘ದಿ ಮುಂಬಯಿ ಆರ್ಟ್ ಸೊಸೈಟಿ…
14 ಏಪ್ರಿಲ್ 2023, ಬೆಂಗಳೂರು: ಖ್ಯಾತ ‘ನಾಟ್ಯಸಂಕುಲ ಸ್ಕೂಲ್ ಆಫ್ ಭರತನಾಟ್ಯ’ ನೃತ್ಯಸಂಸ್ಥೆಯ ಗುರು ವಿದುಷಿ ಕೆ.ಎಸ್. ನಾಗಶ್ರೀ ಅವರಲ್ಲಿ ಸಮರ್ಥ ಗರಡಿಯಲ್ಲಿ ನಾಟ್ಯಶಿಕ್ಷಣ ಪಡೆದು, ವೇದಿಕೆಯ ಮೇಲೆ ತಾವು ಕಲಿತ ನೃತ್ಯವನ್ನು ಆತ್ಮವಿಶ್ವಾಸದಿಂದ ಒಟ್ಟಿಗೆ ಪ್ರದರ್ಶಿಸುವ ಹಂತವನ್ನು ತಲುಪಿದ್ದಾರೆ ಈ ತಾಯಿ-ಮಗಳು. ತಾಯಿ ದೀಪಾ ಮಂಜುನಾಥ್ ಮತ್ತು ಮಗಳು ಮುಕ್ತಾ ಎಂ. ಮಂಜುನಾಥ್ ಕಳೆದ ಹತ್ತು ವರ್ಷಗಳಿಂದ ಭರತನಾಟ್ಯವನ್ನು ಆಸಕ್ತಿಯಿಂದ ಕಲಿಯುತ್ತಿದ್ದು, ಅವರು ತಮ್ಮ ಕಲಾನೈಪುಣ್ಯವನ್ನು ಪ್ರದರ್ಶಿಸಲು ಇದೇ ತಿಂಗಳ 16 ಭಾನುವಾರದಂದು ಬೆಳಗ್ಗೆ 10 ಗಂಟೆಗೆ ಜಯನಗರದ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ವಿದ್ಯುಕ್ತವಾಗಿ ‘ರಂಗಪ್ರವೇಶ’ ಮಾಡಲಿದ್ದಾರೆ. ಅಪರೂಪದ ಈ ರಂಗಪ್ರವೇಶದಲ್ಲಿ ಅನಾವರಣಗೊಳ್ಳಲಿರುವ ತಾಯಿ-ಮಗಳ ಕಲಾಪ್ರತಿಭೆಯನ್ನು ಸಾಕ್ಷಾತ್ಕರಿಸಲು ಕಲಾರಸಿಕರೆಲ್ಲರಿಗೂ ಆದರದ ಸುಸ್ವಾಗತ. ಸಾಮಾನ್ಯವಾಗಿ ತಾಯಿ ಮಕ್ಕಳು ನೃತ್ಯ ಕಲಿಯಲು ಒಟ್ಟಿಗೆ ಸೇರಿದ ಪ್ರಸಂಗಗಳು ಕಡಮೆ ಅಥವಾ ಇಲ್ಲವೆಂದೇ ಹೇಳಬೇಕು. ಮಗಳನ್ನು ನೃತ್ಯ ಶಾಲೆಗೆ ಕರೆದೊಯ್ಯುವ ತಾಯಂದಿರಿಗೆ, ದಿನಾ ನೃತ್ಯದ ತಾಲೀಮನ್ನು ನೋಡುತ್ತ ಅವರ ಮನದೊಳಗೆ ಅವ್ಯಕ್ತವಾಗಿ ಹುದುಗಿದ ಕಲಾಪ್ರೀತಿ, ಪುಟಿದೇಳುವುದು ಸಹಜ. ಅವ್ಯಕ್ತ…
14 ಏಪ್ರಿಲ್ 2023, ಕಾಸರಗೋಡು: ರಂಗ ಚೇತನ ಚೇತನ (ರಿ) ಕಾಸರಗೋಡು ಇದರ ನೇತೃತ್ವದಲ್ಲಿ ಹಾಗೂ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಇದರ ಸಹಾಬಾಗಿತ್ವದಲ್ಲಿ ಪೆರ್ಮುದೆ ಶಾಲೆಯಲ್ಲಿ ಜರಗುತ್ತಿರುವ ಚಿತ್ತಾರ ರಂಗದ ರಂಗೋಲಿ ಮೂರು ದಿನಗಳ ಸಹವಾಸ ಶಿಬಿರಕ್ಕೆ ದಿನಾಂಕ 12-04-2023ರಂದು ಆಕರ್ಷಕ ತೆರೆ ಬಿತ್ತು. ಚಿತ್ತಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಂಗಡಿಮೊಗರು ಸರ್ವಿಸ್ ಕೊ ಓಪರೇಟಿವ್ ಬ್ಯಾಂಕ್ ನ ಕಾರ್ಯದರ್ಶಿ ಶ್ರೀ ವಿಠಲ ರೈ ಮಾತನಾಡಿ,”ಗ್ರಾಮೀಣ ಪ್ರದೇಶದ ಕನ್ನಡ ಮಕ್ಕಳಿಗೆ ಇಂತಹ ಶಿಬಿರದ ಮೂಲಕ ಹೆಚ್ಚು ಹೆಚ್ಚು ಅವಕಾಶಗಳು ಲಭಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ವೇದಿಕೆಯಾಗಲಿ. ಈ ನಿಟ್ಟಿನಲ್ಲಿ ರಂಗ ಚೇತನ (ರಿ) ಕಾಸರಗೋಡು ಇದರ ವತಿಯಿಂದ ವರ್ಷಂಪ್ರತಿ ಜರಗುತ್ತಿರುವ ಮಕ್ಕಳ ಸಹವಾಸ ಶಿಬಿರವು ಮಾದರಿಯಾಗಿದ್ದು, ಈ ಸಂಸ್ಥೆಯ ಮೂಲಕ ಇನ್ನಷ್ಟು ಇಂತಹ ಶಿಬಿರವನ್ನು ಹಮ್ಮಿಕೊಳ್ಳುವಂತಾಗಲಿ” ಎಂದು ಶುಭ ಹಾರೈಸಿದರು. ರಂಗ ಚೇತನ ಕಾಸರಗೋಡು ಇದರ ಉಪಾಧ್ಯಕ್ಷರಾದ ವಿಜಯ್ ಕುಮಾರ್ ಪಾವಳರವರ ಅಧ್ಯಕ್ಷತೆಯಲ್ಲಿ ಜರಗಿದ…
14 ಏಪ್ರಿಲ್ 2023, ಬೆಂಗಳೂರು: ಬೆಂಗಳೂರು ಹೊಸ ಕೋಟೆಯ “ಜನಪದರು” ರಂಗ ಮಂದಿರದಲ್ಲಿ ಇದೇ ಏಪ್ರಿಲ್ 8ರಂದು ಪ್ರತಿ ತಿಂಗಳ ಎರಡನೇ ಶನಿವಾರದ ನಾಟಕ ಸರಣಿಯ ರಂಗ ಮಾಲೆ – 69ರಲ್ಲಿ ಬೆಂಗಳೂರು “ದೃಶ್ಯಕಾವ್ಯ” ರಂಗ ತಂಡದ ಡಾ. ಕೆ.ವೈ. ನಾರಾಯಣ ಸ್ವಾಮಿ ರಚನೆಯ “ಮಾಯಾ ಬೇಟೆ” ನಾಟಕವನ್ನು ನಂಜುಂಡೇಗೌಡರ ನಿರ್ದೇಶನದಲ್ಲಿ ಪ್ರದರ್ಶನ ನೀಡಿತು. ನಾಟಕ ನೆರೆದ ಪ್ರೇಕ್ಷಕರನ್ನು ಮ೦ತ್ರ ಮುಗ್ಧರನ್ನಾಗಿಸಿತು. ಭಾರತದ ರಂಗಭೂಮಿಯಲ್ಲಿ ಸದಾ ಕ್ರಿಯಾಶೀಲವಾದ ಕನ್ನಡ ರಂಗಭೂಮಿ ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಹೊಂದಿದೆ. ಇಂದಿನ ನಾಟಕಕಾರರಲ್ಲಿ ಮುಖ್ಯರಾದವರಲ್ಲಿ ಡಾ. ಕೆ.ವೈ. ನಾರಾಯಣಸ್ವಾಮಿ, ಪಂಪ ಭಾರತ ಮತ್ತು ರಸ ಋಷಿ ಕುವೆಂಪುರವರ ಮಲೆಗಳಲ್ಲಿ ಮದುಮಗಳು – ರಂಗಕೃತಿ ಮಾಡಿದ ಕೀರ್ತಿ ಇವರದು. ಹಲವಾರು ಹೊಸ ನಾಟಕಗಳ ಮೂಲಕ ಗಮನ ಸೆಳೆದವರು. 21ನೇ ಶತಮಾನ ಲಿಂಗ ಸಮಾನತೆ, ಮಹಿಳಾ ಶೋಷಣೆ ಹಾಗೂ ಸ್ತ್ರೀವಾದಿ ಹೋರಾಟದ ಕಾಲ. ಎಷ್ಟಾದರೂ ಭಾರತೀಯ ಕರ್ಮಠ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ಬಂದರೂ ಹೆಣ್ಣು ಯಾವಗಲೂ second gender.…
14 ಏಪ್ರಿಲ್ 2023, ಬಂಟ್ವಾಳ: ಕೊರೋನ ಸಮಯದ ಸಂಧಿಗ್ಧತೆಯು ನಮಗೆ ಅನೇಕ ಪಾಠಗಳನ್ನು ಕಲಿಸಿದೆ. ನಮ್ಮ ನಿತ್ಯದ ಚಟುವಟಿಕೆಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಒಟ್ಟಾಗಿ ಹೇಳುವುದಾದರೆ ಹೊಸತೊಂದು ಹುಡುಕಲು ಅಥವಾ ಪರ್ಯಾಯವಾಗಿ ಶೋಧಿಸಲು ಕಾರಣವಾಗಿದೆ. ಮಕ್ಕಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ಏರು ಪೇರುಗಳಾಗಿ ಡಿಜಿಟಲ್ ಪದ್ಧತಿ ಸಾಧಕ ಬಾಧಕಗಳ ನಡುವೆಯೇ ಪಾಠ ಬೋಧನೆಗಳನ್ನು ನಡೆಸಬೇಕಾದ ಅನಿವಾರ್ಯತೆ ಎದುರಾದಂತಹ ಸಂದರ್ಭದಲ್ಲಿ ಮಕ್ಕಳು ನಿತ್ಯ ಕಲಿಕಾ ಚಟುವಟಿಕೆಯಿಂದ ಇರಬೇಕಾದುದನ್ನು ಮನಗಂಡು ಕಂಡುಕೊಂಡ ಫಲವೇ ಮಕ್ಕಳ ಜಗಲಿ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು, ಈ ಗ್ರಾಮೀಣ ಭಾಗದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿಸುವ ಯೋಜನೆಯನ್ನು ರೂಪಿಸಲಾಯಿತು. ವಿವಿಧ ಸ್ಪರ್ಧೆಗಳ ಮೂಲಕ ಹಾಗೂ ವೀಕೆಂಡ್ ಟಾಸ್ಕ್ ಅನ್ನುವ ವೈವಿಧ್ಯ ಚಟುವಟಿಕೆಯ ಮೂಲಕ ಮಕ್ಕಳು ನಿರಂತರವಾಗಿ ಭಾಗವಹಿಸುವುದನ್ನು ಗಮನಿಸಿಕೊಳ್ಳಲಾಯಿತು. ಮಕ್ಕಳ ಆಸಕ್ತಿ ಕುತೂಹಲಗಳನ್ನು ಗಮನಿಸಿ ಒಂದು ಹೆಜ್ಜೆ ಮುಂದುವರಿದಂತೆ ಮಕ್ಕಳ ಪತ್ರಿಕೆಯನ್ನು ನಡೆಸುವ ಚಿಂತನೆ ಆರಂಭವಾಯಿತು. ಮಕ್ಕಳ ಸೃಜನಶೀಲ ಅಭಿವ್ಯಕ್ತಿಗಳಿಗೆ ಪೂರಕವಾಗುವಂತೆ ಮಕ್ಕಳ ಜಗಲಿ ಪತ್ರಿಕೆಯನ್ನು…
13 ಏಪ್ರಿಲ್ 2023, ಕಾಸರಗೋಡು: ಬೆಂಗಳೂರಿನ ಜಾಗೃತಿ ಸೇವಾ ಟ್ರಸ್ಟ್ ಸೇವಾ ಸಂಸ್ಥೆ ಆಶ್ರಯದಲ್ಲಿ ಮತ್ತು ಎಡನೀರು ಮಠದ ಸಹಕಾರದಲ್ಲಿ ಏ.15ಕ್ಕೆ ಬೆಳಗ್ಗೆ 9.30ರಿಂದ ಎಡನೀರು ಮಠದಲ್ಲಿ ಕನ್ನಡ ಸಾಹಿತ್ಯ ಸಮಾವೇಶ, 2023ನೇ ಸಾಲಿನ ಪ್ರಶಸ್ತಿ ಪುರಸ್ಕಾರ ಹಾಗೂ ಅಂತರ್ ರಾಜ್ಯ ಮಟ್ಟದ ಕವಿಗೋಷ್ಠಿ, ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ. ಬೆಳಗ್ಗೆ 9.30ರಿಂದ ವಿಶ್ವ ಮಾನವ ಸಂಗೀತ ಯಾನ ಕಾರ್ಯಕ್ರಮ ಜರಗಲಿದೆ. ನಂತರ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಡಾ. ವಾಣಿಶ್ರೀ ಕಾಸರಗೋಡು ಅಧ್ಯಕ್ಷತೆ ವಹಿಸಲಿದ್ದಾರೆ. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಗುರುರಾಜ್, ಸಮಾಜ ಸೇವಕಿ ಡಾ. ಭಾಗೀರಥಿ, ಡಿ.ಎಸ್.ಜ್ಯೋತಿ ರೆಡ್ಡಿ, ಮಮತಾ, ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ಮೈಕ್ರೋ ಬಯಾಲಜಿ ವಿಭಾಗದ ಡಾ.ಸಿ.ಎಲ್. ಶಿವಮೂರ್ತಿ ಭಾಗವಹಿಸಲಿದ್ದಾರೆ. ಬಳಿಕ ಸಾಹಿತ್ಯ ಕಾರ್ಯಕ್ರಮ, ಕವಿಗೋಷ್ಠಿ ನಡೆಯಲಿದೆ. ಪತ್ರಕರ್ತ, ಸಂಘಟಕ ಶೇಖರ್ ಅಜೆಕಾರ್, ಯೋಗ ಶಿಕ್ಷಕರಾದ…
13 ಏಪ್ರಿಲ್ 2023, ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪ್ರಖ್ಯಾತ ಪ್ರಸಾದ್ ಆರ್ಟ್ ಗ್ಯಾಲರಿಯ ಪ್ರಸಾದ್ ಚಿತ್ರಕಲಾ ಶಾಲೆ, ಬಲ್ಲಾಳ್ ಭಾಗ್, ಎಂ.ಜಿ.ರೋಡ್. ಇದರ ನಿರ್ದೇಶಕರಾದಂತಹ ಶ್ರೀಯುತ ಕೋಟಿ ಪ್ರಸಾದ್ ಆಳ್ವ ಅವರು ಸುಮಾರು 30 ವರ್ಷಗಳ ಕಾಲ ಖಾಸಗಿಯಾಗಿ ತಮ್ಮ ಸ್ವಂತ ಹಣದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಯಾವುದೇ ರೀತಿಯ ಸರ್ಕಾರದ ಅನುದಾನವಾಗಲಿ ಇರುವುದಿಲ್ಲ. ಕೇವಲ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಆಧಾರಿತವಾಗಿ ಚಿತ್ರಕಲೆಯ ವಿಷಯವನ್ನು ಒಳಗೊಂಡಿರುವಂತೆ ಪ್ರತಿ ವರ್ಷವೂ ವಾರ್ಷಿಕ ಶಿಬಿರಗಳು ಶಾಲೆಯ ಆವರಣದಲ್ಲಿ ನಡೆಯುತ್ತಿರುತ್ತದೆ. 2023 ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪರಿಸರದ ಮುಕ್ತ ವಾತಾವರಣದಲ್ಲಿ ಮಕ್ಕಳ ಮಾನಸಿಕ, ಬೌದ್ಧಿಕ, ಕ್ರಿಯಾತ್ಮಕ ಚಟುವಟಿಕೆಗಳ ಬೆಳವಣಿಗೆಗೆ ಪೂರಕವಾಗಿ ಬೇಸಿಕ್, ಪೇಪರ್ ಕ್ರಾಫ್ಟ್, ಕ್ಲೇ ಮಾಡ್ಲಿಂಗ್, ಜಲವರ್ಣ ಚಿತ್ರಕಲೆ, ಕೊಲಾಜ್, ಗ್ಲಾಸ್ ಪೇಂಟಿಂಗ್, ವಸ್ತು ಚಿತ್ರಣ, ಪ್ರಕೃತಿ ಹಾಗೂ ಆರ್ಟ್ ವರ್ಲಿ, ಮಡಿಕೆಗೆ ಬಣ್ಣ ಬಳಿಯುವುದು ಮತ್ತು ಅನ್ವಯಿಕ ಕಲೆಯ ದೃಶ್ಯ ಮಾಧ್ಯಮದ ಕುರಿತು ಜಿಲ್ಲೆಯ ನುರಿತ ಕಲಾವಿದರುಗಳಿಂದ ಶಿಕ್ಷಕರುಗಳಿಂದ…
13 ಎಪ್ರಿಲ್ 2023, ಚಾಮರಾಜಪೇಟೆ: ಬೆಂಗಳೂರಿನ ಪ್ರತಿಷ್ಠಿತ ಭರತನಾಟ್ಯ ಸಂಸ್ಥೆಗಳಾದ ಪಾರ್ವತಿ ನೃತ್ಯವಿಹಂಗಮ(ರಿ), ಇದರ ನೃತ್ಯ ನಿರ್ದೇಶಕರಾದ ಗುರು ನಿರ್ಮಲ ಜಗದೀಶ್ ಹಾಗೂ ನೃತ್ಯಕುಟೀರ (ರಿ) ನೃತ್ಯ ಸಂಸ್ಥೆಯ ನಿರ್ದೇಶಕರಾದ ಗುರು ದೀಪ ಭಟ್ ಇವರುಗಳು ಜಂಟಿಯಾಗಿ ಇದೇ ತಿಂಗಳ 15 ಮತ್ತು 16 ರಂದು ಎರಡು ದಿನಗಳ ಕಾಲ, ನೃತ್ಯ ಕಲಾವಿದ ವಿದ್ವಾನ್ ಮಂಜುನಾಥ್ ಎನ್ ಪುತ್ತೂರು ಇವರ ‘Fun with Tala’ ತಾಳ ಕಾರ್ಯಗಾರವನ್ನು ತಮ್ಮ ಸಂಸ್ಥೆಯ ಜೂನಿಯರ್ ಹಾಗೂ ಸೀನಿಯರ್ ವಿದ್ಯಾರ್ಥಿಗಳಿಗಾಗಿ ನೃತ್ಯ ಕುಠೀರ, ಚಾಮರಾಜಪೇಟೆಯಲ್ಲಿ ಹಮ್ಮಿಕೊಂಡಿರುತ್ತಾರೆ. ಮಂಜುನಾಥ್ ಅವರು ಜೂನಿಯರ್ ಹಾಗೂ ಸೀನಿಯರ್ ವಿಭಾಗದ ಮಕ್ಕಳಿಗಾಗಿಯೇ ಸಿದ್ದಪಡಿಸಿದ ತಾಳದ ವಿಚಾರಗಳಿರುವ ಕಾರ್ಯಗಾರ ಇದಾಗಿದೆ. ವಿದ್ವಾನ್ ಮಂಜುನಾಥ್ ಎನ್ ಪುತ್ತೂರು
13 ಏಪ್ರಿಲ್ 2023, ಮಂಗಳೂರು: ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸನಾತನ ನಾಟ್ಯಾಲಯದ 40ನೇ ವರ್ಷಾಚರಣೆಯ ಅಂಗವಾಗಿ ದಿನಾಂಕ 09-04-2023 ಭಾನುವಾರದಂದು ನಡೆದ ಕಾರ್ಯಕ್ರಮವನ್ನು ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ, ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್, ಸಂಸ್ಕಾರ ಭಾರತಿಯ ಪ್ರಾಂತ ಕಾರ್ಯದರ್ಶಿಗಳಾದ ನಾಗರಾಜ್ ಶೆಟ್ಟಿ ಮತ್ತು ಶ್ರೀದೇವಿ ಭಜನಾ ಮಂದಿರದ ಸಂತೋಷ್ ಶೆಟ್ಟಿ ಎಲ್ಲರೂ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿದರು. ಆ ಕೂಡಲೇ ಮೂಡುಶೆಡ್ಡೆಯ ಶ್ರೀದೇವಿ ಭಜನಾಮಂದಿರದ ಸದಸ್ಯರಿಂದ ಭಕ್ತಿ ಭಾವವನ್ನು ಜಾಗೃತಗೊಳಿಸುವ ಕುಣಿತ ಭಜನೆಯು ನೆರವೇರಿತು. ಬಾಲ ವಾಗ್ಮಿ , ಬೆಂಗಳೂರಿನ ಹಾರಿಕಾ ಮಂಜುನಾಥ್ ರವರು ‘ರಾಷ್ಟ್ರಧರ್ಮ ಜಾಗೃತಿ ಸಂದೇಶ’ದ ಬಗ್ಗೆ ಮಾತನಾಡುತ್ತಾ “ಭಾರತವು ವಿಶ್ವಗುರುವಾಗಬೇಕು ಎಂಬುದು ಎಲ್ಲರ ಕನಸು ನಿಜ, ಆದರೆ ತಾಯಿ ಭಾರತಿಯು ಇಡೀ ವಿಶ್ವದ ತಾಯಿಯಾಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ತಮ್ಮ ಶ್ರೀಮಂತ ಪರಂಪರೆಯನ್ನು ಅರಿತುಕೊಂಡು ಆತ್ಮವಿಶ್ವಾಸದಿಂದ ಜೀವನ ನಡೆಸಬೇಕು. ಸ್ವಾಮಿ ವಿವೇಕಾನಂದರಂತಹ ಜಿಜ್ಞಾಸುಗಳು…
13 ಏಪ್ರಿಲ್ 2023, ಧಾರವಾಡ: ಧಾರವಾಡ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯು ರಾಘವೇಂದ್ರ ಪಾಟೀಲ – 72 ಮತ್ತು ‘ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ -2022’ ಪ್ರದಾನ ಸಮಾರಂಭವು ಭಾನುವಾರ ದಿನಾಂಕ 16 ಏಪ್ರಿಲ್ 2023ರಂದು ಧಾರವಾಡದ ಸಂಸ್ಕೃತಿ ಸಮುಚ್ಚಯ ಕಟ್ಟಡ, ರಂಗಾಯಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾರವಾಢದ ಪ್ರಸಿದ್ಧ ಕಾದಂಬರಿಕಾರರಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ ವಹಿಸಲಿದ್ದಾರೆ. ಅಂದು ಪೂರ್ವಾಹ್ನ ಗಂಟೆ 10.15ಕ್ಕೆ ಮೊದಲ ಘಟ್ಟದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಖ್ಯಾತ ಕವಿಗಳಾದ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಪಾಟೀಲರ ‘ತೇರು’ ಕಾದಂಬರಿ ರಚನೆಯಾಗಿ ಇಪ್ಪತ್ತು ವರ್ಷಗಳು ಸಂದಿದ್ದು, ಆ ಕೃತಿಯ ಬಗ್ಗೆ ಎಂ.ಆರ್. ದತ್ತಾತ್ರಿ, ಮತ್ತು ಇಪ್ಪತ್ತೈದು ವರ್ಷಗಳ ಹಿಂದೆ ರಚನೆಯಾದ ‘ಮಾಯಿಯ ಮುಖಗಳು’ ಎಂಬ ಕಥಾ ಸಂಕಲನದ ಬಗ್ಗೆ ಧಾರವಾಡದ ಪ್ರಸಿದ್ಧ ಕನ್ನಡ ಕವಿಗಳಾದ ಆನಂದ ಝುಂಜರವಾಡ ಮಾತನಾಡುತ್ತಾರೆ. ಪಾಟೀಲರ ಶಿಷ್ಯರೂ, ಪ್ರಸಿದ್ಧ ಉದ್ಯಮಿಗಳೂ ಆದ ಡಾ.ಪ್ರಭಾಕರ ಬಿ.ಸಿ. ಇವರು ‘ನನ್ನ ಮೇಷ್ಟ್ರು ಆರ್.ಬಿ.ಪಿ.’…