Subscribe to Updates

    Get the latest creative news from FooBar about art, design and business.

    What's Hot

    ‘ಎ ಬಯೋಗ್ರಫಿಕಲ್ ಸ್ಕೆಚ್ ಆಫ್ ಮುದ್ದು ಮೂಡುಬೆಳ್ಳೆ’ ಕೃತಿ ಲೋಕಾರ್ಪಣೆ

    June 23, 2026

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ‘ಯಕ್ಷಗಾನ ಏಕಪಾತ್ರಾಭಿನಯ’

    June 23, 2026

    ವಿಶ್ವ ಕೊಂಕಣಿ ಕೇಂದ್ರದ ಐದು ಪ್ರಶಸ್ತಿಗಳಿಗೆ ಅರ್ಜಿ ಅಹ್ವಾನ | ಕೊನೆಯ ದಿನಾಂಕ ಆಗಸ್ಟ್ 31

    June 23, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಬೆಳಗಾವಿಯಲ್ಲಿ ಹೆರಿಟೇಜ್ ಕಿಚನ್ ನಾಟಕೋತ್ಸವ | ಸೆಪ್ಟೆಂಬರ್ 30, ಅಕ್ಟೋಬರ್ 1 ಮತ್ತು 2ರಂದು  
    Drama

    ಬೆಳಗಾವಿಯಲ್ಲಿ ಹೆರಿಟೇಜ್ ಕಿಚನ್ ನಾಟಕೋತ್ಸವ | ಸೆಪ್ಟೆಂಬರ್ 30, ಅಕ್ಟೋಬರ್ 1 ಮತ್ತು 2ರಂದು  

    September 26, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಳಗಾವಿ : ರಂಗ ಸಂಪದ (ರಿ.) ಬೆಳಗಾವಿ ಪ್ರಸ್ತುತ ಪಡಿಸುವ ‘ಹೆರಿಟೇಜ್ ಕಿಚನ್ ನಾಟಕೋತ್ಸವ’ವು ದಿನಾಂಕ 30-09-2023ರಿಂದ 02-10-2023ರವರೆಗೆ ಬೆಳಗಾವಿಯ ಟಿಳಕ ಚೌಕ್ ಹತ್ತಿರದ ಕೊನವಾಳ ಗಲ್ಲಿಯ ಲೋಕಮಾನ್ಯ ರಂಗ ಮಂದಿರ (ಹಳೆಯ ರೀಝ ಟಾಕೀಜ್)ದಲ್ಲಿ ನಡೆಯಲಿದೆ.

    ದಿನಾಂಕ 30-09-2023 ಶನಿವಾರ ಸಂಜೆ ಗಂಟೆ 6.30ಕ್ಕೆ ನಾಟಕ ‘ಮರಣ ಮೃದಂಗ’ 

    ತಂದೆ ಹಾಗೂ ಮಗನ ಮಧ್ಯೆ ನಡೆಯುವ ರಾಜಕೀಯ ವಿಡಂಬನಾತ್ಮಕ ಈ ನಾಟಕವನ್ನು ಬೆಳಗಾವಿಯ ರಂಗ ಸಂಪದ ತಂಡದವರು ಪ್ರಸ್ತುತ ಪಡಿಸಲಿದ್ದಾರೆ. ಶ್ರೀ ರಾಜೇಂದ್ರ ಕಾರಂತ ರಚಿಸಿರುವ ಈ ನಾಟಕದ ನಿರ್ದೇಶನವನ್ನು ಡಾ. ಅರವಿಂದ ಕುಲಕರ್ಣಿ ಮಾಡಿದ್ದು, ಸಂಗೀತ ಶ್ರೀ ಶ್ರೀಪತಿ ಮಂಜನಬೈಲು ಹಾಗೂ ಅಂತರಾ ಅವರದ್ದು.

    ದಿನಾಂಕ 01-10-2023 ರವಿವಾರ ಸಂಜೆ ಗಂಟೆ 6.30ಕ್ಕೆ ನಾಟಕ ‘ಪ್ರಭಾಸ’ 

    ಮೇಡಂ ಮೇರಿ ಕ್ಯೂರಿ ಜೀವನಾಧಾರಿತ ಈ ವೈಜ್ಞಾನಿಕ ನಾಟಕವನ್ನು ಸಾಲಿಯಾನ್ ಉಮೇಶ್ ನಾರಾಯಣ ಇವರ ನಿರ್ದೇಶನದಲ್ಲಿ ಧಾರವಾಡದ ಅಭಿನಯ ಭಾರತಿ ಪ್ರಸ್ತುತ ಪಡಿಸಲಿದೆ.

    ದಿನಾಂಕ 02-10-2023 ಸೋಮವಾರ ಸಂಜೆ ಗಂಟೆ 6.30ಕ್ಕೆ ನಾಟಕ ‘ಸಂಜೆಯ ಹಾಡು’ 

    ಹಿರಿಯ ನಾಗರಿಕರ ಜೀವನಾಧಾರಿತ ಈ ನಾಟಕವನ್ನು ಮೈಸೂರಿನ ಸಂಚಲನ ತಂಡದವರು ಪ್ರಸ್ತುತ ಪಡಿಸಲಿದ್ದು, ಇದರ ನಿರ್ದೇಶನ ಮಧು ಮಳವಳ್ಳಿಯವರದ್ದು. ಓದು – ಉದ್ಯೋಗಗಳಿಗಾಗಿ ಹಳ್ಳಿಗಳಿಂದ ನಗರ ಮತ್ತು ಹೊರ ದೇಶಗಳಿಗೆ ಹೋಗುವ ಮಕ್ಕಳು ತದನಂತರ ತಮ್ಮದೇ ಜಗತ್ತಲ್ಲಿ ಮೈಮರೆತು ಹುಟ್ಟೂರಲ್ಲಿ ಒಂಟಿಯಾಗಿ ಬದುಕುವ ತಂದೆ ತಾಯಿಯನ್ನು ಹೇಗೆ ಕಡೆಗಣಿಸುತ್ತಾರೆ ಎಂಬುದು ವಿಷಾದದ ಸಂಗತಿ. ಮಕ್ಕಳೊಂದಿಗೂ ಹೋಗಲಾಗದೇ, ಹುಟ್ಟೂರಿನ ವ್ಯಾಮೋಹವನ್ನೂ ಬಿಡಲಾಗದೆ ಪೋಷಕರ ವೃದ್ಯಾಪ್ಯದ ನೋವಿನ ಹಾಡೇ…. ಸಂಜೆಯ ಹಾಡು.

    Share. Facebook Twitter Pinterest LinkedIn Tumblr WhatsApp Email
    Previous Articleಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕದಿಂದ ‘ಕವಿ ನಾಗಚಂದ್ರ’ ಉಪನ್ಯಾಸ ಕಾರ್ಯಕ್ರಮ | ಸೆಪ್ಟೆಂಬರ್ 25ರಂದು 
    Next Article ವಿಜಯನಗರದ ಬಸವ ಸಮಿತಿಯಿಂದ ‘ಶರಣ ಸಂಗಮ -286’ | ಅಕ್ಟೋಬರ್ 1ರಂದು   
    roovari

    Add Comment Cancel Reply


    Related Posts

    ಹಿರಿಯ ಸಾಹಿತಿ ಪತ್ರಕರ್ತ ಶ್ರೀ ಪರಮಾನಂದ ಸಾಲ್ಯಾನ್ ರಿಗೆ ರಂಗಭಾಸ್ಕರ- 2026 ಪ್ರಶಸ್ತಿ ಪ್ರದಾನ

    June 23, 2026

    ಬೆಂಗಳೂರಿನ ನಯನ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ, ರಂಗಗೀತೆ ಮತ್ತು ರಂಗರಸ ದೃಶ್ಯಾವಳಿ | ಜೂನ್ 22

    June 22, 2026

    ‘ಸ್ವಾತಂತ್ರ್ಯದ ಓಟ’ ಇತಿಹಾಸ, ಮಾನವೀಯತೆ ಮತ್ತು ಸ್ವಾತಂತ್ರ್ಯದ ನಿಜಾರ್ಥದ ರಂಗಯಾನ | ಜೂನ್ 20 ಮತ್ತು 21

    June 19, 2026

    ದುತ್ತರಗಿ ಟ್ರಸ್ಟ್ ವಾರ್ಷಿಕ ಗೌರವ ಮತ್ತು ರಂಗ ಗೌರವ ಪ್ರಶಸ್ತಿ ಪ್ರಕಟ

    June 19, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.