Subscribe to Updates

    Get the latest creative news from FooBar about art, design and business.

    What's Hot

    ‘ಎ ಬಯೋಗ್ರಫಿಕಲ್ ಸ್ಕೆಚ್ ಆಫ್ ಮುದ್ದು ಮೂಡುಬೆಳ್ಳೆ’ ಕೃತಿ ಲೋಕಾರ್ಪಣೆ

    June 23, 2026

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ‘ಯಕ್ಷಗಾನ ಏಕಪಾತ್ರಾಭಿನಯ’

    June 23, 2026

    ವಿಶ್ವ ಕೊಂಕಣಿ ಕೇಂದ್ರದ ಐದು ಪ್ರಶಸ್ತಿಗಳಿಗೆ ಅರ್ಜಿ ಅಹ್ವಾನ | ಕೊನೆಯ ದಿನಾಂಕ ಆಗಸ್ಟ್ 31

    June 23, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ವಿಶ್ವ ಕೊಂಕಣಿ ಕೇಂದ್ರದ ಐದು ಪ್ರಶಸ್ತಿಗಳಿಗೆ ಅರ್ಜಿ ಅಹ್ವಾನ | ಕೊನೆಯ ದಿನಾಂಕ ಆಗಸ್ಟ್ 31
    Awards

    ವಿಶ್ವ ಕೊಂಕಣಿ ಕೇಂದ್ರದ ಐದು ಪ್ರಶಸ್ತಿಗಳಿಗೆ ಅರ್ಜಿ ಅಹ್ವಾನ | ಕೊನೆಯ ದಿನಾಂಕ ಆಗಸ್ಟ್ 31

    June 23, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : 2026ನೇ ಸಾಲಿನ ‘ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ದಿ ಸಮ್ಮಾನ್’ : (ಪ್ರಶಸ್ತಿ 1) ಕೊಂಕಣಿ ಭಾಷೆ, ಶಿಕ್ಷಣ, ಕಲೆ, ಸಂಸ್ಕೃತಿಯ ಬೆಳವಣಿಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟು ದುಡಿದ ಓರ್ವ ಕೊಂಕಣಿ ಹಿರಿಯ ನಾಗರಿಕರಿಗೆ ಕೊಡಮಾಡುವ ‘ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ದಿ ಸಮ್ಮಾನ್ ಪ್ರಶಸ್ತಿ’ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ‘ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಕೃತಿ (ಪ್ರಶಸ್ತಿ 2) ಮತ್ತು ಕವಿತಾ ಕೃತಿ ಪುರಸ್ಕಾರ’ (ಪ್ರಶಸ್ತಿ 3) : 01 ಜನವರಿ 2023ರಿಂದ 31 ಡಿಸೆಂಬರ್ 2025ರ ಅವಧಿಯಲ್ಲಿ ಪ್ರಕಟಗೊಂಡ ಕೊಂಕಣಿ ದೇವನಾಗರಿ ಲಿಪಿಯ ಒಂದು ಸಾಹಿತ್ಯ ಕೃತಿ (ಗದ್ಯ) ಮತ್ತು ಒಂದು ಕವಿತಾ ಕೃತಿಗಳ ಹೆಸರನ್ನು ಸೂಚಿಸಿ, ಅರ್ಜಿ ಆಹ್ವಾನಿಸಲಾಗಿದೆ. ಕೃತಿಗಳು ಅನುವಾದಿತ ಅಥವಾ ಶಿಕ್ಷಣಾಧ್ಯಯನಕ್ಕೆ ಸಂಬಂಧಿಸಿದವುಗಳಾಗಿರಬಾರದು.

    ‘ಬಸ್ತಿ ವಾಮನ್ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ್’ (ಪ್ರಶಸ್ತಿ 4 ಮತ್ತು ಪ್ರಶಸ್ತಿ 5) ಮೂಲತ ಕೊಂಕಣಿ ಭಾಷಿಕರಾಗಿದ್ದು ಶಿಕ್ಷಣ, ಸಾರ್ವಜನಿಕ, ಆಡಳಿತ, ಸಮಾಜಸೇವೆ, ಆರೋಗ್ಯ ಸೇವೆ, ವಿಜ್ಞಾನ, ಪತ್ರಿಕೋದ್ಯಮ, ಪ್ರದರ್ಶನ ಕಲೆ, ಮಾನವಿಕ ಸೇವೆಗಳು, ವಾಣಿಜ್ಯೋದ್ಯಮ, ಕ್ರೀಡೆ ಇತ್ಯಾದಿ ಕ್ಷೇತ್ರದಲ್ಲಿ ಉನ್ನತ ಪ್ರಮಾಣದ ಪ್ರಾಮಾಣಿಕ ಸೇವೆ ನೀಡಿರುವ ವ್ಯಕ್ತಿ ಅಥವಾ ಸಂಘ ಸಂಸ್ಥೆ-ಸಂಘಟನೆಗಳಿಗೆ ಬೇರೆ ಬೇರೆಯಾಗಿ, ‘ಬಸ್ತಿ ವಾಮನ್ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ’ ಪ್ರಶಸ್ತಿಗಳಿಗೆ ಸಾರ್ವಜನಿಕರು ಹೆಸರು ಸೂಚಿಸುವಂತೆ ಕೇಳಿಕೊಳ್ಳಲಾಗಿದೆ.

    ಈ ಐದೂ ಪ್ರಶಸ್ತಿಗಳು ತಲಾ ಒಂದು ಲಕ್ಷ ರೂಪಾಯಿ ನಗದು ಹಾಗೂ ಸನ್ಮಾನ ಪತ್ರ, ಫಲಕಗಳನ್ನು ಒಳಗೊಂಡಿದ್ದು, ವಿಶ್ವ ಕೊಂಕಣಿ ಕೇಂದ್ರದ ಮಹಾಪೋಷಕರಾದ ಶ್ರೀ ಟಿ.ವಿ. ಮೊಹನದಾಸ್ ಪೈಯವರ ಮಾತೃಶ್ರೀ ವಿಮಲಾ ವಿ. ಪೈ ಇವರ ಸ್ಮರಣಾರ್ಥ ಕೊಡಲಾಗುತ್ತಿದೆ. ಆಸಕ್ತ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ವಿಶ್ವ ಕೊಂಕಣಿ ಕೇಂದ್ರದ ವೆಬ್ ಸೈಟ್ www.vishwakonkani.orgನಿಂದ ಮಾಹಿತಿ ಪಡೆದು, ದಿನಾಂಕ 31 ಆಗಸ್ಟ್ 2026ರ ಒಳಗಾಗಿ ಆನ್-ಲೈನ್ ರೂಪದಲ್ಲಿ ನಾಮನಿರ್ದೇಶನ ನೊಂದಾಯಿಸಿಕೊಂಡು, ಈ ಬಗ್ಗೆ ಸಲ್ಲಿಸುವ ಭಾವಚಿತ್ರ, ಪ್ರಶಂಸಾ ಪತ್ರ ಹಾಗೂ ಸಾಹಿತ್ಯ ಕೃತಿ ಮತ್ತು ಕವಿತಾ ಕೃತಿ ಪುಸ್ತಕಗಳು ಇತ್ಯಾದಿ ಎಲ್ಲಾ ದಾಖಲೆಗಳನ್ನು ನೇರವಾಗಿ ಅಂಚೆ ಮೂಲಕ ಅಧ್ಯಕ್ಷರು, ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು-575016 ಕಳುಹಿಸಿಕೊಡಬೇಕಾಗಿ ಕೋರಲಾಗಿದೆ.

    award baikady konkani Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಡಾ. ಪಾದೇಕಲ್ಲು ವಿಷ್ಣು ಭಟ್ ಮತ್ತು ಶ್ರೀ ಟಿ.ಎ.ಎನ್. ಖಂಡಿಗೆ ಇವರಿಗೆ ‘ವರ್ಧಮಾನ ಸಾಹಿತ್ಯ ಪ್ರಶಸ್ತಿ’ ಘೋಷಣೆ
    Next Article ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ‘ಯಕ್ಷಗಾನ ಏಕಪಾತ್ರಾಭಿನಯ’
    roovari

    Add Comment Cancel Reply


    Related Posts

    ‘ಎ ಬಯೋಗ್ರಫಿಕಲ್ ಸ್ಕೆಚ್ ಆಫ್ ಮುದ್ದು ಮೂಡುಬೆಳ್ಳೆ’ ಕೃತಿ ಲೋಕಾರ್ಪಣೆ

    June 23, 2026

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ‘ಯಕ್ಷಗಾನ ಏಕಪಾತ್ರಾಭಿನಯ’

    June 23, 2026

    ಡಾ. ಪಾದೇಕಲ್ಲು ವಿಷ್ಣು ಭಟ್ ಮತ್ತು ಶ್ರೀ ಟಿ.ಎ.ಎನ್. ಖಂಡಿಗೆ ಇವರಿಗೆ ‘ವರ್ಧಮಾನ ಸಾಹಿತ್ಯ ಪ್ರಶಸ್ತಿ’ ಘೋಷಣೆ

    June 23, 2026

    ತೆಕ್ಕಟ್ಟೆ ಹಯಗ್ರೀವದಲ್ಲಿ ನಾದಾವಧಾನ ವಾರ್ಷಿಕೋತ್ಸವ

    June 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.