ಬಾಗಲಕೋಟೆ : ಪಿ.ಬಿ. ದುತ್ತರಗಿ ಟ್ರಸ್ಟಿನ ಮೂರು ವರ್ಷಗಳ ವಾರ್ಷಿಕ ಗೌರವ ಮತ್ತು ರಂಗ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ವಾರ್ಷಿಕ ಗೌರವ ಪ್ರಶಸ್ತಿಯು ರೂ.25,000/- ನಗದು ಮತ್ತು ರಂಗಗೌರವ ಪ್ರಶಸ್ತಿಯು ತಲಾ ರೂ.10,000/- ನಗದು ಒಳಗೊಂಡಿದೆ ಎಂದು ಟ್ರಸ್ಟಿನ ಸಮಸ್ಯ ಕಾರ್ಯದರ್ಶಿ ಸಂತೋಷ ಭೋವಿ ತಿಳಿಸಿದ್ದಾರೆ.
2022-23ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯ ವಿರೂಪಾಕ್ಷಪ್ಪ ಗಾಯದ, ರಂಗಗೌರವ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಕುಸುಮಾ ಕಂದಗಲ್ಲ ಮತ್ತು ಅರುಣ ಕೃಷ್ಣಾಜಿ ಥೋರತ ಆಯ್ಕೆಯಾಗಿದ್ದಾರೆ.
2023-24ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಬೇಬಿಜಾನ್ ಕಂದಗಲ್ಲ, ರಂಗಗೌರವ ಪ್ರಶಸ್ತಿಗೆ ರಾಯಚೂರು ಜಿಲ್ಲೆಯ ಭೀಮರಾಯ ಭಂಡಾರಿ ಮತ್ತು ಗದಗ ಜಿಲ್ಲೆಯ ವೀರಭದ್ರಪ್ಪ ಬಡಿಗೇರ ಆಯ್ಕೆಯಾಗಿದ್ದಾರೆ.
2024-25ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಅನಂತ ಬಬಲೇಶ್ವರ, ರಂಗಗೌರವ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯವರಾದ ಬಸವರಾಜ ಮಠ ಮತ್ತು ಬಂಗಾರೆವ್ವ ಚಿಮಲ ಆಯ್ಕೆಯಾಗಿದ್ದಾರೆ.
