ಬೆಂಗಳೂರು : ಬಿಂಕ ಬಿನ್ನಾಣರು ರಂಗ ತಂಡ (ರಿ.) ಅಭಿನಯಿಸುವ ಗಿರೀಶ್ ಕಾರ್ನಾಡ್ ರಚಿಸಿರುವ ‘ತಲೆದಂಡ’ ನಾಟಕ ಪ್ರದರ್ಶನವನ್ನು ದಿನಾಂಕ 21 ಜೂನ್ 2026ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಆಯೋಜಿಸಲಾಗಿದೆ.
ಶಿವು ಹೊನ್ನಿಗನಹಳ್ಳಿ ಇವರ ನಿರ್ದೇಶನದಲ್ಲಿ ಪ್ರದರ್ಶನ ಗೊಳ್ಳುವ ಈ ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆಯಲಿದೆ. ಅಂಬಕ್ಕ : ಸುಷ್ಮಾರಾಣಿ, ಜಗದೇವ : ನಾಗರಾಜ್ ಪಾಟೀಲ್, ಶಾಸ್ತ್ರಿ : ಪರಮೇಶ್ವರ್, ಮಲ್ಲಿಬೊಮ್ಮ : ಅಯ್ಯಣ್ಣ, ಭಾಗೀರಥಿ : ಸರಿತಾ, ಸಾವಿತ್ರಿ : ಸೃಜನ, ಬಿಜ್ಜಳ : ಶಿವು ಹೊನ್ನಿಗನಹಳ್ಳಿ, ರಂಭಾವತಿ : ಸೌಮ್ಯ ಹೆಚ್.ಎನ್., ಸೋವಿದೇವ : ಪ್ರಜ್ವಲ್ ಡಿ.ಆರ್., ದಾಮೋಧರಾಭಟ್ಟ : ರಾಘವೇಂದ್ರ ಎಸ್., ಕಲ್ಲಪ್ಪ : ಮಂಜುನಾಥ ಪಾಟೀಲ್, ಬಸವಣ್ಣ : ನಂದನ್ ಎಸ್., ಮಂಚ್ಯಣಕ್ರಮಿತ : ಕಿರಣ್, ರಂಗವ್ವ : ಚೈತ್ರ, ಗಂಗಾಬಿಕೆ : ಪೂರ್ವಿಕಾ ರಾವ್, ಇಂದ್ರಾಣಿ : ಭೂಮಿಕಾ ರಾವ್, ಹೆಂಗಸು : ಮೋಹನ್, ಕಾಳಯ್ಯ : ಮಂಜುನಾಥ್ ಪಾಟೀಲ್, ಗುಂಡಣ್ಣ : ಗಣೇಶ್, ಮರಿಯಪ್ಪ : ಪರಮ್, ಕಾವಲುಗಾರ : ಮಂಜುನಾಥ ಪಾಟೀಲ್ ಇವರುಗಳು ಅಭಿನಯಿಸಲಿದ್ದಾರೆ.


