Subscribe to Updates
Get the latest creative news from FooBar about art, design and business.
Author: roovari
20 ಮಾರ್ಚ್ 2023, ಉಳಿಯ: ಕರಾವಳಿಯ ಸರ್ವಾಂಗ ಸುಂದರ ಕಲೆ ಯಕ್ಷಗಾನಕ್ಕೆ ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದ ಕೊಡುಗೆ ಅಪಾರ. ಅನೇಕ ವರ್ಷಗಳಿಂದ ಉಳಿಯ ಮನೆಯಲ್ಲಿ ತಾಳಮದ್ದಳೆ, ಕೇರಳ ಮತ್ತು ಕರ್ನಾಟಕದ ಹಲವೆಡೆಗಳಲ್ಲಿ ಬಯಲಾಟಗಳನ್ನು ನಡೆಸುತ್ತಾ ಬಂದಿದೆ. ಯಕ್ಷಗಾನಕ್ಕೆ ಸಂಬಂಧಿಸಿದ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಐವತ್ತರ ಸಂಭ್ರಮಾಚರಣೆ ನಡೆಸಿ ಸಾರ್ಥಕ್ಯವನ್ನು ಪಡೆದುಕೊಂಡಿದೆ. ಉಳಿಯ ಮನೆತನದ ಪೂರ್ವಸೂರಿಗಳಾದ ನಾರಾಯಣ ಆಸ್ರರು ಯಕ್ಷಗಾನಕಲಾ ಪ್ರೇಮಿಯಾಗಿದ್ದರು. ಉಳಿಯ ಮನೆಯ ಒಡೆಯರನ್ನು ‘ಯಜಮಾನ’ರೆಂದು ಸಂಬೋದಿಸುವುದು ಪದ್ಧತಿ. ಅಂದಿನ ಯಜಮಾನರಾದ ದಿವಂಗತ ನಾರಾಯಣ ಆಸ್ರರು ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿದ ಸ್ನೇಹಮಯಿ. ಇವರ ಸ್ನೇಹ ಒಡನಾಟಕ್ಕೆ ಕಟ್ಟು ಬಿದ್ದು ಹಿರಿಯರಾದ ದಿವಂಗತ ಬಲಿಪ ಭಾಗವತರು ಮೇಳದ ತಿರುಗಾಟ ಕೊನೆಗೊಂಡ ಮೇಲೆ ಕೆಲವು ದಿನಗಳು ಹಾಯಾಗಿ ಉಳಿಯದಲ್ಲಿ ಉಳಿಯುತ್ತಿದ್ದರು. ಆ ದಿನಗಳಲ್ಲಿ ಉಳಿಯ ಮನೆಯಲ್ಲಿ ತಾಳಮದ್ದಳೆ ಸರಾಗವಾಗಿ ನಡೆಯುತಿತ್ತು. ದಿವಂಗತ ನಾರಾಯಣ ಆಸ್ರರ ಪುತ್ರ ಕೀರ್ತಿಶೇಷ ವಿಷ್ಣು ಆಸ್ರರು, ಯಕ್ಷಗಾನ ಕಲಾವಿದ ಮಧೂರು ಗಣಪತಿ ರಾವ್, ಉಗ್ರಾಣೆ…
20 ಮಾರ್ಚ್ 2023 ಮಂಗಳೂರು: “ಸಂಗ್ರಹ, ಕಾರಕ, ನಿರುಕ್ತಿಗಳಲ್ಲಿ ಬರೆಯಲ್ಪಟ್ಟಿರುವ ಭರತಮುನಿಯ ನಾಟ್ಯಶಾಸ್ತ್ರವು ನಾಟ್ಯ ಕಲೆಗೆ ಚೌಕಟ್ಟು ನೀಡಿದ ಮೊದಲ ಗ್ರಂಥ. ಶಾಸ್ತ್ರಾಧಾರಿತ ಪ್ರಸ್ತುತಿಯಿಂದ ಕಲೆಗೆ ಸಂಸ್ಕಾರ ದೊರೆಯುತ್ತದೆ. ಹೀಗಾಗಿ ಶಾಸ್ತ್ರಾಧ್ಯಯನ ಮುಖ್ಯ” ಎಂದು ಮಂಗಳೂರಿನ “ನಾಟ್ಯಾರಾಧನ” ಮತ್ತು “ಯಕ್ಷ ಆರಾಧನಾ ಕಲಾ ಕೇಂದ್ರ”ದ ನಿರ್ದೇಶಕರಾದ ಮಿದುಷಿ ಸುಮಂಗಲಾ ರತ್ನಾಕರ ರಾವ್ ಅವರು ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ತು (ರಿ.) ಮಂಗಳೂರು, ಆಯೋಜಿಸಿದ ಭರತಮುನಿ ಜಯಂತಿ ಕಾರ್ಯಕ್ರಮದಲ್ಲಿ ಭರತಮುನಿಗೆ ನುಡಿ ನಮನ ಸಲ್ಲಿಸುತ್ತಾ ತಮ್ಮ ವಿಚಾರವನ್ನು ಮಂಡಿಸಿದರು. ದಿನಾಂಕ 19-03-2023 ಆದಿತ್ಯವಾರದಂದು ಅತ್ತಾವರದ ಚಕ್ರಪಾಣಿ ಶ್ರೀಗೋಪಿನಾಥ ದೇವಸ್ಥಾನದ ಕಲಾ ಮಂಟಪದಲ್ಲಿ ಜರುಗಿದ ಕಾರ್ಯಕ್ರಮವನ್ನು ಮಾಜಿ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಪ್ರೋ. ಎಂ.ಎಲ್.ಸಾಮಗರು ಉದ್ಘಾಟಿಸಿ, ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ನೃತ್ಯ ಕಲಾವಿದರಾದ ವಿದ್ವಾನ್ ಪಿ. ಕಮಲಾಕ್ಷ ಆಚಾರ್, ಕಲಾಶ್ರೀ ಪುರಸ್ಕೃತೆ ವಿದುಷಿ ಗೀತಾ ಸರಳಾಯ ಹಾಗೂ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತೆ ವಿದುಷಿ ಪ್ರತಿಮಾ ಶ್ರೀಧರ್ ಅವರನ್ನು ಸಮ್ಮಾನಿಸಲಾಯ್ತು. ಪ್ರೆಸಿಡೆನ್ಸಿ…
20 ಮಾರ್ಚ್ 2023, ಮಂಗಳೂರು: “ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದವರಲ್ಲಿ ಸಾಹಸ ಹಾಗೂ ಸಾಹಿತ್ಯದ ಗುಣ ಅಡಕವಾಗಿರುತ್ತದೆ. ಅದು ಬರವಣಿಗೆಗೆ ಪೂರಕ. ಬೆವರು ಅದ್ದಿದ ಮಣ್ಣಿನಲ್ಲಿ ಹುಟ್ಟಿದ ಸಾಹಿತ್ಯ ಕೃಷಿ ಎಲ್ಲಕ್ಕಿಂತಲೂ ಶ್ರೇಷ್ಠ” ಎಂದು ತುಳು ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಹೇಳಿದರು. ನಗರದ ಕೆನರಾ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ತುಳು ಲಿಪಿ ಶಿಕ್ಷಕಿ, ಲೇಖಕಿ ಗೀತಾ ಲಕ್ಷ್ಮೀಶ್ ಅವರ ‘ಪೆರ್ಗದ ಸಿರಿ’ ತುಳು ಕವನ ಸಂಕಲನವನ್ನು ಭಾನುವಾರ ದಿನಾಂಕ 19-03-2023ರಂದು ಬಿಡುಗಡೆಗೊಳಿಸಿ ಮಾತನಾಡಿದರು. “ಇಂದಿನ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ತುಂಬುವಲ್ಲಿ ವಿಫಲವಾಗುತ್ತಿದೆ. ಲಕ್ಷ ಜನರಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಲೇಖಕರಾಗುತ್ತಿದ್ದಾರೆ. ಹಿರಿಯ ತಲೆಮಾರಿನ ಕವಿ, ಸಾಹಿತಿಗಳು ತೆರೆಮರೆಗೆ ಸರಿಯುತ್ತಿರುವ ಹೊತ್ತಿನಲ್ಲಿ ತುಳುವಿನಲ್ಲಿ ಹೊಸ ಬರಹಗಾರರು ಸೃಷ್ಟಿಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ತಾಯಿ, ಗುರು, ಹುಟ್ಟಿದ ಮಣ್ಣಿನಲ್ಲಿ ಸಾಹಿತ್ಯದ ಸತ್ವವಿದೆ. ಮನಸ್ಸು ಎಂಬ ಅಂಗ ದೇಹದಲ್ಲಿ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಅದು ಸ್ವಸ್ಥವಿದ್ದರೆ ಮಾತ್ರ ಬದುಕು. ಅಂತಹ ಮನಸ್ಸಿಗೆ ಔಷಧ ನೀಡುವ…
20 ಮಾರ್ಚ್ 2023, ಮಂಗಳೂರು: ಅತ್ಯುತ್ತಮ ಹವ್ಯಾಸಿ ಯಕ್ಷಗಾನ ಕಲಾವಿದ, ಸಂಘಟಕ, ಯಕ್ಷಗಾನ ಸ್ಮರಣಿಕೆಗಳ ತಯಾರಕ ಶ್ರೀ ವೆಂಕಟೇಶ ವೈದ್ಯ ಕಲಾಸಾಧಕ, ಪರೋಪಕಾರಿ ಪ್ರವೃತಿಯ ಕಲಾಪೋಷಕ. ಕುಂದಾಪುರ ತಾಲೂಕು ತೆಕ್ಕಟ್ಟೆ ಕೊಮೆಯಲ್ಲಿ ಸಮಾನ ಮನಸ್ಕ ಸ್ನೇಹಿತರೊಂದಿಗೆ ಯಶಸ್ವಿ ಕಲಾವೃಂದ ಸ್ಥಾಪಿಸಿ ನಿರಂತರ ಕಲಾಚಟುವಟಿಕೆ ನಡೆಸುತ್ತಿರುವ ಕಲಾಸೇವಕ. ಇವರ ಮಗಳೇ ಪಂಚಮಿ ವೈದ್ಯ ತೆಕ್ಕಟ್ಟೆ. ಯಕ್ಷಗಾನ, ನೃತ್ಯ, ಸಂಗೀತ, ಭರತನಾಟ್ಯ, ಚಿತ್ರಕಲೆ ಈ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಪ್ರತಿಭೆ ಪಂಚಮಿ. ೧೬.೧೦.೨೦೦೭ ರಂದು ವೆಂಕಟೇಶ ವೈದ್ಯ ಹಾಗೂ ಭಾಗ್ಯಲಕ್ಷ್ಮಿ ದಂಪತಿಗಳ ಮಗಳಾಗಿ ಜನನ. ಸರ್ಕಾರಿ ಪ್ರೌಢ ಶಾಲೆ ತೆಕ್ಕಟ್ಟೆಯಲ್ಲಿ ೧೦ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ. ತಂದೆ ಹಾಗೂ ತಾಯಿ ಇಬ್ಬರೂ ಕಲಾಪ್ರೇಮಿಗಳು, ಇಬ್ಬರೂ ಯಕ್ಷಗಾನ ಕಲಾವಿದರು. ಮನೆಯಲ್ಲಿದ್ದ ಈ ವಾತಾವರಣವು ಪಂಚಮಿ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಯಕ್ಷ ಗುರು ಸೀತಾರಾಮ ಶೆಟ್ಟಿ ಕೊಯಿಕೂರು, ದೇವದಾಸ್ ರಾವ್ ಕೂಡ್ಲಿ ಬಳಿ ಯಕ್ಷಗಾನ ಕುಣಿತ ಹಾಗೂ ಪ್ರಾಚಾರ್ಯ ಕೆ.ಪಿ.ಹೆಗಡೆ, ಲಂಬೋದರ ಹೆಗಡೆ…
20 ಮಾರ್ಚ್ 2023, ಮೈಸೂರು: ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ವತಿಯಿಂದ “ಮೈಸೂರು ರಂಗಹಬ್ಬ” ಮಾರ್ಚ್ 22 ರಿಂದ 27, 2023ರವರೆಗೆ ಕಿರುರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ಮೈಸೂರಿನ ಹವ್ಯಾಸಿ ತಂಡಗಳಿಂದ ನಾಟಕಗಳ ಪ್ರದರ್ಶನ, ವಿಚಾರ ಸಂಕಿರಣ ಮತ್ತು ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ನಡೆಯಲಿವೆ. ಉದ್ಘಾಟನಾ ಸಮಾರಂಭ: ಉದ್ಘಾಟನಾ ಸಮಾರಂಭವು ದಿನಾಂಕ 22 ಮಾರ್ಚ್ 2023 ಸಂಜೆ 6ಕ್ಕೆ ಕಿರುರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ರಂಗಕರ್ಮಿಗಳಾದ ಪ್ರಸನ್ನ ನೆರವೇರಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಮಂಡ್ಯ ರಮೇಶ್, ರಂಗಭೂಮಿ ಮತ್ತು ಚಲನಚಿತ್ರ ನಟರು ಹಾಗೂ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಜಂಟಿ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ವಿಭಾಗ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಮೈಸೂರು ಹವ್ಯಾಸಿ ರಂಗಕಲಾವಿದರು ಭಾಗವಹಿಸಲಿದ್ದಾರೆ. ವಿಚಾರ ಸಂಕಿರಣ: ದಿನಾಂಕ: 23.03.2023 ಬೆಳಗ್ಗೆ 10:30 “ಹವ್ಯಾಸಿ ರಂಗಭೂಮಿ-ನೆನ್ನೆ, ಇಂದು, ನಾಳೆ”…
18-03-2023,ಮಂಗಳೂರು: ‘ಸಮಾಜದ ವಿವಿಧ ಬಗೆಯ ಸೇವಾ ಸಂಸ್ಥೆಗಳು ಕ್ರಿಯಾಶೀಲವಾಗಿ ತೊಡಗಿಕೊಂಡಿರುವುದು ಎಲ್ಲರೂ ಹೆಮ್ಮೆಪಡುವ ಸಂಗತಿ. ಇದರೊಂದಿಗೆ ನೃತ್ಯ,ನಾಟಕ, ಯಕ್ಷಗಾನ ಮುಂತಾದ ರಂಗಕಲೆಗಳಿಗೂ ಅವು ಪ್ರೋತ್ಸಾಹ ನೀಡುತ್ತಿರುವುದು ಸ್ತುತ್ಯರ್ಹ. ಏಕೆಂದರೆ ಕಲೆ ಮತ್ತು ಕಲಾವಿದರ ಪೋಷಣೆ ಸಾಮಾಜಿಕ ಜವಾಬ್ದಾರಿಯ ಒಂದು ಭಾಗವೇ ಆಗಿದೆ’ ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ, ಯಕ್ಷಗಾನ ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಪದವು ಫ್ರೆಂಡ್ಸ್ ಕ್ಲಬ್ (ರಿ.) ವತಿಯಿಂದ ಶಕ್ತಿನಗರ ಸರಕಾರಿ ಶಾಲಾ ಮೈದಾನದಲ್ಲಿ ದಿನಾಂಕ 16-03-2023 ರಂದು ಜರಗಿದ ಕಳವಾರು ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರ ಯಕ್ಷಗಾನ ಬಯಲಾಟ ಸಂದರ್ಭ ಏರ್ಪಡಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ‘ಇಂದು ಯಕ್ಷಗಾನ ಈ ಮಟ್ಟಕ್ಕೆ ಬೆಳೆಯಲು ಅನೇಕ ಹಿರಿಯ ಕಲಾವಿದರ ಕೊಡುಗೆ ಕಾರಣ. ಅಂಥವರನ್ನು ಕರೆದು ಪುರಸ್ಕರಿಸುವುದು ಕಲಾ ಸೇವೆಯ ಶೇಷ್ಠ ಮಾದರಿ’ ಎಂದವರು ನುಡಿದರು. ಡಿ.ಮನೋಹರ್ ಅವರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಬಯಲಾಟ ಮೇಳದ ಹಿರಿಯ ಕಲಾವಿದ ತುಳು…
ಎಲ್ಲ ಪ್ರಯೋಗಗಳನ್ನು ತನ್ನ ಒಡಲೊಳಗೆ ತುಂಬಿಕೊಳ್ಳಬಲ್ಲ ಸಾಮರ್ಥ್ಯ ಯಕ್ಷಗಾನವೆಂಬ ರಂಗಭೂಮಿಗೆ ಇದೆ ಎಂಬುದು ಡಾ ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯ ಕಾಲದಿಂದ ನಾವು ಕಾಣುತ್ತಾ ಬಂದಿದ್ದೇವೆ. ಅದರ ಗಾನಾಂಶ, ನಾಟ್ಯಾಂಶ, ನೃತ್ಯಾತ್ಮಕ ರಂಗಚಲನೆ, ಆಹಾರ್ಯ, ಅರ್ಥಗಾರಿಕೆ ಇತ್ಯಾದಿ ಕಲಾಘಟಕಗಳನ್ನು ವಿಸ್ತರಿಸಿ ಅಥವಾ ಪ್ರತ್ಯೇಕಿಸಿ, ಒಮ್ಮೊಮ್ಮೆ ವೈಭವೀಕರಿಸಿ ಯಕ್ಷಗಾನದ ರೂಪಾಂತರಗಳನ್ನು ವಿವಿಧ ಸೃಜನಶೀಲ ನಿರ್ದೇಶಕರು ಹೊಸ ಪ್ರಯೋಗದ ಹೆಸರಿನಲ್ಲಿ ಮಾಡುತ್ತಾ ಬಂದಿದ್ದಾರೆ. ಆ ಮೂಲಕ ಈ ರಂಗಭೂಮಿಯನ್ನು ಪ್ರಸ್ತುತಗೊಳಿಸುತ್ತಾ ಜೀವಂತವಾಗಿರಿಸಿದ್ದಾರೆ. ನಮ್ಮ ದೇಶದ ಇತರ ಪಾರಂಪರಿಕ ಕಲೆಗಳ ಸ್ಥಿತಿಗತಿಗೆ ಹೋಲಿಸಿದರೆ ಯಕ್ಷಗಾನ ವಿವಿಧ ಮುಖಗಳಲ್ಲಿ ಬೆಳೆಯುತ್ತಿದೆ(ಇಂಥ ಪ್ರಯೋಗಗಳು/ಬದಲಾವಣೆಗಳು ಯಕ್ಷಗಾನದ ಮೂಲಸ್ವರೂಪಕ್ಕೆ ಕಳಂಕ ತರುತ್ತಿವೆ ಎಂಬ ಸಂಪ್ರದಾಯವಾದಿಗಳ ಅಭಿಪ್ರಾಯ ಒಂದೆಡೆ ಇದೆ. ಅದು ಪತ್ಯೇಕ ವಿವೇಚನೆಗೆ ಬಿಟ್ಟ ವಿಷಯ). ಇತ್ತೀಚೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಸೇರಿ ಮಹಾಭಾರತದ ಭೀಷ್ಮ ಪಾತ್ರವನ್ನು ಕೇಂದ್ರವಾಗಿರಿಸಿಕೊಂಡು ಯಕ್ಷಗಾನದ ಪ್ರಸಂಗ ಪಠ್ಯವನ್ನು ಪ್ರಧಾನವಾಗಿಸಿ, ’ನಿರುತ್ತರಾಯಣ’ ಎಂಬ ಯಕ್ಷರೂಪಕವನ್ನು ಪ್ರದರ್ಶಿಸಿದರು. ಕಳೆದ ಹಲವಾರು ವರ್ಷಗಳಲ್ಲಿ ಅನೇಕ…
16-03-2023,ಉಡುಪಿ: ಮಂದಾರ (ರಿ) ಪ್ರಸ್ತುತ ಪಡಿಸುವ “ರಂಗೋತ್ಸವ” ಸಾಂಸ್ಕೃತಿಕ ಉತ್ಸವವು ಇದೇ ಬರುವ ದಿನಾಂಕ 01-04-2023ರಿಂದ 04-04-2023 ಪ್ರತಿದಿನ ಸಂಜೆ 7 ಗಂಟೆಗೆ ಬ್ರಹ್ಮಾವರ, ಎಸ್.ಎಂ.ಎಸ್. ಪದವಿ ಪೂರ್ವ ಕಾಲೇಜು, ಮಕ್ಕಳ ಮಂಟಪದಲ್ಲಿ ಜರಗಲಿದೆ. ಟೀಂ ಮಂದಾರ: ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವಾ ರೂಪದ, ತನ್ನ ವ್ಯಾಪ್ತಿಯೊಳಗಿನ ಕೊಡುಗೆಗಳನ್ನು ಸಮಾಜಕ್ಕೆ ನೀಡುವ ಸದುದ್ದೇಶದೊಂದಿಗೆ “ಮಂದಾರ” ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಒಂದಿಷ್ಟು ಸಹೃದಯರ ಒಗ್ಗೂಡುವಿಕೆಯೊಂದಿಗೆ ರೂಪುಗೊಂಡಿದೆ. ನಮ್ಮ ಮುಂದಿನ ಯುವ ಪೀಳಿಗೆಗೆ ಒಂದು ಸುಂದರ ಸಾಂಸ್ಕೃತಿಕ ವಾತಾವರಣ ಕಲ್ಪಿಸುವ ಹಾಗೂ ಆ ಮೂಲಕ ಅವರ ಉತ್ತಮ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕ ಆಗುವ ಯೋಚನೆಯೊಂದಿಗೆ ಉತ್ತಮ ಕಾರ್ಯಕ್ರಮಗಳ ಆಯೋಜನೆಯ ಕನಸು ಹೊತ್ತು ಸಾಗುತ್ತಿದ್ದೇವೆ. ಪ್ರತಿ ವರ್ಷ ನಮ್ಮ ಮಿತಿಯಲ್ಲಿ ಸಾಧ್ಯವಾಗುವ ಹಲವಾರು ಕಾರ್ಯಕ್ರಮಗಳನ್ನು ಸ್ಥಳೀಯವಾಗಿ ನಡೆಸುತ್ತಾ ಬಂದಿದ್ದೇವೆ. ನಾಟಕ ತಯಾರಿ, ಮಕ್ಕಳಿಗಾಗಿ ರಂಗ ತರಗತಿಗಳು, ಸಂಗೀತ ಕಾರ್ಯಕ್ರಮ, ಜಾನಪದ ನೃತ್ಯ ತರಬೇತಿ ಕಾರ್ಯಗಾರ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕ ಸೇವಾರೂಪದ ಕೆಲಸಗಳಲ್ಲೂ…
17 ಮಾರ್ಚ್ 2023, ಮಂಗಳೂರು: ನಗರದ ಮಹತೋಬಾರ ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಸಂಯೋಜಿಸಿದ ಮಂಗಳವಾದ್ಯ ಗೋಷ್ಠಿಯ ಸ್ಯಾಕ್ಸೋಫೋನ್ ಸಮ್ಮೇಳನವನ್ನು ಬೋಳಾರ ಮಾರಿಗುಡಿ ದೇವಾಲಯದ ಅಧ್ಯಕ್ಷ ಬಿ. ಅಶೋಕ್ ಕುಮಾರ್, ಮುಖ್ಯಪ್ರಾಣ ದೇವಾಲಯದ ಅಧ್ಯಕ್ಷ ವಸಂತ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಪಳ್ಳಿ ರಮಾನಾಥ ಹೆಗ್ಡೆ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಸುಧಾಕರ್ ರಾವ್ ಪೇಜಾವರ ಹಿರಿಯ ಕಲಾವಿದರ ಸಂಸ್ಮರಣೆ ಮಾಡಿದರು. ವೆಂಕಟಪ್ಪ ಡೋಗ್ರ, ಡಾ. ಕದ್ರಿ ಗೋಪಾಲನಾಥ, ಡಾ. ಮಚ್ಚೇಂದ್ರನಾಥ ಮಂಗಳಾದೇವಿ ಅವರ ಸಂಸ್ಮರಣೆ ಮಾಡಲಾಯಿತು. ಶ್ರೀ ಕ್ಷೇತ್ರದ ಮೊಕ್ತೇಸರರಾದ ರಾಮನಾಯ್ಕ ಕೋಟೆಕಾರ್, ಪ್ರೇಮಲತಾ ಎಸ್. ಕುಮಾರ್, ಆನುವಂಶಿಕ ಮೊಕ್ತೇಸರ ರಘುರಾಮ ಉಪಾಧ್ಯಾಯ, ಪ್ರಮುಖರಾದ ರಮೇಶ್‌ನಾಥ ಕದ್ರಿ, ಎನ್.ಆರ್. ರವಿ, ರಾಜೇಶ್ ಕದ್ರಿ, ಸೀತಾರಾಮ ಗುರುಪುರ, ಜಯರಾಮ, ವಿನಯ, ವಿದ್ಯಾ, ಪ್ರತಾಪ, ಅಶೋಕ, ಷಣ್ಮುಗ, ಚಂದ್ರಶೇಖರ್ ಜೋಗಿ, ಅಮೃತವರ್ಷಿಣಿ, ನಾಗೇಶ್, ಸತೀಶ್ ಮೈಸೂರು, ಸುರುಳಿ ಸತೀಶ್ ಆಚಾರ್ಯ, ಜಯರಾಮ ಸೇರಿಗಾರ್, ನವಮಿ, ವೈಷ್ಣವಿ…
17 ಮಾರ್ಚ್ 2023, ಮಂಗಳೂರು: ನಾರಾಯಣ ಗುರುಗಳಿಂದ ಶೂದ್ರ ಶಿವನ ಅನಾವರಣ –ಶ್ರೀ ಜಯಾನಂದ ಚೇಳಾಯರು “19ನೇ ಶತಮಾನದ ವಿಶ್ವ ಸಂತ ನಾರಾಯಣ ಗುರುಗಳು ದೇವರಿಂದ ವಂಚಿತರಾದವರಿಗೆ ದೇವರನ್ನು ನೀಡಿದ, ಪೂಜಿಸುವ ಅಧಿಕಾರ ಕೊಟ್ಟ ಸಂತ ಸತ್ವ. ಅವರಿಂದ ಶೂದ್ರ ಶಿವನ ಅನಾವರಣ ಆದುದು 19ನೇ ಶತಮಾನದ ದೊಡ್ಡ ಧಾರ್ಮಿಕ ಕ್ರಾಂತಿ” ಎಂದು ಯುವ ಚಿಂತಕ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಶ್ರೀ ಜಯಾನಂದ ಚೇಳಾಯರು ಹೇಳಿದರು. ಅವರು ಚೇಳಾಯರು ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ನಾರಾಯಣಗುರು ಅಧ್ಯಯನ ಪೀಠ ಸಂಯೋಜಿಸಿದ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪುಷ್ಪರಾಜ ಶೆಟ್ಟಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ “ವಿಶ್ವವಿದ್ಯಾನಿಲಯದ ಅಧ್ಯಯನ ಪೀಠ ನಾರಾಯಣ ಗುರುಗಳ ತತ್ವದ ಮೂಲಕ ಗ್ರಾಮೀಣ ಯುವ ಜನಾಂಗವನ್ನು ಸಾಮರಸ್ಯದ ಬದುಕಿಗೆ ಕೊಂಡು ಹೋಗುವ ಮಾರ್ಗದರ್ಶನವನ್ನು ನೀಡುತ್ತಿರುವುದು ಸಂತೋಷ” ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ತೆರೇಸಾ ವೇಗಸ್…