Subscribe to Updates
Get the latest creative news from FooBar about art, design and business.
Author: roovari
ಉಡುಪಿ : ವಿಶ್ರಾಂತ ಪ್ರಾಂಶುಪಾಲ, ಸಾಹಿತಿ, ಉಡುಪಿ ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ಹಾಗೂ ಡಾ.ಶಿವರಾಮ ಕಾರಂತ ಟ್ರಸ್ಟ್ ಇದರ ಅಧ್ಯಕ್ಷರಾದ ಡಾ. ಗಣನಾಥ ಎಕ್ಕಾರು ಇವರು ಬೆಂಗಳೂರಿನ ಕನ್ನಡ ಜಾನಪದ ಪರಿಷತ್ತು ದಶಮಾನೋತ್ಸವ ಅಂಗವಾಗಿ ನೀಡುವ ‘ಜೀಶಂಪ ರಾಜ್ಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ರಾಜ್ಯ ಪ್ರಥಮ ಜಾನಪದ ಸಮ್ಮೇಳನದಲ್ಲಿ ನಡೆಯಲಿದೆ. ಡಾ. ಎಕ್ಕಾರು ಜಾನಪದ ಸಂಸ್ಕೃತಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ನ್ಯಾ.ಅರಳಿ ನಾಗರಾಜ್, ಹಿರಿಯ ಜಾನಪದ ವಿದ್ವಾಂಸರಾದ ಡಾ. ಮೀರಾ ಸಾಬಿಹಳ್ಳಿ ಶಿವಣ್ಣ, ಡಾ.ಅಪ್ಪಗೆರೆ ತಿಮ್ಮರಾಜು ಮತ್ತು ಡಾ. ಬಾನಂದೂರು ಕೆಂಪಯ್ಯ ಅವರಿಗೂ ‘ಜೀಶಂಸ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಶ್ರೇಷ್ಠ ರಂಗವಲ್ಲಿ ಕಲಾವಿದೆ ಡಾ.ಭಾರತಿ ಮರವಂತೆ ಇವರಿಗೆ ‘ಕವಿ ಮಧುರ ಚೆನ್ನ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.
ಮೂಡುಬಿದಿರೆ: ರೆಡ್ಕ್ರಾಸ್ ಘಟಕ ಮತ್ತು ಆಳ್ವಾಸ್ ಆಯುರ್ವೇದ ಕಾಲೇಜು ಹಳೆ ವಿದ್ಯಾರ್ಥಿ ಸಂಘ (ಸಂವಾಹಿನಿ) ಆಶ್ರಯದಲ್ಲಿ ‘ರಕ್ತದಾನದ ಮಹತ್ವ ಸಾರುವ’ ಸಣ್ಣ ಕಥಾ ಸ್ಪರ್ಧೆಯನ್ನು ಮೂಡುಬಿದಿರೆ ತಾಲೂಕು ವ್ಯಾಪ್ತಿಯವರಿಗಾಗಿ ಏರ್ಪಡಿಸಲಾಗಿದೆ. ಸ್ವತಂತ್ರ ಕಥೆ ಗಳನ್ನು 30 ಜುಲೈ 2025ರ ಮುನ್ನ, ವಿಳಾಸ ಉಲ್ಲೇಖಿತ ಆಧಾರ್ ಪ್ರತಿ, ವಿದ್ಯಾರ್ಥಿಗಳಾದರೆ ಸಂಸ್ಥೆಯ ಗುರುತಿನ ಚೀಟಿ ಪ್ರತಿ ಸಹಿತ ಅಧ್ಯಕ್ಷರು, ಸಂವಾಹಿನಿ – ರೆಡ್ಕ್ರಾಸ್ ಕಥಾ ಸ್ಪರ್ಧೆ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು, ವಿದ್ಯಾ ಗಿರಿ, ಮೂಡುಬಿದಿರೆ ಇಲ್ಲಿಗೆ ಕಳುಹಿಸಬಹುದು.
ಬೆಂಗಳೂರು : ಯಕ್ಷಕಲಾ ಅಕಾಡೆಮಿ (ರಿ.) ಬೆಂಗಳೂರು ಇದರ ವತಿಯಿಂದ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಪಾಂಡೇಶ್ವರ ವೆಂಕಟಪ್ಪ ವಿರಚಿತ ‘ಕರ್ಣಪರ್ವ’ ಎಂಬ ಪ್ರಸಂಗದ ತಾಳಮದ್ದಳೆ ಪ್ರದರ್ಶನವನ್ನು ದಿನಾಂಕ 29 ಜೂನ್ 2025ರಂದು ಮಧ್ಯಾಹ್ನ 4-30 ಗಂಟೆಗೆ ಬೆಂಗಳೂರಿನ ನಾಗರಭಾವಿಯಲ್ಲಿರುವ ಯಕ್ಷಕಲಾ ಅಕಾಡೆಮಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಮ್ಮೇಳದಲ್ಲಿ ಚಿತ್ಕಲಾ ಕೆ. ತುಂಗ ಮತ್ತು ಚಿನ್ಮಯ ಹೆಗಡೆ ಹಾಗೂ ಮುಮ್ಮೇಳದಲ್ಲಿ ಶಶಾಂಕ ಅರ್ನಾಡಿ, ಅಂಬರೀಷ ಭಟ್, ವಿದ್ವಾನ್ ಪ್ರಸನ್ನ ಭಟ್, ರವಿ ಮಡೋಡಿ ಮತ್ತು ಮಿತ್ರ ಮಧ್ಯಸ್ಥ ಇವರುಗಳು ಸಹಕರಿಸಲಿದ್ದಾರೆ.
ಮುಂಡಾಜೆ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ 2025- 26ನೇ ಸಾಲಿನ ಯಕ್ಷಧ್ರುವ – ಯಕ್ಷಶಿಕ್ಷಣ ‘ಯಕ್ಷಗಾನ ಶಿಕ್ಷಣ ಅಭಿಯಾನ’ವು ದಿನಾಂಕ 25 ಜೂನ್ 2025ರಂದು ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾರಂಭವಾಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಟ್ರಸ್ಟ್ ಬೆಳ್ತಂಗಡಿ ಘಟಕ ಇದರ ಸ್ಥಾಪಕ ಸಂಚಾಲಕರಾದ ಶ್ರೀ ರಘುರಾಮ್ ಶೆಟ್ಟಿ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಉದ್ಘಾಟಕರು ಯಕ್ಷ ಶಿಕ್ಷಣದ ಪ್ರಾಮುಖ್ಯತೆ ಮತ್ತು ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣದಿಂದ ಆಗುವ ಅನುಕೂಲಗಳ ಬಗ್ಗೆ ಮನ ಮುಟ್ಟುವಂತೆ ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಟ್ರಸ್ಟ್ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ ಮಾತನಾಡಿ “ಮಾನ್ಯ ಶ್ರೀ ಸತೀಶ್ ಶೆಟ್ಟಿ ಪಟ್ಲ ಇವರ ಮೂಲಕ ಇಂದು ರಾಜ್ಯಾದ್ಯಂತ ಯಕ್ಷಗಾನ ಪಸರಿಸುತ್ತಿದ್ದು, ಯುವ ಪೀಳಿಗೆಯು ಯಕ್ಷಗಾನವನ್ನು ಬೆಳೆಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಾ ಮೂರನೇ…
‘The Aquarium’ is an anthology of 40 eloquently expressive poems edited and translated by Parvathi G. Aithal, the original being written by Poornima Suresh, who has published five anthologies in Kannada so far. Reading these poems makes us feel that they are very much relevant to the present-day society. The poem ‘I Haven’t Learnt How to be a Man…’ discusses tradition standing against modern liberal thinking. The grandmother keeps advising her granddaughter not to talk loudly, not to make sound while putting her feet on the ground, be always humble and many other do’s and don’ts. The granddaughter stands obedient…
ಮಂಗಳೂರು : ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಬಾಲ ಭವನ್ ವಿದ್ಯಾಕೇಂದ್ರ ಅಶ್ವಿನಿ ನಗರ ಕಾಸರಗೋಡು, ಶ್ರೀ ವೆಂಕಟ್ರಮಣಸ್ವಾಮಿ ಕೃಪಾಶ್ರಿತ ಯಕ್ಷಗಾನ ಸಂಶೋಧನಾ ತರಬೇತಿ ಕೇಂದ್ರ ಕಾಸರಗೋಡು ಇವರ ಸಂಯುಕ್ತ ಆಶ್ರಯದಲ್ಲಿ ‘ವಾಚನ ವಾರಾಚರಣೆ ಸಮಾರಂಭ’ವನ್ನು ದಿನಾಂಕ 27 ಜೂನ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕನ್ನಡ ಭವನ ಮತ್ತು ಗ್ರಂಥಾಲಯ ಇದರ ಸಂಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ ಇವರು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಬಾಲ ಭವನ್ ವಿದ್ಯಾಕೇಂದ್ರದ ಎಕಾಡೆಮಿಕಲ್ ಎಡ್ವೈಸರ್ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಇವರು ಉದ್ಘಾಟನೆ ಮಾಡಲಿರುವರು. ಸಂಕೀರ್ತನ ಸಾಮ್ರಾಟ್ ಶ್ರೀ ಜಯಾನಂದ ಕುಮಾರ್ ಹೊಸದುರ್ಗ, ಹಿರಿಯ ಸಂಘಟಕ ಸಾಹಿತಿ ಪತ್ರಕರ್ತ ಪ್ರದೀಪ್ ಬೇಕಲ್, ಪತ್ರಕರ್ತ ಸಾಹಿತಿ ರಂಗಕಲಾವಿದ ಬಹುಭಾಷಾ ನಿರೂಪಕ ಜಯಮಣಿಯಂಪಾರೆ ಮತ್ತು ಕನ್ನಡ ಭವನ ಪ್ರಕಾಶನದ ಪ್ರಕಾಶಕರಾದ ಶ್ರೀಮತಿ ಸಂಧ್ಯಾರಾಣಿ ಟೀಚರ್ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಧಾರವಾಡ : ಅಭಿನಯ ಭಾರತಿ (ರಿ.) ಧಾರವಾಡ ಇವರ ವತಿಯಿಂದ ಶ್ರೀ ಸವಣೂರು ವಾಮನರಾಯರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 26 ಜೂನ್ 2025ರಂದು ಮುಂಜಾನೆ 11-00 ಗಂಟೆಗೆ ಧಾರವಾಡದ ಮನೋಹರ ಗ್ರಂಥ ಮಾಲಾದಲ್ಲಿ ಆಯೋಜಿಸಲಾಗಿದೆ. ‘ವೃತ್ತಿ ರಂಗಭೂಮಿ ಸವಾಲುಗಳು’ ಎಂಬ ವಿಷಯದ ಬಗ್ಗೆ ಧಾರವಾಡ ರಂಗಾಯಣದ ನಿರ್ದೇಶಕರಾದ ರಾಜು ತಾಳಿಕೋಟಿ ಇವರು ಉಪನ್ಯಾಸ ನೀಡಲಿದ್ದಾರೆ.
ಬೆಂಗಳೂರು : ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ಆಯೋಜಿಸಿದ ‘ಮೂಡಲಪಾಯ ಯಕ್ಷೋತ್ಸವ’ ಕಾರ್ಯಕ್ರಮವು ದಿನಾಂಕ 24 ಜೂನ್ 2025ರಂದು ಉದ್ಘಾಟನೆಗೊಂಡಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯು ಪಡುವಲಪಾಯ ಮತ್ತು ಮೂಡಲಪಾಯ ಯಕ್ಷಗಾನಗಳನ್ನು ಸಮಾನವಾಗಿ ಪ್ರೋತ್ಸಾಹಿಸುತ್ತಿದೆ. ಬಯಲು ಸೀಮೆಯ ಯಕ್ಷಗಾನದ ಪ್ರಕಾರಗಳಾದ ಕೇಳಿಕೆ, ಘಟ್ಟದ ಕೋರೆ, ಮೂಡಲಪಾಯ ಮೊದಲಾದ ಪ್ರಕಾರಗಳ ಪ್ರಸರಣ, ಸಂರಕ್ಷಣೆಯ ಬಗ್ಗೆ ಕ್ರಿಯಾಶೀಲವಾದ ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳಲಿದೆ. ಕರಾವಳಿಯ ಯಕ್ಷಗಾನ ಕ್ಷೇತ್ರದಲ್ಲಿ ಈಗ ವಿದ್ಯಾವಂತರು ಸಕ್ರಿಯರಾಗಿದ್ದಾರೆ. ಯುವ ಜನರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಅಂತಹ ಬೆಳವಣಿಗೆ ಮೂಡಲಪಾಯ ಯಕ್ಷಗಾನದಲ್ಲೂ ಆಗಬೇಕು. ಯುವಕರು, ವಿದ್ಯಾರ್ಥಿಗಳು ಈ ಕ್ಷೇತ್ರಕ್ಕೆ ಬರಬೇಕು. ಮೂಡಲಪಾಯ ಯಕ್ಷಗಾನ ಕ್ಷೇತ್ರದ ಹಿರಿಯ…
ಕಾರ್ಕಳ : ಕಾರ್ಕಳ ಯಕ್ಷಕಲಾರಂಗ ಮತ್ತು ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸಹಯೋಗದಲ್ಲಿ ಪ್ರಾಥಮಿಕ ಮಕ್ಕಳಿಗೆ ಉಚಿತವಾಗಿ ನಡೆಯುವ ಯಕ್ಷ ಶಿಕ್ಷಣ ಅಭಿಯಾನವು ದಿನಾಂಕ 23 ಜೂನ್ 2025ರ ಸೋಮವಾರದಂದು ಕುಕ್ಕುಂದೂರು ಅಯ್ಯಪ್ಪ ನಗರ ಸರಕಾರಿ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟನಾ ಸಮಾರಂಭದ ಸಭಾದ್ಯಕ್ಷತೆಯನ್ನು ವಹಿಸಿದ್ದ ಕಾರ್ಕಳ ಅಯ್ಯಪ್ಪ ನಗರ ಸರಕಾರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸುಮೀತ್ “ಶಿಕ್ಷಣವನ್ನು ಪ್ರೀತಿಸಿ, ಕಲೆಯನ್ನು ಗೌರವಿಸಿದ ಒಬ್ಬ ಸುಸಂಸ್ಕೃತ ವಿದ್ಯಾರ್ಥಿ ಜೀವನ ಸಾಪಲ್ಯತೆ ಪಡೆಯುತ್ತಾನೆ” ಎಂದು ಹೇಳಿದರು. ಯಕ್ಷ ಶಿಕ್ಷಣ ಅಭಿಯಾನ ಉದ್ಘಾಟಿಸಿದ ನಿಕಟಪೂರ್ವ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸದಾನಂದ ಪುರೋಹಿತರು ಮಾತನಾಡಿ “ಭಾಷಾ ಪಾಂಡಿತ್ಯ, ಸಂಸ್ಕಾರ, ಗೌರವ ಕೊಡುವ ಶಿಸ್ತಿನ ಸಾಹಿತ್ಯ ಕಲೆ ಯಕ್ಷಗಾನ. ಈ ಕಲೆ ಪ್ರಾಥಮಿಕ ಹಂತದಲ್ಲೇ ತಿಳಿ ಹೇಳಬೇಕು” ಎಂದರು. ಯಕ್ಷ ಶಿಕ್ಷಣದ ಬಗ್ಗೆ ಪ್ರಾಸ್ತಾವಿಕವಾಗಿ ಕಲಾವಿದ ಮಹಾವೀರ ಪಾಂಡಿ ಮಾತಾನಾಡಿದರು. ಯಕ್ಷಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ, ಕೋಶಾಧ್ಯಕ್ಷ ಶ್ರೀ ವರ್ಮ ಅಜ್ರಿ ಸಾಂಧರ್ಬಿಕವಾಗಿ ಮಾತನಾಡಿದರು. ಇನ್ನೋರ್ವ ನಿಕಟ…
ಮಂಗಳೂರು : ಅರೆಹೊಳೆ ಪ್ರತಿಷ್ಠಾನ, ನಂದಗೋಕುಲ, ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ (ಪರಿಗಣಿತ) ವಿಶ್ವ ವಿದ್ಯಾಲಯ, ಅಸ್ತಿತ್ವ (ರಿ.) ಕಲಾಭಿ (ರಿ.) ರೂವಾರಿ ಜಂಟಿಯಾಗಿ ಆಯೋಜಿಸುವ ‘ದಶಾನನ ಸ್ವಪ್ನಸಿದ್ಧಿ’ ಕುವೆಂಪು ವಿರಚಿತ ಶ್ರೀ ರಾಮಾಯಣ ದರ್ಶನಂ ಕೃತಿಯಿಂದ ಆಯ್ದ ರಂಗಪ್ರಯೋಗ ದಿನಾಂಕ 30-06-2025ರಂದು ಎಲ್.ಸಿ.ಆರ್.ಐ. ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯದಲ್ಲಿ ಪ್ರದರ್ಶನಗೊಳ್ಳಲಿದೆ. ಮಂಜು ಕೊಡಗು ಇವರು ಈ ರಂಗಪ್ರಯೋಗದ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ರಂಗದ ಮೇಲೆ ಅವಿನಾಶ್ ರೈ, ಶ್ವೇತಾ ಅರೆಹೊಳೆ, ಚೈತ್ರ ಕೋಟ್ಯಾನ್ ಮತ್ತು ಚರಿತ್ ಸುವರ್ಣ ಇವರು ಅಭಿನಯಿಸಲಿದ್ದು, ಅರುಣ್ ಕುಮಾರ್ ಎಂ. ಸಂಗೀತ ವಿನ್ಯಾಸ ಮತ್ತು ಮಂಜುನಾಥ ಹಿರೇಮಠ ಬೆಳಕು ವಿನ್ಯಾಸ ಮಾಡಿರುತ್ತಾರೆ. ಹೆಚ್ಚಿನ ವಿವರಗಳಿಗಾಗಿ 9632794477 ಸಂಖ್ಯೆಯನ್ನು ಸಂಪರ್ಕಿಸಿರಿ.