Author: roovari

ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಇದರ ಆಶ್ರಯದಲ್ಲಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ ಸಾರಥ್ಯದಲ್ಲಿ ಅರ್ಥಾಂಕುರ -13 ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪ್ರಯುಕ್ತ ಕುಂದಾಪ್ರ ಕನ್ನಡದಲ್ಲಿ ‘ತಾಳಮದ್ದಲೆ’ ಕಾರ್ಯಕ್ರಮವನ್ನು ದಿನಾಂಕ 27 ಜುಲೈ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ‘ರಾಜಿ ರಂಗ’ ತಾಳಮದ್ದಲೆಯ ಹಿಮ್ಮೇಳದಲ್ಲಿ ಪ್ರಸಾದ್ ಕುಮಾರ್ ಮೊಗೆಬೆಟ್ಟು, ರಾಹುಲ್ ಕುಂದರ್ ಕೋಡಿ ಮತ್ತು ರಾಹುಲ್ ಅಮೀನ್ ಕೊಮೆ ಹಾಗೂ ಹಿಮ್ಮೇಳದಲ್ಲಿ ಡಾ. ಜಗದೀಶ್ ಶೆಟ್ಟಿ, ಸತೀಶ್ ಶೆಟ್ಟಿ ಮೂಡುಬಗೆ, ರಾಘವೇಂದ್ರ ತುಂಗ ಕೋಟ, ಶಂಕರ ನಾರಾಯಣ ಉಪಾಧ್ಯಾಯ ಕೊರ್ಗಿ, ಸುಧಾ ಮಣೂರು ಮತ್ತು ನಾಗರತ್ನ ಹೇರ್ಳೆ ಸಹಕರಿಸಲಿದ್ದಾರೆ.

Read More

ಮೈಸೂರು : ತರಂಗಂ ಟ್ರಸ್ಟ್ (ರಿ.) ತಲಕಾಡು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇದರ ವತಿಯಿಂದ ‘ತರಂಗಂ ನಾಟಕೋತ್ಸವ 2025’ವನ್ನು ದಿನಾಂಕ 26ರಿಂದ 28 ಜುಲೈ 2025ರವರೆಗೆ ಸಂಜೆ 6-30 ಗಂಟೆಗೆ ಮೈಸೂರಿನ ಕಿರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 26 ಜುಲೈ 2025ರಂದು ಮೈಸೂರಿನ ‘ನಟನ ರಂಗಶಾಲೆ’ಯ ತಂಡದವರಿಂದ ಮಂಡ್ಯ ರಮೇಶ್ ಇವರ ನಿರ್ದೇಶನದಲ್ಲಿ ‘ಕಟ್ಟೆ ಪುರಾಣ’, ದಿನಾಂಕ 27 ಜುಲೈ 2025ರಂದು ಮೈಸೂರಿನ ‘ಸಂಚಲನ’ ತಂಡದವರಿಂದ ದೀಪಕ್ ಮೈಸೂರು ಇವರ ನಿರ್ದೇಶನದಲ್ಲಿ ‘ಹರಕೆಯ ಕುರಿ’ ಮತ್ತು ದಿನಾಂಕ 28 ಜುಲೈ 2025ರಂದು ಹಾಸನದ ವಿಶ್ವಪಥ ಚಾರಿಟಬಲ್ ಟ್ರಸ್ಟ್ (ರಿ.) ತಂಡದವರಿಂದ ಪ್ರದೀಪ್ ಹಾಸನ ಇವರ ನಿರ್ದೇಶನದಲ್ಲಿ ‘ಪೊಲೀಸರಿದ್ದಾರೆ ಎಚ್ಚರಿಕೆ’ ನಾಟಕ ಪ್ರದರ್ಶನ ನಡೆಯಲಿದೆ.

Read More

ಕಾಂತಾವರ : ಯಕ್ಷದೇಗುಲ ಸಂಸ್ಥೆಯ ವಾರ್ಷಿಕ ಯಕ್ಷೋಲ್ಲಾಸ ಸಮಾರಂಭವು ದಿನಾಂಕ 20 ಜುಲೈ 2025ರಂದು ಶ್ರೀ ಕ್ಷೇತ್ರ ಕಾಂತಾವರದಲ್ಲಿ ಜರಗಿತು. ನಿರಂತರ ಹನ್ನೆರಡು ತಾಸಿನ ಯಕ್ಷೋಲ್ಲಾಸ ಸಮಾರಂಭವನ್ನು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಬಾರಾಡಿ ಬೀಡು ಸಂಜಯ್ ಬಲ್ಲಾಳ್ ಇವರು ಉದ್ಘಾಟಿಸಿದರು. ನಂತರ ನಡೆದ ಸಮಾರಂಭದಲ್ಲಿ ತೆಂಕುತಿಟ್ಟಿನ ಇಬ್ಬರು ಹಿರಿಯ ಕಲಾವಿದರಾದ ಬಿ.ಸಿ. ರೋಡು ಶಿವರಾಮ ಜೋಗಿಯವರಿಗೆ ‘ಬಾಯಾರು ಪ್ರಕಾಶ್ಚಂದ್ರ ರಾವ್ ಸಂಸ್ಮರಣಾ ಪ್ರಶಸ್ತಿ’, ಗುಂಡಿಮಜಲು ಗೋಪಾಲ ಭಟ್ಟರಿಗೆ ‘ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ನಿವೃತ್ತ ಅಧ್ಯಾಪಕ ಪಶುಪತಿ ಶಾಸ್ರೀಯವರು ಸಂಸ್ಮರಣೆ ಮತ್ತು ಅಭಿನಂದನಾ ಭಾಷಣ ಮಾಡಿದರು. ಪ್ರಧಾನ ಅತಿಥಿ ಕಾರ್ಕಳದ ಪ್ರೊ. ಕೃಷ್ಣ ಭಟ್ಟರು ಮಾತನಾಡಿ ಪುರಾತನ ಕಲೆಗಳೆಲ್ಲ ಇಂತಹ ಹಳ್ಳಿ ಪ್ರದೇಶದ ಸಂಘಟನೆಗಳಿಂದಲೇ ಉಳಿಯುವುದು, ಬೆಳೆಯುವುದು ಎಂದು ಹೇಳುತ್ತ ಸಂಸ್ಥೆಯ ಇಪ್ಪತ್ಮೂರು ವರ್ಷಗಳ ಯಕ್ಷಗಾನ ಚಟುವಟಿಕೆಗಳನ್ನು ಶ್ಲಾಘಿಸಿದರು. ನಿವೃತ್ತ ಅಧ್ಯಾಪಕ ವಿಠಲ ಶೆಟ್ಟಿ ಬೇಲಾಡಿಯವರು ಶುಭಾಶಂಸನೆ ಗೈದರು. ಕಾರ್ಕಳದ ಉದ್ಯಮಿ ವಿಜಯ ಶೆಟ್ಟಿ…

Read More

ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ರಥಬೀದಿ ಗೆಳೆಯರು (ರಿ.) ಉಡುಪಿ ಇದರ ವತಿಯಿಂದ ‘ನಿರಂಜನರ ನೂರರ ನೆನಪು’ ಕಾರ್ಯಕ್ರಮವನ್ನು ದಿನಾಂಕ 27 ಜುಲೈ 2025ರಂದು ಬೆಳಿಗ್ಗೆ 09-30 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್. ಮುಕುಂದ ರಾಜ್ ಇವರು ಅಧ್ಯಕ್ಷತೆ ವಹಿಸಲಿರುವರು. 11-45 ಗಂಟೆಗೆ ವಿಚಾರಗೋಷ್ಠಿ 01ರಲ್ಲಿ ‘ಪ್ರಗತಿಶೀಲ ಸಾಹಿತ್ಯದ ಹಿನ್ನೆಲೆಯಲ್ಲಿ ನಿರಂಜನರ ಬರಹಗಳು’ ಎಂಬ ವಿಷಯದ ಬಗ್ಗೆ ಹಿರಿಯ ಸಾಹಿತಿ ಡಾ. ಕೆ. ಕೇಶವ ಶರ್ಮ ಇವರು ವಿಚಾರ ಮಂಡನೆ ಹಾಗೂ ಬರಹಗಾರ ನವೀನ್ ಕುಮಾರ್ ಹಾಸನ ಇವರು ಪ್ರತಿ ಸ್ಪಂದನೆ ಮಾಡಲಿದ್ದಾರೆ. ಮಧ್ಯಾಹ್ನ 1-00 ಗಂಟೆಗೆ ನಡೆಯಲಿರುವ ವಿಚಾರಗೋಷ್ಠಿ 02ರಲ್ಲಿ ‘ನಿರಂಜನರ ಕಿರಿಯರ ವಿಶ್ವಕೋಶ ಮತ್ತು ವಿಶ್ವ ಕಥಾಕೋಶದ ಕಾಯಕ’ ಎಂಬ ವಿಷಯದ ಬಗ್ಗೆ…

Read More

ಇಳಕಲ್ : ಬೀದಿ ನಾಟಕ ಅಕಾಡೆಮಿ, ರಂಗ ಪರಿಮಳ ಹಾಗೂ ಸ್ನೇಹರಂಗದ ಸಹಯೋಗದಲ್ಲಿ ರಂಗಕರ್ಮಿ ಸಿ.ಜಿ. ಕೃಷ್ಣಸ್ವಾಮಿ (ಸಿ. ಜಿ. ಕೆ. ) ಸ್ಮರಣೆಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 22 ಜುಲೈ 2025ರಂದು ಇಳಕಲ್ ಇಲ್ಲಿನ ಸುವರ್ಣ ರಂಗಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ ಗುರುಮಹಾಂತ ಶ್ರೀಗಳು ಮಾತನಾಡಿ “ಮನರಂಜನೆಯೊಂದಿಗೆ ಮನಸ್ಸನ್ನು ಪ್ರಭಾವಿಸುವ ರಂಗಭೂಮಿಯು ಬದುಕಿನ ಕನ್ನಡಿಯಾಗಿದೆ. ಕಲೆಯ ಹಲವು ಸಾಧ್ಯತೆಗಳು ಇಲ್ಲಿ ಅನಾವರಣಗೊಳ್ಳುತ್ತವೆ. ಮೊಬೈಲ್, ಟಿವಿ ಹಾಗೂ ಸಿನಿಮಾದಿಂದಾಗಿ ರಂಗಭೂಮಿಯ ವೈಭವ ಸ್ವಲ್ಪ ಕಡಿಮೆಯಾಗಿದೆ. ಜೀವಂತ ಹಾಗೂ ವಾಸ್ತವವನ್ನು ಮಾತ್ರ ತೋರಿಸುವ ರಂಗಭೂಮಿಯಲ್ಲಿ ನೈಜ ಕಲಾವಂತಿಕೆ ಇರುತ್ತದೆ. ರಂಗಭೂಮಿ ಹಿನ್ನಲೆಯ ಸಿನೆಮಾ ನಟರು ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಪ್ರೇಕ್ಷಕರು ನಾಟಕ ನೋಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು” ಎಂದು ಹೇಳಿದರು. ಎಲೆ ಮರೆಯ ಕಾಯಿಯಂತಿದ್ದು ರಂಗಭೂಮಿಯಲ್ಲಿ ಸಾಧನೆ ಮಾಡಿದ ಹಿರಿಯ ಕಲಾವಿದೆ ಸುಗುಣಾತಾಯಿ ಸಪ್ಪಂಡಿ, ಬಿಬಿಜಾನ್ ಕಂದಗಲ್ಲ ಹಾಗೂ ತಬಲಾ ವಾದಕ ಅಮರೇಶ ಹಡಪದ ಇವರಿಗೆ ಸಿಜೆಕೆ ಪ್ರಶಸ್ತಿ…

Read More

ಮಂಗಳೂರು : ಯುವ ವೇದಿಕೆ ಟ್ರಸ್ಟ್ ( ರಿ ) ಉರ್ವ ಮಾರ್ಕೆಟ್, ಮಂಗಳೂರು, ಮತ್ತು ದ್ರಾವಿಡ ಬ್ರಾಹ್ಮಣರ ಅಸೋಸಿಯೇಷನ್ ( ರಿ ) ಯುವ ವೇದಿಕೆ ಗೋಕುಲ ಅಶೋಕ ನಗರ ಮಂಗಳೂರು ಜಂಟಿ ಆಶ್ರಯದಲ್ಲಿ ‘ಆಷಾಢ ಶ್ರಾವ್ಯ’ ಕಾರ್ಯಕ್ರಮವು ದಿನಾಂಕ 20 ಜುಲೈ 2025ರಂದು ಮಂಗಳೂರಿನ ಅಶೋಕ ನಗರದಲ್ಲಿರುವ ಗೋಕುಲ ಕಲ್ಯಾಣ ಮಂಟಪದಲ್ಲಿ ನಡೆಯಿತು. ಸಮಾರಂಭದಲ್ಲಿ ಹಿರಿಯ ಯಕ್ಷಗಾನ ತಾಳಮದ್ದಳೆ ಅರ್ಥದಾರಿ ವಿಟ್ಲ ಶಂಭು ಶರ್ಮ ಇವರಿಗೆ ಗೌರವಾರ್ಪಣೆ ಮಾಡಲಾಯಿತು. ಮಾಣಿ ಮೋಹನ ಪೈ ಅಭಿನಂದನಾ ಭಾಷಣ ಮಾಡಿದರು. ವೇದಿಕೆಯಲ್ಲಿ ಪಿ. ಸೂರ್ಯನಾರಾಯಣ ರಾವ್, ವೀಣಾ ಕೃಷ್ಣ ಮೂರ್ತಿ ರಾವ್, ಸಿ. ಸುರೇಶ್ ರಾವ್, ಪಿ. ಪ್ರವೀಣ್ ರಾವ್, ಪಿ. ಸುರೇಶ್ ರಾವ್, ಬಿ. ವೆಂಕಟೇಶ್ ರಾವ್, ಕಿರಣ್, ಎಚ್., ಮಾಣಿ ಮೋಹನ್ ಪೈ, ಆನಂದ್  ರಾವ್, ಗಿರೀಶ್ ನಾವಡ, , ಕುಮಾರಿ ಶ್ರೀ ರಕ್ಷ, ಶ್ರೀ ಮತಿ ವರಲಕ್ಷ್ಮೀ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ‘ರಾವಣ ವಧೆ’ ಯಕ್ಷಗಾನ…

Read More

ಕಾರ್ಕಳ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಹಾಗೂ ಕಾರ್ಕಳದ ಕುಂದಾಪ್ರದವರು ಇವರ ಸಂಯೋಜನೆಯಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯು ದಿನಾಂಕ 24 ಜುಲೈ 2025ರಂದು ಸಂಜೆ ಘಂಟೆ 4.30ರಿಂದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಹಾಲ್‌ನಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಹಿರಿಯ ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕರಾದ ಎ. ಎಸ್.ಎನ್. ಹೆಬ್ಬಾರ್ ಕುಂದಾಪುರ ಇವರು ‘ಭಾಷಿ ಅಲ್ಲ ಬದ್ಕ್’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದು, ಬಳಿಕ ಕುಂದಾಪುರ ಕನ್ನಡ ಭಾಷೆಯಲ್ಲಿ ಜಾನಪದ ಗೀತಗಾಯನ ನಡೆಯಲಿದೆ. ಕಾರ್ಯಕ್ರಮದಲ್ಲಿ ಆಷಾಡ ದಿನಗಳ ವಿಶೇಷ ತಿಂಡಿ ತಿನಿಸುಗಳ ಖಾದ್ಯವಿರುತ್ತದೆ ಎಂದು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಲ್ಲಿ ತಿಳಿಸಿದ್ದಾರೆ.

Read More

ಸಂಪ್ರದಾಯದ ಹೆಜ್ಜೆ ಮೀರದ ಗಾಂಭೀರ್ಯದ ಪ್ರವೇಶ. ಏರುಧ್ವನಿಯಲ್ಲಿ ಪುಂಖಾನುಪುಂಖವಾಗಿ ಹೊರಹೊಮ್ಮವ ನುಡಿಲಹರಿ, ಸಾಂದರ್ಭಿಕವಾಗಿ ಬಳಸುವ ಸಂಸ್ಕೃತದ ನುಡಿಗಟ್ಟು, ಇದಿರು ಪಾತ್ರಧಾರಿಯ ನುಡಿಬಾಣವನ್ನು ಕತ್ತರಿಸಬಲ್ಲ ಜಾಣ್ಮಿ ಇದು ನಾಲ್ಕು ದಶಕಗಳ ಕಾಲ ತೆಂಕುತಿಟ್ಟು ರಂಗಭೂಮಿಯಲ್ಲಿ ಮೆರೆದ ಕೀರಿಕ್ಕಾಡು ಗಣೇಶ ಶರ್ಮರ ಪಾತ್ರ ಲಕ್ಷಣ. ಸುಮಾರು ನಾಲ್ಕು ದಶಕಗಳ ಕಾಲ ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ವೃತ್ತಿಪರ ಕಲಾವಿದನಾಗಿ, ಯಕ್ಷಗಾನ ಕಲಾಕಾಸಕ್ತರಿಗೆ ಗುರುವಾಗಿ, ಪ್ರಸಂಗಕರ್ತರಾಗಿ, ತಾಳಮದ್ದಳೆಯ ಅರ್ಥಧಾರಿಯಾಗಿ ಯಕ್ಷಗಾನದ ಬಹು ಸಾಧ್ಯತೆಗಳಿಗೆ ತನ್ನನ್ನು ತೆರೆದುಕೊಂಡವರು. ಜನಿಸಿದ್ದು 1965 ರ ಮಾರ್ಚ್ 22ರಂದು ಕಾಸರಗೋಡಿನ ದೇಲಂಪಾಡಿ ಗ್ರಾಮದ ಕಂಬಳಿ ಕೇರಿಯ ಕೀರಿಕ್ಕಾಡಿನಲ್ಲಿ ತಂದೆ ಕೀರಿಕ್ಕಾಡು ಗೋಪಾಲಕೃಷ್ಣ ಭಟ್ಟರು ಶಾಲಾ ಅಧ್ಯಾಪಕರು ಹಾಗೂ ಯಕ್ಷಗಾನದ ಹವ್ಯಾಸಿ ಅರ್ಥಧಾರಿಯೂ ಆಗಿದ್ದರು. ತಾಯಿ ಸರಸ್ವತಿ ಸಂಸ್ಕೃತ ಜ್ಞಾನವುಳ್ಳವರಾಗಿದ್ದರು. ಗಣೇಶ ಶರ್ಮರ ದೊಡ್ಡಪ್ಪ ಕೀರಿಕ್ಕಾಡು ವಿಷ್ಣು ಶರ್ಮರು ತಾಳಮದ್ದಳೆಯ ಅಗ್ರಮಾನ್ಯ ಅರ್ಥಧಾರಿಗಳ ಸಾಲಿನಲ್ಲಿ ಗುರುತಿಸಿಕೊಂಡವರು. ದೇಲಂಪಾಡಿಯಲ್ಲಿ ಪ್ರಾಥಮಿಕ ಶಾಲೆ ಹಾಗೂ ಮುಳ್ಳೇರಿಯದಲ್ಲಿ ಪ್ರೌಢಶಾಲಾ ಶಿಕ್ಷಣ ಪೂರೈಸಿದ ಶರ್ಮರು ಯಕ್ಷಗಾನದ ವಾತಾವರಣದಲ್ಲೆ ಬಾಲ್ಯವನ್ನು ಅನುಭವಿಸಿದರು.…

Read More

ಉಡುಪಿ : ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ.) ಬೆಂಗಳೂರು ಇದರ ದಶಮಾನೋತ್ಸವದ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ‘ಶ್ರೀ ಗೋವಿಂದ ನಮನ 90’ ಕಾರ್ಯಕ್ರಮವನ್ನು ದಿನಾಂಕ 02 ಆಗಸ್ಟ್ 2025ರಂದು ಸಂಜೆ 4-30 ಗಂಟೆಗೆ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ. ಶ್ರೀ ಪುತ್ತಿಗೆ ಮಠದ ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾರ್ಗದರ್ಶನ ನೀಡಲಿದ್ದು, ಶ್ರೀ ಆದಿಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮಿ ಮತ್ತು ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಆಚಾರ್ಯರ 90ರ ಶ್ರೀ ಗೋವಿಂದ ನಮನದ ನೆನಪಿನ ಕಾಣಿಕೆ ಬೆಳಕಿಗೆ ಮತ್ತು ಆಚಾರ್ಯರ ಕುರಿತ ಒಂದು ಚಿಕ್ಕ ಬನ್ನಂಜೆ ಕೈಪಿಡಿ ಕೃತಿ ಅನಾವರಣಗೊಳ್ಳಲಿದೆ. ಹರಿದಾಸ ಚಂದ್ರಿಕಾ ಮತ್ತು ಓ.ಆರ್.ಪಿ. ಅಮೆರಿಕ ಆಯೋಜಿಸಿರುವ ಉಷಾಹರಣ ಕಾವ್ಯ ವಿಮರ್ಶೆಯ ಪ್ರಶಸ್ತಿ ಪ್ರದಾನ, ಶ್ರೀಮತಿ ಕವಿತಾ…

Read More

ತೆಕ್ಕಟ್ಟೆ: ರಸರಂಗ (ರಿ.) ಕೋಟ ಸಂಸ್ಥೆಯು ಸುಧಾ ಮಣೂರು ಇವರ ನಿರ್ದೇಶನದ ಪ್ರಸ್ತುತಪಡಿಸಿದ ‘ಶಬರಿ’ ನಾಟಕದ ರಂಗ ಪ್ರಸ್ತುತಿಯು ದಿನಾಂಕ 19 ಜುಲೈ 2025 ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಪ್ರಾಚಾರ್ಯರಾದ ದೇವದಾಸ್ ರಾವ್ ಕೂಡ್ಲಿ ಮಾತನಾಡಿ “ಅತೀ ಕಡಿಮೆ ಸಮಯದಲ್ಲಿ “ಶಬರಿ” ಯಕ್ಷನಾಟಕ ಪ್ರಸ್ತುತಿ ಮನೋಜ್ಞವಾಗಿತ್ತು. ರಂಗದ ನಡೆಯನ್ನು ಅರಿತು ನಡೆಯಬೇಕಾದದ್ದನ್ನು ಗಮನಿಸಬೇಕಾದದ್ದು ಕಲಾವಿದರ ಕರ್ತವ್ಯ. ಮಕ್ಕಳ ಮೂಲಕ ರಂಗ ಪ್ರಸ್ತುತಿಯ ಕಾರ್ಯ ಸುಲಭವಲ್ಲ. ಇದನ್ನು ರಸರಂಗ ಸಾಧಿಸಿದೆ” ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ನಿರ್ದೇಶಕಿ ಸುಧಾ ಮಣೂರು ಮಾತನಾಡಿ “ರಸರಂಗ ಪ್ರಸ್ತುತಿಯ ಮೂರನೆಯ ಯಕ್ಷನಾಟಕ ಪ್ರಯೋಗವಿದು. ಶೂರ್ಪನಖ, ಅಹಲ್ಯಾ ಅಂತರಂಗ, ಶಬರಿ ಈ ನಾಟಕಗಳು ಇದುವರೆಗೆ ರಂಗ ಪ್ರಯೋಗಗೊಂಡಿದ್ದವು. ಪು.ತಿ. ನರಸಿಂಹ ಆಚಾರ್ಯರ ಹತ್ತನೇಯ ತರಗತಿಯ ಪಠ್ಯದಲ್ಲಿನ ಪದ್ಯವನ್ನಾಧರಿಸಿ ಇನ್ನಷ್ಟು ಪದ್ಯವನ್ನು ಜೊತೆಗೂಡಿಸಿ ತೋರಿಸಿದ ನಾಟಕ ಯಶಸ್ಸು ಕಂಡಿತು” ಎಂದರು. ಕಾರ್ಯದರ್ಶಿ ವೆಂಕಟೇಶ ವೈದ್ಯ, ಶ್ರೀಮತಿ ಪಾರ್ವತಿ, ಶ್ರೀಮತಿ ಭಾಗ್ಯಲಕ್ಷ್ಮೀ ಉಪಸ್ಥಿತರಿದ್ದರು.

Read More