Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಶಾಖೆ ಮತ್ತು ಆರ್ಟ್ ಕೆನರಾ ಟ್ರಸ್ಟ್ ಪ್ರಸ್ತುತ ಪಡಿಸುವ ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ವೀಣಾ ಶ್ರೀನಿವಾಸ್, ಸೈಯದ್ ಆಶಿಫ್ ಆಲಿ ಮತ್ತು ರಾಜೇಂದ್ರ ಕೇದಿಗೆ ಇವರ ಚಿತ್ರಕಲೆ ಮತ್ತು ರೇಖಾಚಿತ್ರಗಳ ಪ್ರದರ್ಶನವನ್ನು ದಿನಾಂಕ 04 ಮೇ 2025ರಿಂದ 14 ಮೇ 2025ರವರೆಗೆ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 04 ಮೇ 2025ರಂದು ಕಲಾವಿದ ಮತ್ತು ಚಲನಚಿತ್ರ ನಿರ್ಮಾಪಕರಾದ ಮಧುಸೂದನ್ ಕುಮಾರ್ ಇವರ ಸಮ್ಮುಖದಲ್ಲಿ ಈ ಪ್ರದರ್ಶನ ಉದ್ಘಾಟನೆಗೊಳ್ಳಲಿದ್ದು, ದಿನಾಂಕ 05 ಮೇ 2025ರಿಂದ 14 ಮೇ 2025ರವರೆಗೆ ಪ್ರತಿದಿನ 11-00 ಗಂಟೆಯಿಂದ 7-00 ಗಂಟೆಗೆ ತನಕ ಪ್ರದರ್ಶನ ನಡೆಯಲಿದೆ.
ಹೊನ್ನಾವರ : ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಮಾಳಕೋಡ್ ಇವರ ಜನುಮದಿನದಂದು ಯಕ್ಷಪಲ್ಲವಿ ಟ್ರಸ್ಟ್ (ರಿ.) ಯಕ್ಷಗಾನ ಮಂಡಳಿ ಮಾಳಕೋಡ್ ಇದರ 5ನೇ ವರ್ಷದ ಸಂಭ್ರಮೋತ್ಸವ ‘ಮಾಳಕೋಡ್ ಯಕ್ಷವೈಭವ’ ಕಾರ್ಯಕ್ರಮವು ಮಂಕಿಯ ಜಡ್ಡಿ ಶಾಲೆಯಲ್ಲಿ ಯಶಸ್ವಿಯಾಗಿ ದಿನಾಂಕ 30 ಏಪ್ರಿಲ್ 2025ರಂದು ಸಂಪನ್ನಗೊಂಡಿತು. ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಶ್ರೀ ಮಂಕಾಳ ವೈದ್ಯ, ಶ್ರೀ ಸತೀಶ್ ಸೈಲ್, ಕು. ಬೀನಾ ಮಂಕಾಳ ವೈದ್ಯ ಇವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕು. ಬೀನಾ ಮಂಕಾಳ ವೈದ್ಯ, ಅಧ್ಯಕ್ಷತೆಯನ್ನು ಶ್ರೀ ವಿಷ್ಣು ಭಟ್ ಇಡಗುಂಜಿ ಇವರು ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಎಲ್.ವಿ. ರಘುನಾಥ ಭಟ್ ಆಗಮಿಸಿದ್ದರು. ಶ್ರೀ ಶ್ರೀನಿವಾಸ ರಾವ್, ಶ್ರೀ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಹಾಗೂ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಉದಯ ಹೆಗಡೆ ಮಾಳಕೋಡ್ ಅವರು ಸಹ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಈ ವರ್ಷದ ‘ಯಕ್ಷಪಲ್ಲವಿ’ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಹಾಸ್ಯ ಕಲಾವಿದರಾದ ಶ್ರೀ ರಮೇಶ್ ಭಂಡಾರಿ ಮೂರೂರು ಇವರಿಗೆ ಪ್ರದಾನ…
ಧಾರವಾಡ : ರಂಗಾಯಣ ಧಾರವಾಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಹಾಗೂ ಡಾ. ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಚಿತ್ರಕಲಾ ಶಿಲ್ಪಿ ಶ್ರೀ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಟ್ರಸ್ಟ್, ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡದ ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಇವರ ಸಹಯೋಗದಲ್ಲಿ ‘ಚಿಣ್ಣರಮೇಳ 2025’ ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರದ ಸಮಾರೋಪ ಹಾಗೂ ಚಿಣ್ಣರ ನಾಟಕೋತ್ಸವ ಸಮಾರಂಭವನ್ನು ದಿನಾಂಕ 03 ಮೇ 2025ರಿಂದ 05 ಮೇ 2025ರವರೆಗೆ ಧಾರವಾಡ ರಂಗಾಯಣದ ಪಂ. ಬಸವರಾಜ ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 5-00 ಗಂಟೆಗೆ ಶಿಬಿರ ಗೀತೆ, ರಂಗಗೀತೆಗಳು, ಮಕ್ಕಳ ಹಾಡುಗಳು ಹಾಗೂ ಸಮೂಹ ನೃತ್ಯಗಳು ಪ್ರಸ್ತುತಗೊಳ್ಳಲಿದೆ. ದಿನಾಂಕ 03 ಮೇ 2025ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಧಾರವಾಡ ರಂಗಾಯಣದ ಅಧ್ಯಕ್ಷರಾದ ಡಾ.…
ಕೋಟ : ಕೋಟ ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಳದ ಶ್ರೀ ಮನ್ಮಮಹಾರಥೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಬೆಂಗಳೂರಿನ ಯಕ್ಷದೇಗುಲ ತಂಡದ “ರಾವಣ ವಧೆ” ಯಕ್ಷಗಾನ ಪ್ರದರ್ಶನ ದಿನಾಂಕ 29 ಏಪ್ರಿಲ್ 2025ರಂದು ಶ್ರೀಕ್ಷೇತ್ರದ ಆವರಣದಲ್ಲಿ ನಡೆಯಿತು. ಸಮಾರಂಭದಲ್ಲಿ ವಿಶೇಷ ಪುರಸ್ಕಾರ ಸ್ವೀಕರಿಸಿದ ಹಿರಿಯ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣ ಯಾಜಿ ಮಾತನಾಡಿ “ಯಕ್ಷಗಾನ ನಮ್ಮ ನಾಡಿನ ಹೆಮ್ಮೆಯ ಕಲೆ, ಈ ದಿವ್ಯ ಕಲೆಯ ಪಾತ್ರವನ್ನು ರಂಗದಲ್ಲಿ ನಿರ್ವಹಣೆ ಮಾಡಲು ಅವಿರತ ಶ್ರಮ ಅಗತ್ಯ. ಕಲಾವಿದರಿಗೆ ಅಭಿಮಾನಿಗಳ ಪ್ರೋತ್ಸಾಹವೇ ಶ್ರೀ ರಕ್ಷೆ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶದ ಜೊತೆಗೆ ಇಂತಹ ಪುರಸ್ಕಾರಗಳು ಈ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಮಾಡುವ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ” ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಕೆ. ಎಸ್. ಕಾರಂತ ಮಾತನಾಡಿ “ದೇವಾಲಯಗಳು ಸಮಾಜದ ಆತ್ಮ ಇದ್ದಂತೆ. ಆಧ್ಯಾತ್ಮಿಕ ಶ್ರದ್ಧೆಯನ್ನು ಹೆಚ್ಚಿಸುವುದರೊಂದಿಗೆ ಸಾಮರಸ್ಯವನ್ನು…
ಪುತ್ತೂರು : ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ವಿವೇಕಾನಂದ ಸಂಶೋಧನಾ ಕೇಂದ್ರ, ಡಾ. ಕೆ. ಶಿವರಾಮ ಕಾರಂತ ಅಧ್ಯಯನ ಕೇಂದ್ರ, ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ದಿನಾಂಕ 29 ಏಪ್ರಿಲ್ 2025ರಂದು ವಿಚಾರಗೋಷ್ಠಿ ಮತ್ತು ಪಡೀಲು ಶಂಕರಭಟ್ಟ ಸಂಸ್ಮರಣಾ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀ ನಿವಾಸ ಪೂಜಾರಿ “ಕಾರಂತರು ಒಂದು ತುಂಬಿದ ಕೊಡವಿದ್ದಂತೆ. ಅವರು ಎಂದೂ ಪ್ರಶಸ್ತಿಯ ಹಿಂದೆ ಹೋದವರಲ್ಲ. ಕಾರಂತರಲ್ಲಿ ಹಾಸ್ಯ ಪ್ರಜ್ಞೆಯೂ ಇತ್ತು. ಅವರು ಬಹಳ ನೇರವಾಗಿ ಮಾತನಾಡುವ ವ್ಯಕ್ತಿ. ಕಾರಂತರ ವಿಚಾರಗಳನ್ನು ಮುಂದಿನ ಜನಾಂಗಕ್ಕೆ ತಿಳಿಸುವುದು ಅವಶ್ಯ” ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರ “ಕಾರಂತರು ಬಹುಮುಖಿ ವ್ಯಕ್ತಿತ್ವದ ವ್ಯಕ್ತಿ. ಕಾರಂತರ ಬರಹ…
ಮೂರ್ನಾಡು : ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ, ಮಡಿಕೇರಿ ತಾಲೂಕು ಘಟಕ, ಮೂರ್ನಾಡು ಹೋಬಳಿ ಘಟಕ, ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ, ಮೂರ್ನಾಡು ಪಿ.ಎಂ.ಶ್ರೀ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಮೂರ್ನಾಡು ಹೋಬಳಿ ಘಟಕದ ವಿವಿಧ ಸಂಘ ಸಂಸ್ಥೆಗಳು ಇವರುಗಳ ಸಹಯೋಗದಲ್ಲಿ 7ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ.ವರೆಗಿನ ಮಕ್ಕಳಿಗೆ ‘ಚಿನ್ತನೆ ಚಲನೆ’ 10 ದಿನಗಳ ಉಚಿತ ಬೇಸಿಗೆ ಶಿಬಿರವನ್ನು ದಿನಾಂಕ 12 ಮೇ 2025ರಿಂದ 22 ಮೇ 2025ರವರೆಗೆ ಮೂರ್ನಾಡು ಪಿ.ಎಂ.ಶ್ರೀ. ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದೆ. ಪ್ರತಿದಿನ ಬೆಳಗ್ಗೆ 9-30 ಗಂಟೆಯಿಂದ ಮಧ್ಯಾಹ್ನ 1-00 ಗಂಟೆ ತನಕ ನಡೆಯುವ ಈ ಶಿಬಿರದಲ್ಲಿ ಕನ್ನಡದ ಮಹತ್ವ, ಜಾನಪದ ಮಹತ್ವ, ಸಿನಿಮಾ ಪ್ರಪಂಚ, ಕೊಡಗಿನ ಸಾಮಾನ್ಯ ಜ್ಞಾನ, ಮಕ್ಕಳ ಮುಂದಿನ ಭವಿಷ್ಯ ಹಾಗೂ ವೃತ್ತಿಪರತೆ ಬಗ್ಗೆ ಚರ್ಚೆ, ಕೊನೆಯ ದಿನ ಕಲಿಕೆಯ ಎಲ್ಲಾ ವಿಷಯಗಳ ಬಗ್ಗೆ ಸ್ಪರ್ಧೆಗಳನ್ನು ನಡೆಸಲಾಗುವುದು.
ಕನ್ನಡದ ಪ್ರಮುಖ ವೈಚಾರಿಕ ಬರಹಗಾರ್ತಿ ಹಾಗೂ ಸೃಜನಶೀಲ ಕವಿ ಶಶಿಕಲಾ ವೀರಯ್ಯಸ್ವಾಮಿ. ಸ್ತ್ರೀವಾದಿ ಎಂದೇ ಗುರುತಿಸಲ್ಪಟ್ಟವರು ವೈಚಾರಿಕ ಬರಹಗಾರ್ತಿ ಶಶಿಕಲಾ ವೀರಯ್ಯಸ್ವಾಮಿ. ಮೂಲತಃ ಶಿಕ್ಷಕಿಯಾದ ಇವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಅಪ್ರತಿಮ ಸಾಧನೆ ಮಾಡಿದವರು. ಹಲವಾರು ಸಂಘ-ಸಂಸ್ಥೆಗಳಿಗೆ, ಅಸಹಾಯಕ ಬಡ ರೋಗಿಗಳಿಗೆ ಆರ್ಥಿಕ ಸಹಾಯವನ್ನು ನೀಡುವ ಮಾನವೀಯ ಗುಣವುಳ್ಳವರು. ಸಾಮಾಜಿಕ ಕಳಕಳಿಯನ್ನು ಹೊಂದಿರುವ ಇವರು ದೇಹದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಸಿದ್ದಲಿಂಗಯ್ಯ ಮತ್ತು ಅನ್ನಪೂರ್ಣಾ ದೇವಿ ದಂಪತಿಯ ಸುಪುತ್ರಿ ಶಶಿಕಲಾ ವೀರಯ್ಯ 01 ಮೇ 1948ರಂದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿ ಮುಗಿಸಿ, ಕಾಲೇಜು ವಿದ್ಯಾಭ್ಯಾಸವನ್ನು ಬಿಜಾಪುರ ಮತ್ತು ಗುಲ್ಬರ್ಗದಲ್ಲಿ ಪೂರೈಸಿದರು. “ಸಿಂದಗಿಯ ಜಿಗುಟು ಮಣ್ಣಿನ ನೆಲದ ಚೈತನ್ಯ ತನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ” ಎಂಬ ಮಾತುಗಳಿಂದ ಹುಟ್ಟೂರಿನ ಮೇಲೆ ಅವರಿಗಿರುವ ಅಭಿಮಾನ ವ್ಯಕ್ತವಾಗುತ್ತದೆ. ಎಂ.ಎ. ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಶಶಿಕಲಾ ಅವರು ತನ್ನ ಹುಟ್ಟೂರಿನಲ್ಲೇ ಸಿಂದಗಿ ಜೂನಿಯರ್ ಕಾಲೇಜಿನಲ್ಲಿ…
ಕಮತಗಿ : ಮೇಘಮೈತ್ರಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸವಿನೆನಪಿನ “ಶ್ರೀಮತಿ ಮಾಪಮ್ಮ ಎಸ್. ಹೊಸಮನಿ ದತ್ತಿ” ಪ್ರಶಸ್ತಿಗೆ ಶ್ರೀ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ‘ಹವೇಲಿ ದೊರೆಸಾನಿ’ ಕಥಾ ಸಂಕಲನ, ಮೇಘಮೈತ್ರಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಸವಿನೆನಪಿನ “ಡಾ. ಪ್ರಕಾಶ ಖಾಡೆ ಮೇಘಮೈತ್ರಿ ಕಥಾ ಸಾಹಿತ್ಯ ದತ್ತಿ” ಪ್ರಶಸ್ತಿಗೆ ಶಂಕರ ಬೈಚಬಾಳ ಇವರ ‘ಆಯ್ದ ಕಥೆಗಳು’ ಕಥಾ ಸಂಕಲನ ಹಾಗೂ ಮೇಘಮೈತ್ರಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಸವಿನೆನಪಿನ “ಡಾ. ವಿಜಯಕುಮಾರ ಕಟಗಿಹಳ್ಳಿಮಠ ಸಾಹಿತ್ಯ ದತ್ತಿ” ಪ್ರಶಸ್ತಿಗೆ ಲಕ್ಷ್ಮಣ ಬದಾಮಿ ಅವರ ‘ಮಾತಿಗಿಳಿದ ಚಿತ್ರ’ ಕೃತಿ ಆಯ್ಕೆಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ರಮೇಶ ಕಮತಗಿ ತಿಳಿಸಿದ್ದಾರೆ. ಈ ಪ್ರಶಸ್ತಿ ಪ್ರದಾನವನ್ನು ದಿನಾಂಕ 08 ಜೂನ್ 2025ರ ಭಾನುವಾರದಂದು ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಿರಿಯ ಸಾಹಿತಿಗಳು ಹಾಗೂ ಖ್ಯಾತ ವೈದ್ಯರಾದ ಡಾ. ಸಿ. ಶರತ್ ಕುಮಾರ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಮೇಘಮೈತ್ರಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀಡಿ…
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇವರು ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣಮಠದ ಆಶ್ರಯದಲ್ಲಿ ಆಯೋಜಿಸಿದ ‘ಸುಕೃತಿ’ 17ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಇದರ ಉದ್ಘಾಟನಾ ಸಮಾರಂಭವು ದಿನಾಂಕ 30 ಏಪ್ರಿಲ್ 2025 ರಂದು ಉಡುಪಿಯ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪಾದೇಕಲ್ಲು ವಿಷ್ಣುಭಟ್ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಮಾತನಾಡಿ “ಕನ್ನಡ ಸಾಹಿತ್ಯ ಎಲ್ಲಾ ಸಾಹಿತ್ಯಗಳಿಗಿಂತ ಶ್ರೀಮಂತವಾದುದು ಮತ್ತು ಕನ್ನಡ ನಾಡು ಕಲೆ, ಸಾಹಿತ್ಯ, ಅಧ್ಯಾತ್ಮದ ತವರೂರು. ಕನ್ನಡ ಸಾಹಿತ್ಯ ಸಮ್ಮೇಳನ ಅಕ್ಷರ ಪುರುಷೋತ್ತಮನಾದ ಶ್ರೀ ಕೃಷ್ಣನ ಸನ್ನಿಧಾನದಲ್ಲಿ ಅಕ್ಷಯ ತೃತೀಯದಂದು ಆಯೋಜನೆಯಾಗಿರುವುದು ನಿಜವಾದ ಅಕ್ಷರ ತೃತೀಯವಾಗಿದೆ. ಸಾಹಿತ್ಯ ಸಮ್ಮೇಳನ ಸಾರ್ಥಕ ಆಗಬೇಕಾದರೆ ಸಾಹಿತ್ಯವು ಹಿತದಿಂದ ಸಹಿತವಾಗಿರಬೇಕು. ಈ ಸಮ್ಮೇಳನ ಶ್ರೀ ಕೃಷ್ಣನ ಆರಾಧನೆಯಾಗಿದೆ” ಎಂದರು. ಕ. ಸಾ. ಪ. ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಮಾತನಾಡಿ “ಕನ್ನಡಿಗರು ಸ್ವಾಭಿಮಾನಿಗಳು. ಪರಶುರಾಮ…
ಮಂಗಳೂರು : ಮಲ್ಲಿಕಟ್ಟೆಯಲ್ಲಿರುವ ನೂಪುರ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಅಕಾಡೆಮಿ ಆಯೋಜಿಸಿರುವ ಕುಮಾರಿ ಕಿಯಾರಾ ಆ್ಯಶ್ಲಿನ್ ಪಿಂಟೋ ಇವರ ಶಾಸ್ತ್ರೀಯ ನೃತ್ಯ ರಂಗಪ್ರವೇಶ ಕಾರ್ಯಕ್ರಮವನ್ನು ದಿನಾಂಕ 04 ಮೇ 2025ರಂದು ಸಂಜೆ 5-00 ಗಂಟೆಗೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನೃತ್ಯಗುರು, ನೂಪುರ ಭಾರತೀಯ ಶಾಸ್ತ್ರೀಯ ನೃತ್ತ ಮತ್ತು ಸಂಗೀತ ಅಕಾಡೆಮಿಯ ನಾಟ್ಯ ವಿದುಷಿ ಸುಲೋಚನಾ ವಿ. ಭಟ್ ತಿಳಿಸಿದ್ದಾರೆ. ಕಿಯಾರಾ ಇವರ ರಂಗಪ್ರವೇಶವು ಭರತನಾಟ್ಯ, ಕುಚಿಪುಡಿ, ಕಥಕ್ ಮತ್ತು ಮೋಹಿನಿ ಅಟ್ಟಂನಂತಹ ಶಾಸ್ತ್ರೀಯ ನೃತ್ಯ ಪ್ರಕಾರಗಳ ಮಿಶ್ರಣದೊಂದಿಗೆ ವಿಶಿಷ್ಟವಾಗಿ ನಡೆಯಲಿದೆ. ನಾಟ್ಯಾಚಾರ್ಯ ಗುರು ಉಳ್ಳಾಲ ಮೋಹನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸ್ವಸ್ತಿಕ ರಾಷ್ಟ್ರೀಯ ವ್ಯವಹಾರ ಶಾಲೆಯ ಪ್ರಾಂಶುಪಾಲೆ ಡಾ. ಮಾಲಿನಿ ಹೆಬ್ಬಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.