Subscribe to Updates
Get the latest creative news from FooBar about art, design and business.
Author: roovari
ಕಾಸರಗೋಡು : ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಇದರ ಆಶ್ರಯದಲ್ಲಿ ಶ್ರೀಮತಿ ವಿಜಯಲಕ್ಷ್ಮೀ ಶ್ಯಾನುಭೋಗ್ ಇವರ ‘ವ್ಯೂಹ’ ಕಥಾ ಸಂಕಲನ ಬಿಡುಗಡೆ ಸಮಾರಂಭವನ್ನು ದಿನಾಂಕ 02 ಮೇ 2025ರಂದು ಅಪರಾಹ್ನ 2-30 ಗಂಟೆಗೆ ಬಾಯಿಕಟ್ಟೆ ಶ್ರೀ ಅಯ್ಯಪ್ಪ ಮಂದಿರದ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭವನ್ನು ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಇವರು ಉದ್ಘಾಟಿಸಲಿದ್ದು, ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಪಾರ್ವತಿ ಜಿ. ಐತಾಳ್ ಇವರು ಕೃತಿ ಬಿಡುಗಡೆಗೊಳಿಸಲಿರುವರು. ಹಿರಿಯ ಪತ್ರಕರ್ತರಾದ ಮಲಾರ್ ಜಯರಾಮ ರೈ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾಹಿತಿ ಆಶಾ ದಿಲೀಪ್ ಸುಳ್ಯಮೆ ಇವರು ಕೃತಿ ಪರಿಚಯ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯರು ಹಾಗೂ ವಿದ್ಯಾರ್ಥಿಗಳಿಂದ ಸ್ವರಚಿತ ಕಥಾ ವಾಚನ ಪ್ರಸ್ತುತಗೊಳ್ಳಲಿದೆ.
ಆಡಿ ಬಾ ನನ್ನ ಕಂದ ಅಂಗಾಲ ತೊಳೆದೇನ..| ತೆಂಗಿನ ಕಾಯಿ ತಿಳಿನೀರ, ತೆಂಗಿನ ಕಾಯಿ ತಿಳಿನೀರ ತಕ್ಕೊಂಡು ಬಂಗಾರ ಮಾರಿ ತೊಳೆದೇನ..|| ಎಂಬ ಹಾಡು ಯಾರಿಗೆ ತಾನೇ ನೆನಪಿಲ್ಲ?. ಇದನ್ನ ಎಂದಾದರೂ ಮರೆಯಲು ಸಾಧ್ಯವೇ.? ಈ ಜನಪದ, ಬಾಲ ಸಾಹಿತ್ಯದ ಶಕ್ತಿ ಅಂಥದು. ಈ ಬಾಲ ಸಾಹಿತ್ಯ ಎನ್ನುವುದು ಬಹು ವಿಶಾಲವಾದ ಸಾಗರ , ಹೇರಳವಾದ ವ್ಯಾಪ್ತಿಯನ್ನು ಹೊಂದಿದೆ. ಚಿಕ್ಕಪುಟ್ಟ ಮಕ್ಕಳ ಬುದ್ಧಿಮಟ್ಟಕ್ಕೆ ಇಳಿದು ಕವಿಗಳು , ಸಾಹಿತಿಗಳು ಮಕ್ಕಳ ಸದಭಿರುಚಿಗೆ ತಕ್ಕಂತೆ ಪ್ರಮುಖವಾಗಿ ಆದಿಪ್ರಾಸ , ಮಧ್ಯಪ್ರಾಸ , ಅಂತ್ಯಪ್ರಾಸ ಪದಗಳ ಬಳಕೆ ಮಾಡಿ ಮಕ್ಕಳ ಪದ್ಯ ರಚಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಶ್ರೀಮತಿ ಗೀತಾ ಎನ್. ಮಲ್ಲನಗೌಡರ್ ಮಾಡಿದ ಪ್ರಯತ್ನ ತುಂಬಾ ಮೆಚ್ಚುವಂತಹದು. ಈ ಪ್ರಯತ್ನದ ಫಲವೇ ಇಂದು ಲೋಕಾರ್ಪಣೆಗೊಂಡ “ಹಾರುವ ಹಕ್ಕಿ” ಎಂಬ ಶಿಶು ಗೀತೆಗಳ ಸಂಕಲನ. ಇಂತಹ ಒಂದು ಕೃತಿಯನ್ನು ಕವಯಿತ್ರಿ ಕನ್ನಡ ಸಾರಸತ್ವ ಲೋಕಕ್ಕೆ ಓದಲು ಕಾಣಿಕೆಯಾಗಿ ನೀಡಿದ್ದು ತುಂಬಾ ಸಂತಸದಾಯಕ ಹಾಗೂ ಹೆಮ್ಮೆಯ ವಿಚಾರ.…
ಕಾರ್ಕಳ : ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ) ಮತ್ತು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ ಇದರ ಸಹಯೋಗದೊಂದಿಗೆ ಆಯೋಜಿಸಿದ ಆಹ್ವಾನಿತ ತಂಡಗಳ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ದಿನಾಂಕ 12 ಏಪ್ರಿಲ್ 2025 ರಂದು ನಿಟ್ಟೆಯಲ್ಲಿ ನಡೆಯಿತು. ನಿಟ್ಟೆಯ ಎನ್.ಎಮ್.ಎ.ಎಮ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ವಿದ್ವಾಂಸರಾದ ವಾಸುದೇವ ರಂಗ ಭಟ್ಟ ಮಾತನಾಡಿ “ಕೇವಲ ಕ್ಷೇತ್ರಗಳ ಆಶ್ರಯದಿಂದ ಹೊರಡುವ ಮೇಳಗಳಲ್ಲಿ ಒಮ್ಮೊಮ್ಮೆ ಕಲೆಯಿಂದ ಭಕ್ತಿ ಹೆಚ್ಚು ಮೇಲೈಸಿದರೂ, ಇಂಥ ಪ್ರಯತ್ನಗಳಿಂದ ಕಲೆಯ ಸತ್ವ ಉಳಿಸುವುದು ಸಾಧ್ಯ. ಕಲೆಯಲ್ಲಿ ಪ್ರತಿಷ್ಠಿತ ಸ್ಥಾನ ತಲುಪಿದ ಕಲಾವಿದನಿಗೆ ತನ್ನ ತಿರುಗಾಟದ ಮೇಳ ಅಥವಾ ಕ್ಷೇತ್ರದ ನಿರ್ದೇಶನವನ್ನು ಮೀರುವುದಕ್ಕೆ ಹೆಚ್ಚಾಗಿ ಆಸ್ಪದವಿರುವುದಿಲ್ಲ. ಮೇಳದ ಯಾಜಮಾನ್ಯ ಹೊಂದಿದವರಿಗೆ ಕ್ಷೇತ್ರದ ಭಕ್ತರ ಭಾವನೆ ಗಮನದಲ್ಲಿಟ್ಟುಕೊಳ್ಳಬೇಕಾದ ಅನಿವಾರ್ಯತೆಯಿದೆ” ಎಂದರು. ಯಕ್ಷಗಾನದ ಹಾಸ್ಯ ಲೋಕವನ್ನು ಶ್ರೀಮಂತಗೊಳಿಸಿದ ಬಂಟ್ವಾಳ ಜಯರಾಮ ಆಚಾರ್ಯರು ಕಲಾರಸಿಕರ ಹೃದಯದಲ್ಲಿ ಸದಾ ಬದುಕಿರುವ…
ಕುಂದಾಪುರ :ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಆಯೋಜಿಸಿದ ಇಪ್ಪತ್ತು ದಿನಗಳ ಯಕ್ಷಗಾನ ತರಬೇತಿ ಶಿಬಿರ ‘ನಲಿ–ಕುಣಿ 2025’ ಇದರ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ದಿನಾಂಕ 03 ಮೇ 2025ರ ಶನಿವಾರ ಸಂಜೆ ಗಂಟೆ 4.30ರಿಂದ ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದೆ. ಶ್ರೀ ಶ್ರೀ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮಿಗಳು ಬಾಳ್ಳುದ್ರು ಮಠ ಇವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಇದರ ಅಧ್ಯಕ್ಷರಾದ ಶ್ರೀ ಆನಂದ ಸಿ. ಕುಂದರ್ ವಹಿಸಲಿರುವರು. ಸಮಾರಂಭದಲ್ಲಿ ಅತಿಥಿಗಳಾಗಿ ಕುಂದಾಪುರ ಕ್ಷೇತ್ರದ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ ಗಂಟಹೊಳೆ, ಓ. ಎನ್. ಜಿ. ಸಿ ಗೋವಾ ಇದರ ನಿವೃತ್ತ ಮಹಾ ಪ್ರಬಂಧಕರಾದ ಶ್ರೀ ಬನ್ನಾಡಿ ನಾರಾಯಣ ಆಚಾರ್, ಲೆಕ್ಕಪತ್ರ ಪರಿಶೋಧಕರಾದ ಶ್ರೀ ಜತೀಂದ್ರ ಮರವಂತೆ ಹಾಗೂ “ನಲಿ–ಕುಣಿ” ಶಿಬಿರದ ನಿರ್ದೇಶಕರಾದ ಪ್ರಾಚಾರ್ಯ ಶ್ರೀ ಕೆ. ಸದಾನಂದ ಐತಾಳ ಭಾಗವಹಿಸಲಿದ್ದಾರೆ.…
ವಿಟ್ಲ : ನಾಟ್ಯ ವಿದ್ಯಾನಿಲಯ ಕುಂಬಳೆ ಇದರ ನೃತ್ಯಗುರುಗಳಾದ ವಿದುಷಿ ಡಾ. ವಿದ್ಯಾಲಕ್ಷ್ಮೀ ಇವರ ಶಿಷ್ಯೆ ವಿದುಷಿ ಸಿಂಚನ ಲಕ್ಷ್ಮೀ ಕೋಡಂದೂರು ಇವರ ಭರತನಾಟ್ಯ ರಂಗಪ್ರವೇಶದ ಸಮಾರಂಭವು ದಿನಾಂಕ 24 ಏಪ್ರಿಲ್ 2025ರ ಗುರುವಾರದಂದು ವಿಟ್ಲ ಗಾರ್ಡನ್ ಆಡಿಟೋರಿಯಂ ಇಲ್ಲಿ ನಡೆಯಿತು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇದರ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ.ಚಂದ್ರಶೇಖರ ನಾವಡ ಮಾತನಾಡಿ “ಸಂಗೀತ ಹಾಗೂ ನೃತ್ಯ ಏಕಕಾಲಕ್ಕೆ ಎಲ್ಲರಿಗೂ ಒಲಿಯುವುದಿಲ್ಲ. ಆದರೆ ನಾಟ್ಯವಿದ್ಯಾನಿಲಯದ ಸಿಂಚನ ಅದೆಲ್ಲವನ್ನೂ ಮೀರಿದ ಸಾಧನೆಯನ್ನು ಮಾಡಿ ರಂಗಪ್ರವೇಶವನ್ನು ಮಾಡಿದ್ದಾಳೆ. ರಂಗಪ್ರವೇಶವು ನಿಂತ ನೀರಾಗದೆ ನಾದವು ನಿರಂತರ ಹರಿಯುತ್ತಿರಬೇಕು. ಭರತನಾಟ್ಯವೆಂಬ ಕಲೆಯ ಮೂಲಕ ಅನೇಕ ಶಿಷ್ಯಂದಿರನ್ನು ಬೆಳಕಿಗೆ ತಂದ ಡಾ. ವಿದ್ಯಾಲಕ್ಷ್ಮೀ ಅವರು ಜನಮೆಚ್ಚುವ ಸಾಧನೆಯನ್ನು ಮಾಡಿದ್ದಾರೆ. ಸಿಂಚನಲಕ್ಷ್ಮೀಯಂತಹ ಅನೇಕ ಪ್ರತಿಭೆಗಳನ್ನು ನೀಡಿ ಕಲೆಯ ಮೇಲಿನ ಪ್ರೀತಿಯನ್ನು ಅವರು ತೋರ್ಪಡಿಸಿದ್ದಾರೆ” ಎಂದರು. ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಪ್ರದರ್ಶನ ನೀಡಿದ ವಿದುಷಿ ಸಿಂಚನ ಲಕ್ಷ್ಮೀ ಕೋಡಂದೂರು ಪುಷ್ಪಾಂಜಲಿ…
ಮಂಗಳೂರು : ಗುರು ವಿದುಷಿ ಶ್ರೀಮತಿ ಸೌಮ್ಯ ಸುಧೀಂದ್ರ ರಾವ್ ಇವರ ನೃತ್ಯ ಸುಧಾ ಸಂಸ್ಥೆಯ ‘ನೃತ್ಯೋತ್ಕರ್ಷ- 2025’ ಕಾರ್ಯಕ್ರಮವು ದಿನಾಂಕ 20 ಏಪ್ರಿಲ್ 2025ರಂದು ಮಂಗಳೂರಿನ ಕುದ್ಮಲ್ ರಂಗರಾವ್ ಸಭಾಭವನದಲ್ಲಿ ನಡೆಯಿತು ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ವಿಧಾನ ಪರಿಷತ್ ನ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ನಾಯಕ್, ಮೃದಂಗ ವಿದ್ವಾನ್ ಶ್ರೀ ಹೆಚ್. ರವಿ ಕುಮಾರ್, ವಿದ್ವಾನ್ ಚಂದ್ರಶೇಖರ ನಾವಾಡ, ಗುರು ವಿದುಷಿ ಸುಮಂಗಲ ರತ್ನಾಕರ್ ರಾವ್ ಹಾಗೂ ಸಂಸ್ಥೆಯ ನಿರ್ದೇಶಕ ಡಾ ಸುಧೀಂದ್ರ ರಾವ್ ಪಾಲ್ಗೊಂಡರು . ಸಂಸ್ಥೆಯ ಐದು ವಿದುಷಿಯರಾದ ಹರ್ಷಿತಾ ಸಾಲ್ಯಾನ್, ಸಹನಾ ಹತ್ವಾರ್, ವಿಜೇತ ಮೊಂತೆರೋ, ಸರ್ವಮಂಗಲ ಹಾಗೂ ಸ್ನೇಹ ಆಚಾರ್ಯ ಇವರಿಗೆ ‘ನೃತ್ಯ ಸುಧಾ ಕುಸುಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ವಿದುಷಿ ಭಾಗೀರತಿ ಎಮ್ ಸ್ವಾಗತಿಸಿ, ವಿದುಷಿ ರಚನ ಶೆಟ್ಟಿ ಹಾಗೂ ವಿದುಷಿ ವೆನೆಸ್ಸಾ ಮೊಂತೆರೊ ಕಾರ್ಯಕ್ರಮ ನಿರೂಪಿಸಿ, ವಿದುಷಿ ನಿಧಿ ಡಿ. ಶೆಟ್ಟಿ ವಂದನಾರ್ಪಣೆಗೈದರು.…
ಪೆರ್ಲ : ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ‘ಪರಿಷತ್ನ ನಡಿಗೆ ಹಿರಿಯ ಸಾಧಕರ ಕಡೆಗೆ’ ಎಂಬ ಕಾರ್ಯಕ್ರಮದ ಅಂಗವಾಗಿ ಸಾಹಿತಿ, ಅಂಕಣಕಾರ ಹರೀಶ ಪೆರ್ಲ ಇವರನ್ನು ಪೆರ್ಲದಲ್ಲಿರುವ ಅವರ ನಿವಾಸ ‘ಗುಲಾಬಿ’ಯಲ್ಲಿ ದಿನಾಂಕ 26 ಏಪ್ರಿಲ್ 2025ರಂದು ಅಭಿನಂದಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಭಿನಂದನಾ ಭಾಷಣ ಮಾಡಿದರು. ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷರಾದ ಪ್ರೊ. ಪಿ. ಎನ್. ಮುಡಿತ್ತಾಯ, ಮಹಮ್ಮದ್ ಪೆರ್ಲ, ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಪ್ರಾಧ್ಯಾಪಕ ಹರೀಶ್ ನಾಯಕ್, ಹರೀಶ ಪೆರ್ಲರ ಬದುಕು, ಬರಹ, ವ್ಯಕ್ತಿತ್ವದ ಕುರಿತು ಮಾತನಾಡಿದರು. ಗೀತಾ ಜಿ.ನಾಯಕ್, ವಿಜಯಲಕ್ಷ್ಮಿ ಪಿ. ಶೆಣೈ, ಆಯಿಷಾ ಎ. ಎ. ಪೆರ್ಲ, ಪ್ರೇಮಾ ಶೆಟ್ಟಿ…
ಸುರತ್ಕಲ್ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು, ಸುರತ್ಕಲ್ ಹೋಬಳಿ ಘಟಕದ ವತಿಯಿಂದ ‘ಸಾಹಿತ್ಯ ಸಂಭ್ರಮ’ ಕಾರ್ಯಾಕ್ರಮವು ದಿನಾಂಕ 04 ಮೇ 2025ರಂದು ಸಂಜೆ ಘಂಟೆ 3.00 ರಿಂದ ಸುರತ್ಕಲ್ ವಿದ್ಯಾದಾಯಿನಿ ಸಂಕೀರ್ಣದ ವಿರಾಟ್ ಸಭಾಂಗಣದಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಹಾಗು ಸಂಶೋಧಕಿಯಾದ ಡಾ. ಇಂದಿರಾ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆಯಾದ ಶಕುಂತಲಾ ಟಿ. ಶೆಟ್ಟಿ, ಕಾಟಿಪಳ್ಳ ಬಿ. ಎನ್. ಜಿ. ಎಜುಕೇಶನಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಪಿ . ದಯಾಕರ್, ಸಾಹಿತಿ ಡಾ. ಗಣೇಶ್ ಅಮೀನ್ ಸಂಕಮಾರ್, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಕೇಂದ್ರೀಯ ಕಾರ್ಯಕಾರಿ ಸದಸ್ಯ ಡಾ. ಮಾಧವ ಎಂ. ಕೆ. ಭಾಗವಹಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ವಿನಯ ಆಚಾರ್,…
ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ, ಕೇಂದ್ರ ಸಮಿತಿಯ ಸಹಕಾರದಲ್ಲಿ ಬೇಕಲ ರಾಮ ನಾಯಕ ಸ್ಮರಣಾಂಜಲಿಯ ಅಂಗವಾಗಿ ವಸಂತ ಚುಟುಕು ಕವಿಗೋಷ್ಠಿಯು ದಿನಾಂಕ 27 ಏಪ್ರಿಲ್ 2025ರ ಭಾನುವಾರದಂದು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ ಕೆ. ನರಸಿಂಹ ಭಟ್ ಏತಡ್ಕ ಮಾತನಾಡಿ “ಚುಟುಕುಗಳು ಅಂತ್ಯ ಪ್ರಾಸವಿರುವ ನಾಲ್ಕು ಸಾಲಿನ ಕವನ. ಹನಿಗವನಕ್ಕೂ ಚುಟುಕಿಗೂ ವ್ಯತ್ಯಾಸ ಇದೆ. ಚುಟುಕುಗಳು ಸಂದೇಶವನ್ನು ಕೊಡುವ ಹಾಗಿರಬೇಕು. ಸಮಯೋಚಿತ ಚುಟುಕುಗಳು ಆಸಕ್ತರಿಂದ ಹೆಚ್ಚು ಮೆಚ್ಚುಗೆಯನ್ನು ಪಡೆಯುತ್ತವೆ. ಯಾವುದೇ ವಿಷಯವನ್ನಾದರೂ ಚುಟುಕನ್ನಾಗಿಸುವ ಸಾಮರ್ಥ್ಯ ಚುಟುಕು ಕವಿಗಿರಬೇಕು. ಇದು ಅಭ್ಯಾಸದಿಂದ ಸಿದ್ಧಿಸುತ್ತದೆ” ಎಂದರು. ಚುಟುಕು ಕವಿಗೋಷ್ಠಿಯಲ್ಲಿ ವಿಜಯರಾಜ ಪುಣಿಂಚಿತ್ತಾಯ ಬೆಳ್ಳೂರು, ನಾರಾಯಣ ನಾಯ್ಕ ಕುದುಕೋಳಿ, ಶಾರದಾ ಮೊಳೆಯಾರ್ ಎಡನೀರು, ಹರ್ಷಿತಾ ಶಾಂತಿಮೂಲೆ, ಶಶಿಕಲಾ ಟೀಚರ್ ಕುಂಬಳೆ, ರೇಖಾ ರೋಶನ್ ಕಾಸರಗೋಡು, ಚಿತ್ರಕಲಾ…
ಬಳ್ಳಾರಿ : ಬಳ್ಳಾರಿಯ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳ ಟ್ರಸ್ಟ್ ಆಯೋಜಿಸಿದ್ದ ನಾಡೋಜ ಬೆಳಗಲ್ಲು ವೀರಣ್ಣ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 27 ಏಪ್ರಿಲ್ 2025ರ ಭಾನುವಾರ ಸಂಜೆ ಧಾರವಾಡದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಹಾಗೂ ಸಾಹಿತಿಯಾದ ಡಾ. ವಸುಂಧರಾ ಭೂಪತಿ ಮಾತನಾಡಿ “ತೊಗಲು ಗೊಂಬೆ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ನಾಡೋಜ ಬೆಳಗಲ್ಲು ವೀರಣ್ಣ ಅವರ ಹೆಸರಿನಲ್ಲಿ ಕರ್ನಾಟಕ ಸರಕಾರ ಪ್ರಶಸ್ತಿ ಆರಂಭಿಸಬೇಕು. ಅಳಿವಿನಂಚಿನಲ್ಲಿರುವ ತೊಗಲುಗೊಂಬೆಯಾಟಕ್ಕೆ ಆಧುನಿಕ ಸ್ಪರ್ಶ ನೀಡಿ ದೇಶ ವಿದೇಶಗಳಲ್ಲಿ ತಮ್ಮ ಮೇಳದ ಮೂಲಕ ಪ್ರದರ್ಶನ ನೀಡಿರುವ ಇವರ ಜೀವನ, ಜಾನಪದ ಮತ್ತು ರಂಗಭೂಮಿಯ ಕೊಡುಗೆಯನ್ನು ಪಠ್ಯದಲ್ಲಿ ಅಳವಡಿಸಿ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಐದು ದಶಕಗಳಕಾಲ ವಾಸವಿದ್ದ ನಿವಾಸದ ಸಮೀಪದ ರೇಡಿಯೋ ಪಾರ್ಕ್ ರಸ್ತೆಗೆ ನಾಡೋಜ ಬೆಳಗಲ್ಲು ವೀರಣ್ಣ ಹೆಸರಿಡಬೇಕು ಎಂದು ಮಹಾನಗರ ಪಾಲಿಕೆಗೆ ಮನವಿ ಮಾಡಿದರು. ನಾಡೋಜ ಬೆಳಗಲ್ಲು ವೀರಣ್ಣ…