Subscribe to Updates
Get the latest creative news from FooBar about art, design and business.
Author: roovari
ಸಾಣೇಹಳ್ಳಿ : ಶ್ರೀ ಶಿವಕುಮಾರ ಕಲಾಸಂಘ (ರಿ.) ಮತ್ತು ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ ಇದರ ವತಿಯಿಂದ ‘ಮಕ್ಕಳ ಹಬ್ಬ ಸಮಾರೋಪ’ ಸಮಾರಂಭವನ್ನು ದಿನಾಂಕ 29 ಏಪ್ರಿಲ್ 2025ರಂದು ಬೆಳಗ್ಗೆ 8-30 ಗಂಟೆಗೆ ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಮೊದಲ ಅವಧಿ ಬೆಳಗ್ಗೆ 8-30 ಗಂಟೆಗೆ ವಚನ ಗೀತೆ, ಯೋಗ ನೃತ್ಯ, ವಚನ ನೃತ್ಯ, ಎರಡನೇ ಅವಧಿ ಬೆಳಗ್ಗೆ 10-30 ಗಂಟೆಗೆ ಕೋಟಗಾನಳ್ಳಿ ರಾಮಯ್ಯ ರಚನೆಯ ರುಚಿತ್ ಕುಮಾರ್ ಬಿ.ಸಿ. ಇವರ ನಿರ್ದೇಶನದಲ್ಲಿ ಭೂಮಿ ತಂಡದವರಿಂದ ‘ರತ್ನಪಕ್ಷಿ’, ಕೃಷ್ಣಮೂರ್ತಿ ಎನ್. ತಾಳಿಕಟ್ಟೆ ಇವರ ರಚನೆ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಅಗ್ನಿ ತಂಡದವರಿಂದ ‘ಕಳ್ಳರ ಸಂತೆ’, ಮೂರನೇ ಅವಧಿ ಸಂಜೆ 4-30 ಗಂಟೆಗೆ ಶ್ರೀಪಾದ ಭಟ್ ಕನ್ನಡ ರೂಪಾಂತರಗೊಳಿಸಿರುವ ಜಗದೀಶ್ ನೆಗಳೂರು ವಿನ್ಯಾಸ ಮತ್ತು ನಿರ್ದೇಶನದಲ್ಲಿ ಆಕಾಶ ತಂಡದವರಿಂದ ‘ರಿಂಗಿನಾಟ’ ಹಾಗೂ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿಸಿರುವ ಚಂದ್ರಮ್ಮ ಆರ್. ಇವರ ನಿರ್ದೇಶನದಲ್ಲಿ ಗಾಳಿ ತಂಡದವರಿಂದ ‘ಕೋಳೂರು ಕೊಡಗೂಸು’ ನಾಟಕಗಳು ಪ್ರದರ್ಶನಗೊಳ್ಳಲಿದೆ.…
ಪೆರ್ಲ : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶಯದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಮತ್ತು ಸವಿ ಹೃದಯದ ಕವಿ ಮಿತ್ರರು ಪೆರ್ಲ ಇವರ ಸಹಕಾರದೊಂದಿಗೆ ಪೆರ್ಲದ ವ್ಯಾಪಾರಿ ಭವನದಲ್ಲಿ ದಿನಾಂಕ 26 ಏಪ್ರಿಲ್ 2025ರಂದು ‘ಕವಿತಾ ಕೌತುಕ ಸರಣಿ 3 – ಕವಿ ಕಾವ್ಯ ಸಂವಾದ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿಯೂ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷರೂ ಆಗಿರುವ ಡಾ. ರಮಾನಂದ ಬನಾರಿ ಇವರು ಮಾತನಾಡುತ್ತಾ “ಕಾವ್ಯವು ಜನಜೀವನದ ಪ್ರತಿಬಿಂಬವೂ ಗತಿಬಿಂಬವೂ ಆಗಿದೆ. ಯೋಧ, ವ್ಯಾಧ ನ್ಯಾಯಗಳ ಸಮ್ಮಿಲನವೇ ಕವಿತೆ. ಜೀವಗಳು ಹುಟ್ಟುವ ಹಾಗೆ, ಪ್ರಕೃತಿ-ಪುರುಷ ಸಂಯೋಗದಂತೆ, ಪಾಂಡಿತ್ಯ ಮತ್ತು ಪ್ರತಿಭಾ ಸಂಪನ್ನತೆಯಿಂದ ಕಾವ್ಯವು ಸಮೃದ್ಧವಾಗುತ್ತದೆ. ಕವಿತೆ ಕನವರಿಕೆಗಳ ಅಕ್ಷರ ತೋರಣಗಳಾಗಿ ಸಮಾಜವನ್ನು ವರ್ತಮಾನದೊಡನೆ ಮುನ್ನಡೆಸುತ್ತದೆ” ಎಂದು ಹೇಳಿದರು. ನಿವೃತ್ತ ಶಿಕ್ಷಕ ಉಮೇಶ ಕೆ. ಪೆರ್ಲ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಪೆರ್ಲ ವ್ಯಾಪಾರಿ…
ಬೆಂಗಳೂರು : ಕಲಾವಿಲಾಸಿ ತಂಡದ ಕಲಾವಿದರು ಪ್ರಸ್ತುತ ಪಡಿಸುವ ಪಿ. ಲಂಕೇಶ್ ಅವರ ‘ಕ್ರಾಂತಿ ಬಂತು # ಕ್ರಾಂತಿ’ ಎಂಬ ನಾಟಕ ಪ್ರದರ್ಶನವನ್ನು ದಿನಾಂಕ 29 ಏಪ್ರಿಲ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ರಂಗ ಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಯುವ ನಿರ್ದೇಶಕ ಅಭಿಷೇಕ ಚಕ್ರಣ್ಣವರ ನಿರ್ದೇಶಿಸುತ್ತಿರುವ ನಾಟಕವನ್ನು ಹಿರಿಯ ರಂಗಕರ್ಮಿ ಮಹಾದೇವ ಹಡಪದ ಇವರು ವಿನ್ಯಾಸ ಮಾಡಿದ್ದಾರೆ. ನಾಟಕದ ಅವಧಿ 100 ನಿಮಿಷಗಳು. ಹೆಚ್ಚಿನ ಮಾಹಿತಿಗೆ 9739398819 ಸಂಖ್ಯೆಗೆ ಕರೆ ಅಥವಾ ವಾಟ್ಸಪ್ ಮಾಡಬಹುದು. ‘ಕ್ರಾಂತಿ ಬಂತು # ಕ್ರಾಂತಿ’ ನಾಟಕವನ್ನು ಸಾಹಿತಿ ಪಿ. ಲಂಕೇಶ್ ಅವರ ‘ಕ್ರಾಂತಿ ಬಂತು ಕ್ರಾಂತಿ’ ನಾಟಕದ ಪಠ್ಯವನ್ನು ಪ್ರಸ್ತುತಕ್ಕೆ ಅಳವಡಿಸಿಕೊಂಡು ಕಟ್ಟಲಾಗಿದೆ. ಈ ನಾಟಕವು ಮೊದಲ ಬಾರಿಗೆ ಪ್ರಕಟವಾಗಿದ್ದು 1971ರಲ್ಲಿ. ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳಲ್ಲಿ ಅಂದಿಗೂ – ಇಂದಿಗೂ ಸಾಕಷ್ಟು ಬದಲಾವಣೆಗಳು ಕಂಡುಬಂದರೂ, ಆ ಬದಲಾದ ಪರಿಸ್ಥಿತಿಗಳು ತಮ್ಮ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡಿರುವುದು ನೋವಿನ ಸಂಗತಿ. ಸಮಾಜವಾದ, ಸಮತಾವಾದ, ಕ್ರಾಂತಿಯಂತಹ ವಿಚಾರಗಳ…
ಮೇಲುಕೋಟೆ : ದೃಶ್ಯ ಟ್ರಸ್ಟ್ (ರಿ.) ಮೇಲುಕೋಟೆ ಮತ್ತು ಡಾ. ಪು.ತಿ.ನ. ಟ್ರಸ್ಟ್ (ರಿ.) ಮೇಲುಕೋಟೆ ಇವರ ಸಹಯೋಗದೊಂದಿಗೆ 9ನೇ ವರ್ಷದ ಬೇಸಿಗೆ ಶಿಬಿರ ‘ದೊಡ್ಡಮರದ ನೆರಲಿನಲಿ ಕಲೆ ಮತ್ತು ಸಾಂಸ್ಕೃತಿಕ ಶಿಬಿರ -2025’ವನ್ನು ದಿನಾಂಕ 29 ಏಪ್ರಿಲ್ 2025ರಿಂದ 18 ಮೇ 2025ರವೆರೆಗೆ ಪ್ರತಿದಿನ ಬೆಳಗ್ಗೆ 10-00ರಿಂದ ಸಂಜೆ 4-00 ಗಂಟೆ ತನಕ ಮೇಲುಕೋಟೆ ಪು.ತಿ.ನ. ಕಲಾಮಂದಿರದಲ್ಲಿ ಆಯೋಜಿಸಲಾಗಿದೆ. ರಂಗಾಸಕ್ತರು ಮತ್ತು ಮೇಲುಕೋಟೆ ಗ್ರಾಮಸ್ಥರ ಸಹಕಾರದಲ್ಲಿ ಹಮ್ಮಿಕೊಂಡಿರುವ ಈ ಶಿಬಿರದ ನಿರ್ದೇಶಕರು ಗಿರೀಶ್ ಮೇಲುಕೋಟೆ ಹಾಗೂ ಶಿಬಿರದ ಸಂಚಾಲಕರಾಗಿ ವೆಂಕಟೇಶ್ ಎನ್. ಮತ್ತು ಮನೋಜ್ ಎಂ. ಇವರು ಸಹಕರಿಸಲಿದ್ದಾರೆ.
ಉಡುಪಿ : ಯಕ್ಷಗಾನ ಕೇಂದ್ರ ಇಂದ್ರಾಳಿ, ಉಡುಪಿ ಇಲ್ಲಿಗೆ ಸೇರಲು 7ನೇ ತರಗತಿಯಿಂದ 10ನೇ ತರಗತಿವರೆಗಿನ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಬೇತಿ, ಶಾಲಾ ವಿದ್ಯಾಭ್ಯಾಸ, ಉಚಿತ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆಯಿದೆ. ವಿದ್ಯಾರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಯಕ್ಷಗಾನ ಕೇಂದ್ರದ ಪ್ರಕಟಣೆ ತಿಳಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಮೇ 2025 ಆಸಕ್ತರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9900907702/ 9901190392/9945245144.
ಮಂಗಳೂರು : ಮಂಗಳೂರಿನ ಮಾಂಡ್ ಸೊಭಾಣ್ ಸಂಸ್ಥೆ ಆಯೋಜಿಸಿದ ದಶದಿನಗಳ ‘ಕಾಜಳ್’ (ಕಣ್ಣ ಕಾಡಿಗೆ) ಮಕ್ಕಳ ರಜಾ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 25 ಏಪ್ರಿಲ್ 2025 ರಂದು ನಡೆಯಿತು. ಶಿಬಿರವನ್ನು ಓರ್ವ ಶಿಬಿರಾರ್ಥಿಯ ಕಣ್ಣಿಗೆ ಕಾಡಿಗೆ ಹಚ್ಚುವ ಮುಖಾಂತರ ಉದ್ಘಾಟಿಸಿದ ಕುಲಶೇಖರ ಚರ್ಚಿನ ಉಪಾಧ್ಯಕ್ಷೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಸಿಲ್ವಿಯಾ ರೂತ್ ಕ್ಯಾಸ್ತೆಲಿನೊ ಮಾತನಾಡಿ “ಮಕ್ಕಳ ಪ್ರತಿಭೆಗಳನ್ನು ಬೆಳಕಿಗೆ ತರಲು ಮಾಂಡ್ ಸೊಭಾಣ್ ಸಂಸ್ಥೆ ನಿರಂತರ ಪ್ರಯತ್ನ ಮಾಡುತ್ತಿದೆ. ಅವರ ಪ್ರಯತ್ನಗಳ ಫಲವಾಗಿ ಕೊಂಕಣಿ ಸಂಸ್ಕೃತಿ ಕ್ಷೇತ್ರದಲ್ಲಿ ಹಲವಾರು ಯುವ ಪ್ರತಿಭೆಗಳು ಬೆಳಕಿಗೆ ಬಂದಿವೆ. ನೀವೂ ಶ್ರಮಪಟ್ಟರೆ ಯಶಸ್ಸು ಸಾಧ್ಯ’’ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗಾಗಿ ತಯಾರಿಸಿದ ಪ್ರಾಥಮಿಕ ಹಂತದ ಪಠ್ಯ ಪುಸ್ತಕ `ಆಮಿ ಕೊಂಕ್ಣಿ ಶಿಕುಂಯಾ’ ಅನ್ನು ಲೋಕಾರ್ಪಣೆಗೊಳಿಸಿದರು. ಗೌರವ ಅತಿಥಿ ಎರಿಕ್ ಡಿ’ಸೋಜ ಪಠ್ಯ ಪುಸ್ತಕ ಸಮಿತಿ ಸದಸ್ಯರಿಗೆ ಗೌರವ ಪ್ರತಿ ನೀಡಿದರು. ಶಿಬಿರದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಬೆಂಗಳೂರಿನ…
ಬೆಂಗಳೂರು : ದಾಕಹವಿಸ ಆಯೋಜನೆ ಮಾಡಿರುವ ವಿಶ್ವ ದೃಶ್ಯ ಕಲಾ ದಿನಾಚರಣೆ ಅತ್ಯಂತ ಯಶಸ್ವಿಯಾಗಿ ವಿಜೃಂಭಣೆಯಿಂದ ದಿನಾಂಕ 15 ಏಪ್ರಿಲ್ 2025 ಮಂಗಳವಾರದಂದು ನಡೆಯಿತು. ರವೀಂದ್ರ ಕಲಾಕ್ಷೇತ್ರದ ಪಡಸಾಲೆ ಆರ್ಟ್ ಗ್ಯಾಲರಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕ್ಯಾನ್ವಾಸ್ ಮೇಲೆ ರೇಖಾಚಿತ್ರದ ಮೂಲಕ ನಿರಂತರ ಚಲನೆಯನ್ನು ಸೂಚಿಸುವ ಮತ್ಸ್ಯಕನ್ಯೆಯನ್ನು ಬಿಡಿಸಿ ಅದಕ್ಕೆ ಪೂರಕವಾಗಿ ವಿವಿಧ ರೂಪಕಗಳನ್ನು ರಚಿಸಿ ಆ ಚಿತ್ರದ ಧ್ವನಿಯನ್ನು ಹೆಚ್ಚಿಸಿದ ಶ್ರೀ ಚಂದ್ರನಾಥ ಆಚಾರ್ಯರವರು ಕಲಾತ್ಮಕವಾಗಿ ವರ್ಲ್ಡ್ ಆರ್ಟ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ನೂರಕ್ಕೂ ಹೆಚ್ಚು ಕಲಾವಿದರು ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಅಮೇರಿಕಾದ ಪ್ರತಿಷ್ಠಿತ ಕಲಾ ಪುರಸ್ಕಾರ ಸ್ಯಾಮ್ ಗಿಲ್ಲಿಯಮ್ ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಶೀಲಾ ಗೌಡ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇವರು ಮಾತನಾಡಿ “ನಾವೆಲ್ಲ ಸೇರಿ ಈ ರೀತಿಯಾಗಿ ವಿಶ್ವ ಕಲಾ ದಿನವನ್ನು ಆಚರಿಸಿದಾಗ ಮಾತ್ರ ಅದರ ಬಗ್ಗೆ ಅರಿವು ಮತ್ತು ಕಲೆಯ ಬಗ್ಗೆ, ಕಲಾವಿದರ ಬಗ್ಗೆ ಗೌರವ ಮೂಡುವುದು” ಎಂದು ಅಭಿಪ್ರಾಯಪಟ್ಟರು.…
ಮಂಗಳೂರು : ಸಪ್ತಕ ಬೆಂಗಳೂರಿನ ನೇತೃತ್ವದಲ್ಲಿ ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ಹಾಗೂ ರಾಮಕೃಷ್ಣ ಮಠ ಮಂಗಳೂರು ಇವರ ಸಹಯೋಗ ಹಾಗೂ ಮಂಗಳೂರಿನ ಹತ್ತಾರು ಹಿಂದೂಸ್ಥಾನಿ ಸಂಗೀತ ಸಂಸ್ಥೆಗಳ ಸಹಕಾರದಲ್ಲಿ ದಿನಾಂಕ 13 ಏಪ್ರಿಲ್ 2025ರಂದು ಮಂಗಳೂರಿನ ರಾಮಕೃಷ್ಣ ಮಠದ ಸಭಾಭವನದಲ್ಲಿ ದೇಶ ವಿದೇಶಗಳಲ್ಲಿ ತಮ್ಮ ವಿಶಿಷ್ಟ, ವಿಶೇಷ ತಬಲಾ ವಾದನದಿಂದ ಪ್ರಖ್ಯಾತರಾದ ತಮ್ಮ ಉದಾತ್ತ ನಡೆನುಡಿಯಿಂದ ಅಜಾತ ಶತ್ರುವಾಗಿಯೂ ಅಪಾರ ಅಭಿಮಾನಿಗಳನ್ನು ಪಡೆದಿರುವ ಮಂಗಳೂರಿನವರೇ ಆದ ಪಂಡಿತ ಓಂಕಾರ ಗುಲ್ವಾಡಿ ಇವರನ್ನ ಪ್ರೀತಿ, ವಿಶ್ವಾಸ, ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಪ್ರತಿಭಾವಂತ ಯುವ ಕಲಾವಿದರಾದ ಅಂಕುಶ ನಾಯಕ ಇವರ ಸಿತಾರ್ ಹಾಗೂ ಕಾರ್ತಿಕ ಭಟ್ಟ ಇವರ ಕೊಳಲು ವಾದನ ಜುಗಲ್ಬಂದಿಗೆ ಹೇಮಂತ ಜೋಶಿಯವರ ತಬಲಾ ವಾದನ ಹಾಲು ಜೇನಿನಂತೆ ಸೇರಿ ಶೋತೃಗಳ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ನಂತರ ಧಾರವಾಡದ ಪಂಡಿತ ವೆಂಕಟೇಶಕುಮಾರ ಇವರ ಅಧ್ಯಕ್ಷತೆಯಲ್ಲಿ ಓಂಕಾರ ಗುಲ್ವಾಡಿ ಇವರನ್ನು ಹುಟ್ಟೂರಿನ ಸಮಸ್ತ ಕಲಾಭಿಮಾನಿಗಳ ಪರವಾಗಿ ಒಂದು ಅಭೂತಪೂರ್ವವಾದ ಸನ್ಮಾನ ಕಾರ್ಯಕ್ರಮ…
ಬೆಂಗಳೂರು : ಸ್ಟೇಜ್ ಬೆಂಗಳೂರು ಇವರ ವತಿಯಿಂದ ಮಕ್ಕಳ ಕಾರ್ಯಕ್ರಮ ಹಾಡು, ನೃತ್ಯ ಮತ್ತು ನಾಟಕ ಪ್ರದರ್ಶನವನ್ನು ದಿನಾಂಕ 27 ಏಪ್ರಿಲ್ 2025ರಂದು ಸಂಜೆ 4-30 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಲೀಲಾ ಮಣ್ಣಾಲ ಇವರು ರಚಿರುವ ಮಹೇಶ ಕುಮಾರ್ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಪುಣ್ಯಕೋಟಿ ಎಂಬ ಗೋವು’ ಎಂಬ ನಾಟಕ ಮಕ್ಕಳಿಂದ ಪ್ರಸ್ತುತಗೊಳ್ಳಲಿದೆ.
ಸಿದ್ಧಾಪುರ : ಗೌತಮ ಹೆಗಡೆ ಮುಗದೂರು ಇವರ ಸಂಯೋಜನೆಯಲ್ಲಿ ದಿಗ್ಗಜ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಶನೀಶ್ವರ ಮಹಾತ್ಮೆ’ ಅದ್ದೂರಿ ಪೌರಾಣಿಕ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 28 ಏಪ್ರಿಲ್ 2025ರಂದು ಸಂಜೆ 6-00 ಗಂಟೆಗೆ ಸಿದ್ಧಾಪುರದ ಸಿದ್ಧಿ ವಿನಾಯಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ. ಹಿಮ್ಮೇಳದಲ್ಲಿ ಭಾಗವತರು – ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು, ಮದ್ದಳೆ – ಶ್ರೀ ಪರಮೇಶ್ವರ ಭಂಡಾರಿ ಕರ್ಕಿ, ಚಂಡೆ – ಶ್ರೀ ಗಣೇಶ್ ಗಾಂವ್ಕರ್ ಹಳುವಳ್ಳಿ ಮತ್ತು ಕುಮಾರ ಶ್ರೀವತ್ಸ ಗುಡ್ಡೆದಿಂಬ ಹಾಗೂ ಮುಮ್ಮೇಳದಲ್ಲಿ ಶ್ರೀ ಕೃಷ್ಣಯಾಜಿ ಬಳ್ಕೂರು, ಶ್ರೀ ಅಶೋಕ ಭಟ್ ಸಿದ್ದಾಪುರ, ಶ್ರೀ ಸಂಜಯ ಬೆಳೆಯೂರು, ಶ್ರೀ ಚಂದ್ರಹಾಸ ಗೌಡ ಹೊಸಪಟ್ಟಣ, ಶ್ರೀ ಮಹಾಭಲೇಶ್ವರ ಗೌಡ, ಶ್ರೀ ನಾಗೇಶ ಕುಳಿಮನೆ, ಶ್ರೀ ನಾಗೇಂದ್ರ ಮೂರೂರು, ಶ್ರೀ ಶ್ರೀಧರ ಅಣಲಗಾರ ಮತ್ತು ಸ್ತ್ರೀ ಪಾತ್ರದಲ್ಲಿ ಶ್ರೀ ಶಂಕರ ಹೆಗಡೆ ನಿಲ್ಕೋಡು, ಶ್ರೀ ಶಿವಕುಮಾರ ಶಿರಳಗಿ, ಶ್ರೀ ದೀಪಕ ಭಟ ಕುಂಕೀ ಸಹಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಮಹಾಭಲೇಶ್ವರ…