Subscribe to Updates
Get the latest creative news from FooBar about art, design and business.
Author: roovari
12 ಏಪ್ರಿಲ್ 2023, ಕಾಸರಗೋಡು: ಪೆರ್ಲದ ಶಿವಾಂಜಲಿ ಕಲಾ ಕೇಂದ್ರ (ರಿ) ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ‘ಜ್ಞಾನ ವಿಕಾಸ -2023’ ಭರತನಾಟ್ಯ ಕಾರ್ಯಗಾರ ಏಪ್ರಿಲ್ 8 ಮತ್ತು 9ರಂದು ನಡೆಯಿತು. ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ವಿಷ್ಣುಮೂರ್ತಿ ದೇವಸ್ಥಾನದ ಅನ್ನಪೂರ್ಣ ಸಭಾಂಗಣದಲ್ಲಿ ಶಿಕ್ಷಕರೂ, ಭಾಗವತರೂ ಆದ ಡಾ. ಶ್ರೀ ಸತೀಶ್ ಪುಣಿಂಚತ್ತಾಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಭರತನಾಟ್ಯ ಕಲೆಯ ಸಂವರ್ಧನೆಗಾಗಿ ಇಂತಹ ಕಾರ್ಯಾಗಾರವನ್ನು ಆಯೋಜಿಸುತ್ತಿರುವುದು ಸ್ತುತ್ಯಾರ್ಹ. ಕ್ಷೇತ್ರದಲ್ಲಿ ನುರಿತವರಿಂದ ನೀಡಲ್ಪಡುವ ವಿಶೇಷ ನಿರ್ದೇಶನಗಳು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರವಾಗಲಿದೆ” ಎಂದರು. ದೇವಾಲಯದ ಪ್ರಮುಖರಾದ ಶ್ರೀ ಸದಾನಂದ ಕುಡ್ವ ಇವರು ಶುಭಾಶಂಸನೆಗೈದರು. ‘ಜ್ಞಾನ ವಿಕಾಸ -2023’ ಭರತನಾಟ್ಯ ಕಾರ್ಯಗಾರದ ಜವಾಬ್ದಾರಿಯನ್ನು ಹೊತ್ತ ವಿದುಷಿ ಕಾವ್ಯಾ ಭಟ್ ಇವರು ಪುತ್ತೂರಿನ ಅಂಬಿಕಾ ಮಹಾ ವಿದ್ಯಾಲಯದಲ್ಲಿ ಗಣಿತ ಶಾಸ್ತ್ರದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭರತನಾಟ್ಯ ಕಲೆಯನ್ನು ಉಳಿಸಿ ಬೆಳೆಸಿ ಪಸರಿಸುವುದೇ ಶಿವಾಂಜಲಿ ಕಲಾ ಕೇಂದ್ರದ ಉದ್ದೇಶವಾಗಿದೆ. ನೂರಾರು ವಿದ್ಯಾರ್ಥಿಗಳಿಗೆ ಭರತನಾಟ್ಯವನ್ನು ಕಲಿಸುವ ಇವರು…
12 ಏಪ್ರಿಲ್ 2023, ಉಡುಪಿ: ರಥಬೀದಿ ಗೆಳೆಯರು ವತಿಯಿಂದ ರವಿವಾರ ಎಂಜಿಎಂ ಕಾಲೇಜು ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ಹಿರಿಯ ಅಂಕಣಕಾರ ಡಾ. ಬಿ. ಭಾಸ್ಕರ್ ರಾವ್ ಅವರ ‘ಸಾರ್ವಕಾಲಿಕ’ ಪುಸ್ತಕವನ್ನು ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಶಿಕ್ಷಣ, ಮಕ್ಕಳು, ಪರಿಸರ, ಸಂವಿಧಾನ, ಧರ್ಮ, ಪ್ರೀತಿ ಹೀಗೆ ವೈವಿಧ್ಯಮಯ ವಿಷಯ ಆಧರಿಸಿ ಬರೆದ ಹಲವು ಲೇಖನಗಳು ಈ ಕೃತಿಯಲ್ಲಿವೆ. ಇದರ ಆಳ, ಹರವು, ವೈವಿಧ್ಯ ಬೆರಗುಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ ‘ಸಾರ್ವಕಾಲಿಕ’ ಎಂಬ ಶೀರ್ಷಿಕೆ ಅರ್ಥಪೂರ್ಣವಾದುದು ಎಂದು ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ್ ರಾವ್ ಕೃತಿ ಅವಲೋಕನದಲ್ಲಿ ತಿಳಿಸಿದರು. ಎಲ್ಲ ಬರಹಗಳು ಸಾರ್ವಕಾಲಿಕವಾಗದು. ಇತಿಮಿತಿ ಹೊಂದಿದ ಅಂಕಣಕಾರ ಕೆಲವೇ ಲೇಖನಗಳನ್ನು ಸಾರ್ವಕಾಲಿಕ ಮೌಲ್ಯಗಳಿಂದ ಬರೆಯಬಹುದು. ಆಯಾ ಸಂದರ್ಭಕ್ಕೆ ಸರಿಯಾಗಿ ಹೊಸ ಸಮಾಜ ಹೇಗಿರಬೇಕು ಎಂಬ ಸೂಕ್ಷ್ಮ ಸಂವೇದನೆಗಳಿಂದ ಭಾಸ್ಕರ ರಾವ್ ಬರೆದ ಅನೇಕ ಲೇಖನ ಸಾರ್ವಕಾಲಿಕ ಮೌಲ್ಯವುಳ್ಳದ್ದಾಗಿದೆ. ಓದುಗರನ್ನು ಶಿಕ್ಷಿತ, ವಿಚಾರವಂತರನ್ನಾಗಿಸುವ ಅವರ ಪ್ರಯತ್ನ ಶ್ಲಾಘನೀಯ ಎಂದರು. ತಮಗೆ…
12 ಏಪ್ರಿಲ್ 2023, ಮಂಗಳೂರು: ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ಮತ್ತು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಕುತ್ತಾರು ಇವರ ಸಹಯೋಗದಲ್ಲಿ ದಿನಾಂಕ 11-04-2023ರಂದು ನಡೆದ ತುಳು ಹರಿಕಥೆ ಉಚ್ಚಯ-2023ರ ಐದನೇ ದಿನ ಸಮಾರೋಪ ಸಮಾರಂಭವನ್ನು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಉದ್ಘಾಟಿಸಿ ಮಾತನಾಡುತ್ತಾ “ಪುರಾಣ ಕಾಲದ ನಾರದಮುನಿಗಳಿಂದ ತೊಡಗಿ ದಾಸವರೇಣ್ಯರಾದ ಕನಕ – ಪುರಂದರರವರೆಗೆ ದೇವರ ಮಹಿಮೆಗಳನ್ನು ಕೊಂಡಾಡುತ್ತಾ ಭಕ್ತಿ ಪರಂಪರೆಯನ್ನು ಬೆಳಗಿದ ಹರಿದಾಸರುಗಳು ಪೂಜನೀಯರು. ಹರಿಕಥೆಯಿಂದ ಭಕ್ತಿ, ಜ್ಞಾನ ಎರಡೂ ಪಸರಿಸುತ್ತದೆ. ನಮ್ಮ ತುಳು ಭಾಷೆಯಲ್ಲಿ ನಡೆದ ಪಂಚಪರ್ವ ಹರಿಕಥಾ ಉತ್ಸವ ಹರಿಕಥೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು” ಎಂದು ಹೇಳಿದರು. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶಕರಾದ ಶ್ರೀ ಕೆ.ಟಿ.ಸುವರ್ಣರವರು ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ತುಳುವ ಸಿರಿ ಟ್ರಸ್ಟ್(ರಿ.) ಕುಡ್ಲ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಹರಿದಾಸರಿಗೆ ಮಾಲಾರ್ಪಣೆ ಮಾಡಿ ಶಾಲು ಹೊಂದಿಸಿ ಸ್ವಾಗತಿಸಿದರು. ಶ್ರೀಮತಿ ಸೌಮ್ಯ ರವೀಂದ್ರ ಶೆಟ್ಟಿ,…
12 ಏಪ್ರಿಲ್ 2023, ಕಾಸರಗೋಡು : ರಂಗ ಚೇತನ (ರಿ) ಕಾಸರಗೋಡು ಇದರ ನೇತೃತ್ವದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ಸಹಾಬಾಗಿತ್ವದಲ್ಲಿ ದಿನಾಂಕ 11-04-2023ರಂದು ಪೆರ್ಮುದೆ ಶಾಲೆಯಲ್ಲಿ ಜರಗುತ್ತಿರುವ ‘ಚಿತ್ತಾರ’ ರಂಗದ ರಂಗೋಲಿ ತ್ರಿದಿನ ಸಹವಾಸ ಶಿಬಿರದ ಎರಡನೇ ದಿನ ಸಂಪನ್ಮೂಲ ವ್ಯಕ್ತಿಯಾಗಿ ಬಾಗವಹಿಸಿ ಮಾತನಾಡಿದ ಚಲನಚಿತ್ರ ನಟ, ನೀನಾಸಂ ಕಲಾವಿದರಾದ ಬಾಸುಮ ಕೊಡಗುರವರು,”ರಂಗಭೂಮಿ ಚಟುವಟಿಕೆಗಳು ನಿರಂತರವಾಗಿ ಜರಗಬೇಕು. ಆ ಮೂಲಕ ಮಕ್ಕಳ ರಂಗಭೂಮಿ ಬೆಳೆಯಬೇಕು. ಇದಕ್ಕೆ ಸಹವಾಸ ಶಿಬಿರಗಳು ವೇದಿಕೆಯಾಗಲಿ” ಎಂದು ತಿಳಿಸಿದರು. ತದನಂತರ ಅಭಿನಯದ ವಿವಿಧ ಮಜಲುಗಳ ಬಗ್ಗೆ ಪರಿಚಯಿಸಿದರು. ಕಾವ್ಯ ವಾಣಿಶ್ರೀ ಕೊಡಗುರವರಿಂದ ರಂಗ ಗೀತೆಗಳ ಗಾಯನ ಶಿಬಿರಾರ್ಥಿಗಳಿಗೆ ಮುದವನ್ನು ನೀಡಿತು. ಶಿಬಿರದ ಎರಡನೇ ದಿನ ಪ್ರಾರಂಭದಲ್ಲಿ ಶ್ರೀಮತಿ ಗಾಯತ್ರಿ ಟೀಚರ್ ಪೆರ್ಮುದೆಯವರ ನೇತೃತ್ವದಲ್ಲಿ ಸರಳ ವ್ಯಾಯಾಮ ಹಾಗೂ ಯೋಗಾಭ್ಯಾಸ ಜರಗಿತು. ನಂತರ ಮಂಗಳೂರು ಆಕಾಶವಾಣಿಯ ಶ್ರೀಮತಿ ಅಕ್ಷತರಾಜ್ ಪೆರ್ಲ ರವರಿಂದ ಬಾನುಲಿ ರೇಡಿಯೋ ನಾಟಕದ ಬಗ್ಗೆ ಮಾಹಿತಿಯನ್ನು ನೀಡಿದರು. ಮಧ್ಯಾಹ್ನದ ಊಟದ ವಿರಾಮದ…
11 ಏಪ್ರಿಲ್ 2023, ಮಂಗಳೂರು: ವಿಶ್ವಮಾನ್ಯ ಕಲೆಯಾಗಿರುವ ಯಕ್ಷಗಾನದ ಕುರಿತು ಯುವಸಮುದಾಯ ಆಕರ್ಷಿತರಾಗುತ್ತಿರುವುದು ಶ್ಲಾಘನೀಯ. ಶ್ರೀಮಂತ ಕಲೆಯಾದ ಯಕ್ಷಗಾನಕ್ಕೆ ಶೈಕ್ಷಣಿಕ ಸಂಸ್ಥೆಗಳ ಪ್ರೋತ್ಸಾಹ ಅಗತ್ಯ ಎಂದು ಮುಂಬಾಯಿಯ ವಿ.ಕೆ. ಸಮೂಹ ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಅಭಿಪ್ರಾಯಪಟ್ಟರು. ಅವರು ಸುರತ್ಕಲ್ ಗೋವಿಂದದಾಸ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ನಾಲ್ಕುದಿವಸಗಳ ಅಂತರ್ ಕಾಲೇಜು ತೆಂಕುತಿಟ್ಟು ಮತ್ತು ಬಡಗುತಿಟ್ಟು ಯಕ್ಷಗಾನ ಸ್ಪರ್ಧೆ ಯಕ್ಷಯಾನ – 2023ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಜಮಾ ಉಗ್ರಾಣ ವಿಭಾಗದ ಭುಜಬಲಿ ಧರ್ಮಸ್ಥಳ ಮಾತನಾಡಿ ಯಕ್ಷಗಾನ ಕಲೆಯ ಬೆಳವಣಿಗೆಯಲ್ಲಿ ಕಲಾಪೋಷಕರ ಕೊಡುಗೆ ಅಪಾರವಾಗಿದ್ದು ಯುವಕಲಾವಿದರು ಸತತ ಅಭ್ಯಾಸದಿಂದ ಪ್ರಬುದ್ಧತೆಯನ್ನು ಗಳಿಸಬೇಕೆಂದರು. ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿಪಿ. ಪಣಂಬೂರು ವೆಂಕಟ್ರಾಯ ಐತಾಳ ಯಕ್ಷಗಾನ ಅಧ್ಯಯನ ಕೇಂದ್ರ ಪಣಂಬೂರು ಮಕ್ಕಳ ಮೇಳದ ಗುರು ಶಂಕರ ನಾರಾಯಣ ಮೈರ್ಪಾಡಿ, ಪಟ್ಲಫೌಂಡೇಶನ್ ಸುರತ್ಕಲ್ ಘಟಕದ ಕಾರ್ಯದರ್ಶಿ ಗಂಗಾಧರ ಪೂಜಾರಿ…
11 ಏಪ್ರಿಲ್ 2023, ಮಂಗಳೂರು: ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ಮತ್ತು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಕುತ್ತಾರು ಇವರ ಸಹಯೋಗದಲ್ಲಿ ನಡೆದ ತುಳು ಹರಿಕಥೆ ಉಚ್ಚಯ-2023ರ ನಾಲ್ಕನೇ ದಿನದ ಉದ್ಘಾಟನೆಯನ್ನು ದೇರಳಕಟ್ಟೆಯ ಹೋಟೆಲ್ ದಿ ಕಂಫರ್ಟ್ ಇನ್ ಇದರ ಮಾಲಕರಾದ ಲ| ಚಂದ್ರಹಾಸ್ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ವೇದಿಕೆಯಲ್ಲಿ ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ವಿವೇಕಾನಂದ ಸನಿಲ್ ಟ್ರಸ್ಟ್ ನ ಕೋಶಾಧಿಕಾರಿ ಕಲಾಸಾರಥಿ ಶ್ರೀ ತೋನ್ಸೆ ಪುಷ್ಕಳ್ ಕುಮಾರ್ ತುಳುವ ಸಿರಿ ಟ್ರಸ್ಟ್ ನ ಗೌರವ ಸಲಹೆಗಾರರಾದ ಶ್ರೀ ಕೆ. ರವೀಂದ್ರ ರೈ ಕಲ್ಲಿಮಾರ್ ಟ್ರಸ್ಟ್ ನ ಉಪಾಧ್ಯಕ್ಷರಾದ ವಿದ್ಯಾಧರ ಶೆಟ್ಟಿ ಮತ್ತು ಸುಧಾ ಸುರೇಶ್, ಜತೆ ಕಾರ್ಯದರ್ಶಿ ರವಿಕುಮಾರ್ ಕೋಡಿ ಟ್ರಸ್ಟ್ ನ ಸಂಚಾಲಕರಾದ ಸತೀಶ್ ದೀಪಂ, ಅನಂತ ಕೃಷ್ಣ ಯಾದವ್, ಸುರೇಶ್ ಶೆಟ್ಟಿ ಅಂಬ್ಲಮೊಗರು, ಸಂಜೀವ…
11 ಏಪ್ರಿಲ್ 2023, ಮಂಗಳೂರು: ಮಕ್ಕಳ ಶಿಕ್ಷಣದಲ್ಲಿ 25 ವರ್ಷಗಳ ಸಂಶೋಧನಾಧಾರಿತವಾದ ತನ್ನದೇ ವಿನೂತನ ಪರಿಕಲ್ಪನೆಗಳನ್ನು ಹೊಂದಿರುವ ಮತ್ತು ಅವುಗಳನ್ನು ಅನೌಪಚಾರಿಕ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಪ್ರಯೋಗಕ್ಕೆ ಒಳಪಡಿಸಿ ಅಪೂರ್ವ ಫಲಿತಾಂಶವನ್ನು ದಾಖಲಿಸಿರುವ ಗೋಪಾಡ್ಕರ್ ಸ್ವರೂಪ ಅಧ್ಯಯನ ಕೇಂದ್ರದಿಂದ ನಗರದ ಕೋಡಿಯಾಲ್ ಬೈಲಿನಲ್ಲಿ ಎಪ್ರಿಲ್ 23ರಿಂದ ಮೇ 7ರವರೆಗೆ 15 ದಿನಗಳ ‘ವಿಶೇಷ ಮೆಮೊರಿ ಕ್ಯಾಂಪ’ನ್ನು ಹಮ್ಮಿಕೊಳ್ಳಲಾಗಿದೆ. ನಾಲ್ಕನೇ ತರಗತಿಯಿಂದ ಆರಂಭಿಸಿ ಯಾವುದೇ ತರಗತಿಯ, ಪಿಯುಸಿ, ಡಿಗ್ರಿ ಯಾವುದೇ ವಿಭಾಗದ ವಿದ್ಯಾರ್ಥಿಗಳು, ಹೆತ್ತವರು, ಪೋಷಕರು, ಶಿಕ್ಷಕರು ಭಾಗವಹಿಸಬಹುದು. ಶಿಬಿರದಲ್ಲಿ ಹತ್ತು ಚಟುವಟಿಕೆಗಳ ಮೂಲಕ ಹತ್ತು ಸ್ಮರಣ ತಂತ್ರಗಳಲ್ಲಿ ವಿದ್ಯಾರ್ಥಿಗಳ ಉನ್ನತ ಕಲಿಕೆಗೆ ಅನುಕೂಲವಾಗುವಂತೆ ತರಬೇತಿಯನ್ನು ನೀಡಲಾಗುವುದು. ಅವರ ಮಾನಸಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಒತ್ತು ಕೊಡುವುದರಿಂದ ಬೌದ್ಧಿಕ ಕಲಿಕೆಯು ಸುಲಲಿತವಾಗುವುದು. ಈ ಶಿಬಿರದಲ್ಲಿ ಏನು ಕಲಿತಿದ್ದೀರಿ ಎನ್ನುವುದಕ್ಕಿಂತ ಯಾವುದರಲ್ಲಿ ಬದಲಾಗಿದ್ದೀರಿ ಎನ್ನುವುದು ಹೆಚ್ಚು ಮಹತ್ವದ್ದಾಗಲಿದೆ. ದೂರದವರಿಗೆ ಪಿಜಿ ಅಥವಾ ಹಾಸ್ಟೆಲ್ ವ್ಯವಸ್ಥೆ ಇದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಗೋಪಾಡ್ಕರ್ 9845203472 ಮತ್ತು…
11 ಏಪ್ರಿಲ್ 2023, ಬೆಂಗಳೂರು: ದೃಶ್ಯ (ರಿ.) ಬೆಂಗಳೂರು ಪ್ರಸ್ತುತ ಪಡಿಸುವ ಟಿ.ಪಿ.ಕೈಲಾಸಂರವರ ದಾಕ್ಷಾಯಿಣಿ ಭಟ್ ಎ. ವಿನ್ಯಾಸ ಹಾಗೂ ನಿರ್ದೇಶನದ ನಾಟಕ “ಪೋಲೀ ಕಿಟ್ಟೀ” ಇದೇ ಬರುವ ದಿನಾಂಕ 13-04-2023 ಗುರುವಾರದಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಸಂಜೆ 7 ಗಂಟೆಗೆ ಪ್ರದರ್ಶನಗೊಳ್ಳಲಿದೆ. ನಾಟಕದ ಬಗ್ಗೆ: ಟಿ.ಪಿ. ಕೈಲಾಸಂರವರು ತಮ್ಮ ವಿನೋದಾತ್ಮಕ ನಾಟಕಗಳಿಗೆ ಹೆಸರುವಾಸಿ. ಕಂಪನಿ ನಾಟಕಗಳು ಉತ್ತುಂಗದಲ್ಲಿದ್ದ ಕಾಲದಲ್ಲಿ ವಾಸ್ತವಿಕ ನಾಟಕಗಳ ಮೂಲಕ ತಮ್ಮದೇ ಛಾಪನ್ನು ಮೂಡಿಸಿದ ಶ್ರೇಯ ಇವರಿಗೆ ಸಲ್ಲುತ್ತದೆ. ಪೋಲೀ ಕಿಟ್ಟೀಯು ಈ ರೀತಿಯ ವಿನೋದಾತ್ಮಕ ವಿಡಂಬನಾ ನಾಟಕಗಳಲ್ಲಿ ಒಂದು. ನಾಟಕದ ವಸ್ತುವು ಇಂದಿಗೂ ಪ್ರಸ್ತುತವಾಗಿದ್ದು, ಇಂದಿನ ಶಿಕ್ಷಣವನ್ನು ಲೇವಡಿ ಮಾಡುತ್ತದೆ. ಜ್ಞಾನವೆಂಬುದು ಬರೀ ಪುಸ್ತಕದಲ್ಲಿ ಇರೋದಲ್ಲ, ನಮ್ಮ ಸುತ್ತಮುತ್ತಲಿನ ವಾಸ್ತವ ಸಂಗತಿಗಳನ್ನು ಅರ್ಥಮಾಡಿಕೊಳ್ಳಬೇಕು ಅದೇ ನಿಜವಾದ ಶಿಕ್ಷಣ. ಶಿಸ್ತು ಒಳ್ಳೆಯದು, ಆದರೆ ಬಹಿರಂಗವಾದ ಹೇಳಿಕೆಗಳಿಂದ ಅದು ಬರುವುದಿಲ್ಲ, ಅದು ಅಂತರಂಗದಿಂದ ಒಡಮೂಡಬೇಕು ಎಂಬುದನ್ನು ಮನೋಜ್ಞವಾಗಿ ಈ ಪ್ರಯೋಗವು ನಮ್ಮೊಳಗಿನ ಸಾಮಾಜಿಕ ಕಳಕಳಿಯನ್ನು ಪ್ರಶ್ನಿಸುತ್ತದೆ. ನಿರ್ದೇಶಕರ ಬಗ್ಗೆ: 2013-2014ನೇ…
11 ಏಪ್ರಿಲ್ 2023, ಮಂಗಳೂರು: ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ಮತ್ತು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಕುತ್ತಾರು ಇವರ ಸಹಯೋಗದಲ್ಲಿ ನಡೆದ ತುಳು ಹರಿಕಥೆ ಉಚ್ಚಯ-2023ರ ಮೂರನೇ ದಿನದ ಉದ್ಘಾಟನೆಯನ್ನು ಆಳ್ವಾಸ್ ಸ್ವೀಟ್ಸ್ ಇದರ ಮಾಲಕರಾದ ಶ್ರೀ ಗಿರೀಶ್ ಆಳ್ವ ಮೋರ್ಲ ಇವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ವೇದಿಕೆಯಲ್ಲಿ, ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಸಮಿತಿಯ ಗೌರವ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಕೊಟ್ಟಾರಿ, ಟ್ರಸ್ಟ್ ನ ಕೋಶಾಧಿಕಾರಿ ಕಲಾಸಾರಥಿ ಶ್ರೀ ತೋನ್ಸೆ ಪುಷ್ಕಳ್ ಕುಮಾರ್, ತುಳುವ ಸಿರಿ ಟ್ರಸ್ಟ್ ನ ಉಪಾಧ್ಯಕ್ಷರಾದ ವಿದ್ಯಾಧರ ಶೆಟ್ಟಿ ಮತ್ತು ಸುಧಾ ಸುರೇಶ್, ಜತೆ ಕಾರ್ಯದರ್ಶಿ ರವಿಕುಮಾರ್ ಕೋಡಿ, ಸಂಚಾಲಕರಾದ ಸತೀಶ್ ದೀಪಂ, ಸುರೇಶ್ ಶೆಟ್ಟಿ ಅಂಬ್ಲಮೊಗರು ಉಪಸ್ಥಿತರಿದ್ದರು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಬಳಿಕ ಹರಿದಾಸರಾದ ದೇವಕೀತನಯ ಕೂಡ್ಲು…
11 ಏಪ್ರಿಲ್ 2023, ಬೆಂಗಳೂರು: ಬಾದಲ್ ಸರ್ಕಾರ್ ಅವರ ನಾಟಕವೆಂದರೆ ಹಾಗೆಯೇ…..ಮಾತಿನ ಬುಡಬುಡಿಕೆ…..ಮಾತು, ಮಾತು, ಮಾತು….ವಾಸನೆಯ ಬಾಯಿಯ ಮಾತುಗಳು.. ತಲೆ ಚಿಟ್ಟು ಹಿಡಿಸುವ ಮಾತು… ರಂಗಕ್ರಿಯೆಯೇ ನಡೆಯುವುದಿಲ್ಲವೇನೋ ಅನ್ನುವಷ್ಟು ಮಾತು.. ನಡೆದರೂ ಬಹಳ ನಿಧಾನಗತಿಯ, ನಿಂತಲ್ಲೇ ಕಾಲ ನಿಲ್ಲುವಷ್ಟು ನಿಧಾನದ ಕ್ರಿಯೆಗಳು… ಇಲ್ಲಿ, ಈ ರೂಪಾಂತರದ ನಾಟಕದಲ್ಲಿಯೂ ಹಾಗೆಯೇ….. ಮಾತಿನ ಧಾರಾಕಾರದ ಮಳೆಯನ್ನೇ ಸುರಿಸಿದ್ದಾರೆ ಲಕ್ಷ್ಮೀಪತಿ ಕೋಲಾರ ಅವರು. ಆದರೆ ಇಲ್ಲಿ ಮಾತು ಮತ್ತು ರಂಗಕ್ರಿಯೆ ಬಹಳ ವೇಗ ಪಡೆದುಕೊಂಡು ನಡೆಯುತ್ತದೆ…ಪ್ರೇಕ್ಷಕ ಒಂದು ಕ್ಷಣ ಮೈಮರೆತರ, ಒಂದು ಯುಗದಷ್ಟು ಮಾತುಗಳ ಅರ್ಥವನ್ನು ಕಳೆದುಕೊಂಡಿರುತ್ತಾನೆ.. ಯಾಕೆ ಇಷ್ಟು ವೇಗ? ಲಕ್ಷ್ಮೀಪತಿ ಅವರ ಆ ವೇಗದ ಮಾತುಗಾರಿಕೆಗೆ ಕಾರಣವಿದೆ…. ಮನುಷ್ಯ ಕುಲ ಆರಂಭದ – ಅಂದರೆ ಸುಮಾರು ಐದು ಸಾವಿರ ವರುಷಕ್ಕೂ ಹಿಂದಿನ ಇತಿಹಾಸದ, ಮತ, ಧರ್ಮ, ಸಂಸ್ಕೃತಿಯ ಇತಿಹಾಸವನ್ನು ನಿಗದಿತ ಅವಧಿಯಲ್ಲಿ ಹೇಳಬೇಕಾದ ಅವಸರವಿದೆ…. ಯಾವುದೂ ತಪ್ಪಬಾರದು, ಎಲ್ಲದರ ಕಾರಣ ಮತ್ತು ಅರ್ಥವನ್ನು ಎಲ್ಲರಿಗೂ ತಲುಪಿಸುವದಷ್ಟೇ ಅಲ್ಲ, ಅದರ ಅರ್ಥವನ್ನೂ ಮಾಡಿಸಬೇಕು ಎನ್ನುವ ಕಾತುರ…