Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಯಕ್ಷ ಶಿಕ್ಷಣ ಟ್ರಸ್ಟ್ ಪ್ರಾಯೋಜಿತ ಈ ಸಾಲಿನ ಯಕ್ಷ ಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭವು ದಿನಾಂಕ 16ಜುಲೈ 2025ರಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಡಾಡಿ-ಮತ್ಯಾಡಿ ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಶಾಲೆಯ ಪ್ರಾಂಶುಪಾಲರಾದ ಶೈಲಾ. ಎಂ. ಶೇಟ್ ಮಾತನಾಡಿ “ಸರ್ವಾಂಗಸುಂದರ ಯಕ್ಷಗಾನ ಕಲೆಯ ಅಭ್ಯಾಸದಿಂದ ನಮ್ಮ ಬದುಕು ಸರ್ವಾಂಗ ಸುಂದರವಾಗುತ್ತದೆ. ಯಕ್ಷಗಾನ ಶಿಕ್ಷಣ ಎಳವೆಯಲ್ಲಿಯೇ ಸಿಗುವುದರಿಂದ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಅಂಕುರಿಸುತ್ತದೆ” ಎಂದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಗಣೇಶ್ ಮಾತನಾಡಿ ಯೋಗ್ಯ ಗುರುಗಳನ್ನು ನಮ್ಮ ಶಾಲೆಗೆ ಒದಗಿಸಿದ ಟ್ರಸ್ಟ್‌ನ್ನು ಶ್ಲಾಘಿಸಿದರು. ಯಕ್ಷ ಗುರು-ಭಾಗವತರಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರು ಯಕ್ಷಗಾನ ಕಲೆಯ ಶ್ರೇಷ್ಟತೆ, ಯಕ್ಷ ಶಿಕ್ಷಣದ ಮಹತ್ವಿಕೆ, ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್ ಹಾಗೂ ಕಲಾರಂಗದ ಕಾರ್ಯವೈಖರಿಯನ್ನು ಬಣ್ಣಿಸಿದರು. ಚಿತ್ರ ಕಲಾ ಶಿಕ್ಷಕಿ ಪವಿತ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸುಮಾರು ಐವತ್ತು ವಿದ್ಯಾರ್ಥಿಗಳು ಈ ಸಲದ ಯಕ್ಷ ಶಿಕ್ಷಣದ ಕಲಿಕಾರ್ಥಿಗಳಾದರು.
ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ವಿಟ್ಲ ಘಟಕದ ವತಿಯಿಂದ 2ನೇ ವರ್ಷದ ಉಚಿತ ಯಕ್ಷಗಾನ ನಾಟ್ಯ ತರಗತಿಯ ಆರಂಭೋತ್ಸವವು ದಿನಾಂಕ 10 ಜುಲೈ 2025ರಂದು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕೇಪು ಇಲ್ಲಿ ನಡೆಯಿತು. ಪಟ್ಲ ಫೌಂಡೇಶನ್ ವಿಟ್ಲ ಘಟಕದ ಪ್ರಧಾನ ಕಾರ್ಯದರ್ಶಿಯವರಾದ ಪೂವಪ್ಪ ಶೆಟ್ಟಿ ಅಳಿಕೆ ಇವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಯಕ್ಷಗಾನದಿಂದ ಮಕ್ಕಳ ದೈಹಿಕ ಮಾನಸಿಕ ಬೆಳವಣಿಗೆ ಆಗುತ್ತದೆ ಉತ್ತಮ ಸಂಸ್ಕಾರ ಹೊಂದಬಹುದು ಎಂದು ತಿಳಿಸುತ್ತಾ, ಪಟ್ಲ ಫೌಂಡೇಶನ್ನಿನ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದರು. ಈ ಕಾರ್ಯಕ್ರಮದಲ್ಲಿ ಪಟ್ಲ ಫೌಂಡೇಶನ್ ವಿಟ್ಲ ಘಟಕದ ಸಂಚಾಲಕರಾದ ಅರವಿಂದ್ ರೈ ಮೂರ್ಜೆ ಬೆಟ್ಟು, ಸಹಸಂಚಾಲಕ ಭಾಸ್ಕರ ಶೆಟ್ಟಿ, ಯಕ್ಷಗಾನ ಗುರುಗಳಾದ ಗಣೇಶ್ ಆಚಾರ್ಯ ಕುಂದಲಕೋಡಿ, ಶ್ರೀ ಉಳ್ಳಾಳ್ತಿ ಸೇವಾ ಟ್ರಸ್ಟ್ ಗೌರವಾಧ್ಯಕ್ಷರಾದ ಪ್ರಕಾಶ್ ರೈ ಕಲ್ಲಂಗಳ, ಕೋಶಾಧಿಕಾರಿ ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ, ಕಾರ್ಯದರ್ಶಿ ಉಮೇಶ್ ಗೌಡ ಕೊರತಿಗದ್ದೆ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ವೆಂಕಟ ರಾಘವೇಂದ್ರ ಸ್ವಾಮಿ, ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಎಸ್.ಡಿ.ಎಂ.ಸಿ.…
ಬೆಂಗಳೂರು : ಖ್ಯಾತ ನಾಟ್ಯಗುರು ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ವಿದುಷಿ ಜ್ಯೋತಿ ಪಟ್ಟಾಭಿರಾಮ್ ಅವರು ನೃತ್ಯ ಕ್ಷೇತ್ರದಲ್ಲಿ ಮಾಡಿರುವ ಹಲವು ದಶಕಗಳ ಸಾಧನೆ ಅನುಪಮ. ಸಂಸ್ಥೆ, ಕೇವಲ ಯಾಂತ್ರಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ, ಹೊಸತನ್ನು ಸಾಧಿಸುವ ತುಡಿತ- ಇಡುತ್ತಿರುವ ಪ್ರಗತಿಪರ ಹೆಜ್ಜೆಗಳು ವಿಶಿಷ್ಟವಾದುದು. ಒಂದು ನೃತ್ಯ ಸಂಸ್ಥೆ ನೀಡುವ ನೃತ್ಯ ಶಿಕ್ಷಣ, ಕಾರ್ಯಾಗಾರಗಳು, ಬದ್ಧ-ಸಮರ್ಥ ತರಬೇತಿ ನೀಡಿ, ಉತ್ತಮ ಕಲಾವಿದರನ್ನು ರೂಪಿಸಿ, ರಂಗದ ಮೇಲೆ ಯಶಸ್ವಿಯಾಗಿ ನೃತ್ಯಾರ್ಪಣೆ-ರಂಗಪ್ರವೇಶ ಮಾಡಿಸುವುದು, ಮುಂತಾದ ಕಾರ್ಯ ಚಟುವಟಿಕೆಗಳೊಂದಿಗೆ, ‘ಸಾಧನ ಸಂಗಮ’ ಹೊಸ ಆಯಾಮದಲ್ಲಿ ಕ್ರಿಯಾತ್ಮಕವಾಗಿ ಮುನ್ನಡೆಯುವ ಗುರಿ ಹಾಕಿಕೊಂಡಿದೆ ಎಂದರೆ ಅತಿಶಯೋಕ್ತಿಯಲ್ಲ. ಈ ನಿಟ್ಟಿನಲ್ಲಿ ಕಳೆದ 4 ದಶಕಗಳಿಂದ ವಿ. ಜ್ಯೋತಿ ಪಟ್ಟಾಭಿರಾಮ್ ಅವರ ನೇತೃತ್ವದಲ್ಲಿ ‘ಸಾಧನ ಸಂಗಮ ಟ್ರಸ್ಟ್’ ನೃತ್ಯ ಸಂಸ್ಥೆಯು ನೃತ್ಯ ಕ್ಷೇತ್ರದಲ್ಲಿ ಸಾಧಿಸುತ್ತಿರುವ ಹೊಸ ಮೈಲಿಗಲ್ಲುಗಳ ಈವರೆಗಿನ ಸೃಜನಾತ್ಮಕ ಚಟುವಟಿಕೆಗಳು ಗಮನಾರ್ಹ. ಈ ನೃತ್ಯ ಶಾಲೆಯು ವರ್ಷ ಪೂರ್ತಿ ಒಂದಲ್ಲ ಒಂದು ಪ್ರಯೋಗಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುತ್ತದೆ, ಸದ್ದಿಲ್ಲದೆ ವಿಶಿಷ್ಟವಾಗಿ ಕಾರ್ಯೋನ್ಮುಖವಾಗಿರುತ್ತದೆ. ಅದರಲ್ಲೂ ಸಾಧನ…
ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಶಾಖೆ ಮತ್ತು ಆರ್ಟ್ ಕೆನರಾ ಟ್ರಸ್ಟ್ ಇದರ ಸಹಯೋಗದೊಂದಿಗೆ ಛಾಯಾಚಿತ್ರ ಪ್ರದರ್ಶನವನ್ನು ದಿನಾಂಕ 19 ಜುಲೈ 2025ರಂದು ಸಂಜೆ 5-30 ಗಂಟೆಗೆ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಮಂಗಳೂರು ಟುಡೆ ಪತ್ರಿಕೆಯ ವಿ.ಯು. ಜಾರ್ಜ್ ಇವರ ಉಪಸ್ಥಿತಿಯಲ್ಲಿ ಈ ಪ್ರದರ್ಶನ ಉದ್ಘಾಟನೆಗೊಳ್ಳಲಿದ್ದು, ದಿನಾಂಕ 26 ಜುಲೈ 2025ರ ತನಕ ಬೆಳಗ್ಗೆ 11-00 ಗಂಟೆಯಿಂದ ಸಂಜೆ 7-00 ಗಂಟೆ ತನಕ ಪ್ರದರ್ಶನವು ತೆರೆದಿರುತ್ತದೆ.
ಮಂಗಳೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಪ್ಸ್ ಕಾಲೇಜು ಮಂಗಳೂರು ಇದರ ಸಹಕಾರದೊಂದಿಗೆ ಖ್ಯಾತ ವಚನ ಸಾಹಿತಿ, ಕವಿ ಸಂಶೋಧಕ ಫ. ಗು. ಹಳಕಟ್ಟಿ ಅವರ ಜನ್ಮದಿನಾಚಾರಣೆ ಕಾರ್ಯಕ್ರಮವು ದಿನಾಂಕ 11 ಜುಲೈ 2025ರ ಬುಧವಾರ ಮ್ಯಾಪ್ಸ್ ಪಿ.ಯು. ಕಾಲೇಜಿನಲ್ಲಿ ನಡೆಯಿತು. ಸಂಸ್ಥೆಯ ಉಪಪ್ರಾಂಶುಪಾಲ ಡಾ. ಪ್ರಭಾಕರ್ ನೀರುಮಾರ್ಗ ಮಾತನಾಡಿ “ಫ. ಗು. ಹಳಕಟ್ಟಿಯವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದವರು” ಎಂದರು. ಅಧ್ಯಕ್ಷತೆ ವಹಿಸಿದ್ದ ಮ್ಯಾಪ್ಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಕುಮಾರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ಆಗಮಿಸಿದ ಪದುವಾ ಕಾಲೇಜಿನ ಸಹಾಯಕಿ ಪ್ರಾಧ್ಯಾಪಿಕೆ ಅಕ್ಷಯಾ ಶೆಟ್ಟಿ ಮಾತನಾಡಿ “ಫ. ಗು. ಹಳಕಟ್ಟಿಯವರು ಓರ್ವ ಶ್ರೇಷ್ಠ ವಚನ ಸಾಹಿತಿ, ಕವಿಗಳಾಗಿದ್ದು ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುತ್ತಾರೆ. ಅವರ ಬದುಕು ಹಾಗೂ ಸಾಧನೆಗಳು ಇಂದಿನವರೆಗೆ ಮಾದರಿ” ಎಂದರು. ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಾಯಕ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ಪ್ರಶಸ್ತಿಗಳಲ್ಲೊಂದಾದ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 19 ಜುಲೈ 2025ರ ಶನಿವಾರ ಸಂಜೆ 5-00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ದಿವ್ಯಸಾನಿಧ್ಯ ಮತ್ತು ಉದ್ಘಾಟನೆಯನ್ನು ಶ್ರೀ ವಿಶ್ವ ಒಕ್ಕಲಿಗರ ಮಹಾಸಂಸ್ಥನ ಮಠ ಬೆಂಗಳೂರಿನ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿಶ್ಚಲಾನಂದ ಮಹಾಸದ್ವಾಮೀಜಿಯವರು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ವಹಿಸಲಿದ್ದಾರೆ. ಪ್ರಶಸ್ತಿ ಪ್ರದಾನವನ್ನು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಡಿ. ಡೊಮಿನಿಕ್ ಅವರು ನಡೆಸಿಕೊಡಲಿದ್ದು, ಹಿರಿಯ ಸಾಹಿತಿಗಳಾದ ಕುಂಪನೀಸೀಮೆ ಪಿ.ಸಿ.ಅಂಥೋನಿಸ್ವಾಮಿ ಮತ್ತು ಡಾ.ಬಿ.ಎಸ್.ತಲ್ವಾಡಿಯವರು ಪುರಸ್ಕಾರವನ್ನು ಸ್ವೀಕರಿಸಲಿದ್ದಾರೆ. ದತ್ತಿದಾನಿಗಳ ಪರವಾಗಿ ರೀಟಾರೀನಿಯವರು ಉಪಸ್ಥಿತರಿರುತ್ತಾರೆ. ಫಾದರ್ ಚೌರಪ್ಪ ಸೆಲ್ವರಾಜ್ ಸಾಹಿತ್ಯಕ, ಸಾಂಸ್ಕೃತಿಕ ಬಳಗದಲ್ಲಿ ಚಸರಾ ಎಂದೇ ಪರಿಚಿತರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಚಸರಾ ಚರ್ಚ್ಗಳಲ್ಲಿ ಕನ್ನಡ ಬಳಕೆ ಮತ್ತು…
ಕಾಸರಗೋಡು : ಕೀರ್ತಿಶೇಷ ಭಾಗವತ ನೀಲಾವರ ಲಕ್ಷ್ಮೀನಾರಾಯಣ ರಾಯರ ಜನ್ಮ ಶತಮಾನೋತ್ಸವ 2025 ಸಂಕೀರ್ತನ 12 ತಿಂಗಳ ಸರಣಿ ಕಾರ್ಯಕ್ರಮಗಳ ಮಾಲಿಕೆಯಲ್ಲಿ ಜುಲೈ ತಿಂಗಳ ಕಾರ್ಯಕ್ರಮದಲ್ಲಿ ‘ಯಕ್ಷಗಾನ ತಾಳಮದ್ದಳೆ’ಯು ದಿನಾಂಕ 19 ಜುಲೈ 2025ರಂದು ಸಂಜೆ 2-00 ಗಂಟೆಗೆ ಕಾಸರಗೋಡಿನ ಕೂಡ್ಲು ಶ್ರೀ ವಿಷ್ಣುಮಂಗಳ ದೇವಸ್ಥಾನದಲ್ಲಿ ನಡೆಯಲಿದೆ. ಹಲಸಿನಹಳ್ಳಿ ನರಸಿಂಹ ಶಾಸ್ತ್ರೀ ವಿರಚಿತ ‘ಜಾಂಬವತಿ ಕಲ್ಯಾಣ’ ಪ್ರಸಂಗದ ಹಿಮ್ಮೇಳದಲ್ಲಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಗೋಪಾಲಕೃಷ್ಣ ನಾವಡ ಮಧೂರು, ಮುರಳಿ ಮಾಧವ ಮಧೂರು ಹಾಗೂ ಮುಮ್ಮೇಳದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗ ಭಟ್ಟ ಮಧೂರು ಮತ್ತು ರವಿರಾಜ ಪನೆಯಾಲ ಸಹಕರಿಸಲಿದ್ದಾರೆ.
ಬೆಂಗಳೂರು : ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟ್ (ರಿ.) ವೈಟ್ ಫೀಲ್ಡ್ ಬೆಂಗಳೂರು, ಮಕ್ಕಳ ಸಾಹಿತ್ಯ ಮಾಸಿಕ ‘ತೊದಲ್ನುಡಿ’, ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾಸರಗೋಡು ಇವರ ಸಂಯುಕ್ತಾಶ್ರಯದಲ್ಲಿ ‘ಕೇರಳ ಕರ್ನಾಟಕ ಕನ್ನಡ ನುಡಿ ಸಂಭ್ರಮ’ವನ್ನು ದಿನಾಂಕ 20 ಜುಲೈ 2025ರಂದು ಬೆಳಗ್ಗೆ 10-00 ಗಂಟೆಗೆ ಬೆಂಗಳೂರಿನ ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟ್ ಆವರಣದಲ್ಲಿ ಆಯೋಜಿಸಲಾಗಿದೆ. ತೊದಲ್ನುಡಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಸುಷ್ಮಾ ಶಂಕರ್ ಇವರು ಅಧ್ಯಕ್ಷತೆ ವಹಿಸಲಿದ್ದು, ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಮತ್ತು ಸಂಧ್ಯಾರಾಣಿ ಟೀಚರ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಪತ್ರಕರ್ತ ಗಣೇಶ್ ಕಾಸರಗೋಡು, ಚಲನಚಿತ್ರ ಪತ್ರಕರ್ತ ಸುಬ್ರಹ್ಮಣ್ಯ ಬಾಡೂರು ಮತ್ತು ಪ್ರಾಧ್ಯಾಕಪರಾದ ಡಾ. ಬಾಲಕೃಷ್ಣ ಎಸ್. ಮದ್ದೋಡಿ ಇವರಿಗೆ ‘ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ, ಕರ್ಣಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ…
‘ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?’ ಇತ್ತೀಚಿಗೆ ಬಿಡುಗಡೆಯಾದ ಡಾ. ಬಿ. ಜನಾರ್ದನ ಭಟ್ ಇವರ ಹೊಸ ಕಾದಂಬರಿ. ಹಲವು ವೈಶಿಷ್ಟ್ಯಗಳನ್ನೊಳಗೊಂಡ ಇದು ತನ್ನ ಗಟ್ಟಿಯಾದ ಚೌಕಟ್ಟಿನೊಳಗಿನ ಅನೇಕ ಚಿಂತನಾರ್ಹ ವಿಚಾರಗಳಿಂದ ಮೈದುಂಬಿ ನಿಂತಿದೆ. ಸಾಂಸ್ಕೃತಿಕ-ಐತಿಹಾಸಿಕ ಪರಿಪ್ರೇಕ್ಷ್ಯದಲ್ಲೇ ತಮ್ಮ ಕಥನಗಳನ್ನು ಕಟ್ಟಿಕೊಡುವ ಜನಾರ್ದನ ಭಟ್ ಇಲ್ಲಿಯೂ ಅದೇ ವಿಧಾನವನ್ನು ಮುಂದುವರಿಸಿದ್ದಾರೆ. ಇಲ್ಲಿ ಅದಕ್ಕೆ ಆಧ್ಯಾತ್ಮಿಕತೆಯೂ ಸೇರಿಕೊಂಡಿದೆ ಅನ್ನುವುದು ಒಂದು ವಿಶೇಷ. ಅಲ್ಲದೆ ಅಂದಿನ ಬ್ರಾಹ್ಮಣ ಸಮಾಜದಲ್ಲಿನ ಪದ್ಧತಿ, ನಂಬಿಕೆ, ಸಂಪ್ರದಾಯ, ಆಚರಣೆಗಳನ್ನೂ ಅವರು ಅಲ್ಲಲ್ಲಿ ಸಾಂದರ್ಭಿಕವಾಗಿ ಚಿತ್ರಿಸುತ್ತಾರೆ. ಉಡುಪಿಯ ಸಮೀಪದ ಬೆಳಂಜಾಲು ಅನ್ನುವ ಒಂದು ಗ್ರಾಮೀಣ ಪ್ರದೇಶವು ಕಥೆಯ ಕೇಂದ್ರ. ಕಥಾನಾಯಕ ಬೆಳಂಜಾಲು ಅನಂತರಾಮ ಉಡುಪರು ಹುಟ್ಟಿ ಬೆಳೆದ ಮನೆಯೇ ಈ ಕಾದಂಬರಿಯ ಶೀರ್ಷಿಕೆಯಲ್ಲಿ ಉಲ್ಲೇಖವಾಗಿರುವ ಮನೆ. (ಮನೆ ಅನ್ನುವುದು ಮನುಷ್ಯನ ದೇಹವೇ ಅನ್ನುವ ಅರ್ಥ ಆಮೇಲಿನದ್ದು.) ಕಥೆ ನಡೆಯುವ ಕಾಲ 20ನೇ ಶತಮಾನದ ಆದಿಭಾಗದಿಂದ 1993ರವರೆಗೆ. ವಸಾಹತುಶಾಹಿ ಮತ್ತು ಸ್ವತಂತ್ರ ಭಾರತ ಎರಡೂ ಇಲ್ಲಿವೆ. ಕಟ್ಟಾ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ವೇದ, ಅಗಮ,…
ಮೈಸೂರು : ನಟನ ರಂಗಶಾಲೆಯ ವತಿಯಿಂದ ನಡೆಯುವ ಸುಬ್ಬಣ್ಣ ಸ್ಮರಣೆ 2025 ಪ್ರಯುಕ್ತ ನಟನ ಪಯಣ ರೆಪರ್ಟರಿ ತಂಡದ ಪ್ರಯೋಗ ‘ಕಣಿವೆಯ ಹಾಡು’ ನಾಟಕ ಪ್ರದರ್ಶನವನ್ನು ದಿನಾಂಕ 20 ಜುಲೈ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕದ ಮೂಲ ರಚನೆ ಅತೊಲ್ ಫ್ಯೂಗಾರ್ಡ್ ಇವರದ್ದು, ಕನ್ನಡಕ್ಕೆ ಡಾ. ಮೀರಾ ಮೂರ್ತಿ ಅನುವಾದಿಸಿದ್ದು, ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಇವರು ಸಂಗೀತ ನೀಡಿದ್ದು, ಡಾ. ಶ್ರೀಪಾದ ಭಟ್ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೇಘ ಸಮೀರ ಮತ್ತು ದಿಶಾ ರಮೇಶ್ ಅಭಿನಯಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327 ಮತ್ತು 9845595505 ಸಂಪರ್ಕಿಸಿರಿ.