Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಸಮರಸ ಫೌಂಡೇಷನ್ ಫಾರ್ ಆರ್ಟ್ಸ್ ಪ್ರಸ್ತುತ ಪಡಿಸುವ ‘ಶ್ರಾವಣ ಸಮ್ಮೇಳನ 2024’ ಹಾಡು ಹೆಜ್ಜೆಗಳ ಸಂಭ್ರಮಾಚರಣೆಯು ದಿನಾಂಕ 25 ಆಗಸ್ಟ್ 2024ರಂದು ಮಧ್ಯಾಹ್ನ 3-00 ಗಂಟೆಗೆ ಬೆಂಗಳೂರಿನ ಗೋವಿಂದರಾಜ ನಗರದ ಜ್ಞಾನಸೌಧ ಸಭಾಂಗಣದಲ್ಲಿ ನಡೆಯಲಿದೆ. ಯಶಸ್ವಿನಿ ವಶಿಷ್ಟ, ವಂಶಿಕ ಅಂಜನಿ ಕಶ್ಯಪ ಮತ್ತು ಮೇಘನಾ ಕುಲಕರ್ಣಿ ಜೋಶಿ ಇವರುಗಳು ವಿಶೇಷ ಅತಿಥಿಗಳಾಗಿ ಭಾಗವಹಿಸಲಿರುವರು.
ಪುತ್ತೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕು ಘಟಕದ ವತಿಯಿಂದ ದಿನಾಂಕ 22 ಆಗಸ್ಟ್ 2024ರಂದು ‘ಗಮಕ ವಾಚನ- ವ್ಯಾಖ್ಯಾನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶ್ರೀಯುತ ಭಾಸ್ಕರ ಬಾರ್ಯರ ಸ್ವಗೃಹ, ಪುತ್ತೂರಿನ ಶಿವಪೇಟೆಯ ‘ಅಗಸ್ತ್ಯ’ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಭಾರತ ಇದರಿಂದ ‘ಕರ್ಣ – ಕುಂತಿ ಸಂವಾದ’ ಎಂಬ ಕಥಾ ಭಾಗವನ್ನು ಆಯ್ದುಕೊಳ್ಳಲಾಯಿತು. ಅಂಬಿಕಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀಯುತ ಸತೀಶ್ ಇರ್ದೆ ಇವರು ಗಮಕ ವಾಚನಗೈದರು. ನಿವೃತ್ತ ಅಧ್ಯಾಪಕರಾದ ಶ್ರೀಯುತ ಭಾಸ್ಕರ ಶೆಟ್ಟಿ ಸಾಲ್ಮರ ಇವರು ಗಮಕ ವ್ಯಾಖ್ಯಾನಗೈದರು. ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮವು ನೆರೆದ ಕಲಾಪ್ರಿಯರ ಮನಸ್ಸನ್ನು ಗೆದ್ದಿತು. ಗೌರವಾಧ್ಯಕ್ಷರಾದ ಭಾಸ್ಕರ ಬಾರ್ಯರು ಸರ್ವರನ್ನು ಸ್ವಾಗತಿಸಿ, ಅಧ್ಯಕ್ಷರಾದ ನಿವೃತ್ತ ಪ್ರಾಂಶುಪಾಲ ಪ್ರೊ. ವೇದವ್ಯಾಸ ರಾಮಕುಂಜ ಧನ್ಯವಾದ ಸಮರ್ಪಿಸಿದರು. ಕಿರುಕಾಣಿಕೆ ನೀಡಿ, ಶಾಲು ಹೊದಿಸಿ ಕಲಾವಿದರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಶಂಕರಿ ಶರ್ಮ, ಸದಸ್ಯರಾದ ಪ್ರೇಮಾ ನೂರಿತ್ತಾಯ, ಮಹಾಲಿಂಗ ಭಟ್, ಜಯಂತಿ ಹೆಬ್ಬಾರ್, ಜಯಲಕ್ಷ್ಮಿ…
ಬೆಂಗಳೂರು : ಬಾರ್ಕೂರಿನ ಡಾ. ದೀಪಕ್ ಶೆಟ್ಟಿ ಇವರು ‘ಯಕ್ಷಗಾನ ಕ್ಷೇತ್ರದ ಆರ್ಥಿಕ ಸ್ಥಿತಿಗಳ ಮೌಲ್ಯೀಕರಣ’ ಎಂಬ ವಿಷಯದಲ್ಲಿ ಮಹಾಪ್ರಬಂಧ ಮಂಡಿಸಿ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ. ಇವರಿಗೆ ದಿನಾಂಕ 24 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ವಿಜಯನಗರದ ಬಂಟರ ಸಂಘದಲ್ಲಿ ‘ಸಾಲುದೀಪ’ ಅಭಿನಂದನಾ ನುಡಿ ಬೆಳಕು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಭಾ ಕಾರ್ಯಕ್ರಮದ ಬಳಿಕ ಬಡಗುತಿಟ್ಟಿನ ಗಜಗಟ್ಟಿ ಭಾಗವತರಿಂದ ಗಾನ ವೈಭವ ನಂತರ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಟೊಯೋಟಾದಲ್ಲಿ ವೃತ್ತಿಯಲ್ಲಿರುವ ದೀಪಣ್ಣ ಅದರಲ್ಲೆ ಸಿಕ್ಕ ಸಣ್ಣ ಬಿಡುವಿನಲ್ಲೆ ದೊಡ್ಡ ಸಾಧನೆ ಮಾಡಿದವರು. ದೀಪಣ್ಣ ನಮಗೆಲ್ಲ ಒಂದು ಶಕ್ತಿ. ಕರಾವಳಿಯ ಎಲ್ಲಾ ಸಂಘ, ಸಂಸ್ಥೆಗಳ ಕಾರ್ಯಕ್ರಮಗಳ ಪ್ರೋತ್ಸಾಹಕರು. ಯಾರಿಗೇ ಸಂಕಷ್ಟವೆಂದಾಗಲೂ ಸಹಾಯ ಮಾಡುವವರು. ಕಲೆ ಮತ್ತು ಕಲಾವಿದರ ಬಗೆಗೆ ಗೌರವದಿಂದ ತೆರೆಮರೆಯಲ್ಲಿ ನೆರವಾದವರು.
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನಗರ ಜಿಲ್ಲೆ ಮತ್ತು ರಂಗಮಂಡಲ ಬೆಂಗಳೂರು ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಕಾರ್ಯಕ್ರಮದ ದ್ವಿತೀಯ ಕವಿಗೋಷ್ಠಿ ಜನರೆಡೆಗೆ ಕಾವ್ಯ ಯಾನದ ಪಯಣ ಧಾರವಾಡದ ಕಡೆಗೆ ದಿನಾಂಕ 24 ಆಗಸ್ಟ್ 2024ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಗೃಹದಲ್ಲಿ ನಡೆಯಲಿದೆ. ಖ್ಯಾತ ಕವಿಗಳು, ಸಂಸ್ಕೃತಿ ಚಿಂತಕರು, ಗುರುಗಳಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹಾಗೂ ಖ್ಯಾತ ಕವಿಗಳಾದ ಡಾ. ಎಚ್.ಎಲ್. ಪುಷ್ಪ ಹಾಗೂ ಕವಿಮಿತ್ರರು ಹಾಗೂ ಗಾಯಕರು ಬೆಂಗಳೂರಿನ ಕಾರ್ಯಕ್ರಮವನ್ನು ಚಂದಗೊಳಿಸಲಿದ್ದು, ಕವಿತಾ ವಾಚನ ಮತ್ತು ಗೀತ ಗಾಯನ ಪ್ರಸ್ತುತಗೊಳ್ಳಲಿದೆ. ಡಾ. ಬಸವರಾಜ ಸಾದರ ಹಾಗೂ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಇವರ ಸಾರಥ್ಯದಲ್ಲಿ ರಾಜಧಾನಿ ಬೆಂಗಳೂರಿನಿಂದ ಧಾರವಾಡದತ್ತ ‘ಕಾವ್ಯ ದೀವಟಿಗೆ’ಯ ಪಯಣ ಸಾಗಲಿದೆ. ರಂಗಮಂಡಲ ಬೆಂಗಳೂರು, ರಂಗ ಪರಿಸರ ಮತ್ತು ಚೇತನ ಫೌಂಡೇಷನ್ ಆಯೋಜಿಸಿರುವ ಪ್ರತಿ ಜಿಲ್ಲೆ ಹಾಗೂ ಹೊರನಾಡ ಕನ್ನಡ ಪ್ರದೇಶಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿ ತಿಂಗಳ 3ನೇ ಭಾನುವಾರ…
ಬದಿಯಡ್ಕ : ಕರ್ನಾಟಕ ಗಮಕ ಕಲಾ ಪರಿಷತ್ತು ಮತ್ತು ಸಿರಿಗನ್ನಡ ವೇದಿಕೆಗಳ ಕೇರಳ ಗಡಿನಾಡು ಘಟಕಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 19 ಆಗಸ್ಟ್ 2024ರಂದು ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದ ಸಭಾಂಗಣದಲ್ಲಿ ‘ಗಮಕ ಶ್ರಾವಣ’ ಸಮಾರಂಭವು ಜರಗಿತು. ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಶ್ರೀ ಟಿ. ಶಂಕರನಾರಾಯಣ ಭಟ್ಟರು ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಆಡಳಿತಾಧಿಕಾರಿ ಶ್ರೀ ಜಯಪ್ರಕಾಶ್ ಪಜಿಲ ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶ್ರೀ ಅನಂತಕೃಷ್ಣ ಚಡಗ ಅವರು ಭಾಗವಹಿಸಿ ಗಮಕ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಯುವಜನರ ಜವಾಬ್ದಾರಿಯನ್ನು ನೆನಪಿಸಿದರು. ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಶ್ರೀ ವಿ.ಬಿ. ಕುಳಮರ್ವ ಅವರು ಪ್ರಾಸ್ತಾವಿಕ ಭಾಷಣದಲ್ಲಿ ಗಮಕ ಕಲೆಯ ಪ್ರಾಚೀನತೆಯನ್ನು ತಿಳಿಸುತ್ತಾ ಅದು ಬೆಳೆದು ಬಂದ ಬಗೆಯನ್ನು ಸೋದಾಹರಣವಾಗಿ ವಿವರಿಸಿದರು. ಗಡಿನಾಡು ಕಾಸರಗೋಡಿನಲ್ಲಿ ಗಮಕ ಕಲಾ ಪರಿಷತ್ತು ಮಾಡಿದ ಸಾಧನೆಯನ್ನು ಕುರಿತು ಮಾತನಾಡುತ್ತಾ ಆದಿ ಗಮಕಿಗಳಾದ ಕುಶ-ಲವರ ಜನ್ಮ ಮಾಸಾಚರಣೆಯ ಅಂಗವಾಗಿ ತಾವು…
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 26-08-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ವಿದುಷಿ ಮಹತಿ ಎಚ್. ಪಾವನನ್ಕರ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಮಂಗಳೂರಿನಲ್ಲಿ ವಾಸವಾಗಿರುವ ಹರೀಶ್ ಪಾವನನ್ಕರ್ ಮತ್ತು ಮಾಲಿನಿ ಪಾವನನ್ಕರ್ ದಂಪತಿಗಳ ಸುಪುತ್ರಿ ವಿದುಷಿ ಮಹತಿ ಎಚ್. ಪಾವನನ್ಕರ್. ತನ್ನ 7ನೇ ವಯಸ್ಸಿನಿಂದ ಭರತನಾಟ್ಯ ಶಿಕ್ಷಣವನ್ನು ಗುರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರಲ್ಲಿ ಪ್ರಾರಂಭಿಸಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರು ನಡೆಸಿದ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಶಾಸ್ತ್ರೀಯ ಸಂಗೀತದ ಜೂನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣಲಾಗಿರುವ ಇವರು ಅನೇಕ ನೃತ್ಯ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದಿರುತ್ತಾರೆ. ದಿನಾಂಕ 12 ಮೇ 2024ರಂದು ಮಂಗಳೂರಿನ ಪುರಭವನದಲ್ಲಿ ಇವರ…
ಮಡಿಕೇರಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಅಮ್ಮತ್ತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರಕಾರಿ ಪ್ರೌಢಶಾಲೆ ಪಾಲಿಬೆಟ್ಟ ಇವರ ಸಂಯುಕ್ತ ಆಶ್ರಯದಲ್ಲಿ ದಿ. ಡಿ. ಜೆ ಪದ್ಮನಾಭ ಮತ್ತು ಬಿ. ಆರ್. ಸಾಯಿನಾಥ್ ದತ್ತಿ ಉಪನ್ಯಾಸ ಕಾರ್ಯಕ್ರಮವು 21 ಆಗಸ್ಟ್ 2024 ರಂದು ಪಾಲಿಬೆಟ್ಟ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ. ಪಿ. ಕೇಶವ ಕಾಮತ್ “ಕೊಡಗಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿ ಅದರ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದವರು ದಿವಂಗತ ಡಿ. ಜೆ. ಪದ್ಮನಾಭರು ಅವರು ಅಂದು ನೆಟ್ಟ ಗಿಡ ಇಂದು ಹೆಮ್ಮರವಾಗಿ ಬೆಳೆದು ನಾಲ್ಕು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿ ಪ್ರತಿ ವರ್ಷವೂ ನೂರಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಜಿಲ್ಲಾಧ್ಯಕ್ಷರಾಗಿ 23 ವರ್ಷಗಳ ಕಾಲ ಕನ್ನಡ ಸಾಹಿತ್ಯ, ಭಾಷೆ, ನಾಡು-ನುಡಿ, ಸಂಸ್ಕೃತಿ,…
ಮಡಿಕೇರಿ: ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ 4 ಅಕ್ಟೋಬರ್ 2024ರಿಂದ 12 ಅಕ್ಟೋಬರ್ 2024ರವರೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿತ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರು ಹಾಗೂ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಲಾವಿದರು, ಕಲಾತಂಡಗಳು 2ರ ಸೆಪ್ಟೆಂಬರ್ 2024ರ ಒಳಗಾಗಿ madikeri- [email protected] ಇಲ್ಲಿಗೆ ಮಾಹಿತಿಯನ್ನು ಮೇಲ್ ಮಾಡಬೇಕು. ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಶೀಲಿಸಲಾಗುವುದಿಲ್ಲ ಎಂದು ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್. ಟಿ. ತಿಳಿಸಿದ್ದಾರೆ. ನೃತ್ಯ ತಂಡದಲ್ಲಿ ಕನಿಷ್ಟ 4 ಮಂದಿ ಇರಬೇಕು. ಕಲಾವಿದರ ಆಯ್ಕೆಯ ಅಂತಿಮ ತೀರ್ಮಾನ ಸಮಿತಿಯದ್ದಾಗಿರುತ್ತದೆ. ಹೆಚ್ಚಿನ ಮಾಹಿತಿಗೆ 9449156215 ಅಥವಾ 9972538584 ಅನ್ನು ಸಂಪರ್ಕಿಸಬಹುದಾಗಿದೆ.
ಮುಂಬಯಿ: ಕರಾವಳಿ ಕರ್ನಾಟಕದ ಹೆಸರಾಂತ ಸಾಹಿತಿ, ಕವಿ-ಲೇಖಕ ಮತ್ತು ಯಕ್ಷಗಾನ ವಿದ್ವಾಂಸರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರ ನೂತನ ಕೃತಿಗಳಾದ ‘ಸೃಷ್ಟಿಸಿರಿಯಲ್ಲಿ ಪುಷ್ಪವೃಷ್ಟಿ’ ಮತ್ತು ‘ಸೀಯನ’ ಇದರ ಲೋಕಾರ್ಪಣಾ ಸಮಾರಂಭವು 24 ಆಗಸ್ಟ್ 2024ರ ಶನಿವಾರದಂದು ಮುಂಬೈ ವಿದ್ಯಾ ವಿಹಾರ್ ಪೂರ್ವದ ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ಮಂದಿರದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಅಂದು ಸಂಜೆ ಘಂಟೆ 4.30ಕ್ಕೆ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಇವರ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ಪ್ರಸಕ್ತ ವರ್ಷ ನಡೆಯಲಿರುವ ಸರಣಿ ತಾಳಮದ್ದಳೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಜೊತೆಗೆ ಈ ಕಾರ್ಯಕ್ರಮ ನೆರವೇರಲಿದೆ. ‘ಸೃಷ್ಟಿಸಿರಿಯಲ್ಲಿ ಪುಷ್ಪವೃಷ್ಟಿ’ ಕನ್ನಡ ಕವನ ಸಂಕಲನ: ಕವಿ ಕುಕ್ಕುವಳ್ಳಿಯವರು ಬೇರೆ ಬೇರೆ ಸಂದರ್ಭಗಳಲ್ಲಿ ರಚಿಸಿದ ವಿವಿಧ ಕನ್ನಡ ಕವನಗಳು ಕಾವ್ಯ ಸಿರಿ, ಭಾವ ಸಿರಿ, ಭಕ್ತಿ ಸಿರಿ ಎಂಬ ಮೂರು ವಿಭಾಗಗಳಲ್ಲಿ ಪ್ರಕಟವಾಗಿರುವ ‘ಸೃಷ್ಟಿ ಸಿರಿಯಲ್ಲಿ ಪುಷ್ಪವೃಷ್ಠಿ’ : ಭಾವ – ಅನುಭಾವ ಗೀತೆಗಳ ಗುಚ್ಛವನ್ನು ಅಂಬಿಕಾ ಮಂದಿರದ ಧರ್ಮದರ್ಶಿ ವೇ.…
ಬೆಂಗಳೂರು: ಬೆಂಗಳೂರಿನಲ್ಲಿ 18 ಆಗಸ್ಟ್ 2024ರಂದು ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಉಡುಪಿ ಜಿಲ್ಲೆಯ ಶಿಕ್ಷಕರ ತಂಡ ಶಶಿರಾಜ್ ಕಾವೂರು ರಚಿಸಿದ ‘ಬರ್ಬರೀಕ’ ನಾಟಕವನ್ನು ಪ್ರದರ್ಶಿಸಿ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ. ಎರಡು ವರ್ಷದ ಹಿಂದೆ ರಾಷ್ಟ್ರ ಮಟ್ಟದಲ್ಲಿ ತೃತೀಯ ಸ್ಥಾನ ಗಳಿಸಿದ್ದ ಈ ನಾಟಕ ಈ ಬಾರಿ ಹೊಸ ವಿನ್ಯಾಸ ಮತ್ತು ವಿಭಿನ್ನ ಸಂಯೋಜನೆಯೊಂದಿಗೆ ಮತ್ತೆ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡಿತು. ಬಿ. ಎಸ್. ರಾಮ್ ಶೆಟ್ಟಿ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಂಡ ನಾಟಕಕ್ಕೆ ವಿಜಯ್ ಕುಮಾರ್ ಕುಂಭಾಶಿಯವರ ಗೀತ ಸಾಹಿತ್ಯ, ದಿವಾಕರ ಕಟೀಲ್ ಇವರ ಸಂಗೀತ ಸಂಯೋಜನೆ, ರಮೇಶ್ ಕಪಿಲೇಶ್ವರ ಇವರ ರಂಗಸಜ್ಜಿಕೆ ಮತ್ತು ವೇಷಭೂಷಣವಿತ್ತು. ರವಿ ಎಸ್. ಪೂಜಾರಿ ಬೈಕಾಡಿ ಇವರ ನೇತೃತ್ವದ ಶಿಕ್ಷಕರ ತಂಡದಲ್ಲಿ ಹರೀಶ್ ಪೂಜಾರಿ ಎಸ್., ನಾಗರತ್ನ ಗುಂಡ್ಮಿ, ವನಿತಾ ಶೆಟ್ಟಿ ಚೇರ್ಕಾಡಿ, ದಿನೇಶ್ ಶೆಟ್ಟಿ ಕಾರ್ಕಳ, ಲಕ್ಷ್ಮೀನಾರಾಯಣ ಪೈ ಕನ್ನಾರು, ಸತೀಶ್ ಬೇಳಂಜೆ, ಸುರೇಂದ್ರ ಕೋಟ,…