Subscribe to Updates
Get the latest creative news from FooBar about art, design and business.
Author: roovari
ಕುಂದಾಪುರ : ಕನ್ನಡ ಜಾನಪದ ಪರಿಷತ್ ಉಡುಪಿ ಮತ್ತು ಕುಂದಾಪುರ ಘಟಕದ ವತಿಯಿಂದ ‘ವಿಕಾಸಕ್ಕಾಗಿ ಜಾನಪದ’ ಕಾರ್ಯಕ್ರಮದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಂಡ್ಲೂರಿನ ರಾಮ್ ಸನ್ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಕುಂದಾಪುರ ಕನ್ನಡದ ಗಾದೆ ಮತ್ತು ಒಗಟುಗಳ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ದಿನಾಂಕ 21 ಜುಲೈ 2025ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಾನಪದ ಪರಿಷತ್ ಉಡುಪಿ ಘಟಕದ ಅಧ್ಯಕ್ಷರಾದ ಡಾ. ಗಣೇಶ್ ಗಂಗೊಳ್ಳಿ ಇವರು ಮಾತನಾಡಿ “ಹಳ್ಳಿಯ ಶ್ರಮದ ಬದುಕು ಜಾನಪದ ಸಾಹಿತ್ಯದ ಮೂಲ. ಜೀವನಾನುಭವದ ವಿಶ್ವವಿದ್ಯಾನಿಲಯ. ಇಲ್ಲಿ ಬದುಕಿನ ಮೂಲ ಶಿಕ್ಷಣದ ಪಾಠವನ್ನು ಒಳಗೊಂಡ, ಅರಿವನ್ನು ವಿಸ್ತರಿಸುವ ಜೀವನಾನುಭವದ ಅಮೃತವಿದೆ. ನೋವು ನಲಿವುಗಳನ್ನು ಒಳಗೊಂಡಿರುವ ಜನಪದ ನಮ್ಮೆಲ್ಲರ ಬದುಕಿಗೆ ಹತ್ತಿರವಾದ ಶ್ರೀಮಂತ ಸಮೃದ್ಧ ಸಾಹಿತ್ಯ, ಈ ಜನಪದ ಸಾಹಿತ್ಯವನ್ನು ಜತನದಿಂದ ಕಾಪಾಡುವ ಹೊಣೆಗಾರಿಕೆ ನಮ್ಮ ಮೇಲಿದೆ” ಎಂದು ಹೇಳಿದರು. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಸಾಮ್ರಾಟ್…
ಹೆಗ್ಗೋಡು : ಕಿನ್ನರ ಮೇಳ ತುಮರಿ ಇವರ ವತಿಯಿಂದ ಕಿನ್ನರ ಮೇಳ ರಂಗಶಾಲೆ 2025-26ನೇ ಸಾಲಿನ ರಂಗಶಿಕ್ಷಣ ತರಗತಿಗಳಿಗೆ ಅಸ್ತಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ರಂಗಶಿಕ್ಷಣದ ಅವಧಿಯು ಆಗಸ್ಟ್ 2025ರಿಂದ ಮಾರ್ಚ್ 2026ರವರೆಗೆ ಎಂಟು ತಿಂಗಳುಗಳ ನಡೆಯಲಿದ್ದು, ಹೆಚ್ಚಿನ ಮಾಹಿತಿ ಮತ್ತು ವಿವರಗಳಿಗಾಗಿ 9448686353 / 9448664022 / 8447551489 ಸಂಖ್ಯೆಯನ್ನು ಸಂಪರ್ಕಿಸಿರಿ.
ಬಂಟ್ವಾಳ : ಕಲ್ಲಡ್ಕ ಕೊಳಕೀರು ನಿವಾಸಿ, ಹಿರಿಯ ರಂಗನಟ ಚಿ. ರಮೇಶ್ ಕಲ್ಲಡ್ಕ ಇವರು ದಿನಾಂಕ 23 ಜುಲೈ 2025ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಇವರಿಗೆ 68 ವರ್ಷ ವಯಸ್ಸಾಗಿತ್ತು. ಬಾಲನಟನಾಗಿ ರಂಗಭೂಮಿ ಪ್ರವೇಶಿಸಿದ ಇವರು ಬಳಿಕ ವೃತ್ತಿ ರಂಗಭೂಮಿ ಕಲಾವಿದನಾಗಿ ನಾಲ್ಕೂವರೆ ದಶಕಗಳಿಂದ ಸೇವೆ ಸಲ್ಲಿಸಿದ್ದು, ಕೆ.ಎನ್. ಟೇಲರ್ ಸೇರಿದಂತೆ ತುಳು ರಂಗಭೂಮಿಯ ಹಿರಿಯ ರಂಗ ನಿರ್ದೇಶಕರ ಒಡನಾಟವನ್ನು ಹೊಂದಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಕಲ್ಲಡ್ಕ ‘ಮೈತ್ರಿ ಕಲಾವಿದರು’, ‘ರಚಿಸು ಕಲ್ಲಡ್ಕ’ ತಂಡವನ್ನು ಕಟ್ಟಿದ ಇವರು 25 ವರ್ಷಗಳಿಂದ ಕಲಾಸಂಗಮ ತಂಡದಲ್ಲಿ ಹಿರಿಯ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದರು. ತುಳು ರಂಗಭೂಮಿಯಲ್ಲಿ ದಾಖಲೆ ಸೃಷ್ಟಿಸಿದ್ದ ‘ಶಿವದೂತೆ ಗುಳಿಗೆ’ ನಾಟಕದ ಭೀಮರಾಯನ ಪಾತ್ರ ನಿರ್ವಹಿಸಿದ್ದರು. 2ನೇ ಅವಧಿಯಲ್ಲಿ ‘ಒರಿಯರ್ದೊರಿ ಅಸಲ್’ ನಾಟಕದಲ್ಲಿ ‘ಮಿಲಿಟ್ರಿ ಕೇಶವಣ್ಣನ ಪಾತ್ರ ನಿರ್ವಹಿಸಿದ್ದರು. ಒಟ್ಟು 75ಕ್ಕೂ ಅಧಿಕ ನಾಟಕಗಳ ಸಾವಿರಾರು ಪ್ರದರ್ಶನಗಳಲ್ಲಿ ರಮೇಶ್ ಕಲ್ಲಡ್ಕ ಪಾತ್ರ ನಿರ್ವಹಿಸಿದ್ದು, ಕರಾವಳಿ ಜಿಲ್ಲೆಗಳ ಜತೆಗೆ ದೇಶ-ವಿದೇಶಗಳಲ್ಲಿ ತಮ್ಮ ತಂಡದ ಜತೆ ತೆರಳಿ ಅಭಿನಯಿಸಿದ್ದಾರೆ.…
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಕೊಡಮಾಡುವ 2024ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟಗೊಂಡಿದೆ. ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ – ಬೆಂಗಳೂರು ಇದರ ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ಬ್ಯಾರಿ – ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯರಾದ ಬೆಂಗಳೂರಿನ ಡಾ. ಮನ್ಸೂದ್ ಅಹ್ಮದ್ ಮುಲ್ಕಿ (ಬ್ಯಾರಿ ಭಾಷೆ ಮತ್ತು ಸಂಘಟನೆ), ಬ್ಯಾರಿ ಕವಿ ಮತ್ತು ಲೇಖಕ ಹೈದರ್ ಅಲಿ ಕಾಟಿಪಳ್ಳ (ಬ್ಯಾರಿ ಸಾಹಿತ್ಯ), ಹಿರಿಯ ಬ್ಯಾರಿ ಹಾಡುಗಾರ ಹಾಗೂ ಕವಿ ಪಿ. ಎಂ. ಹಸನಬ್ಬ ಮೂಡುಬಿದರೆ (ಬ್ಯಾರಿ ಸಂಸ್ಕೃತಿ ಮತ್ತು ಕಲೆ) ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬ್ಯಾರಿ ಅಕಾಡಮಿಯ ಮಾಜಿ ಸದಸ್ಯರಾದ ಟಿ. ಕೆ. ಶರೀಫ್, ಮುಹಮ್ಮದ್ ಶರೀಫ್ ನಿರ್ಮುಂಜೆ, ಹಂಝ ಮಲಾರ್, ಮರಿಯಮ್ ಇಸ್ಮಾಯಿಲ್ ಮತ್ತು ಲೇಖಕಿ ಶಮೀಮಾ ಕುತ್ತಾರ್ ಗೌರವ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿದ್ದು ಸಹಕರಿಸಿದ್ದಾರೆ. ಬ್ಯಾರಿ ಅಕಾಡಮಿಯ ಸ್ಥಾಯಿ ಸಮಿತಿ ಸಭೆ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿತ್ತು.…
ಕಾಸರಗೋಡು : ಕಳೆದ ಎರಡು ದಶಕಗಳಿಂದ ಕಾಸರಗೋಡಿನ ಹೃದಯ ಭಾಗ ಕರಂದಕ್ಕಾಡಿನಲ್ಲಿ ಸಕ್ರಿಯವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತಿರುವ ‘ಪದ್ಮಗಿರಿ ಕಲಾ ಕುಟೀರ’ಕ್ಕೆ ಮಂಗಳೂರಿನ ‘ಟಾಪ್ ವಿಡಿಯೋ ಅಂಡ್ ಫೋಟೋ ಸಂಸ್ಥೆ’ಯವರು ಕುಡಿಯುವ ನೀರಿನ ಘಟಕವನ್ನು ದಿನಾಂಕ 20 ಜುಲೈ 2025ರಂದು ಕೊಡುಗೆಯಾಗಿ ನೀಡಿದ್ದಾರೆ. ಸಂಸ್ಥೆಯ ಪದಾಧಿಕಾರಿಗಳಾದ ಚಂದ್ರಕಾಂತ ವೋರಾ (ಟಿಕ್ಕು) ಅವರು ಪ್ರಥಮ ನೀರಿನ ಲೋಟವನ್ನು ಖ್ಯಾತ ಮೂಳೆ ತಜ್ಞರಾದ ಡಾ. ಕೆ. ಕೆ. ಶಾನು ಭೋಗ್ ಅವರಿಗೆ ನೀಡಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಛಾಯಾಗ್ರಾಹಕ ಕೆ. ಗಣೇಶ್ ಶಣೈ, ಚಲನಚಿತ್ರ ನಟಿ ಶೋಭಾ ಶೆಟ್ಟಿ ಭಾಗವಹಿಸಿದ್ದರು. ರಂಗ ಚಿನ್ನಾರಿಯ ನಿರ್ದೇಶಕರು ಹಾಗೂ ಸಂಚಾಲಕರಾದ ಕಾಸರಗೋಡು ಚಿನ್ನಾ, ನಿರ್ದೇಶಕ ಕೆ. ಸತೀಶ್ ಚಂದ್ರ ಭಂಡಾರಿ, ಲೇಖಕಿ ವಿಜಯಲಕ್ಷ್ಮೀ ಶಾನುಭೋಗ್, ಸೂರ್ಯಕಾಂತಿ, ಸ್ವರ ಚಿನ್ನಾರಿಯ ಬಬಿತಾ ಆಚಾರ್ಯ, ಪದಾಧಿಕಾರಿಗಳು ಹಾಗೂ ಅಂತರ್ ಧ್ವನಿಯ ಗಾಯಕ ಗಾಯಕಿಯರು ಉಪಸ್ಥಿತರಿದ್ದರು.
ಮಂಗಳೂರು : ಕೇರಳ ರಾಜ್ಯ – ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಕನ್ನಡ ಚು.ಸಾ.ಪ. ಮಂಗಳೂರು ವಲಯ ಕಾರ್ಯಕ್ರಮ ‘ಮನೆ ಮನೆ ಕನ್ನಡ ಜಾಗೃತಿ ಅಭಿಯಾನ -2’ ದಿನಾಂಕ 27 ಜುಲೈ 2025ರಂದು ಅಪರಾಹ್ನ 3-00 ಗಂಟೆಗೆ ಮಂಗಳೂರಿನ ಚಿಲಿಂಬಿಯಲ್ಲಿರುವ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಇವರ ಮನೆಯಲ್ಲಿ ನಡೆಯಲಿದೆ. ಕಲ್ಲಚ್ಚು ಪ್ರಕಾಶನ ಇದರ ಸಂಸ್ಥಾಪಕರಾದ ಕಲ್ಲಚ್ಚು ಮಹೇಶ್ ಆರ್. ನಾಯಕ್ ಇವರ ಅಧ್ಯಕ್ಷತೆಯಲ್ಲಿ ಕೇರಳ ರಾಜ್ಯ – ಕನ್ನಡ ಚುಟುಕು ಸಾಹಿತ್ಯ ಪರಿಷಟ್ಟಿನ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಸಂಧ್ಯಾರಾಣಿ ಟೀಚರ್ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮ ಸಂಯೋಜಕರಾದ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಇವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಇದೇ ಸಂದರ್ಭದಲ್ಲಿ ಸಾಧಕರಿಗೆ ‘ಸಾಧಕಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.…
ಮಡಿಕೇರಿ : ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಕನಕ ಸಾಹಿತ್ಯ/ ದಾಸ ಸಾಹಿತ್ಯ/ತತ್ವಪದ ಸಾಹಿತ್ಯ ಕುರಿತು ಸಂಶೋಧನೆ ಅಥವಾ ವಿಮರ್ಶಾ ಗ್ರಂಥವೊಂದಕ್ಕೆ ಬಹುಮಾನ ನೀಡುವ ಯೋಜನೆಯನ್ನು ರೂಪಿಸಿದೆ. 2024ರ ಸಾಲಿನಲ್ಲಿ ಪ್ರಕಟವಾದ ಪ್ರಥಮ ಮುದ್ರಣದ ಗ್ರಂಥವನ್ನು ಬಹುಮಾನಕ್ಕೆ ಪರಿಗಣಿಸಲಾಗುವುದು. ಗ್ರಂಥ ಬಹುಮಾನವು ರೂಪಾಯಿ 25000 ಸಾವಿರದ ನಗದು ಬಹುಮಾನ ಒಳಗೊಂಡಿಗೆ. ಪ್ರಶಸ್ತಿಗೆ ಗ್ರಂಥ ಲೇಖಕರು, ಗ್ರಂಥ ಪ್ರಕಾಶಕರು 10 ಸೆಪ್ಟೆಂಬರ್ 2025ರ ಒಳಗಾಗಿ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-560056 ಇಲ್ಲಿಗೆ ಅರ್ಜಿಯನ್ನು ಅಂಚೆ/ ಕೊರಿಯರ್ ಅಥವಾ ಖುದ್ದಾಗಿ ಸಲ್ಲಿಸಬಹುದು. ಅರ್ಜಿ ಸಮೂನೆಯನ್ನು ವೆಬ್ಸೈಟ್ https://kanakadasaresearchcnter.karnataka.gov.in ನಲ್ಲಿ ಅಪಲೋಡ್ ಮಾಡಲಾಗಿದ್ದು, ಅರ್ಜಿಯನ್ನು ವೆಬ್ಸೈಟ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ.6364529319 ನ್ನು ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ (ರಿ) ಧಾರವಾಡ ಮತ್ತು ಅಭಿನಯ ಭಾರತಿ (ರಿ.) ಧಾರವಾಡ ಇವರ ವತಿಯಿಂದ ಮನೋಹರ ಗ್ರಂಥಮಾಲಾ ಮತ್ತು ಕುತ೯ಕೋಟಿ ಮೆಮೋರಿಯಲ್ ಟ್ರಸ್ಟ್ ಸಂಸ್ಥೆಗಳ ಸಹಕಾರದೊಂದಿಗೆ ದಿನಾಂಕ 26 ಜುಲೈ 2025ರಂದು ಮನೋಹರ ಗ್ರಂಥಮಾಲೆಯ ಅಟ್ಟದಲ್ಲಿ ಬೆಳಿಗ್ಗೆ 11-30 ಗಂಟೆಗೆ ಜಿ.ಬಿ. ಜೋಶಿ ಮತ್ತು ಕೀರ್ತಿನಾಥ ಕುರ್ತಕೋಟಿ ಸ್ಮರಣಾರ್ಥ ದತ್ತಿ ಕಾರ್ಯಕ್ರಮವನ್ನು ಏರ್ಪಡಿಸಿದೆ. ಕಲ್ಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕರಾದ ಡಾ. ಬಸವರಾಜ ಡೋಣೂರ ಅವರು ‘ಜಿ.ಬಿ. ಜೋಶಿಯವರ ಕಾದಂಬರಿ ‘ಧರ್ಮಸೆರೆ’ ಇದರ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮವು ಶ್ರೀ ಜಯತೀರ್ಥ ಜಹಗೀರದಾರ ಇವರ ದತ್ತಿ ಕೊಡುಗೆಯಾಗಿದ್ದು ಧಾರವಾಡದ ಸಾಹಿತ್ಯ ಸಂಸ್ಕೃತಿ ಪ್ರಿಯರು ಈ ಸಾಹಿತ್ಯದ ರಸದೂಟವನ್ನು ಸವಿಯಬೇಕೆಂದು ಅಭಿನಯ ಭಾರತಿ ಸಂಚಾಲಕರು ವಿನಂತಿಸುತ್ತಾರೆ.
ಬ್ರಹ್ಮಾವರ : ರಾಗ ಧನ ಉಡುಪಿ (ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸುತ್ತಿರುವ ‘ರಾಗರತ್ನಮಾಲಿಕೆ – 39’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 27 ಜುಲೈ 2025ರಂದು ಅಪರಾಹ್ನ 3-00 ಗಂಟೆಗೆ ಬ್ರಹ್ಮಾವರದ ಕುಂಜಾಲು ಶ್ರೀರಾಮ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ತಿಕ್ ಶ್ಯಾಮ್ ಮುಂಡೋಳುಮೂಲೆ ಮತ್ತು ವಿದುಷಿ ಧನ್ಯಾ ದಿನೇಶ್ ರುದ್ರಪಟ್ಣಂ ಇವರ ಹಾಡುಗಾರಿಕೆಗೆ ಪಕ್ಕವಾದ್ಯ – ವಯೊಲಿನ್ ನಲ್ಲಿ ಜನಾರ್ದನ ಎಸ್. ಬೆಂಗಳೂರು ಹಾಗೂ ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿರುತ್ತಾರೆ.
ತುಮಕೂರು : ಶೈನಾ ಅಧ್ಯಯನ ಸಂಸ್ಥೆ ತುಮಕೂರು ಆಯೋಜಿಸುವ ಶ್ರೀ ಬಿ. ಚನ್ನಪ್ಪಗೌರಮ್ಮ “ವಚನ ಸಾಹಿತ್ಯ ಪ್ರಶಸ್ತಿ” ಪ್ರದಾನ ಸಮಾರಂಭ ಮತ್ತು ನುಡಿನಮನ ಕಾರ್ಯಕ್ರಮವು ದಿನಾಂಕ 27 ಜುಲೈ 2025ನೇ ಭಾನುವಾರ ಬೆಳಗ್ಗೆ ಘಂಟೆ 10.30ಕ್ಕೆ ತುಮಕೂರು ಮರಳೂರಿನ ಪ್ರಗತಿ ಬಡಾವಣೆಯಲ್ಲಿರುವ ಅಂಕಿತ ಶಾಲೆಯ ಹತ್ತಿರದ ಡಾ. ಬಿ. ಸಿ. ಶೈಲಾನಾಗರಾಜ್ ಸಾಹಿತ್ಯ ಭವನದಲ್ಲಿ ನಡೆಯಲಿದೆ. ಶೈನಾ ಸಂಸ್ಥೆ ತುಮಕೂರು ಇದರ ಅಧ್ಯಕ್ಷರಾದ ದೊಂಬರನಹಳ್ಳಿ ನಾಗರಾಜು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ತುಮಕೂರು ನಗರದ ಮಾನ್ಯ ಶಾಸಕರಾದ ಶ್ರೀ ಜಿ. ಬಿ. ಜ್ಯೋತಿಗಣೇಶ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತುಮಕೂರಿನ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷರಾದ ಶ್ರೀ ಮುರುಳಿ ಕೃಷ್ಣಪ್ಪ, ಸಹಕಾರ ಇಲಾಖೆ ತುಮಕೂರಿನ ನಿವೃತ್ತ ಸಹಾಯಕ ನಿಯಂತ್ರಕರಾದ ಶ್ರೀ ಪಿ. ಎನ್. ಶಿವರುದ್ರಪ್ಪ, ಮಹಿಳಾ ಬಸವ ಕೇಂದ್ರ ತುಮಕೂರಿನ ಅಧ್ಯಕ್ಷರಾದ ಶ್ರೀಮತಿ ಕಲ್ಪನಾ ಉಮೇಶ್ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕರು, ವಿದ್ವಾಂಸರು ಮತ್ತು ವಚನ ಸಾಹಿತ್ಯ ಚಿಂತಕರಾದ ತುಮಕೂರಿನ ಶ್ರೀ…