Subscribe to Updates
Get the latest creative news from FooBar about art, design and business.
Author: roovari
ಅಹ್ಮದಾಬಾದ್ : ಪದ್ಮ ವಿಭೂಷಣ ಪುರಸ್ಕೃತ ಖ್ಯಾತ ಕಥಕ್ ನೃತ್ಯಗಾರ್ತಿ ಕುಮುದಿನಿ ಲಖೀಯಾ ಅಹಮದಾಬಾದ್‌ನ ತಮ್ಮ ನಿವಾಸದಲ್ಲಿ ದಿನಾಂಕ 12 ಏಪ್ರಿಲ್ 2025ರಂದು ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಕುಮುದಿನಿ ಅವರು ಸ್ಥಾಪಿಸಿದ್ದ ಕದಂಬ ಸೆಂಟರ್ ಫಾರ್ ಡಾನ್ಸ್ ಅಂಡ್ ಮ್ಯೂಸಿಕ್ ಇದರ ನಿರ್ವಾಹಕರು ಈ ಮಾಹಿತಿ ನೀಡಿದ್ದಾರೆ. 1960ರ ದಶಕದಲ್ಲಿ ಪ್ರಾರಂಭವಾದ ಕಥಕ್‌ನ ಏಕವ್ಯಕ್ತಿ ರೂಪದಿಂದ ದೂರ ಸರಿಯುವ ಮೂಲಕ ಅದನ್ನು ಸಮೂಹ ದೃಶ್ಯವಾಗಿ ಪರಿವರ್ತಿಸುವ ಮೂಲಕ ಮತ್ತು ಸಾಂಪ್ರದಾಯಿಕ ಕಥೆಗಳನ್ನು ತೆಗೆದುಹಾಕುವುದು ಮತ್ತು ಕಥಕ್ ಸಂಗ್ರಹಕ್ಕೆ ಸಮಕಾಲೀನ ಕಥಾಹಂದರವನ್ನು ಸೇರಿಸುವಂತಹ ಹೊಸತನವನ್ನು ಇವರು ಪರಿಚಯಿಸಿದ್ದರು. ಇವರ ಸಾಧನೆಗೆ ಭಾರತ ಸರ್ಕಾರದಿಂದ ‘ಪದ್ಮಶ್ರೀ’, ‘ಪದ್ಮ ವಿಭೂಷಣ’, ಸಂಗೀತ ನಾಟಕ ಅಕಾಡೆಮಿಯಿಂದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ‘ಕಾಳಿದಾಸ್ ಸಮ್ಮಾನ್’, ಸಂಗೀತ ನಾಟಕ ಅಕಾಡೆಮಿಯಿಂದ ‘ಸಂಗೀತ ನಾಟಕ ಅಕಾಡೆಮಿ ಟ್ಯಾಗೋರ್ ರತ್ನ’, ಕೇರಳ ಸರ್ಕಾರದಿಂದ ‘ಗುರು ಗೋಪಿನಾಥ್ ದೇಸಿಯ ನಾಟ್ಯ ಪುರಸ್ಕಾರಂ’ ಮುಂತಾದ ಪುರಸ್ಕಾರಗಳು ಸಂದಿವೆ.
ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಜೀವಮಾನ ಸಾಧನೆಗೆ ಕೊಡಮಾಡುವ 2024ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಬ್ಯಾರಿ ಭಾಷೆ, ಸಾಹಿತ್ಯ, ಸಂಶೋಧನೆ, ಕಲೆ, ಜನಪದ ಮತ್ತು ಸಂಘಟನಾ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿರುವ ಮೂವರು ಮಹನೀಯರನ್ನು 2024ನೇ ಸಾಲಿನ ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರಶಸ್ತಿಯು ರೂಪಾಯಿ 50,000 ನಗದು, ಪ್ರಮಾಣ ಪತ್ರ, ಸ್ಮರಣಿಕೆ ಮತ್ತು ಫಲಪುಷ್ಪ ಒಳಗೊಂಡಿರುತ್ತದೆ. ಆಸಕ್ತರು ಸ್ವತಃ ಅಥವಾ ಸಾಧಕರ ಪರವಾಗಿ ಇತರರು ಹೆಸರುಗಳನ್ನು ಶಿಫಾರಸು ಮಾಡಬಹುದು. ಹಿಂದಿನ ಸಾಲಿನಲ್ಲಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಿರುವ, ಆದರೆ ಪ್ರಶಸ್ತಿಗೆ ಆಯ್ಕೆ ಆಗದಿರುವವರ ಅರ್ಜಿಗಳನ್ನು ಈ ವರ್ಷವೂ ಪರಿಗಣಿಸಲಾಗುವುದು. ಸಾಧನೆಯ ಪೂರಕ ವಿವರ ಇದ್ದರೆ ಅಕಾಡೆಮಿಗೆ ಕಳುಹಿಸಿಕೊಡಬಹುದು. ಹೊಸದಾಗಿ ಅರ್ಜಿ ಸಲ್ಲಿಸುವವರು ವ್ಯಕ್ತಿ ಪರಿಚಯ, ಭಾವಚಿತ್ರ ಹಾಗೂ ದಾಖಲೆಗಳ ಜೆರಾಕ್ಸ್ ಪ್ರತಿಗಳೊಂದಿಗೆ ಲಕೋಟೆಯ ಮೇಲೆ ‘ಬ್ಯಾರಿ ಅಕಾಡೆಮಿ ಗೌರವ ಪ್ರಶಸ್ತಿ 2024’ ಎಂದು ಬರೆದು ರಿಜಿಸ್ಟ್ರಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಸಾಮರ್ಥ್ಯ ಸೌಧ, 2ನೇ ಮಹಡಿ,…
ಬೆಂಗಳೂರು : ಸ್ವಾಭಿಮಾನಿ ಕರ್ನಾಟಕ ವೇದಿಕೆಯು ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ಗೆ 2024ರಲ್ಲಿ ಪ್ರಕಟಗೊಂಡ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಲೇಖಕರು ಮತ್ತು ಪ್ರಕಾಶಕರಿಂದ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ 4 ಪ್ರಕಾರದ, 4 ಕೃತಿಗಳಿಗೆ (ಒಂದು ಡಾ. ಸಿ. ಸೋಮಶೇಖರ, ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ (ರಿ) ಬೆಂಗಳೂರು, ದತ್ತಿ ಪ್ರಶಸ್ತಿ) ಕತೆ, ಕಾದಂಬರಿ, ಕವಿತೆ, ಲೇಖನ, ಮಕ್ಕಳ ಸಾಹಿತ್ಯ, ನಾಟಕ ಇತ್ಯಾದಿಯಾಗಿ ತಲಾ 5,000 ರೂ. ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಪುಸ್ತಕದ ಮೂರು ಪ್ರತಿಗಳನ್ನು ದಿನಾಂಕ 10 ಮೇ 2025ರ ಒಳಗಾಗಿ ಕಳುಹಿಸಬೇಕು ಎಂದು ವೇದಿಕೆಯ ಅಧ್ಯಕ್ಷ ದ್ವಾರನಕುಂಟೆ ಪಾತಣ್ಣ ತಿಳಿಸಿದ್ದಾರೆ. ಪುಸ್ತಕಗಳನ್ನು ಕಳುಹಿಸಬೇಕಾದ ವಿಳಾಸ: ದ್ವಾರನಕುಂಟೆ ಪಾತಣ್ಣ, ಅಧ್ಯಕ್ಷರು ಸ್ವಾಭಿಮಾನಿ ಕರ್ನಾಟಕ ವೇದಿಕೆ, ನಂ.118, ಹೊಂಬೆಳಕು, ಹೆಚ್. ಎಂ. ಟಿ. ಲೇ ಔಟ್, ನಾಗಸಂದ್ರ ಅಂಚೆ, ಬೆಂಗಳೂರು 560073.
ಮಂಗಳೂರು: ಅಗಲಿದ ಹಿರಿಯ ಯಕ್ಷಗಾನ ಕಲಾವಿದ, ಐತಿಹಾಸಿಕ ಕರ್ನಾಟಕ ಮೇಳದಲ್ಲಿ ಸುದೀರ್ಘ ತಿರುಗಾಟ ಮಾಡಿದ ನವರಸ ನಾಯಕ ಬೆಜ್ಜದಗುತ್ತು ದಿ. ಪುಳಿಂಚ ರಾಮಯ್ಯ ಶೆಟ್ಟರ ಸ್ಮರಣಾರ್ಥ ಮೂರು ವರ್ಷಕ್ಕೊಮ್ಮೆ ನೀಡಲಾಗುವ ‘ಪುಳಿಂಚ ಪ್ರಶಸ್ತಿ’ಗೆ ಈ ಬಾರಿ ಯಕ್ಷಗಾನದ ಮೂವರು ಪ್ರಸಿದ್ಧ ಕಲಾವಿದರನ್ನು ಆಯ್ಕೆಮಾಡಲಾಗಿದೆ. ತೆಂಕುತಿಟ್ಟಿನ ಹಿರಿಯ ಕಲಾವಿದರಾದ ಬೋಳಾರ ಸುಬ್ಬಯ್ಯ ಶೆಟ್ಟಿ, ಗೋಣಿಬೀಡು ಸಂಜಯಕುಮಾರ್ ಶೆಟ್ಟಿ ಮತ್ತು ಮಿಜಾರು ತಿಮ್ಮಪ್ಪ ಅವರುಗಳನ್ನು 2023-25ನೇ ಸಾಲಿನ ಪುಳಿಂಚ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪುಳಿಂಚ ಶ್ರೀಧರ ಶೆಟ್ಟಿ ತಿಳಿಸಿದ್ದಾರೆ ಇದೇ ಸಂದರ್ಭದಲ್ಲಿ ದಿ. ಬಂಟ್ವಾಳ ಜಯರಾಮ ಆಚಾರ್ಯರಿಗೆ ಮರಣೋತ್ತರವಾಗಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 25,000 ನಗದನ್ನು ಒಳಗೊಂಡಿದೆ. ದಿನಾಂಕ 04 ಮೇ 2025 ರಂದು ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಚೆಂಡೆ ಶ್ರೀ ಕಲ್ಲುರ್ಟಿ ದೈವಸ್ಥಾನದ ಪುನಃ ಪ್ರತಿಷ್ಠೆ, ಸಾನಿಧ್ಯ ಕಲಶಾಭಿಷೇಕ ಮತ್ತು ತ್ರೈ ಮಾಸಿಕ ಕೋಲೋತ್ಸವದ ಸಂದರ್ಭ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಪ್ರಶಸ್ತಿ ಪ್ರದಾನ…
ಉಡುಪಿ : ಭಾವನಾ ಪೌಂಡೇಶನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಗ್ರಾಮೀಣ ಭಾಗದಲ್ಲಿ ಸಂಯೋಜಿಸಿದ ಬಾಲ ಲೀಲಾ ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 13 ಏಪ್ರಿಲ್ 2025ರಂದು ಹಾವಂಜೆಯ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರಕಲಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ “ವಿಶ್ವ ಕಲಾ ಸಿಂಧು” ಪುರಸ್ಕಾರವನ್ನು ಆರ್ಟಿಸ್ಟ್ ಫೋರಂ ಇದರ ಅಧ್ಯಕ್ಷರಾದ ರಮೇಶ್ ರಾವ್ ಇವರಿಗೆ ನೀಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಯುತರು “ಚಿತ್ರಕಲೆ ಮಕ್ಕಳ ಮನಸ್ಸನ್ನು ಹದಗೊಳಿಸಲು ಬಹು ಮುಖ್ಯವಾದ ಕಲಾಪ್ರಕಾರ ಅಂತೆಯೇ ಚಿಣ್ಣರು ಸೃಜನಶೀಲರಾಗಿರಬೇಕಾದುದೂ ಮುಖ್ಯ. ಗ್ರಾಮೀಣ ಭಾಗದಲ್ಲಿ ಈ ತೆರನಾದ ಚಟುವಟಿಕೆಗಳು ಇಂದಿಗೆ ಅತ್ಯವಶ್ಯಕ” ಎಂಬುದಾಗಿ ಅಭಿಪ್ರಾಯಪಟ್ಟರು. ಭಾವನಾ ಪುರಸ್ಕಾರವನ್ನು ಸ್ವೀಕರಿಸಿದ ಹಿರಿಯ ಪತ್ರಕರ್ತರಾದ ನಾಗರಾಜ್ ವರ್ಕಾಡಿ ಮಾತನಾಡಿ “ಈ ಪುರಸ್ಕಾರವು ನಮ್ಮ ಕಾರ್ಯ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಒಂದು ಎಚ್ಚರಿಕೆ. ಅಂತೆಯೇ ಇನ್ನಷ್ಟು ರಂಗಭೂಮಿ ವಲಯದಲ್ಲಿ ಕಾರ್ಯವನ್ನು ಮಾಡಲು ಪ್ರೇರಣೆ”…
ಉಡುಪಿ : ಹಿರಿಯ ಸಾಹಿತಿ ಕು. ಗೋ. (ಗೋಪಾಲಕೃಷ್ಣ ಭಟ್) ಇವರ ‘ಕು. ಗೋ. ಸಮಗ್ರ ಸಾಹಿತ್ಯ’ ಕೃತಿಯ ಲೋಕಾರ್ಪಣಾ ಸಮಾರಂಭವು ದಿನಾಂಕ 13 ಏಪ್ರಿಲ್ 2025ರ ಭಾನುವಾರದಂದು ಉಡುಪಿಯ ಇಂದ್ರಾಳಿಯಲ್ಲಿರುವ ಅವರ ನಿವಾಸ ‘ವಾಗ್ದೇವಿ’ಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಾಹಿತಿ ವಿ. ಗಣೇಶ ಮಾತನಾಡಿ “ಬರೆದ ಪುಸ್ತಕವನ್ನು ಕೊಂಡು ಓದುವುದೇ ಓದುಗರು ಲೇಖಕನಿಗೆ ನೀಡುವ ಕೊಡುಗೆಯಾಗಿದೆ. ಬರೆದಿದ್ದನ್ನು ಜನರು ಓದಿದಾಗ ಲೇಖಕನೂ ಸಂತೋಷಗೊಳ್ಳುತ್ತಾನೆ. ಹೆಸರು, ಪ್ರೀತಿ, ವಿಶ್ವಾಸ, ಸಾಹಿತ್ಯಾಭಿಮಾನಕ್ಕೆ ಕು. ಗೋ. ಹೆಸರುವಾಸಿ ಆಗಿದ್ದಾರೆ. ಸಾಹಿತ್ಯ ಇರುವವರೆಗೆ ಅವರು ಹಾಗೂ ಅವರ ಹಾಸ್ಯಪ್ರಜ್ಞೆ ಅಜರಾಮರ” ಎಂದು ಬಣ್ಣಿಸಿದರು. ಸಾಹಿತಿ ಡಾ. ಪಾದೇಕಲ್ಲು ವಿಷ್ಣು ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕು. ಗೋ. ಇವರ ಮೊಮ್ಮಕ್ಕಳಾದ ಸಂತೃಪ್ತ ಹೆರ್ಗ, ಪ್ರತೀಕ್ಷಾ ಬಿ. ಹಾಗೂ ವಿಶ್ಲೇಶ ಭಟ್ ಇವರುಗಳು ಪುಸ್ತಕ ಲೋಕಾರ್ಪಣೆಗೊಳಿಸಿದರು. ಪುಸ್ತಕ ಪ್ರಕಾಶಕರಾದ ವಿ. ಎಸ್. ನಾಗಮಣಿ, ಸಾಹಿತಿ ಅಂಬ್ರಯ್ಯ ಮಠ ಉಪಸ್ಥಿತರಿದ್ದರು. ಉಡುಪಿ ತಾಲೂಕು ಕ.…
ತೆಕ್ಕಟ್ಟೆ : ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಸಂಸ್ಥೆಯು ತನ್ನ ಬೆಳ್ಳಿಹಬ್ಬದ ಅಂಗವಾಗಿ ಆಯೋಜಿಸಿದ ‘ಶ್ವೇತಯಾನ’ ಕಾರ್ಯಕ್ರಮದ 125ನೆಯ ಕಾರ್ಯಕ್ರಮವಾಗಿ ‘ಶ್ವೇತಯಾನ’ದ ಸಮಾರೋಪ ಸಮಾರಂಭ ‘ಮಧ್ಯಮಾವತಿ’ಯು ದಿನಾಂಕ 19 ಏಪ್ರಿಲ್ 2025ರಂದು ಸಂಜೆ ಘಂಟೆ 6.00ಕ್ಕೆ ತೆಕ್ಕಟ್ಟೆಯ ಕುವೆಂಪು ಶಾಲೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾನಸಿ ಸುಧೀರ್ ನೇತೃತ್ವದ ನೃತ್ಯ ನಿಕೇತನ ಕೊಡವೂರು ತಂಡದಿಂದ ನೃತ್ಯೋಪಾಸನೆ ನಡೆಯಲಿದೆ.
ಧಾರವಾಡ : ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ ಧಾರವಾಡದ 2024ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 20 ಏಪ್ರಿಲ್ 2025ನೇ ಭಾನುವಾರ ಬೆಳಗ್ಗೆ ಘಂಟೆ 10.00ಕ್ಕೆ ಧಾರವಾಡದ ಆರ್. ಎನ್. ಶೆಟ್ಟಿ ಕ್ರೀಡಾಂಗಣದ ಬಳಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ. ಖ್ಯಾತ ಕಥೆಗಾರರು ಮತ್ತು ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ ಧಾರವಾಡ ಇದರ ಅಧ್ಯಕ್ಷರಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶ್ರೀ ಪ್ರಕಾಶ ಪುಟ್ಟಪ್ಪ ಇವರ ‘ಗಾಂಧಿ ಜೋಡಿನ ಮಳಿಗೆ’ ಕಥಾ ಸಂಕಲನಕ್ಕೆ ಮತ್ತು ಶ್ರೀ ಮಂಜುನಾಥ ಕುಣಿಗಲ್ ಇವರ ‘ದೂರ ದೇಶದ ದೇವರು’ ಕಥಾ ಸಂಕಲನಕ್ಕೆ ಧಾರವಾಡದ ಖ್ಯಾತ ಸಂಸ್ಕೃತ ವಿದ್ವಾಂಸರು ಮತ್ತು ಚಿಂತಕರಾದ ಡಾ. ಶ್ರೀರಾಮ ಭಟ್ಟ ಇವರು ‘ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ 2024’ ಪ್ರದಾನ ಮಾಡಲಿದ್ದಾರೆ. ಧಾರವಾಡದ ಖ್ಯಾತ ಕಥೆಗಾರರಾದ ಪ್ರೊ. ರಾಘವೇಂದ್ರ ಪಾಟೀಲ ಇವರು ಪ್ರಶಸ್ತಿ ಪುರಸ್ಕೃತ ಕಥಾ ಸಂಕಲನಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.…
ಬಳ್ಳಾರಿ : ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಮತ್ತು ವಿಶೇಷ ಮಹಾಸಭೆ 27 ಏಪ್ರಿಲ್ 2025ರ ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ವಹಿಸಲಿದ್ದು, ಪರಿಷತ್ತಿನ ಜಿಲ್ಲಾ ತಾಲೂಕು ಹಾಗೂ ಹೋಬಳಿ ಪದಾಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರುಗಳು ಸಭೆಯಲ್ಲಿ ಪಾಲ್ಗೊಂಡು ವಾರ್ಷಿಕ ಮಹಾಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ. ಪಿ. ಕೇಶವ ಕಾಮತ್ ವಿನಂತಿಸಿದ್ದಾರೆ.
ಕೋಟ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ‘ಸುವರ್ಣ ಪರ್ವ’ದ ಸರಣಿ ಕಾರ್ಯಕ್ರಮವಾಗಿ ಎರಡು ದಿವಸಗಳ ಆಹ್ವಾನಿತ ತಂಡಗಳ ‘ಯಕ್ಷ ತ್ರಿವಳಿ’ ಯಕ್ಷೋತ್ಸವವು ದಿನಾಂಕ 17 ಎಪ್ರಿಲ್ 2025ರ ಗುರುವಾರ ಮತ್ತು 18 ಏಪ್ರಿಲ್ 2025ರ ಶುಕ್ರವಾರದಂದು ಕೋಟ ಮೂರ್ಕೈಯ ಹಂದೆ ಮಹಾ ವಿಷ್ಣು ವಿನಾಯಕ ದೇವಸ್ಥಾನದಲ್ಲಿ ನಡೆಯಲಿದೆ. ಮೊದಲ ದಿನ ಸಂಜೆ 5.30ಕ್ಕೆ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿಯವರ ಸಭಾ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದಲ್ಲಿ ಕುಂದಾಪುರದ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕಿರಣ ಕುಮಾರ ಕೊಡ್ಗಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸಮಾರಂಭದಲ್ಲಿ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ, ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಆನಂದ ಸಿ. ಕುಂದರ್, ಉಡುಪಿ ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್, ಕೋಟತಟ್ಟು ಪಂಚಾಯತ್ ಇದರ ಅಧ್ಯಕ್ಷರಾದ ಸತೀಶ್ ಬಾರಿಕೆರೆ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಅಧ್ಯಕ್ಷರಾದ ಬಲರಾಮ…