Author: roovari

ಉಡುಪಿ : ಖ್ಯಾತ ರಂಗ ಕಲಾವಿದರಾದ ಟಿ. ಪ್ರಭಾಕರ್ ಕಲ್ಯಾಣಿ ದಿನಾಂಕ 08 ಆಗಸ್ಟ್ 2025 ರಂದು ನಿಧನರಾದರು. ಇವರು ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿ ಜಾರಿಬಿದ್ದಿದ್ದರು. ಚಿಕಿತ್ಸೆ ಪಡೆದ ಇವರು ಇಂದು ಬೆಳಿಗ್ಗೆ 8:30 ಸುಮಾರಿಗೆ ಮನೆಯಲ್ಲಿ ಕೈಕಾಲು ನೋವು ಎಂದು ಪತ್ನಿ ಜೊತೆ ಹೇಳಿಕೊಂಡಿದ್ದರು. ಇನ್ನೇನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕೆನ್ನುವಷ್ಟರಲ್ಲಿ ನಿಧನರಾದರು. ರಂಗ ಕಲಾವಿದರಾಗಿ, ವಿವಿಧ ನಾಟಕಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಪ್ರಭಾಕ‌ರ್ ಪತ್ನಿ ಓರ್ವ ಪುತ್ರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಬೀಡಿನ ಗುಡ್ಡೆಯ ರುದ್ರಭೂಮಿಯಲ್ಲಿ ನಡೆಯಲಿದೆ.

Read More

ಮೈಸೂರು : ಕಲಾಸುರುಚಿ ಮೈಸೂರು ಇದರ ವತಿಯಿಂದ ‘ಕಥೆ ಕೇಳೋಣ ಬನ್ನಿ’ ಕಾರ್ಯಕ್ರಮದ 892ನೇ ಸಂಚಿಕೆಯು ದಿನಾಂಕ 09 ಆಗಸ್ಟ್ 2025 ಶನಿವಾರ ಸಂಜೆ ಗಂಟೆ 4-30ಕ್ಕೆ ಮೈಸೂರಿನ ಕುವೆಂಪು ನಗರ, ಚಿತ್ರಭಾನು ರಸ್ತೆ, ನಂ.476, ಸುರುಚಿ ರಂಗಮನೆಯಲ್ಲಿ ನಡೆಯಲಿದೆ. ಈ ವಾರದ ಕಥೆಗಾರರು ಮೈಸೂರಿನ ಕವಯಿತ್ರಿ, ಲೇಖಕಿ, ಅನುವಾದಕಿ ಹಾಗೂ ಗಾಯಕಿ ಶ್ರೀಮತಿ ಪ್ರಭಾ ಶಾಸ್ತ್ರಿ ಜೋಶ್ಯುಲ. ತಾವು ಮಕ್ಕಳನ್ನು ಕರೆದುಕೊಂಡು ಬಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಪ್ರೋತ್ಸಾಹಿಸಬೇಕೆಂದು ಕೋರುತ್ತೇವೆ. https://wwwyoutube.com/kalasuruchimysore ಇದು ಕಲಾಸುರುಚಿಯ ಯುಟ್ಯೂಬ್ ಚಾನೆಲ್ ನ ಲಿಂಕ್. ನೀವೂ ನೋಡಿ – ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ದಯವಿಟ್ಟು ಚಾನೆಲ್ ನ್ನು ಸಬ್ಸ್ ಕ್ರೈಬ್ ಮಾಡಿ. ಕಥೆ ಕೇಳೋಣ ಬನ್ನಿ ಕಾರ್ಯಕ್ರಮದ ಕೊನೆಯಲ್ಲಿ ಪದಕೋಶ ಕಾರ್ಯಕ್ರಮವಿರುತ್ತದೆ. ದಯವಿಟ್ಟು ಪೋಷಕರಲ್ಲಿ ಒಂದು ಕಳಕಳಿಯ ಮನವಿ. ಕಥೆ ಕೇಳೋಣ ಬನ್ನಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕಳುಹಿಸಿಕೊಡಿ. ಹೆಚ್ಚಿನ ಮಾಹಿತಿಗಾಗಿ 92435 81097 ಮತ್ತು 99459 43115 ಸಂಖ್ಯೆಯನ್ನು…

Read More

ಎಡನೀರು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯ ವೃತಾಚರಣೆ ಪ್ರಯುಕ್ತ ದಿನಾಂಕ 09 ಆಗಸ್ಟ್ 2025ರಿಂದ 12 ಆಗಸ್ಟ್ 2025ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿ ದಿನ ಸಂಜೆ 6-00 ಗಂಟೆಗೆ ಶ್ರೀ ಎಡನೀರು ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 09 ಆಗಸ್ಟ್ 2025ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಕುಮಾರಿ ಆತ್ಮಶ್ರೀ ಮತ್ತು ಕುಮಾರಿ ಆದಿಶ್ರೀ ಇವರ ಹಾಡುಗಾರಿಕೆಗೆ ಕುಮಾರಿ ತನ್ಮಯಿ ಉಪ್ಪಂಗಳ ವಯಲಿನ್ ಮತ್ತು ವಿದ್ವಾನ್ ಬಾಲಕೃಷ್ಣ ಹೊಸಮನೆ ಇವರು ಮೃದಂಗದಲ್ಲಿ ಸಹಕರಿಸಲಿದ್ದಾರೆ. ರಾತ್ರಿ 7-30 ಗಂಟೆಗೆ ಮಂಗಳೂರು ಕದ್ರಿಯ ನೃತ್ಯಭಾರತೀ ಪ್ರಸ್ತುತ ಪಡಿಸುವ ‘ಕೃಷ್ಣಾಂತರಂಗ –ನವರಾಸ ರಾಮ’ ನೃತ್ಯರೂಪಕವನ್ನು ವಿದುಷಿ ಗೀತಾ ಸರಳಾಯ ಮತ್ತು ವಿದುಷಿ ರಶ್ಮಿ ಸರಳಾಯ ಇವರು ನೃತ್ಯ ಸಂಯೋಜನೆ ಮತ್ತು ನಿರ್ದೇಶನ ಮಾಡಿರುತ್ತಾರೆ. ದಿನಾಂಕ 10 ಆಗಸ್ಟ್ 2025ರಂದು ಉಪ್ಪಿನಂಗಡಿಯ ವಸುಧಾ ಪ್ರತಿಷ್ಠಾನ ಪ್ರಸ್ತುತ ಪಡಿಸುವ ‘ಭಾರ್ಗವ ವಿಜಯ’ ಯಕ್ಷಗಾನ ಬಯಲಾಟ…

Read More

ಬ್ರಹ್ಮಾವರ : ಚೌಕಿಮನೆಯ ಭೀಷ್ಮ ದಿ. ಬಾಲಕೃಷ್ಣ ನಾಯಕ್ ಹಂದಾಡಿ (ಬಲ್ಲಣ್ಣ) ಇವರ ಪ್ರಥಮ ಸಂಸ್ಮರಣೆ, ಪುತ್ಥಳಿ ಅನಾವರಣ, ಸನ್ಮಾನ ಹಾಗೂ ಯಕ್ಷಗಾನ ಕಾರ್ಯಕ್ರಮ ‘ನೆನಪು’ ಚೌಕಿಮನೆಯ ಬೆಳಕಿನಲಿ ದಿನಾಂಕ 09 ಆಗಸ್ಟ್ 2025ರಂದು ಬ್ರಹ್ಮಾವರ ಬಂಟರ ಭವನದಲ್ಲಿ ಸಂಜೆ 3-30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ರಾಜೇಶ್ ಶ್ಯಾನುಭೋಗ್ ಇವರಿಂದ ಭಾವ ನಮನ, ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೇಶ್ ಶೆಟ್ಟಿ ಬಿರ್ತಿ ಇವರು ವಹಿಸಲಿದ್ದು, ಹಿರಿಯ ಯಕ್ಷಗಾನ ಕಲಾವಿದರಾದ ಇಂದ್ರಾಳಿ ಪ್ರಭಾಕರ ಆಚಾರ್ಯ ಇವರನ್ನು ಸನ್ಮಾನಿಸಲಾಗುವುದು. ನಾಗಾನಂದ ವಾಸುದೇವ ಆಚಾರ್ಯ ಇವರು ಪುತ್ಥಳಿ ಅನಾವರಣಗೊಳಿಸಲಿದ್ದು, ಮುರಳಿ ಕಡೇಕಾರ್, ಪ್ರಸಾದ್ ಕುಮಾರ್ ಮೊಗೆಬೆಟ್ಟು, ನಾಗರಾಜ ಉಪಾಧ್ಯಾಯ, ನಾಗಭೂಷಣ್ ನಾಯಕ್ ಇವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5-30 ಗಂಟೆಗೆ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದವರಿಂದ ‘ಮೀನಾಕ್ಷಿ ಕಲ್ಯಾಣ’ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

Read More

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಕ್ಷೇಮ ಹಾಲ್ ನಲ್ಲಿ ದಿನಾಂಕ 31 ಜುಲೈ 2025 ಗುರುವಾರ ‘ಶರಸೇತು ಬಂಧ’ ಎಂಬ ಮಹಾಭಾರತದಿಂದ ಆಯ್ದ ಭಾಗದ ಯಕ್ಷಗಾನ ತಾಳಮದ್ದಳೆಯು ಪ್ರಸಿದ್ಧ ಮೇರು ಕಲಾವಿದರ ಕೂಡುವಿಕೆಯಿಂದ ಜರುಗಿತು. ಹನುಮಗಿರಿ ಮೇಳದ ಯುವ ಪ್ರಸಿದ್ಧ ಭಾಗವತರಾದ ಚಿನ್ಮಯ ಭಟ್ ಇವರ ಹಾಡುಗಾರಿಕೆ, ಚೆಂಡೆವಾದನದಲ್ಲಿ ಎತ್ತಿದ ಕೈ ಸೀತಾರಾಮ ತೋಳ್ವಾಡಿತ್ತಾಯ, ಮೃದಂಗದಲ್ಲಿ ಜನಾರ್ದನ ತೋಳ್ವಾಡಿತ್ತಾಯರವರು ಹಿಮ್ಮೇಳ ವಾದಕರಾಗಿದ್ದರು. ಅರ್ಜುನನ ಪಾತ್ರದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ಹನುಮಂತನಾಗಿ ಜಬ್ಬಾರ್ ಸಮೋ ಸಂಪಾಜೆ ಹಾಗೂ ಶ್ರೀ ಕೃಷ್ಣನ ಪಾತ್ರದಲ್ಲಿ ಪವನ್ ಕಿರಣ್ ಕೆರೆಯವರು ತಮ್ಮ ನಿರರ್ಗಳ ಅರ್ಥಗರ್ಭಿತ ಮಾತುಗಳಿಂದ ನೆರೆದ ಸಭಿಕರನ್ನು ಭಾವಪರವಶೆಯ ಮಾಯಾಲೋಕಕ್ಕೆ ಕೊಂಡೊಯ್ದರು. ಸೌಖ್ಯವನದಲ್ಲಿ ಪ್ರತಿ ವರ್ಷ ಆಷಾಢ ಮಾಸದಲ್ಲಿ ನಿರಂತರ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದ್ದು, ಇದರ ಪ್ರಾಯೋಜಕತ್ವವನ್ನು ಉಡುಪಿಯ ಖ್ಯಾತ ಕಾಂಟ್ರಾಕ್ಟರ್‌ದಾರರಾದ ಶ್ರೀ ನಂದಕುಮಾರ್ ಇವರು ವಹಿಸಿರುತ್ತಾರೆ. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಕಲಾವಿದರನ್ನು ಗೌರವಪೂರ್ವಕವಾಗಿ ಶ್ರೀ…

Read More

ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಅರ್ಪಿಸುವ ‘ನೃತ್ಯಾಂತರಂಗ 134’ ನೃತ್ಯ ಕಾರ್ಯಕ್ರಮವನ್ನು ದಿನಾಂಕ 09 ಆಗಸ್ಟ್ 2025ರಂದು ಸಂಜೆ 5-30 ಗಂಟೆಗೆ ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಉಡುಪಿಯ ಡಾ. ಮಂಜರಿಚಂದ್ರ ಪುಷ್ಪರಾಜ್ ಇವರ ಶಿಷ್ಯೆ ಸಾಯಿ ಅನ್ನಪೂರ್ಣೆ ಸುಧಾಕರ್ ಇವರು ನೃತ್ಯ ಪ್ರದರ್ಶನ ನೀಡಲಿದ್ದು, ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿ ಹಾಗೂ ಭರತನಾಟ್ಯ ಕಲಾವಿದೆ ವಿ. ಸುಶ್ಮಿತಾ ಯತೀಶ್ ಆಚಾರ್ಯ ಇವರು ಅಭ್ಯಾಗತರಾಗಿ ಭಾಗವಹಿಸಲಿರುವರು.

Read More

ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿವಿಧ ಚಟುವಟಿಕೆಗಳ ಮುನ್ನುಡಿಯಾಗಿ ಕಲಾ ಸಂಘದ ಉದ್ಘಾಟನಾ ಸಮಾರಂಭ ದಿನಾಂಕ 06 ಆಗಸ್ಟ್ 2026ರಂದು ವೈದೇಹಿ ಸಭಾಂಗಣದಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅನಿತಾ ಕಾಮತ್ ಕೆ. ಮಾತನಾಡಿ “ಕಲಾವಿಭಾಗ ಎಂಬುದು ಇತಿಹಾಸ, ಪರಂಪರೆ, ಸಂಸ್ಕೃತಿ, ದೇಶದ ಆರ್ಥಿಕ ಪರಿಸ್ಥಿತಿ, ವ್ಯವಹಾರ, ಅಭಿವೃದ್ಧಿ, ರಾಜಕೀಯ ವ್ಯವಸ್ಥೆಗಳು, ಸಮಾಜದ ಬಾಂಧವ್ಯ ಮುಂತಾದ ವೈವಿಧ್ಯಮಯ ವಿಷಯಗಳ ಸಾಗರ. ಕಲೆಯಿಂದ ಸೃಜನಶೀಲತೆ ಬೆಳೆಯುತ್ತದೆ. ವಿದ್ಯಾರ್ಥಿಗಳಲ್ಲಿ ಹಲವು ಬಗೆಯ ಪ್ರತಿಭೆಗಳು ಅಡಗಿವೆ. ಅವುಗಳ ಅನಾವರಣವಾಗಬೇಕಾದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಹಿಂಜರಿಯದೆ, ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಂಡು ಹೆಜ್ಜೆಯನ್ನು ಮುಂದಿಡಬೇಕು. ವಿದ್ಯಾರ್ಥಿಗಳಲ್ಲಿ ಮಾನವಿಕ ಮೌಲ್ಯಗಳ ಬೆಳವಣಿಗೆ, ಇತರರ ಭಾವನೆಗೆ ಸ್ಪಂದಿಸುವ ಮನಸ್ಸು ಇರಬೇಕು” ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ. ಎಂ. ವಹಿಸಿಕೊಂಡರು. ವೇದಿಕೆಯಲ್ಲಿ ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿ ಹಾಗೂ ಕಲಾ ಸಂಘದ ಅಧ್ಯಕ್ಷರಾದ ಅನೂಪ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ…

Read More

ಮುಡಿಪು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ ಅಂಬ್ಲಮೊಗರು ಸರಕಾರಿ ಪ್ರೌಢಶಾಲೆಯ ಸಹಯೋಗದೊಂದಿಗೆ ಏರ್ಪಡಿಸಿದ ‘ಕನ್ನಡ ನವೋದಯ ಸಂಭ್ರಮ’ ಕಾರ್ಯಕ್ರಮವು ದಿನಾಂಕ 05 ಆಗಸ್ಟ್ 2025ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಡಾ. ವಿಶ್ವನಾಥ ಎನ್. ನೇರಳೆಕಟ್ಟೆ ಮಾತನಾಡಿ “ಕುವೆಂಪು ಮತ್ತು ಬೇಂದ್ರೆ ಕನ್ನಡ ನವೋದಯ ಕಾಲದ ಎರಡು ಕಣ್ಣುಗಳಿದ್ದಂತೆ. ಕವಿಗಳಾಗಿ ಅವರಿಬ್ಬರೂ ಎಷ್ಟು ದೊಡ್ಡವರೋ ಬದುಕಿನಲ್ಲಿ ಕೂಡ ಪ್ರಕೃತಿ ಪ್ರೀತಿ, ನಾಡು ನುಡಿಯ ಅಭಿಮಾನ, ವಿಶ್ವ ಸೋದರತೆಯ ಭಾವನೆಯನ್ನು ಹೊಂದಿ ಗೌರವಾರ್ಹರಾಗಿದ್ದಾರೆ. ಕನ್ನಡ ನವೋದಯ ಕಾಲದ ಬರಹಗಾರರು ಬದುಕು ಬರಹದ ನಡುವೆ ಸಾಂಗತ್ಯ ಇರಬೇಕು ಎಂದು ಪ್ರತಿಪಾದಿಸಿದ್ದಾರೆ” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕ. ಸಾ. ಪ. ಉಳ್ಳಾಲ ಘಟಕದ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಮಾತನಾಡಿ “ಭಾವನೆಗಳಿಲ್ಲದೇ ಮನುಷ್ಯ ಬದುಕಲಾರ. ಪ್ರಕೃತಿಯ ಜೊತೆಗಿನ ಒಡನಾಟದಿಂದ ಮನುಷ್ಯ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಬಲ್ಲ. ನಮ್ಮ ಸುತ್ತಲಿನ ಮನುಷ್ಯರನ್ನು ಪ್ರೀತಿಸುತ್ತಾ ಗೌರವಿಸುತ್ತಾ ಸಹಭಾವದ ಬದುಕನ್ನು ಹೊಂದುವುದೇ ಬಾಳಿನ…

Read More

ಬೆಂಗಳೂರು : ಶ್ರೀ ಮುರಳಿಧರ ಸಂಗೀತ ನೃತ್ಯ ಮಹಾವಿದ್ಯಾಲಯ (ರಿ.) ಮೋಹನ ತರಂಗಿಣಿ ಸಂಗೀತ ಸಭಾ (ಕಲಾಪೋಷಕ ಪ್ರಶಸ್ತಿ ಪುರಸ್ಕೃತ ಸಂಸ್ಥೆ) ಹಾಗೂ ಪಲ್ಲವಿ ಗಾನಸಭಾ (ಲ.), ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ‘ಪಲ್ಲವಿ ಕಾರ್ಯಾಗಾರ’ವು ದಿನಾಂಕ 10 ಆಗಸ್ಟ್ 2025ರ ಭಾನುವಾರದಿಂದ ದಿನಾಂಕ 28 ಸೆಪ್ಟೆಂಬರ್2025ರ ಭಾನುವಾರದವರೆಗೆ ಎಂಟು ವಾರಗಳು ಭಾನುವಾರ (ಬೆಳಗ್ಗೆ ಘಂಟೆ 10 ರಿಂದ 12:30 ರವರೆಗೆ) ನಡೆಯಲಿದೆ. ಕೀರ್ತಿಶೇಷ ಲಯಯೋಗಿ ಪೂಜ್ಯ ವಿದ್ವಾನ್ ಶ್ರೀ ಪಲ್ಲವಿ ಎಸ್. ಚಂದ್ರಪ್ಪ ಇವರ ಸ್ಮರಣಾರ್ಥ ಆಯೋಜಿಸುವ ಈ ಕಾರ್ಯಕ್ರಮವನ್ನು ದಿನಾಂಕ 10 ಆಗಸ್ಟ್ 2025 ರಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯ ಬಳ್ಳಾರಿ ಇಲ್ಲಿನ ಕುಲಪತಿಗಳಾದ ಡಾ. ಪ್ರೊ. ಎಂ. ಮುನಿರಾಜು ಉದ್ಘಾಟಿಸಲಿದ್ದು, ಪಲ್ಲವಿ ಗಾನಸಭಾ (ರಿ.) ಬೆಂಗಳೂರು ಇದರ ಅಧ್ಯಕ್ಷರಾದಕ ಗುರು ನಾದಬ್ರಹ್ಮ ವಿದ್ವಾನ್ ಶ್ರೀ ಪಲ್ಲವಿ ಸಿ. ವರದರಾಜ, ಮೋಹನ ತರಂಗಿಣಿ ಸಂಗೀತ ಸಭಾ ಬೆಂಗಳೂರು ಇದರ ಕಾರ್ಯದರ್ಶಿಗಳಾದ ಶ್ರೀಮತಿ ಲಕ್ಷ್ಮೀದೇವಿ ಮೋಹನಕುಮಾರ ಉಪಸ್ಥಿತರಿರುವರು. ಈ…

Read More

ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಮಹರ್ಷಿ ವಾಲ್ಮೀಕಿ ವಸತಿ ಶಾಲೆ ಕದ್ರಿ ಮಂಗಳೂರು ಜಂಟಿ ಆಶ್ರಯದಲ್ಲಿ 112ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ‌ದಿನಾಂಕ 9 ಆಗಸ್ಟ್ 2025ರ ಶನಿವಾರ ಮಹರ್ಷಿ ವಾಲ್ಮೀಕಿ ಸಭಾಂಗಣದಲ್ಲಿ ಬೆಳಿಗ್ಗೆ 10:30 ಕ್ಕೆ ನಡೆಯಲಿದೆ. ಸಾಹಿತ್ಯ ಅಭಿರುಚಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹರ್ಷಿ ವಾಲ್ಮೀಕಿ ವಸತಿ ಶಾಲೆ ಇಲ್ಲಿನ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುನೀತಾ ವಹಿಸಲಿದ್ದು, ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ಕರಾವಳಿ ಡೈಲಿ ನ್ಯೂಸ್ ಇದರ ಚೀಪ್ ಎಡಿಟರ್ ಆಗಿರುವ ಮಹೇಶ್ ಕನ್ನೇಶ್ವರ, ಹಿರಿಯ ಬರಹಗಾರರಾದ ಸುಬ್ರಾಯ ಭಟ್, ದೂರದರ್ಶನ ಸುದ್ದಿ ವಾಹಿನಿಯ ಜಿಲ್ಲಾ ವರದಿಗಾರರಾದ ರಾಜೇಶ್ ದಡ್ಡಂಗಡಿ, ಲೇಖಕಿ ನಿರ್ಮಲ ಉದಯಕುಮಾರ್ ಭಾಗವಹಿಸಲಿರುವರು. ಕಾರ್ಯಕ್ರಮದ ನಿರೂಪಣೆಯನ್ನು ಸುರೇಖಾ ಯಾಳವಾರ ಮಾಡಲಿರುವರು ಎಂದು ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು ತಿಳಿಸಿದ್ದಾರೆ.

Read More