Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಸೈಡ್ ವಿಂಗ್ (ರಿ.) ಬೆಂಗಳೂರು ಪ್ರಸ್ತುತ ಪಡಿಸುವ ಶೈಲೇಶ್ ಕುಮಾರ್ ಎಂ.ಎಂ. ಇವರ ರಚನೆ ನಿರ್ಮಾಣ ಮತ್ತು ನಿದೇಶನದಲ್ಲಿ ‘ಸಡನ್ನಾಗ್ ಸತ್ಹೋದ್ರೆ’ ನಾಟಕ ಪ್ರದರ್ಶನವನ್ನು ದಿನಾಂಕ 08 ಫೆಬ್ರವರಿ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದ ಸೇವಾ ಸದನದಲ್ಲಿ ಆಯೋಜಿಸಲಾಗಿದೆ. ಟಿಕೆಟ್ ದರ ರೂ.150/- ಆಗಿದ್ದು, ಹೆಚ್ಚಿನ ಮಾಹಿತಿಗಾಗಿ 9845087901 ಸಂಖ್ಯೆಯನ್ನು ಸಂಪರ್ಕಿಸಿರಿ.
ದಪ್ಪ ಮೀಸೆಯ ಅವಳಪ್ಪನ ಅಮಲು ಕಣ್ಣುಗಳಲಿ ಕದಡಿದ ನೆಮ್ಮದಿಯ ಹುಡುಕಿ ಸೋತಿದ್ದಾಳೆ! ಅಪ್ಪನ ಸೀಸೆಯ ಕಡು ಕಂದು ನೀರಿಗೆ ಅವಳ ಕಣ್ಣೀರಿನ ದಾಹ ತೀರಬಹುದೆಂದು ಕಾದಿದ್ದಾಳೆ! ನಿನ್ನೆಯ ಕನಸಿಗೆ ನಾಳೆಗಳಿಲ್ಲ ಇಂದಿನ ಬದುಕಿಗೆ ಆಸರೆಯಿಲ್ಲ ಕುಡುಕನಮಗಳು ಚುಚ್ಚುವರೆಲ್ಲ ಸ್ನೇಹಿತರಿಲ್ಲ ಬಂಧುಗಳಿಲ್ಲ ಅವಳು ತಲೆ ಎತ್ತಿ ಬದುಕುವುದನ್ನೇ ಮರೆತಿದ್ದಾಳೆ! ಸೀಸೆಯ ನೀರಿಗೆ ಬೆಂಕಿಯ ಸೇಡು ಸುಟ್ಟಿದೆ ಬದುಕು ಬೆಂದಿದೆ ಭಾವ ಹೂವಿನಂತಹ ಹುಡುಗಿ ಮುದುಡಿದ್ದಾಳೆ! ಬಣ್ಣಗೆಟ್ಟ ಅವಳ ಕಥೆಗಳು ಯಾರೋ ಕೇಳುತ್ತೇನೆ ಅನ್ನುತ್ತಾರೆ! ಅಪಾತ್ರರ ಕಣ್ಣ ಅನುಕಂಪಕ್ಕೆ ಮಿಡಿಯುತ್ತಾಳೆ! ಎಲ್ಲರಲ್ಲೂ ಅಪ್ಪನನ್ನು ಹುಡುಕಿ ಸೋಲುತ್ತಾಳೆ! ಬಣ್ಣ ತುಂಬುತ್ತೇನೆಂದು ಬಂದವರು ಮಸಿಯ ಬಳಿಯುತ್ತಾರೆ! ಹೃದಯ ಒಡೆಯುತ್ತಾರೆ ಎಂದೂ ಮುಗಿಯದ ಏಕಾಂಗಿ ಅವಳ ಕವಿತೆಗೆ ಹೆಸರು ಯಾಕೆ? ಅನ್ನುತ್ತಾಳೆ! ಅವಳು ಮಾತು ಮತ್ತು ನಗು ಮರೆತಿದ್ದಾಳೆ! ಅನುಕಂಪ ಸುಡುಗಾಡು ಅನುಭೂತಿ ಬಿಡುಗಡೆಯೆನ್ನುತ್ತಾಳೆ!! -ಅಕ್ಷತಾ ಪ್ರಶಾಂತ್ ಕವಯಿತ್ರಿ/ಆಪ್ತಸಮಾಲೋಚಕಿ/ ಬ್ಯಾಂಕ್ ಉದ್ಯೋಗಿ, ಟೀಚರ್ಸ್ ಬ್ಯಾಂಕ್ ಉಡುಪಿ
ಉಡುಪಿ : ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ (ರಿ.) ಉಡುಪಿ ಇದರ ವತಿಯಿಂದ ನಡೆಯುತ್ತಿರುವ ಮೂರು ದಿನಗಳ ‘ರಂಗಭೂಮಿ ರಂಗೋತ್ಸವ’ದ ಎರಡನೇ ದಿನ ದಿನಾಂಕ 02 ಫೆಬ್ರವರಿ 2025 ಭಾನುವಾರದಂದು ಪ್ರಸಿದ್ಧ ವೈದ್ಯ ಡಾ. ಭಾಸ್ಕರಾನಂದ ಕುಮಾರ್ ಇವರು ನಾಡಿನ ಸಾಮಾಜಿಕ, ವೈದ್ಯಕೀಯ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿರುವ ಅನನ್ಯ ಕೊಡುಗೆಗಾಗಿ ‘2025ನೇ ಸಾಲಿನ ರಂಗಭೂಮಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಭಾಸ್ಕರಾನಂದ ಕುಮಾರ್ “ಬಾಲ್ಯದಲ್ಲಿಯೇ ರಂಗ ಭೂಮಿಯತ್ತ ಸೆಳೆತವಿದ್ದ ನಾನು ಮುಂದೆ ಯಕ್ಷಗಾನ ಕ್ಷೇತ್ರದಲ್ಲೂ ಹವ್ಯಾಸಿ ಕಲಾವಿದನಾಗಿ ನನ್ನಿಂದಾದಷ್ಟು ಕಲಾ ಸೇವೆ ಮಾಡಿದ್ದೇನೆ. ವೈದ್ಯ ವೃತ್ತಿಯಲ್ಲಿ ನಡೆಸಿದ ನನ್ನ ಕೆಲವೊಂದು ಸಾಧನೆಗಳು ವಿಶ್ವ ಮಾನ್ಯತೆ ತಂದುಕೊಟ್ಟಿದೆ. ಇದೀಗ ರಂಗಭೂಮಿ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತೋಷ ತಂದಿದೆ” ಎಂದರು. ಮಂಗಳೂರಿನ ಶಾರದಾ ಸಮೂಹ ಸಂಸ್ಥೆಯ ಪ್ರೊ. ಎಂ.ಬಿ. ಪುರಾಣಿಕ್, ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ್, ಎಂಜಿಎಂ ಕಾಲೇಜಿನ…
ಉಡುಪಿ : ನೃತ್ಯ ಸುಧಾ ಸಂಸ್ಥೆಯ ವತಿಯಿಂದ ಕರ್ನಾಟಕ ಕಲಾಶ್ರೀ ಕೀರ್ತಿಶೇಷ ಗುರು ಕಮಲಾ ಭಟ್ ಅವರಿಗೆ ಪುಷ್ಪ ನಮನ ಹಾಗೂ ನೃತ್ಯಾರ್ಚನೆ ‘ನೃತ್ಯ ಕಮಲಾರ್ಪಣಂ’ ಕಾರ್ಯಕ್ರಮವು ದಿನಾಂಕ 26 ಜನವರಿ 2025ರಂದು ಉಡುಪಿಯ ಯಕ್ಷಗಾನ ಕಲಾ ರಂಗದ ಐವೈಸಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಅಕಾಡಮಿ ಆಫ್ ಫೈನ್ ಆರ್ಟ್ಸ್ ಪ್ರಾಧ್ಯಾಪಕ ವಿದ್ವಾನ್ ಮಾಲೂರು ಪಿ. ಬಾಲಸುಬ್ರಹ್ಮಣ್ಯಂ ಮಾತನಾಡಿ “ಯಾವುದೇ ಕಲಾ ಸಂಸ್ಥೆ 20ವರ್ಷಗಳನ್ನು ಪೂರೈಸುವದೆಂದರೆ ಅದೊಂದು ದೊಡ್ಡ ಸಾಧನೆಯ ಮೈಲಿಗಲ್ಲು! ಇದರಿಂದ ನೃತ್ಯ ಸುಧಾ ಸಂಸ್ಥೆಯ ಗುರುಗಳು ಮತ್ತು ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಾಗಿದೆ. ಸಂಸ್ಥೆ ಇನ್ನಷ್ಟು ಬೆಳೆದು ಬೆಳಗಲಿ” ಎಂದು ಶುಭ ಹಾರೈಸಿದರು. ಉಡುಪಿ ಗೆರೆಬರೆ ಚಿತ್ರಕಲಾ ಕೇಂದ್ರದ ನಿರ್ದೇಶಕ ಜೀವನ್ ಶೆಟ್ಟಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ಹಿರಿಯ ವಿದ್ಯಾರ್ಥಿಗಳು ವಿದುಷಿಯರಾದ ನಿಧಿ ಸಾತ್ವಿಕ್ ಶೆಟ್ಟಿ, ಭಾಗೀರತಿ ಎಂ., ಸಿಂಚನಾ ಎಚ್.ಎಸ್. ಅನುಭವ ಹಂಚಿಕೊಂಡರು. ಉಡುಪಿ ರಾಧಾಕೃಷ್ಣ…
ಕಾಸರಗೋಡು : ಪ್ರಖ್ಯಾತ ಸ್ವರ್ಣ ಉದ್ಯಮಿಗಳೂ, ಸಮಾಜಸೇವಕರೂ ಆಗಿದ್ದ ಶ್ರೀ ಜಿ.ಎಲ್. ಆಚಾರ್ಯ ಪುತ್ತೂರು ಇವರ ಶತಮಾನದ ಸ್ಮರಣೆ ಕಾರ್ಯಕ್ರಮವು ದಿನಾಂಕ 09 ಫೆಬ್ರವರಿ 2025ರಂದು ಶ್ರೀ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯೊಂದಿಗೆ ಜರಗಲಿದೆ. ಅಪರಾಹ್ನ 3-00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಉದ್ಘಾಟಿಸಲಿದ್ದು, ಕರ್ನಾಟಕ ಸರಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದು, ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಭಟ್ ಟಿ. ರಾಮಕುಂಜ ಇವರು ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಶತಮಾನದ ನೆನಪಲ್ಲಿ ಕಿರುಹೊತ್ತಗೆ ‘ಬಂಗಾರ’ ಬಿಡುಗಡೆಗೊಳ್ಳಲಿದ್ದು, ಪತ್ರಕರ್ತ, ಯಕ್ಷಗಾನ ಕಲಾವಿದ ನಾ. ಕಾರಂತ ಪೆರಾಜೆ ಇವರು ಕೃತಿ ಪರಿಚಯ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಡಾ. ಶ್ರೀಪತಿ ಕಲ್ಲೂರಾಯ ಕಾರ್ಯಕ್ರಮ ನಿರೂಪಣೆ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆಯು ದಿನಾಂಕ 03 ಫೆಬ್ರವರಿ 2025ರಂದು ಶ್ರೀ ಮಹಾಲಿಂಗೇಶ್ವರ ದೇಗುಲದ ವಠಾರದಲ್ಲಿ ಪಾರ್ತಿಸುಬ್ಬ ವಿರಚಿತ ‘ವಾಲಿವಧೆ’ ಆಖ್ಯಾನ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಆನಂದ ಸವಣೂರು, ತೆಂಕಬೈಲು ಗೋಪಾಲಕೃಷ್ಣ ಭಟ್, ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಕುಮಾರಿ ಶರಣ್ಯ ನೆತ್ರಕೆರೆ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ (ದುಗ್ಗಪ್ಪ ನಡುಗಲ್ಲು ಮತ್ತು ಗುಡ್ಡಪ್ಪ ಬಲ್ಯ), ವಾಲಿ (ಗುಂಡ್ಯಡ್ಕ ಈಶ್ವರ ಭಟ್), ಸುಗ್ರೀವ (ಮಾಂಬಾಡಿ ವೇಣುಗೋಪಾಲ ಭಟ್), ತಾರೆ (ಭಾಸ್ಕರ್ ಬಾರ್ಯ) ಸಹಕರಿಸಿದರು. ಟಿ. ರಂಗನಾಥ ರಾವ್ ಸ್ವಾಗತಿಸಿ, ತಾರಾನಾಥ ಸವಣೂರು ವಂದಿಸಿದರು.
ರಾಮನಗರ : ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಯುನೆಸ್ಕೋ ಮಾನ್ಯತೆ ಪಡೆದ ಸಂಸ್ಥೆ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು ಇದರ ವತಿಯಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ‘ಮಹಿಳಾ ಜಾನಪದ ಲೋಕೋತ್ಸವ’ವನ್ನು ದಿನಾಂಕ 08 ಫೆಬ್ರವರಿ 2025 ಮತ್ತು 09 ಫೆಬ್ರವರಿ 2025ರಂದು ರಾಮನಗರದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ‘ಜಾನಪದ ಲೋಕ’ದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 08 ಫೆಬ್ರವರಿ 2025ರಂದು ಬೆಳಿಗ್ಗೆ 10-30 ಗಂಟೆಗೆ ರಾಮನಗರ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಹೆಚ್.ಎ. ಇಕ್ಬಾಲ್ ಹುಸೇನ್ ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಾನ್ಯ ಸಚಿವರಾದ ಶಿವರಾಜ್ ಎಸ್. ತಂಗಡಗಿ ಇವರು ‘ಲೋಕೋತ್ಸವ’, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷರಾದ ಟಿ. ತಿಮ್ಮೇ ಗೌಡ ಇವರು ‘ಯುವ ಜಾನಪದೋತ್ಸವ’ ಮತ್ತು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಕಾಶ್ ‘ಕರಕುಶಲ ಮೇಳ’ದ ಉದ್ಘಾಟನೆ ಮಾಡಲಿರುವರು. ರಾಜ್ಯ ಮಟ್ಟದ ಜನಪದ ಕಲೆಗಳ ಯುವ ಜಾನಪದೋತ್ಸವದಲ್ಲಿ ವಿವಿಧ ಕಲಾ ತಂಡಗಳಿಂದ ನಗಾರಿ…
ಕನ್ನಡದ ‘ಮಂಕುತಿಮ್ಮನ ಕಗ್ಗದ ಸರದಾರ’ ಎಂದೇ ಪ್ರಚಲಿತವಿರುವ ಡಿ. ವಿ. ಜಿ. ಇವರ ಸುಪುತ್ರ. ಓರ್ವ ಮೇರು ಬರಹಗಾರ, ಮಹಾನ್ ಸಸ್ಯಶಾಸ್ತ್ರಜ್ಞ ,ಚಿಂತಕ, ಸಂಶೋಧಕ, ವಿದ್ವಾಂಸ, ವಿನೋದ ಪೂರ್ಣ, ವಿಚಾರ ಪೂರ್ಣ ಹಾಗೂ ವೈಜ್ಞಾನಿಕ ಬರಹಗಾರ ಡಾ. ಬಿ. ಜಿ. ಎಲ್. ಸ್ವಾಮಿ ಇವರು 5 ಫೆಬ್ರವರಿ 1916 ರಲ್ಲಿ ಜನಿಸಿದರು .ಇವರ ತಾಯಿ ಭಾಗಿರತಮ್ಮನವರು. ಬಿ. ಜಿ. ಎಲ್. ಸ್ವಾಮಿ ಎಂದೇ ಖ್ಯಾತರಾದ ಇವರ ಪೂರ್ಣ ಹೆಸರು ಬೆಂಗಳೂರು ಗುಂಡಪ್ಪ ಲಕ್ಷ್ಮೀ ನಾರಾಯಣ ಸ್ವಾಮಿ. ಕನ್ನಡದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರಾದ ಇವರು ಉತ್ತಮ ಸಾಹಿತಿಯಾಗಿ ಹೆಸರು ಪಡೆದವರು. ಮುಖ್ಯವಾಗಿ ಸಸ್ಯಶಾಸ್ತ್ರ ಕ್ಷೇತ್ರದಲ್ಲಿ ಹಲವು ಪ್ರಮುಖ ಸಂಶೋಧನೆಗಳನ್ನು ನಡೆಸಿದ ಇವರ ಹೆಸರು ವೈಜ್ಞಾನಿಕ ಲೋಕಕ್ಕಿಂತಲೂ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯಿತು. ವಿಜ್ಞಾನವನ್ನು ಜನಸಾಮಾನ್ಯರಿಗೆ ಸ್ಪಷ್ಟವಾಗಿ ವಿವರಿಸುವ ಸಾಮರ್ಥ್ಯವನ್ನು ಹೊಂದಿದ್ದು, ತಮ್ಮ ಬರಹಗಳ ಮೂಲಕ ವಿಜ್ಞಾನ ಮತ್ತು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದವರು. ಸಸ್ಯಶಾಸ್ತ್ರ ಅಧ್ಯಯನ ಮಾಡಿ ಬಿ.…
ಉಡುಪಿ : ರಾಗ ಧನ ಸಂಸ್ಥೆಯು ಪ್ರತಿ ವರ್ಷ ಸ್ಥಳೀಯ ಪ್ರತಿಭಾವಂತ ಶಾಸ್ತ್ರೀಯ ಸಂಗೀತ ಸಾಧಕರಿಗೆ ನೀಡುವ “ರಾಗ ಧನ ಪಲ್ಲವಿ ಪ್ರಶಸ್ತಿ”ಗೆ ಗಾಯಕಿ ವಿದುಷಿ ಶ್ರುತಿ ಎಸ್. ಭಟ್ ಆಯ್ಕೆಯಾಗಿದ್ದಾರೆ. ಭಾಷಾ ವಿಜ್ಞಾನಾದಿ ನಾನಾ ಕ್ಷೇತ್ರಗಳ ವಿದ್ವಾಂಸರು ಹಾಗೂ ಸಂಗೀತ ಪ್ರಿಯರೂ ಆದ ಡಾ. ಸುಶೀಲಾ ಉಪಾಧ್ಯಾಯ ಇವರ ಸಂಸ್ಮರಣೆಯಲ್ಲಿ ಇವರ ಪತಿ ಡಾಕ್ಟರ್ ಯು. ಪಿ. ಉಪಾಧ್ಯಾಯ ಇವರು ಸ್ಥಾಪಿಸಿದ ಪ್ರಶಸ್ತಿ ಇದಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು 07 ಫೆಬ್ರವರಿ 2025ರಂದು ಸಂಜೆ 5 ಗಂಟೆಗೆ ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿರುವ 37ನೇಯ ಪುರಂದರ ದಾಸರು ಮತ್ತು ಸಂಗೀತ ತ್ರಿಮೂರ್ತಿ ಉತ್ಸವದ ಸಂದರ್ಭದಲ್ಲಿ ನಡೆಯಲಿದೆ. ಖ್ಯಾತ ಹಿರಿಯ ಕೊಳಲು ವಿದ್ವಾಂಸ ಯು. ರಾಘವೇಂದ್ರ ರಾವ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು ,ನಂತರ ಶ್ರುತಿ ಎಸ್. ಭಟ್ ಅವರ ಸಂಗೀತ ಕಛೇರಿ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ.
ಉಡುಪಿ : ನಾಡಿನ ಹಿರಿಯ ಕವಿ ಹಾಗೂ ಪತ್ರಕರ್ತರಾದ ಕಡೆಂಗೋಡ್ಲು ಶಂಕರಭಟ್ಟರ ನೆನಪಿನಲ್ಲಿ 1978ರಲ್ಲಿ ಸ್ಥಾಪಿತವಾದ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ಗೆ ಈ ವರ್ಷ ಅಪ್ರಕಟಿತ ಕನ್ನಡ ಕವನ ಸಂಕಲಗಳನ್ನು ಆಹ್ವಾನಿಸಲಾಗಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ ಈ ಪ್ರಶಸ್ತಿಗೆ ಕವನ ಸಂಕಲನಗಳನ್ನು ಕಳುಹಿಸಲು ಕೊನೆಯ ದಿನಾಂಕ 15 ಮಾರ್ಚ್ 2025 ಕಳುಹಿಸಬೇಕಾದ ವಿಳಾಸ: ಆಡಳಿತಾಧಿಕಾರಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ. ಜಿ. ಎಂ. ಕಾಲೇಜು ಆವರಣ, ಉಡುಪಿ 576 102. ಕಾವ್ಯ ಪ್ರಕಟನೆಗೆ ನೆರವು ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ ರೂಪಾಯಿ 10,000ದ ವಾರ್ಷಿಕ ಬಹುಮಾನವನ್ನು ನೀಡಲಾಗುತ್ತದೆ. ಹಸ್ತಪ್ರತಿ ಹಂತದಲ್ಲಿರುವ 40ಕ್ಕೆ ಕಡಿಮೆ ಇಲ್ಲದ 50ಕ್ಕಿಂತ ಹೆಚ್ಚಿಲ್ಲದ ಕನ್ನಡ ಕವನಗಳ ಅತ್ಯುತ್ತಮ ಸಂಗ್ರಹಕ್ಕೆ ಈ ಬಹುಮಾನವನ್ನು ಕೊಡಲಾಗುವುದು. ತಜ್ಞರ ಸಮಿತಿ ಬಹುಮಾನಕ್ಕೆ ಅರ್ಹವಾದ ಕೃತಿಯನ್ನು ಆಯ್ಕೆ ಮಾಡಲಿದೆ. ಹೆಚ್ಚಿನ ಮಾಹಿತಿಗಾಗಿ https://govindapairesearch.blogspot.com ದೂರವಾಣಿ ಸಂಖ್ಯೆ ಕಛೇರಿ: 0820-2521159 ಅಥವಾ ಮೊಬೈಲ್ ನಂ.9449471449 / 9480575783 ಈ…