Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಆಯೋಜಿಸಿದ ಹಿರಿಯ ಸಾಹಿತಿಗಳ ಮನೆಗೆ ಭೇಟಿ ಕಾರ್ಯಕ್ರಮದಡಿ ನಿವೃತ್ತ ಶಿಕ್ಷಕಿ ಹಾಗೂ ಹಿರಿಯ ಸಾಹಿತಿ ಬಿ. ಸುಲೋಚನಾ ಇವರಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ 04 ಫೆಬ್ರವರಿ 2025 ರಂದು ಮಂಗಳೂರಿನ ಉರ್ವ ಪರಿಸರದ ಅವರ ನಿವಾಸದಲ್ಲಿ ನಡೆಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು “ನನ್ನ ಕಿಂಚಿತ್ ಸಾಹಿತ್ಯ ಸೇವೆಯನ್ನು ಗುರುತಿಸಿ ಮನೆಗೇ ಬಂದು ಸಮ್ಮಾನ ಮಾಡಿದ್ದು ಮನ ಮುಟ್ಟಿದೆ, ಇದಕ್ಕಿಂತ ಸಂತೋಷ ಸಮಾಧಾನ ಬೇರೆಯಿಲ್ಲ. ಕವಿ ಕಯ್ಯಾರರ ವಿದ್ಯಾರ್ಥಿಯಾಗಿದ್ದು, ಅವರ ಪ್ರೇರಣೆಯಿಂದ ಬರೆಯಲು ಆರಂಭಿಸಿದ್ದರೂ ನಿವೃತ್ತಿಯ ಬಳಿಕವಷ್ಟೇ ಮೂರು ಕೃತಿಗಳನ್ನು ಹೊರ ತರಲು ಸಾಧ್ಯವಾಗಿದೆ. ಮನೆಯವರ, ಬಂಧುಗಳ ಸಹಕಾರ ಮತ್ತು ಮಂಗಳೂರಿನ ಸಾಹಿತ್ಯಿಕ ವಾತಾವರಣ ಹೆಚ್ಚಿನ ಖುಷಿ ನೀಡಿದೆ” ಎಂದರು. ಘಟಕದ ಪದಾಧಿಕಾರಿ ಹಾಗೂ ಕ. ಸಾ. ಪ. ವಿದೇಶೀ ರಾಯಭಾರಿ ಡಾ. ಮುರಲೀಮೋಹನ್ ಚೂಂತಾರು ಸುಲೋಚನಾ ಅವರನ್ನು ಅಭಿನಂದಿಸಿ ಮಾತನಾಡಿ “ಎಲೆ ಮರೆಯ ಸಾಧಕರನ್ನು…
ಉಡುಪಿ : ಲಕ್ಷ್ಮೀ ಗುರುರಾಜ್ ಎನ್.ಎನ್.ಯು. (ರಿ.) ಸಂಸ್ಥೆಯ ವತಿಯಿಂದ 2025-2026ರ ದ್ವಿತೀಯ ಕಾರ್ಯಕ್ರಮ ‘ಗೆಜ್ಜೆ ನಿನಾದ’ ಭರತನಾಟ್ಯ ಕಾರ್ಯಕ್ರಮವು ಯಕ್ಷಗಾನ ಕಲಾರಂಗದ ಐ.ವೈ.ಸಿ. ಹವಾ ನಿಯಂತ್ರಿತ ಸಭಾಂಗಣದಲ್ಲಿ ದಿನಾಂಕ 03 ಫೆಬ್ರವರಿ 2025ರಂದು ನಡೆಯಿತು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ್ ರಾವ್ ಕಾರ್ಯಕ್ರಮ ಉದ್ಘಾಟಿಸಿ 35 ವರ್ಷಗಳ ಸಂಸ್ಥೆಯ ಸಾಧನೆಯನ್ನು ಶ್ಲಾಘಿಸಿ ಸಂಸ್ಥೆಗೆ ಶುಭ ಹಾರೈಸಿದರು. ಉಡುಪಿಯ ಹಿರಿಯ ನೃತ್ಯ ಗುರು ನಾರಾಯಣ್ ಭಟ್ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕಿ ವಿದುಷಿ ಲಕ್ಷ್ಮೀ ಗುರುರಾಜ್ ಸ್ವಾಗತಿಸಿ, ಸಂಸ್ಥೆಯ ವಿದ್ಯಾರ್ಥಿನಿ ವಿದುಷಿ ಅರ್ಪಿತಾ ಹೆಗಡೆ ನಿರೂಪಿಸಿದರು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ‘ಗೆಜ್ಜೆ ನಿನಾದ’ ನೃತ್ಯ ಕಾರ್ಯಕ್ರಮ ಪ್ರದರ್ಶಿಸಲ್ಪಟ್ಟಿತು.
ಮೂಲ್ಕಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕವು ದಿನಾಂಕ 08 ಫೆಬ್ರವರಿ 2025ರಂದು ಐಕಳ ಪೊಂಪೈ ಕಾಲೇಜಿನಲ್ಲಿ ಮೂಲ್ಕಿ ತಾಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದೆ. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಧರ ಡಿ.ಎಸ್. ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ ಮೂರುಕಾವೇರಿಯಿಂದ ಪೊಂಪೈ ಕಾಲೇಜುವರೆಗೆ ನಡೆಯಲಿರುವ ಕನ್ನಡ ಭುವನೇಶ್ವರಿ ಮೆರವಣಿಗೆಯನ್ನು ಉದ್ಯಮಿ ಶ್ರೀನಿವಾಸ ಆಚಾರ್ಯ ಉದ್ಘಾಟಿಸಲಿದ್ದಾರೆ. ಕಾಲೇಜಿನ ಸಂಚಾಲಕ ರೆ. ಫಾ. ಓಸ್ವಾಲ್ಡ್ ಮೊಂತೆರೋ ವಸ್ತುಪ್ರದರ್ಶನವನ್ನು ಉದ್ಘಾಟಿಸಲಿದ್ದು, ಕ.ಸಾ.ಪ. ದ.ಕ. ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಆಶಯನುಡಿಗಳನ್ನಾಡಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಕಥೆಗಾರ ಅಬ್ದುಲ್ ರಶೀದ್ ಸಮ್ಮೇಳನಕ್ಕೆ ನುಡಿಸೇಸೆಗೈಯಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಗಣೇಶ್ ಅಮೀನ್ ಸಂಕಮಾರ್, ಹಾಲು ಉತ್ಪಾದಕರ ಒಕ್ಕೂಟದ ಕೆ.ಪಿ. ಸುಚರಿತ ಶೆಟ್ಟಿ, ಮೂಲ್ಕಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ರೋಟರಿಯ ಧನಂಜಯ ಶೆಟ್ಟಿಗಾರ್ ಭಾಗವಹಿಸಲಿದ್ದಾರೆ ಎಂದು ಸಮ್ಮೇಳನ ಸಮಿತಿಯ ಅಧ್ಯಕ್ಷ ಪೃಥ್ವೀರಾಜ ಆಚಾರ್ಯ…
ಪ್ರತಿ ವರ್ಷ ದೆಹಲಿಯ ರಾಷ್ಟ್ರೀಯ ರಂಗಶಾಲೆ (ಎನ್.ಎಸ್.ಡಿ.) ಭಾರತ ರಂಗ ಮಹೋತ್ಸವದ ಹೆಸರಲ್ಲಿ ನಾಟಕೋತ್ಸವವನ್ನು ನಡೆಸುತ್ತಾ ಬಂದಿದೆ. ಈ ವರ್ಷ ಬೆಂಗಳೂರಿನ ಕಲಾಗ್ರಾಮದಲ್ಲಿ ಫೆಬ್ರವರಿ 01ರಿಂದ 08ರವರೆಗೆ ಅದ್ದೂರಿಯಾಗಿ ಈ ಅಂತಾರಾಷ್ಟ್ರೀಯ ನಾಟಕೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಿದೆ. ಈ ರಂಗಪರಿಷೆಯಲ್ಲಿ ರಾಷ್ಟ್ರೀಯ ರಂಗ ಶಾಲೆ ರೆಪರ್ಟರಿಯ ಎರಡು ನಾಟಕಗಳು ಫೆಬ್ರವರಿ 3 ಮತ್ತು 4ರಂದು ಪ್ರದರ್ಶನವಾಗುತ್ತಿವೆ. ಅದರಲ್ಲಿ ಫೆಬ್ರವರಿ 3ರಂದು ಪ್ರದರ್ಶನಗೊಂಡು ಗಮನ ಸೆಳೆದ ಹಿಂದಿ ಭಾಷೆಯ ನಾಟಕ ‘ಮಾಯರಿ ಮೈ ಕಾ ಸೇ ಕಹು’. ರಾಜಸ್ಥಾನದ ಪ್ರಖ್ಯಾತ ಬರಹಗಾರ ವಿಜಯದಾನ್ ದೇತಾರವರ ಜಾನಪದ ಕಥಾ ಸಂಗ್ರಹದಿಂದ ‘ದುವಿಧಾ’ ಕಥೆಯನ್ನು ಆಯ್ಕೆ ಮಾಡಿ ಎನ್.ಎಸ್.ಡಿ.ಯ ಅಜಯ್ ಕುಮಾರ್ ರವರು ರೆಪರ್ಟರಿ ಕಲಾವಿದರಿಗೆ ನಿರ್ದೇಶಿಸಿದ್ದಾರೆ. ರಾಜಸ್ಥಾನಿ ಶೈಲಿಯಲ್ಲಿ ಮೂಡಿ ಬಂದ ಫ್ಯಾಂಟಸಿ ಸ್ವರೂಪದ ಈ ನಾಟಕವು ಅತ್ಯಂತ ಆಕರ್ಷಣೀಯವಾಗಿ ಮೂಡಿ ಬಂದಿದೆ. ಆ ಕಣ್ಮನ ಸೆಳೆಯುವ ಬಣ್ಣಬಣ್ಣದ ವಸ್ತ್ರ ವಿನ್ಯಾಸ ವೈಭವ, ಹಾಡು…
ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ.) ಸಿದ್ಧನಹಳ್ಳಿ ಇದರ ವತಿಯಿಂದ ಗಾಂಧೀಜಿ ವಿವೇಕಾನಂದ ಪ್ರಣಿತ ರಾಜ್ಯ ಮಟ್ಟದ ಎಂಟನೇ ಯುವಜನ ಸಮ್ಮೇಳನವು ದಿನಾಂಕ 02 ಫೆಬ್ರವರಿ 2025ರಂದು ಬೆಂಗಳೂರಿನ ಶೇಷಾದ್ರಿಪುರಂ ಮೊದಲನೆಯ ಮಹಡಿ ಕಾನ್ಫ್ ರೆನ್ಸ್ ಹಾಲಿನಲ್ಲಿ ನಡೆಯಿತು. ಈ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಯುವ ಕವಿ ಜಿ. ನಾಗರಾಜ್ ನಾದಲೀಲೆ ಮಾತನಾಡಿ “ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ …ಎಂಬ ಬಸವಣ್ಣನವರ ವಚನಗಳು ಎಲ್ಲರನ್ನೂ ಒಗ್ಗೂಡಿಸಿ 12ನೇ ಶತಮಾನದ ಸಾಮಾಜಿಕ ಬದಲಾವಣೆಗೆ ಹೇಗೆ ದಾರಿಯಾಯಿತೋ, ಕಾರಣವಾಯಿತೋ ಹಾಗೆ ಸಮಸಮಾಜ ನಿರ್ಮಾಣ ಆಗಲು ವಿದ್ಯಾವಂತ ಯುವಕರು ಮುಂದೆ ಬರಬೇಕು, ಯುವಕರು ಅಧಿಕಾರದ ಮುಂಚೂಣಿಗೆ ಬರಬೇಕು, ಜನರ ಸಮಸ್ಯೆ ನನ್ನ ಸಮಸ್ಯೆ ಅನ್ನಿಸಿದಾಗ ಅಧಿಕಾರಿಗಳು, ರಾಜಕಾರಣಿಗಳಿಗೆ ಗೌರವ ಇರುತ್ತದೆ. ರಾಜಕೀಯ ಶುದ್ಧಿಯಾಗಬೇಕಾದರೆ ಯುವಕರು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು, ಸಂಸ್ಕೃತಿ, ಸಂಸ್ಕಾರ ನಮ್ಮ ಮನ ಮನೆಗಳಲ್ಲಿ ಮೇಳೈಸಬೇಕಿದೆ. ಈ ಹಿನ್ನೆಲೆಯಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟಿನ ನಿಸ್ವಾರ್ಥ ಸೇವೆಯಿಂದ…
“Sri Krishna Leela Amrutham” by Kalanidhi Arts Academy, Bengaluru – a vibrant and evocative thematic dance recital, captivated a packed audience at the Sri Parthasarathy Swami Sabha in Mylapore, Chennai, on February 1st. Presented as part of the prestigious Bharat Nritya Utsav 2025, the 5:30 PM performance offered a compelling narrative journey through the life of Lord Krishna. The recital unfolded a rich tapestry of Krishna’s Lila, from his divine birth in a prison cell to his enchanting childhood pranks and his courageous acts as an adult. The dancers, with their fluid movements and nuanced expressions, breathed life into these…
ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಮತ್ತು ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಸಾರ್ವಜನಿಕರಿಗೆ ಉಚಿತ ಗೊಂಬೆ ತಯಾರಿ ತರಬೇತಿಯನ್ನು ದಿನಾಂಕ 14 ಫೆಬ್ರವರಿ 2025 ಮತ್ತು 15 ಫೆಬ್ರವರಿ 2025ರಂದು ಬೆಳಿಗ್ಗೆ 9-00ರಿಂದ ಸಂಜೆ 5-30ರ ತನಕ ಉಡುಪಿಯ ಅಂಬಲಪಾಡಿ ಬೈಪಾಸ್ ಬಳಿಯಿರುವ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯ ಮೊದಲು ನೋಂದಾಯಿಸಿದ 30 ಮಂದಿ ಸಾರ್ವಜನಿಕರಿಗೆ ಮಾತ್ರ ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಯೋಜಕರು 9663632910 ಮತ್ತು ಪ್ರಬಂಧಕರು 9743156275 ಈ ಸಂಖ್ಯೆಯನ್ನು ಸಂಪರ್ಕಿಸಿರಿ.
ಕುಂದಾಪುರ ತಾಲೂಕಿನ ಗುಡ್ಡೆಯಂಗಡಿಯ ಯಡಾಡಿ ಮತ್ಯಾಡಿ ಗ್ರಾಮದ ಬಸವ ಮೊಗವೀರ ಹಾಗೂ ಚಿಕ್ಕು ದಂಪತಿಯರ ಮಗನಾಗಿ 20.4.1997ರಂದು ಪ್ರದೀಪ್ ಮೊಗವೀರ ಅವರ ಜನನ. ಬಿಬಿಎಂ ಇವರ ವಿದ್ಯಾಭ್ಯಾಸ. ಶ್ರೀಯುತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ಯಕ್ಷಗಾನ ಗುರುಗಳು. ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ: ನನ್ನ ಸ್ವಂತ ನಿರ್ಧಾರ ಮತ್ತು ಯಕ್ಷಗಾನದ ಅತೀವ ಆಸಕ್ತಿ ಹಾಗೂ ತಂದೆಯ ಪ್ರೇರಣೆ ಮತ್ತು ವೇಷ ಮಾಡುವುದು. ಕೋಟ ಸುರೇಶ್ ಬಂಗೇರ ಅವರ ಸುಧನ್ವ ಹಾಗೂ ಅವರ ವೇಷ, ಪ್ರವೀಣ್ ಗಾಣಿಗ ಕೆಮ್ಮಣ್ಣು ಹಾಗೂ ಗೋಪಾಲ್ ಆಚಾರ್ ತೀರ್ಥಹಳ್ಳಿ ಇವರ ವೇಷದಿಂದ ಪ್ರೇರಣೆ. ವಿದ್ಯಾಭ್ಯಾಸದ ಜೊತೆಗೆ ಸುಮಾರು 8 ವರ್ಷಗಳಿಂದ ಗಣೇಶ್ ಬಳೆಗಾರ ಜನ್ನಾಡಿ ಇವರ ಯಕ್ಷನಾದ ವೇಷಭೂಷಣ ಕಲಾತಂಡ ಯಡಾಡಿ ಮತ್ಯಾಡಿ ಇಲ್ಲಿ ಪ್ರಸಾದನ ಕಲಾವಿದನಾಗಿ ಗುರುತಿಸಿಕೊಂಡೆ. ಮೇಳಕ್ಕೆ ಸೇರಬೇಕೆಂದು ನಿರ್ಧರಿಸಿದ್ದೆ, ಅಷ್ಟು ಹುಚ್ಚು. ಆದರೆ ಸಾಧ್ಯ ಆಗಲಿಲ್ಲ. ಆಗ ನನ್ನ ಕನಸಿಗೆ ಚಿಗುರೊಡೆದದ್ದು ನಮ್ಮದೇ ಊರಿನ ಸಂಘ ಶ್ರೀ ಯಕ್ಷ ಕೇದಿಗೆ ಮಹಾಲಿಂಗೇಶ್ವರ ಕಲಾಸಂಘ…
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡಮಿ (ರಿ.) ಮತ್ತು ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಈ ಸಂಸ್ಥೆಗಳ ಸಹಯೋಗದಲ್ಲಿ ಸುರತ್ಕಲ್ ಮೇಲುಸೇತುವೆಯ ತಳಭಾಗದ ಎಂ.ಸಿ.ಎಫ್. ನಾಗರಿಕ ಸಲಹಾ ಸಮಿತಿ ಸಾಂಸ್ಕತಿಕ ವೇದಿಕೆಯಲ್ಲಿ ನಡೆಯುತ್ತಿರುವ 59ನೇ ಉದಯರಾಗ ಸರಣಿ ಕಾರ್ಯಕ್ರಮವು ದಿನಾಂಕ 02 ಫೆಬ್ರವರಿ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಸುರತ್ಕಲ್ ನ ಎನ್.ಐ.ಟಿ.ಕೆ.ಯ ಜಂಟಿ ಕುಲಸಚಿವ ರಾಮ್ ಮೋಹನ್ ವೈ. “ಶಾಸ್ತ್ರೀಯ ಸಂಗೀತ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ಯುವ ಜನತೆ ಇದರತ್ತ ಗಮನ ಕೊಡಬೇಕು” ಎಂದು ನುಡಿದರು. ಪ್ರಾರ್ಥನಾ ಸಾಯಿ ನರಸಿಂಹನ್ ಇವರ ಶಿಷ್ಯೆ ಮತ್ತು ಸುಪುತ್ರಿ ಸುಮೇಧಾ ಎಸ್. ಇವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಶ್ರೀವರದ ಪಟ್ಟಾಜೆ ವಯಲಿನ್ ನಲ್ಲಿ ಹಾಗೂ ಪವನ್ ಅಕ್ಕಡ್ಕ ಮೃದಂಗದಲ್ಲಿ ಸಹಕರಿಸಿದರು. ಮಣಿ ಕೃಷ್ಣಸ್ವಾಮಿ ಅಕಾಡಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಸ್ವಾಗತಿಸಿ, ಕೃಷ್ಣಮೂರ್ತಿ ಪಿ. ವಂದಿಸಿದರು. ಹಿರಿಯ ಕಲಾವಿದ ಸಾಯಿ ನರಸಿಂಹನ್, ಪ್ರಾರ್ಥನಾ ಸಾಯಿ ನರಸಿಂಹನ್…
ಮಂಗಳೂರು : ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದಿನಾಂಕ 28 ಫೆಬ್ರವರಿ 2025ರಿಂದ 03 ಮಾರ್ಚ್ 2025ರವರೆಗೆ ನಡೆಯುವ ‘ನಿರ್ದಿಗಂತ ಉತ್ಸವ 2025’ ರಂಗ ಹಬ್ಬದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲು ರಂಗ ನಟ ಹಾಗೂ ರಂಗಾಸಕ್ತರನ್ನು ಆಹ್ವಾನಿಸಲಾಗಿದೆ. ಕ್ರಿಸ್ಟಫರ್ ಡಿಸೋಜಾ – 9964141143 ಅಥವಾ ವಿದ್ದು ಉಚ್ಚಿಲ 9902450686 ಈ ಸಂಖ್ಯೆಗೆ ಕೆಳಕಂಡ ವಿವರಗಳನ್ನು ಕಳುಹಿಸುವುದರ ಮೂಲಕ ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ. ಪ್ರತಿನಿಧಿಗಳ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಮೊದಲು ಬಂದವರಿಗೆ ಆದ್ಯತೆ. ನೀಡಬೇಕಾದ ವಿವರಗಳು : ಹೆಸರು, ಮೊಬೈಲ್ ಸಂಖ್ಯೆ, ವಿಳಾಸ, ರಂಗಭೂಮಿಯ ಅನುಭವ.