Author: roovari

ಕಾಸರಗೋಡು : ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕರ್ನಾಟಕ ರಾಜ್ಯ ಸಂಚಾಲಕರಾಗಿ ಹಿರಿಯ ಪತ್ರಕರ್ತ ಸಾಹಿತಿ ಜಯಾನಂದ ಪೆರಾಜೆ ಆಯ್ಕೆಯಾಗಿದ್ದು, ಕಾಸರಗೋಡು ಕನ್ನಡ ಭವನ ಸಭಾಂಗಣದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಇದರ ಸ್ಥಾಪಕ ಸಂಚಾಲಕ ಡಾ. ವಾಮನ ರಾವ್ ಬೇಕಲ್ ಅಧ್ಯಕ್ಷತೆಯಲ್ಲಿ ಪದಗ್ರಹಣ ಸಮಾರಂಭವು ದಿನಾಂಕ 02 ಫೆಬ್ರವರಿ 2025ರಂದು ನೆರವೇರಿತು. ರಾಜ್ಯ ಮಹಿಳಾ ಸಂಚಾಲಕಿಯಾಗಿ ಡಾ. ಶಾಂತ ಪುತ್ತೂರು, ಕಾಸರಗೋಡು ಜಿಲ್ಲಾ ಅಧ್ಯಕ್ಷರಾಗಿ ಕವಿ ವಿರಾಜ್ ಅಡೂರು, ಗೌರವ ಅಧ್ಯಕ್ಷರಾಗಿ ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ, ಕೋಶಾಧಿಕಾರಿಯಾಗಿ ಸಂಧ್ಯಾರಾಣಿ ಬೇಕಲ್ ಅಧಿಕಾರ ಸ್ವೀಕರಿಸಿದರು. ವಿವಿಧ ಪದಾಧಿಕಾರಿಗಳನ್ನು ಘೋಷಿಸಲಾಯಿತು. ಕೇಂದ್ರದ ಪ್ರಧಾನ ಸಮಿತಿ ಕಚೇರಿ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮೈಸೂರು ಇವರು ಕನ್ನಡ ಧ್ವಜವನ್ನು ಹಸ್ತಾಂತರಿಸಿ ಕನ್ನಡ ಭಾಷೆ ಸಂಸ್ಕೃತಿ…

Read More

ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಕಲ್ಲಮ ಇಲ್ಲಿ 37ನೇ ವಾರ್ಷಿಕೋತ್ಸವ ಹಾಗೂ ರಥೋತ್ಸವ ಸಮಾರಂಭದ ಅಂಗವಾಗಿ ದಿನಾಂಕ 02 ಫೆಬ್ರವರಿ 2025ನೇ ರವಿವಾರ ‘ಭೀಷ್ಮ ಪ್ರತಿಜ್ಞೆ’ ಎಂಬ ತಾಳಮದ್ದಳೆಯು ಶ್ರೀ ಮಠದ ಪ್ರಾಂಗಣದಲ್ಲಿ ನಡೆಯಿತು. ಹಿಮ್ಮೆಳದಲ್ಲಿ ಭಾಗವತರಾಗಿ ಹೊಸಮೂಲೆ ಗಣೇಶ್ ಭಟ್, ಆನಂದ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಮುರಳೀಧರ ಕಲ್ಲೂರಾಯ ಮತ್ತು ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ದೇವವ್ರತ), ಶುಭಾ ಗಣೇಶ್ (ಶಂತನು), ಗಾಯತ್ರಿ ಹೆಬ್ಬಾರ್ (ಕಂದರ), ಕಿಶೋರಿ ದುಗ್ಗಪ್ಪ ನಡುಗಲ್ಲು (ಯೋಜನಾಗಂಧಿ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ದೇವಳದ ಟ್ರಸ್ಟಿ, ಡಾ. ಸೀತಾರಾಮ ಭಟ್ ವಂದಿಸಿದರು. ಸರ್ವೆ ದೇವಳದ ಅರ್ಚಕ ಶ್ರೀರಾಮ ಕಲ್ಲೂರಾಯ ಪ್ರಾಯೋಜಿಸಿದ್ದರು.

Read More

4 ಫೆಬ್ರವರಿ 1938 ರಲ್ಲಿ ನಾಮಗಿರಿಯಮ್ಮ ಮತ್ತು ಎಂ. ರಾಮಸ್ವಾಮಿಯವರ ಸುಪುತ್ರಿಯಾಗಿ ಭಾರ್ಗವಿಯವರು ಜನಿಸಿದರು. ಬಿ. ಎಸ್ಸಿ. ಪದವೀಧರೆಯಾದ ಇವರು ಮುಂದೆ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ ಈ. ಎಸ್. ಐ. ಕಾರ್ಪೊರೇಷನ್ ನಲ್ಲಿ ವ್ಯವಸ್ಥಾಪಕವಾಗಿ ಸೇವೆ ಸಲ್ಲಿಸಿದರು. ರಂಗಭೂಮಿಯ ಬಗ್ಗೆ ಎಳವೆಯಲ್ಲಿಯೇ ಆಸಕ್ತಿ ಹೊಂದಿದ್ದ ಇವರು ಶಾಲಾ-ಕಾಲೇಜುಗಳ ನಾಟಕಗಳಲ್ಲಿ ಅಭಿನಯಿಸಿ ಎರಡು ಬಾರಿ ರಾಜ್ಯ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ನಟನೆಯ ಜೊತೆಗೆ ನಿರ್ದೇಶನ ಮಕ್ಕಳಿಗಾಗಿ ನಾಟಕ ರಚನೆ ಇವರ ಹವ್ಯಾಸವಾಗಿತ್ತು. ಸಿನಿಮಾದಲ್ಲಿ ಮತ್ತು ಕಿರುತೆರೆಯಲ್ಲೂ ತಮ್ಮ ಸಹಜ ನಟನೆಗೆ ಜನ ಮೆಚ್ಚುಗೆ ಪಡೆದವರು ಭಾರ್ಗವಿ ನಾರಾಯಣ್. ನಟನೆಯ ಜೊತೆಗೆ ಚಿತ್ರಕಥೆ ಸಂಭಾಷಣೆ ಬರೆದ ಹೆಗ್ಗಳಿಕೆ ಇವರದು. ಮೇಕಪ್ ನಾಣಿಯೆಂದೇ ಪ್ರಸಿದ್ಧರಾಗಿದ್ದ, ಸೌಂದರ್ಯವರ್ಧಕ ಕಲಾವಿದ ಹಾಗೂ ಕನ್ನಡ ಚಲನಚಿತ್ರ ನಟರಾದ ಬೆಳವಾಡಿ ನಂಜುಂಡಯ್ಯ ನಾರಾಯಣರನ್ನು ಮದುವೆಯಾದರು. ಅವರ ನಾಲ್ಕು ಮಂದಿ ಮಕ್ಕಳಲ್ಲಿ, ಪ್ರಕಾಶ್ ಬೆಳವಾಡಿ ಮತ್ತು ಸುಧಾ ಬೆಳವಾಡಿ ಪ್ರಸಿದ್ಧ ಚಲನಚಿತ್ರ ನಟರಾಗಿದ್ದಾರೆ. ಸುಜಾತ…

Read More

ಉಡುಪಿ: ಅಂಚೆ ಇಲಾಖೆಯ ವತಿಯಿಂದ ಯು. ಪಿ. ಯು ಇಂಟರ್‌ನ್ಯಾಷನಲ್ ಲೆಟರ್ ರೈಟಿಂಗ್ ಕಾಂಪಿಟೇಶನ್ ಪ್ರಯುಕ್ತ 9 ರಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಇಮ್ಯಾಜಿನ್ ಯು ಆರ್ ದ ಓಷನ್. ರೈಟ್ ಎ ಲೆಟರ್ ಟು ಸಮ್‌ಒನ್ ಎನಿಂಗ್ ವೈ ಅಂಡ್ ಹೌ ದೇ ಶುಡ್ ಟೇಕ್ ಗುಡ್ ಕೇರ್ ಆಫ್ ಯು ವಿಷಯದ ಕುರಿತು ಪತ್ರಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧಾಳುಗಳು ಪತ್ರಲೇಖನವನ್ನು ಹಿಂದಿ, ಇಂಗ್ಲೀಷ್ ಅಥವಾ ಪ್ರಾದೇಶಿಕ ಭಾಷೆಯಲ್ಲಿ 800 ಶಬ್ದಗಳು ಮೀರದಂತೆ ಕೈಬರಹದಲ್ಲಿ ನಿಗದಿಪಡಿಸಿದ ಕೇಂದ್ರದಲ್ಲಿ ಬರೆಯಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಅರ್ಜಿಯನ್ನು ತಮ್ಮ ಶಾಲೆಯ ಮುಖಾಂತರ 20 ಫೆಬ್ರವರಿ 2025ರ ಒಳಗಾಗಿ ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ, ಉಡುಪಿ-576101 ಇಲ್ಲಿಗೆ ಸಲ್ಲಿಸಬಹುದಾಗಿದೆ. ಅತ್ಯುತ್ತಮ ಮೂರು ಪತ್ರ ಲೇಖನಗಳಿಗೆ ಬಹುಮಾನಗಳನ್ನು ದೇಶೀಯ ರೂಪಾಯಿ 50,000, 25,000, 10,000 ಮತ್ತು ಕರ್ನಾಟಕ ವೃತ್ತ ಮಟ್ಟದಲ್ಲಿ 25,000, 10,000 ಮತ್ತು 5,000 . ನೀಡಲಾಗುವುದು ಎಂದು ಉಡುಪಿ ವಿಭಾಗದ ಅಂಚೆ…

Read More

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಬ್ಯಾರಿ ಬರಹಗಾರರ ನಡುವೆ ಪರಸ್ಪರ ಸಮನ್ವಯ ಏರ್ಪಡಿಸುವ ನಿಟ್ಟಿನಲ್ಲಿ ಬ್ಯಾರಿ ಬರಹಗಾರರ ಸ್ನೇಹಕೂಟವನ್ನು ದಿನಾಂಕ 14 ಫೆಬ್ರವರಿ 2025 ರಂದು ಹಮ್ಮಿಕೊಳ್ಳಲಾಗಿದೆ. ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಸಂಜೆ 4.30ರಿಂದ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವ ಆಸಕ್ತರು ಕಾರ್ಯಕ್ರಮದ ಸದಸ್ಯ ಸಂಚಾಲಕ ಯು.ಎಚ್. ಖಾಲಿದ್ ಉಜಿರೆ -9845499527 ಅವರನ್ನು ಸಂಪರ್ಕ ಮಾಡಬಹುದು ಎಂದು ತಿಳಿಸಿದ್ದಾರೆ

Read More

ಉಡುಪಿ : ಪೆರ್ಡೂರು ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಹಾಗೂ ಮಲ್ಪೆಯ ಮತ್ಸ್ಯರಾಜ್‌ ಗ್ರೂಪ್‌ ಜಂಟಿ ಆಶ್ರಯದಲ್ಲಿ ಶಿವರಾತ್ರಿ ಪ್ರಯುಕ್ತ ದಿನಾಂಕ 02 ಮಾರ್ಚ್ 2025 ರವಿವಾರದಂದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಆಯ್ದ ತಂಡಗಳ ಭಜನೆ ಜುಗಲ್ ಬಂದಿ ಸ್ಪರ್ಧೆಯನ್ನು ಮಲ್ಪೆ ಪಡುಕೆರೆಯ ಶ್ರೀ ದೇವಿ ಭಜನಾ ಮಂದಿರದ ಆವರಣದ ಕಡಲ ತಡಿಯಲ್ಲಿ ಆಯೋಜಿಸಲು ಉದ್ದೇಶಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಆಸಕ್ತ ತಂಡಗಳು ದಿನಾಂಕ 12 ಫೆಬ್ರವರಿ 2025ನೇ ತಾರೀಖಿನೊಳಗೆ ತಮ್ಮ ತಂಡ ಹಾಡಿರುವ ಭಜನೆಯ ವಿಡಿಯೋವನ್ನು 9900408243, 9743579059, 9743493177 ಮೊಬೈಲ್‌ಗೆ ವಾಟ್ಸಾಪ್ ಮಾಡಬೇಕಾಗಿ ವಿನಂತಿಸಲಾಗಿದೆ. ಸ್ಪರ್ಧೆಗೆ ಪ್ರವೇಶ ಉಚಿತವಾಗಿದ್ದು ಬಹುಮಾನ ಪ್ರಥಮ ರೂ.25,000/-, ದ್ವಿತೀಯ ರೂ.20,000/-, ತೃತೀಯ ರೂ.15,000/- ಹಾಗೂ ಉತ್ತಮ ಹಾಡುಗಾರ, ತಬಲಾ, ಹಾರ್ಮೋನಿಯಂ ವಾದಕರಿಗೆ ಪ್ರತ್ಯೇಕ ಬಹುಮಾನವಿದೆ.

Read More

ಮಂಗಳೂರು : ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 278ನೇ ಕಾರ್ಯಕ್ರಮವು ಶಕ್ತಿನಗರದ ಕಲಾಂಗಣದಲ್ಲಿ ದಿನಾಂಕ 02 ಫೆಬ್ರವರಿ 2025ರಂದು ನಡೆಯಿತು. ಸುರ್ ಸೊಭಾಣ್ ಶಾಸ್ತ್ರೀಯ ಗಾಯನ ತರಬೇತಿಯ 65 ವಿದ್ಯಾರ್ಥಿಗಳು ‘ಸುರಾಂಗಾಣಿಂ’ (ಸುಮಧುರ ಹಾಡುಗಳು) ಸಂಗೀತ ರಸಮಂಜರಿಯನ್ನು ನಡೆಸಿಕೊಟ್ಟರು. ಯುವ ಗಾಯಕಿ ರಿಶಲ್ ಮೆಲ್ಬಾ ಕ್ರಾಸ್ತಾ ಗಂಟೆ ಬಾರಿಸಿ ಈ ಕಾರ್ಯಕ್ರಮಕ್ಕೆ ಚಲಾವಣೆ ನೀಡಿದರು. ಹಿಂದೂಸ್ತಾನಿ ಗಾಯನದಲ್ಲಿ ಪದವಿ ಪಡೆದ ಕೊಂಕಣಿ ಗಾಯಕಿ ಶಿಲ್ಪಾ ಕುಟಿನ್ಹಾ ಇವರ ನಿರ್ದೇಶನದಲ್ಲಿ ಈ ಸಂಗೀತ ಸಂಜೆ ಪ್ರಸ್ತುತವಾಯಿತು. ಮಕ್ಕಳು ಕೊಂಕಣಿಯ 6 ಹಾಡುಗಳು ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಗಾಯನದ 4 ಹಾಡುಗಳನ್ನು ಉತ್ಸಾಹದಿಂದ ಸಾದರಪಡಿಸಿದರು. ಮಕ್ಕಳ ಪೋಷಕರೂ ಒಂದು ಹಾಡನ್ನು ಹಾಡಿದರು. ಹದಿನಾಲ್ಕು ಮಕ್ಕಳು ಹಾಡುಗಳ ಬಗ್ಗೆ, ತಮ್ಮ ಕಲಿಕೆಯ ಬಗ್ಗೆ ಮಾಹಿತಿ ನೀಡಿ ನಿರೂಪಿಸಿದರು. ಆರಂಭದಲ್ಲಿ ಕ್ಲಾರಾ ಡಿಕುನ್ಹಾ ಇವರಿಂದ ಕೊಳಲು ವಾದನ ನಡೆಯಿತು. ಸಂಗೀತದಲ್ಲಿ ಸಹಕರಿಸಿದ ರಸೆಲ್ ರೊಡ್ರಿಗಸ್ (ಬೇಸ್ ಗಿಟಾರ್), ಆಶ್ವಿಲ್ ಕುಲಾಸೊ (ಕೀ ಬೋರ್ಡ್), ಗ್ಲೆನನ್ ಡಿಸೋಜ…

Read More

ಚನ್ನರಾಯಪಟ್ಟಣ : ಚನ್ನರಾಯಪಟ್ಟಣದ ಪ್ರತಿಮಾ ಟ್ರಸ್ಟ್ ಇದರ ‘ಪ್ರತಿಮೋತ್ಸವ – 2025’ ಕಾರ್ಯಕ್ರಮವಿ ದಿನಾಂಕ 02 ಫೆಬ್ರವರಿ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಮಂಡ್ಯ ಜಿಲ್ಲೆಯ ಪಾಂಡವಪುರದ ಉಪವಿಭಾಗಾಧಿಕಾರಿಗಳಾದ ಶ್ರೀನಿವಾಸಗೌಡ ಕೆ. ಆರ್. ಮಾತನಾಡಿ “ಮಕ್ಕಳನ್ನು ಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿದಷ್ಟು ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚುತ್ತದೆ. ದೈಹಿಕವಾಗಿ ಸದೃಢರಾಗುತ್ತಾರೆ. ಕಲೆ ಸಾಹಿತ್ಯ ನಾಟಕಗಳಲ್ಲಿ ತೊಡಿಸಿವುದರಿಂದ ಮಕ್ಕಳಿಗೆ ಸಾಮಾಜಿಕ ಕಾಳಜಿ ಹೆಚ್ಚುತ್ತದೆ. ಅದು ಇವತ್ತಿನ ಕಾಲ ಘಟ್ಟದ ಮಕ್ಕಳಿಗೆ ತುಂಬಾ ಅಗತ್ಯ ಇದೆ. ನಮ್ಮ ಭಾಷೆ, ಜಲ ಸಂಸ್ಕೃತಿ ದೇಶಾಭಿಮಾನ, ನಾಯಕತ್ವದ ಗುಣಗಳು ಇಂತಹ ಕಡೆ ಮಕ್ಕಳನ್ನು ಸೇರಿಸಿದಾಗ ಮಾತ್ರ ಬೆಳೆಯ ಸಾಧ್ಯ ಎಂದರು. ಮಕ್ಕಳ ಕೈಯಲ್ಲಿ ಗಿಡ ನೆಡಿಸಿ ಪರಿಸರ ಕಾಳಜಿ ಬೆಳಸಿ, ಈ ದೇಶದ ನಾಯಕರ ಪುಸ್ತಕಗಳನ್ನು ಓದಿಸಿ, ಆಗ ನಾಯಕನ ಗುಣಗಳು ಬರುವುದು ಸಾಧ್ಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನೀವು ಮೊದಲು ಟೀವಿ ಮೊಬೈಲ್‌ನಿಂದ ದೂರ ಬಂದು ವಾರಕ್ಕೆ ಒಂದು ಪುಸ್ತಕ ಓದಿ. ನಿಮ್ಮನ್ನು ನೋಡಿ ಮಕ್ಕಳು…

Read More

ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವದ ಯೋಜನೆಯಾದ ‘ಮನೆಗೊಂದು ಗ್ರಂಥಾಲಯ’ ಯೋಜನೆಯ ಕರಪತ್ರ ಬಿಡುಗಡೆ ಕಾರ್ಯಕ್ರಮವು ದಿನಾಂಕ 02 ಫೆಬ್ರವರಿ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮೈಸೂರು ಇವರು ಲಕ್ಷ ಗ್ರಂಥಾಲಯ ಯೋಜನೆ, ಮನೆಗೊಂದು ಗ್ರಂಥಾಲಯದ ರೂಪುರೇಷೆಯನ್ನು ವಿವರಿಸುತ್ತಾ “ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪಡೆದಿದೆ. ಈ ಹೆಗ್ಗಳಿಕೆಯ ಜೊತೆಗೆ ಕನ್ನಡ ಪುಸ್ತಕಗಳನ್ನು ಖರೀದಿಸಿ, ಓದುವವರ ಕೊರತೆಯೂ ಇದೆ. ಈ ಹಿನ್ನೆಲೆಯಲ್ಲಿ ಸುಮಾರು ಒಂದು ಲಕ್ಷ ಮನೆಗಳಲ್ಲಿ ತಲಾ ಒಂದು ಲಕ್ಷ ಮೌಲ್ಯದ ಪುಸ್ತಕ ಇರುವ ಗ್ರಂಥಾಲಯ ಸೃಷ್ಟಿಸುವ ಉದ್ದೇಶದಿಂದ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಕನ್ನಡಿಗರಲ್ಲಿ ಪುಸ್ತಕಗಳನ್ನು ಖರೀದಿಸಿ ಓದುವ ಮನೋಭಾವ ಜಾಗೃತವಾಗಬೇಕು. ಕನ್ನಡ ಭಾಷೆಯಲ್ಲಿ ಅನೇಕ ಉತ್ತಮ ಬರಹಗಾರರಿದ್ದು, ಈ ನಾಡಿನಾದ್ಯಂತ…

Read More

ಮುರ್ಡೇಶ್ವರ : ಉತ್ತರಕೊಪ್ಪ ಗೋಳಿಕುಂಬ್ರಿ ಇಲ್ಲಿರುವ ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ (ರಿ.) ಇದರ ವತಿಯಿಂದ ‘ಯಕ್ಷಸಪ್ತಾಹ ಮುರುಡೇಶ್ವರ – 2025’ 11ನೆಯ ವರ್ಷದ ಸಂಭ್ರಮವನ್ನು ದಿನಾಂಕ 08 ಫೆಬ್ರವರಿ 2025ರಿಂದ 14 ಫೆಬ್ರವರಿ 2025ರವರೆಗೆ ಪ್ರತಿದಿನ ಸಂಜೆ 6-00 ಗಂಟೆಗೆ ಮುರ್ಡೇಶ್ವರ ಬಸ್ತಿಮಕ್ಕಿ, ನೀರಗದ್ದೆ ಬೈಲೂರು, ಶ್ರೀ ರಾಘವೇಶ್ವರ ಭಾರತೀ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಪ್ತಾಹದಲ್ಲಿ ಪೂರ್ಣಚಂದ್ರ ಯಕ್ಷಗಾನ ಮಂಡಳಿ (ರಿ.) ಕೊಂಡದಕುಳಿ, ಕುಂಭಾಶಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಪೌರಾಣಿಕ ಯಕ್ಷೋತ್ಸವ ನಡೆಯಲಿದೆ.

Read More