Author: roovari

ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಸಹಕಾರದಲ್ಲಿ, ಕಾಸರಗೋಡು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ‘ಕನ್ನಡ ಚುಟುಕು ರಚನಾ ಸ್ಪರ್ಧೆ -2025’ ನಡೆಯಲಿದೆ. ಚುಟುಕು ವಿಷಯ ನಿರ್ಬಂಧ ಇಲ್ಲ. ಒಬ್ಬರು ನಾಲ್ಕು ಸಾಲಿನ ಉತ್ತಮ ಎನಿಸುವ ಐದು ಚುಟುಕುಗಳನ್ನು ಕಳುಹಿಸಬೇಕು. ಸ್ಪರ್ಧಾ ವಿಜೇತರಿಗೆ ‘ಕಾಸರಗೋಡು ಜಿಲ್ಲಾ ಚುಟುಕು ಕಾವ್ಯ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಸಂಘಟಕರ ತೀರ್ಮಾನವೇ ಅಂತಿಮ. ಆಸಕ್ತರು ದಿನಾಂಕ 15 ಏಪ್ರಿಲ್ 2025ರ ಮೊದಲು 9746093552 ಅಥವಾ 9633073400 ಸಂಖ್ಯೆಗೆ ವಾಟ್ಸಪ್ ಮೂಲಕ ಚುಟುಕುಗಳನ್ನು ಕಳುಹಿಸಬಹುದು. ಚುಟುಕುಗಳ ಜತೆಗೆ ಸ್ಪಷ್ಟ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯಬೇಕು ಎಂದು ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು ತಿಳಿಸಿದ್ದಾರೆ.

Read More

ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ವತಿಯಿಂದ ‘ಬಿಸು ಪರ್ಬ’ ಕಾರ್ಯಕ್ರಮವನ್ನು ದಿನಾಂಕ 14 ಏಪ್ರಿಲ್ 2025ರಂದು ಸಂಜೆ 4-30 ಗಂಟೆಗೆ ಮಂಗಳಾದೇವಿ ದೇವಸ್ಥಾನದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಮಂಗಳಾದೇವಿ ಆಡಳಿತ ಮೊಕ್ತೇಸರರಾದ ಶ್ರೀ ಅರುಣ್ ಕುಮಾರ್ ಐತಾಳ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ತುಳು ಕೂಟ (ರಿ.) ಕುಡ್ಲ ಇದರ ಅಧ್ಯಕ್ಷರಾದ ಶ್ರೀಮತಿ ಹೇಮಾ ದಾಮೋದರ ನಿಸರ್ಗ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಕತ್ವದಲ್ಲಿ ಅಪ್ರಕಟಿತ ತುಳು ನಾಟಕಕ್ಕಾಗಿ ತುಳುಕೂಟ ಸಂಯೋಜಿಸಿದ ಸ್ಪರ್ಧೆಯ ವಿಜೇತರಿಗೆ ‘ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ 2025’ ಪ್ರದಾನ ಮಾಡಲಾಗುವುದು. ಪ್ರಥಮ ಬಹುಮಾನ ಶ್ರೀ ಶಶಿರಾಜ್ ರಾವ್ ಕಾವೂರು ಇವರ ‘ಕರುಣೆದ ಕಣ್ಣ್’, ದ್ವಿತೀಯ ಬಹುಮಾನವನ್ನು ಅಕ್ಷತಾ ರಾಜ್ ಪೆರ್ಲ ಇವರ ‘ಯಜ್ಞ ಪುತ್ತೊಲಿ ಹಾಗೂ ತೃತೀಯ ಬಹುಮಾನವನ್ನು ಗೀತಾ ನವೀನ್ ಇವರ ‘ಅಪ್ಪೆ ಮಹಾಮಾಯಿ’ ನಾಟಕ ಕೃತಿಗಳು ಪಡೆದಿರುತ್ತವೆ.…

Read More

ಬೆಂಗಳೂರು : ಡಾ.ಮಾಲತಿ ಶೆಟ್ಟಿ ಮಾಣೂರು ಇವರಿಗೆ ‘ಪಂಪ ಸದ್ಭಾವನ ರಾಜ್ಯ ಪ್ರಶಸ್ತಿ’ ಪ್ರದಾನ – ರಂಗ ಸಂಭ್ರಮ 2025 ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 05 ಏಪ್ರಿಲ್ 2025ರ ಶನಿವಾರದಂದು ನಡೆಯಿತು. ಕಾರ್ಯಕ್ರಮವನ್ನು ನಾಟಕ ಅಕಾಡೆಮಿಯ ಅಧ್ಯಕ್ಷರಾದ ಕೆ. ವಿ. ನಾಗರಾಜು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ‘ಪಂಪ ಸದ್ಭಾವನಾ 2025 ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಿದರು. ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಇವರಿಗೆ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಸೇವೆಗಾಗಿ ಪ್ರತಿಷ್ಠಿತ ‘ಪಂಪ ಸದ್ಭಾವನಾ ರಾಜ್ಯ ಪ್ರಶಸ್ತಿ’ಯನ್ನು ನಿವೃತ ಲೋಕಾಯುಕ್ತ ಹಾಗೂ ನ್ಯಾಯಮೂರ್ತಿಗಳಾದ ಎನ್. ಸಂತೋಷ ಹೆಗ್ಡೆ ಇವರು ಪ್ರದಾನ ಮಾಡಿದರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ್, ನಿವೃತ್ತ ಡಿ. ಸಿ. ಡಾ. ಡಿ ವಿಶ್ವನಾಥ್, ಡಾ. ಲಕ್ಷ್ಮೀದೇವಿ ಬೆಂಗಳೂರು, ಕಲಾಜಗತು ಇದರ ರೂವಾರಿ ತೋನ್ಸೆ ವಿಜಯ ಕುಮಾರ್…

Read More

ಸಾಗರ : ಮಾನ್ವಿತಾ ಹೆಲ್ತ್ ಕೇರ್ ಚೆನ್ನೈ, ಸ್ಪಂದನಾ ಪ್ರೊ. ಆಶ್ರಯದಲ್ಲಿ ಸಾಕೇತ ಕಲಾವಿದರು ಕೆಳಮನೆ ಪ್ರಸ್ತುತ ಪಡಿಸುವ ‘ರಾಮಾಯಣ ಚಾಕ್ಷುಷ ಯಜ್ಞ’ ಯಕ್ಷಗಾನ ಸಪ್ತಾಹವನ್ನು ದಿನಾಂಕ 12 ಏಪ್ರಿಲ್ 2025ರಿಂದ 18 ಏಪ್ರಿಲ್ 2025ರವೆರೆಗೆ ಪ್ರತಿದಿನ ರಾತ್ರಿ 7-00 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ದಿನಾಂಕ 12 ಏಪ್ರಿಲ್ 2025ರಂದು ತಲವಾಟ ಶಾಲಾ ಆವರಣದಲ್ಲಿ ‘ಪುತ್ರಿಕಾಮೇಷ್ಠಿ – ಸೀತಾಕಲ್ಯಾಣ ಶ್ರೀರಾಮ ವಿಜಯ’, ದಿನಾಂಕ 13 ಏಪ್ರಿಲ್ 2025ರಂದು ಹಂಸಗಾರು ಶ್ರೀ ಸಿದ್ಧಿವಿನಾಯಕ ಲಕ್ಷ್ಮೀನಾರಾಯಣ ದೇವಸ್ಥಾನದ ಆವರಣದಲ್ಲಿ ‘ಪಟ್ಟಾಭಿಷೇಕ – ವನಾಭಿಗಮನ ಭರತಾಗಮನ’, ದಿನಾಂಕ 14 ಏಪ್ರಿಲ್ 2025ರಂದು ಭೀಮನಕೋಣೆ ಶ್ರೀಲಕ್ಷ್ಮೀ ನಾರಾಯಣಸ್ವಾಮಿ ಕಲ್ಯಾಣ ಮಂದಿರದಲ್ಲಿ ‘ಪಂಚವಟಿ ಸೀತಾಪಹಾರ’, ದಿನಾಂಕ 15 ಏಪ್ರಿಲ್ 2025ರಂದು ಸಾಗರ ಶ್ರೀನಗರ ನೃತ್ಯಭಾಸ್ಕರ ಸಭಾಂಗಣದಲ್ಲಿ ‘ವಾಲಿ ವಧೆ’, ದಿನಾಂಕ 16 ಏಪ್ರಿಲ್ 2025ರಂದು ಪುರಪ್ಪೆಮನೆ ಶ್ರೀ ಉಮಾಮಹೇಶ್ವರ ದೇವಳದ ಆವರಣದಲ್ಲಿ ‘ಲಂಕಾದಹನ’, ದಿನಾಂಕ 17 ಏಪ್ರಿಲ್ 2025ರಂದು ನಂದಿತಳೆ ಸೊಸೈಟಿ ಆವರಣದಲ್ಲಿ ‘ಅತಿಕಾಯ ಇಂದ್ರಜಿತು’, ದಿನಾಂಕ 18 ಏಪ್ರಿಲ್…

Read More

ಬ್ರಹ್ಮಾವರ : ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ‌ ಬ್ರಹ್ಮಾವರ ಇವರ ನಾಲ್ಕನೇ ವರ್ಷದ ರಂಗೋತ್ಸವವು ದಿನಾಂಕ 04 ಏಪ್ರಿಲ್ 2025 ಶುಕ್ರವಾರದಂದು ಬ್ರಹ್ಮಾವರದ ನಿರ್ಮಲ‌ ಆಂಗ್ಲ ಮಾಧ್ಯಮ ಶಾಲಾ‌ ವೇದಿಕೆ ಹೋಲಿ ಫ್ಯಾಮಿಲಿ ಚರ್ಚ್ ವಠಾರದಲ್ಲಿ ಶುಭಾರಂಭಗೊಂಡಿತು. ತುಳುನಾಡಿನ ಮೂಲ ಜಾನಪದ ಕಲಾಪ್ರಕಾರವಾದ ‘ಆಟಿ ಕಳೆಂಜ’ದ ಮೂಲಕ ಮಂದಾರ ರಂಗೋತ್ಸವವು ಉದ್ಘಾಟನೆಗೊಂಡಿತು. ಈ ವೇಳೆ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಅವರು “ರಂಗಭೂಮಿ, ರಂಗಕಲೆ ಅನ್ನುವುದು ಒಂದು ಅಭಿಜಾತ ಕಲೆ, ಅದಕ್ಕೊಂದು ಸಾಮಾಜಿಕ ಬದ್ಧತೆಯಿದೆ, ಶಿಕ್ಷಣದ ಜೊತೆಜೊತೆಗೆ ಈ ರಂಗಭೂಮಿ ಕಲೆಗಳಲ್ಲಿ ಮಕ್ಕಳು ತಮ್ಮನ್ನ ತಾವು ತೊಡಗಿಸಿಕೊಂಡರೆ ಅವರು ವಿಚಾರವಂತರಾಗುತ್ತಾರೆ” ಎಂದು ಅಭಿಪ್ರಾಯಪಟ್ಟರು. ಹಾಗೇ ನಿರ್ಮಲ ಹೋಲಿ ಫ್ಯಾಮಿಲಿ ಚರ್ಚ್ ಫಾದರ್ ಜಾನ್ ಫೆರ್ನಾಂಡೀಸ್ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಇನ್ನು ಇದೇ ವೇಳೆ ರಂಗನಿರ್ದೇಶಕ ಬಾಸುಮ ಕೊಡಗು ಅವರು ಮಾತನಾಡಿ “ರಂಗಭೂಮಿ ‌ಎಲ್ಲಾ ವೃತ್ತಿಯವರನ್ನ ಮಾನವರನ್ನಾಗಿಸುವ ಪ್ರಕ್ರಿಯೆಯನ್ನು…

Read More

ಕುಂದಾಪುರ : ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮೇಳದವರಿಂದ ಪ್ರಖ್ಯಾತ ಪರಿಣಿತ ಯಕ್ಷ ಕಲಾವಿದರ ಪ್ರಬುದ್ಧ ಪ್ರಭಾವೀ ಪ್ರದರ್ಶನವನ್ನು ದಿನಾಂಕ 11 ಏಪ್ರಿಲ್ 2025ರಂದು ಸಂಜೆ 6-30 ಗಂಟೆಗೆ ಕಾರ್ಕಡದ ಭೂಮಿಕ ಆವರಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವದಲ್ಲಿ ಪಂಚ ಮೇಳದ ಯಜಮಾನರಾದ ಪಳ್ಳಿ ಕಿಶನ್ ಹೆಗ್ಡೆ ಬೈಲೂರು ಇವರಿಗೆ ‘ಯುಗಾದಿ ವಸಂತ ಪುರಸ್ಕಾರ’ವನ್ನು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ್ ಕುಮಾರ ಕಲ್ಕೂರ ಇವರು ಪ್ರಧಾನ ಮಾಡಲಿದ್ದು, ಉಪನ್ಯಾಸಕರಾದ ಎಚ್. ಸುಜಯೀಂದ್ರ ಹಂದೆ ಇವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಬಳಿಕ ‘ಬಬ್ರುವಾಹನ ಕಾಳಗ’ ಮತ್ತು ‘ಶ್ರೀ ಶಿವಪಂಚಾಕ್ಷರಿ ಮಹಿಮೆ’ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಏರ್ಪಾಟಾಗಿದ್ದ ಹಿರಿಯ ವಿದ್ವಾಂಸ ಪ್ರೊ. ಅ.ರಾ. ಮಿತ್ರ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿದ್ಯಾರಣ್ಯ ಪ್ರತಿಷ್ಠಾನ ಸ್ಥಾಪಿಸಿರುವ ‘ವಿದ್ಯಾರಣ್ಯ ದತ್ತಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 06 ಏಪ್ರಿಲ್ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಪ್ರಾಧ್ಯಾಪಕ, ಚಿಂತಕ, ವಿಮರ್ಶಕ, ಮಾತುಗಾರ ಪ್ರೊ. ಅ.ರಾ. ಮಿತ್ರ ಇವರು ಕುಮಾರ ವ್ಯಾಸ ಭಾರತದ ವ್ಯಾಖ್ಯಾನ, ಹಾಸ್ಯೋತ್ಸವಗಳ ಮೂಲಕ ಕರ್ನಾಟಕದ ಮನೆ ಮನೆಯಲ್ಲಿಯೂ ಹೆಸರಾಗಿರುವವರು. ಕನ್ನಡ ಸಾಹಿತ್ಯವನ್ನು ಬಹುಮುಖಿಯಾಗಿ ಬೆಳೆಸಿದ ಅವರು ಪರಂಪರೆ ಮತ್ತು ಆಧುನಿಕತೆಗೆ ಕೊಂಡಿಯಾಗಿರುವವರು. ಪ್ರೊ. ಅ.ರಾ. ಮಿತ್ರ ಅವರ ‘ಛಂದೋಮಿತ್ರ’ ಸುಲಭವಾಗಿ ಎಲ್ಲರೂ ಕನ್ನಡ ಛಂದಸ್ಸನ್ನು ಅರಿಯಲು ನೆರವಾಯಿತು. ಹಾಸ್ಯ, ಮಿತ್ರ ಅವರ ಮಾರ್ಗವಾದರೂ ಗುರಿ ಗಂಭೀರ ಸಾಹಿತ್ಯದ ಅಧ್ಯಯನ, ಪ್ರಾಚೀನ ಕಾವ್ಯಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಅವರು ನಾಡಿನೆಲ್ಲೆಡೆ ಕುಮಾರ ವ್ಯಾಸನನ್ನು ತಲಪಿಸಿದರು. ಕನ್ನಡ…

Read More

ಉಡುಪಿ : ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ.) ಬೋಳ ಇದರ ವತಿಯಿಂದ ‘ಅಕ್ಷರಾಮೃತ’ ರಜತ ಸಂಭ್ರಮದ ಉದ್ಘಾಟನಾ ಸಮಾರಂಭವನ್ನು ದಿನಾಂಕ 13 ಏಪ್ರಿಲ್ 2025ರಂದು ಸಂಜೆ 4-30 ಗಂಟೆಗೆ ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಕೇಶವ ಆಚಾರ್ಯ ಇವರು ಅಧ್ಯಕ್ಷತೆ ವಹಿಸಲಿದ್ದು, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಇವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ರಜತ ಸಂಭ್ರಮದ ಲೋಗೋ ಬಿಡುಗಡೆ, ಯಕ್ಷಾಕ್ಷರ ರಜತ ಪ್ರಶಸ್ತಿ ಪ್ರದಾನ ಹಾಗೂ ಪರಿಸರ ಜಾಗ್ರತಿ ಅಭಿಯಾನದ ಕರಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಸಂಜೆ 4-30 ಗಂಟೆಗೆ ‘ಶ್ರೀರಾಮ ದರ್ಶನ’ ಹಾಗೂ ರಾತ್ರಿ 8-00 ಗಂಟೆಗೆ ‘ಗಿರಿಜಾ ಕಲ್ಯಾಣ’ ಎಂಬ ಪ್ರಸಂಗದ ಯಕ್ಷಗಾನ ವಿದ್ಯಾರ್ಥಿಗಳಿಂದ ಪ್ರಸ್ತುತಗೊಳ್ಳಲಿದೆ.

Read More

ಬೈಂದೂರು : ಲಾವಣ್ಯ (ರಿ.) ಬೈಂದೂರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ಸೇನೇಶ್ವರ ದೇವಸ್ಥಾನ ಬೈಂದೂರು, ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ಲಿ.) ಬೈಂದೂರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಯಕ್ಷಗಾನ ತಾಳಮದ್ದಲೆ’ ಕಾರ್ಯಕ್ರಮವನ್ನು ದಿನಾಂಕ 12 ಏಪ್ರಿಲ್ 2025ರಂದು ಸಂಜೆ 5-30 ಗಂಟೆಗೆ ಶ್ರೀ ಶಾರದಾ ವೇದಿಕೆಯಲ್ಲಿ ಆಯೋಜಿಸಲಾಗಿದೆ. ‘ಅಂಗದ ಸಂಧಾನ’ ಹಾಗೂ ‘ಮಾಗಧ ವಧೆ’ ಎಂಬ ಪ್ರಸಂಗಗಳು ಪ್ರಸ್ತುತಗೊಳ್ಳುವ ಈ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದಲ್ಲಿ ಹಿಮ್ಮೇಳದಲ್ಲಿ ಭಾಗವತರು ಗಣೇಶ್ ಕುಮಾರ್ ಹೆಬ್ರಿ, ಮದ್ದಳೆಯಲ್ಲಿ ಸುಬ್ರಹ್ಮಣ್ಯ ಚಿತ್ರಾಪು ಮತ್ತು ಚೆಂಡೆಯಲ್ಲಿ ಸ್ಕಂದ ಕೊನ್ನಾರು ಹಾಗೂ ಜಬ್ಬಾರ್ ಸಮೊ, ರಾಧಾಕೃಷ್ಣ ಕಲ್ಚಾರ್, ಪವನ್ ಕಿರಣ್ಕೆರೆ, ಶ್ರೀ ಸತೀಶ ಶೆಟ್ಟಿ ಮೂಡುಬಗೆ ಮತ್ತು ಶಿವಪ್ರಸಾದ್ ಭಟ್ಕಳ ಇವರುಗಳು ಅರ್ಥಧಾರಿಗಳಾಗಿ ಸಹಕರಿಸಲಿದ್ದಾರೆ.

Read More

ಮೈಸೂರು : ಸಮಾಜವಾದಿ ಅಧ್ಯಯನ ಕೇಂದ್ರ ಟಸ್ಟ್ (ರಿ), ಮೈಸೂರು ಆಯೋಜಿಸುವ ಲೇಖಕ ಪ್ರಸನ್ನ ಇವರ ‘ಆಕ್ಟಿಂಗ್ ಅಂಡ್ ಬಿಯಾಂಡ್’ ಪುಸ್ತಕ ಲೋಕಾರ್ಪಣೆ ಮತ್ತು ಚರ್ಚಾ ಕಾರ್ಯಕ್ರಮವು ದಿನಾಂಕ 06 ಏಪ್ರಿಲ್ 2025ರ ಭಾನುವಾರ ಸಂಜೆ ಘಂಟೆ 5.00ಕ್ಕೆ ಮೈಸೂರಿನ ಜೆ. ಎಲ್. ಬಿ. ರಸ್ತೆಯಲ್ಲಿರುವ ಹಾರ್ಡ್ರಿಕ್ ಶಾಲೆ ಆವರಣದ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಇಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮೈಸೂರಿನ L&T ಟೆಕ್ನಾಲಜಿ ಸರ್ವಿಸಸ್ ಸಂಸ್ಥೆಯ ಡೆಲಿವರಿ ಮುಖ್ಯಸ್ಥ ಹಾಗೂ ಲೇಖಕರಾದ ಶಶಿಧರ ಡೋಂಗ್ರೆ, ಮೈಸೂರಿನ ಲೇಖಕರಾದ ಪ್ರೀತಿ ನಾಗರಾಜ್ ಹಾಗೂ ಲೇಖಕರು ಮತ್ತು ಖ್ಯಾತ ರಂಗ ನಿರ್ದೇಶಕರಾದ ಪ್ರಸನ್ನ ಭಾಗವಹಿಸಲಿದ್ದಾರೆ.

Read More