ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇವರ ಸಹಯೋಗದೊಂದಿಗೆ ರಂಗ ಸುದರ್ಶನ (ರಿ.) ಸಸಿಹಿತ್ಲು ಪರಮ ಪದ್ಮ ಕಲಾವಿದರು ಸಾದರ ಪಡಿಸುವ ‘ಶಿವ ಪುರ್ಸಾದ ಬಬ್ಬರ್ಯ’ ನಾಟಕಕ್ಕೆ ಬಂಗಾರ ಸಡಗರ ಮತ್ತು ತುಳು ನಾಟಕ : ಬೆಳವಣಿಗೆ ಪರಿವರ್ತನೆ ವಿಚಾರ ಮಂಥನ ಕಾರ್ಯಕ್ರಮವನ್ನು ದಿನಾಂಕ 11 ಮೇ 2025ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಜೆ 5-00 ಗಂಟೆಗೆ ವಾಮಂಜೂರಿನ ಅಮೃತೇಶ್ವರ ನಾಟ್ಯಾಲಯದವರಿಂದ ವಿದುಷಿ ಚಿತ್ರಾಕ್ಷಿ ಅಜಿತ್ ಕುಮಾರ್ ಇವರ ನಿರ್ದೇಶನಅಲ್ಲಿ ‘ತುಳು ನೃತ್ಯ ಸಿರಿ’ ಮತ್ತು ಮತ್ತು ‘ತುಳು ಪದ ರಂಗಿತ’ ಪ್ರಸ್ತುತಗೊಳ್ಳಲಿದೆ. 6-00 ಗಂಟೆಗೆ ಬಬ್ಬರ್ಯ ಜಾನಪದ ಐತಿಹಾಸಿಕ ನಾಟಕದ ಬಂಗಾರ ಸಡಗರ ಮತ್ತು ತುಳು ನಾಟಕ : ಬೆಳವಣಿಗೆ ಪರಿವರ್ತನೆ ವಿಚಾರ ಮಂಥನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷತೆಯನ್ನು ತಾರಾನಾಥ ಗಟ್ಟಿ ಕಾಪಿಕಾಡ್ ಇವರು ವಹಿಸಲಿದ್ದು, ಹೊಟೇಲ್ ರಂಗೋಲಿಯ ಮಾಲಕರಾದ ಚಂದ್ರಹಾಸ ಶೆಟ್ಟಿ ಮತ್ತು ಭಾರತ್ ಕೋ-ಅಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಸೂರ್ಯಕಾಂತ್ ಜೆ. ಸುವರ್ಣ ಇವರು ಜ್ಯೋತಿ ಪ್ರಜ್ವಲನೆ ಮಾಡಲಿದ್ದಾರೆ. ‘ಹಳೆ ತಲೆಮಾರಿನ ನಾಟಕಗಳ ಪ್ರಸ್ತುತಿ ಮತ್ತು ಸ್ವೀಕಾರ’ ಎಂಬ ವಿಷಯದ ಬಗ್ಗೆ ಸಾಹಿತಿ ಯಶವಂತ ಬೋಳಾರು ಮತ್ತು ‘ಹೊಸ ತಲೆಮಾರಿನ ನಾಟಕಗಳ ಬೆಳವಣಿಗೆ ಮತ್ತು ಪರಿವರ್ತನೆ’ ಎಂಬ ವಿಷಯದ ಬಗ್ಗೆ ಸಾಹಿತಿ ನರೇಶ್ ಕುಮಾರ್ ಸಸಿಹಿತ್ಲು ಇವರು ವಿಚಾರ ಮಂಡನೆ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಸೃಜನಶೀಲ ತುಳು ಕನ್ನಡ ಪ್ರಬುದ್ಧ ನಾಟಕಕಾರ ಶಶಿರಾಜ್ ರಾವ್ ಕಾವೂರು ಇವರಿಗೆ ‘ರಂಗ ಶಶಿ’ ಹಾಗೂ ಹೊರನಾಡಿನಲ್ಲಿ ತುಳು ಎಂ.ಎ.ಯಲ್ಲಿ ಮೊದಲ ರ‍್ಯಾಂಕ್ ಪಡೆದ ಪ್ರಥಮ ಮಹಿಳಾ ಸಾಧಕಿ ಶ್ರೀಮತಿ ಮಣಿ ಮನಮೋಹನ್ ರೈ ಇವರಿಗೆ ‘ಹೊರನಾಡ ತುಳು ಮಣಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಪರಮ ಪದ್ಮ ಕಲಾವಿದರಿಂದ ‘ಶಿವ ಪುರ್ಸಾದ ಬಬ್ಬರ್ಯ’ ಎಂಬ ನಾಟಕ ಪ್ರದರ್ಶನ ನಡೆಯಲಿದೆ.