ಕೊಪ್ಪಳ : ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇದರ ವತಿಯಿಂದ “ಗೌರವ ಪ್ರಶಸ್ತಿ 2022’, ‘ಸಾಹಿತ್ಯಶ್ರೀ ಪ್ರಶಸ್ತಿ 2022 ಮತ್ತು ‘ಪುಸ್ತಕ ಬಹುಮಾನ 2021’ ಪ್ರದಾನ ಸಮಾರಂಭವನ್ನು ದಿನಾಂಕ 20 ಜನವರಿ 2025ರಂದು ಸಂಜೆ 4-00 ಗಂಟೆಗೆ ಕೊಪ್ಪಳ ಹೊಸಪೇಟೆ ರಸ್ತೆ ಹೊಟೇಲ್ ಬಿ.ಎಸ್. ಪವಾರ್ ಗ್ರ್ಯಾಂಡ್ ಹತ್ತಿರವಿರುವ ಶ್ರೀ ಶಿವಶಾಂತ ಮಂಗಲ ಭವನದಲ್ಲಿ ಆಯೋಜಿಸಲಾಗಿದೆ.
ಸುಗಮ ಸಂಗೀತ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗುವ ಈ ಸಮಾರಂಭದಲ್ಲಿ ಮಾನ್ಯ ಸಚಿವರಾದ ಶ್ರೀ ಶಿವರಾಜ ಎಸ್. ತಂಗಡಗಿ ಇವರು ಗೌರವ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರದಾನ ಮಾಡಲಿರುವರು. ಪ್ರೊ. ಆರ್.ಕೆ. ಹುಡಗಿ, ಅಗ್ರಹಾರ ಕೃಷ್ಣಮೂರ್ತಿ, ಡಾ. ಇಂದಿರಾ ಹೆಗ್ಗಡೆ, ರಂಜಾನ್ ದರ್ಗಾ ಮತ್ತು ತುಂಬಾಡಿ ರಾಮಯ್ಯ ಇವರುಗಳು 2022ನೆಯ ವರ್ಷದ ಗೌರವ ಪ್ರಶಸ್ತಿ ಪುರಸ್ಕೃತರು, ಡಾ. ಬಂಜಗೆರೆ ಜಯಪ್ರಕಾಶ, ಡಾ. ಎಂ.ಜಿ. ಮಂಜುನಾಥ, ಡಾ. ರಾಜಶೇಖರ ಹತಗುಂದಿ, ದಾಸನೂರು ಕೂಸಣ್ಣ, ಡಾ. ಅನಸೂಯ ಕಾಂಬಳೆ, ಬಿ. ಮಹೇಶ್ ಹರವೆ, ಎಚ್.ಎನ್. ಆರತಿ, ಚಲಂ ಹಾಡ್ಲಹಳ್ಳಿ, ರೂಮಿ ಹರೀಶ್ ಮತ್ತು ಡಾ. ಸಾರಿಕಾದೇವಿ ಎಲ್. ಕಾಳಗಿ ಇವರುಗಳು 2022ನೆಯ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರು.
‘ರಾಗಿ ಕಾಳು’ – ಚೀಮನಹಳ್ಳಿ ರಮೇಶಬಾಬು, ‘ದಡ ಸೇರಿದ ಕನಸು’ – ಡಾ. ಶೈಲೇಶ್ ಕುಮಾರ್, ‘ಚೆನ್ನಭೈರಾದೇವಿ ಕರಿಮೆಣಸಿನ ರಾಣಿಯ ಅಕಳಂಕ ಚರಿತೆ’ – ಡಾ. ಗಜಾನನ ಶರ್ಮ, ‘ಗುಣಸಾಗರಿ ಮತ್ತು ಇತರ ಕತೆಗಳು’ – ಜಿ.ವಿ. ಆನಂದಮೂರ್ತಿ, ‘ಮಹಾಮಹಿಮ ಎಡೆಯೂರು ಸಿದ್ದಲಿಂಗ ಶಿವಯೋಗಿ’ – ಬಿ.ಆರ್. ಪೊಲೀಸ್ ಪಾಟೀಲ, ‘ಎಲ್ಲಿಂದಲೋ ಬಂದವರು’ – ಭಾರತಿ ಬಿ.ವಿ., ‘ಬುದ್ಧ ಭಕ್ತರ ನಾಡಿನಲ್ಲಿ’ – ಡಾ. ಎಸ್.ಪಿ. ಪದ್ಮಪ್ರಸಾದ್, ‘ಅಕ್ಕಯ್’ – ಡಾ. ಡೊಮಿನಿಕ್ ಡಿ., ಕಣ್ಣೋಟ’ – ಡಾ. ಎಚ್.ಎಸ್. ಸತ್ಯನಾರಾಯಣ, ‘ವಜ್ರದ ಕಿರೀಟ’ – ಸಿ.ವಿ. ಶೇಷಾದ್ರಿ ಹೊಳವನಹಳ್ಳಿ, ‘ಸೆರೆಂಡಿಪಿಟಿ ವೈದ್ಯಲೋಕದ ಅದ್ಭುತ ಆಕಸ್ಮಿಕಗಳು’ – ಡಾ. ಕಿರಣ್ ವಿ.ಎಸ್., ‘ಸಂಕೇತಿ ವ್ಯಾಕರಣ ಮತ್ತು ಪದಕೋಶ’ – ಡಾ. ಕೆ.ಎಸ್. ನಾಗರಾಜ, ‘ಚಹರೆಗಳೆಂದರೆ ಗಾಯಗಳೂ ಹೌದು’ – ಡಾ. ಎ.ಎಸ್. ಪ್ರಭಾಕರ, ‘ಪರ್ದಾ & ಪಾಲಿಗಮಿ’ – ದಾದಾಪೀರ್ ಜೈಮನ್, ‘ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ’ – ಮುಜಾಫರ್ ಅಸ್ಸಾದಿ, ‘ವಚನ ದೀಪಿಕೆ’ – ಡಾ. ಜಿ. ಕೃಷ್ಣಪ್ಪ, ‘ಊರು ಹೇಳದ ಕಥೆ’ – ಯಶಸ್ವಿನಿ ಕದ್ರಿ ಇವರುಗಳು 2021ನೆಯ ವರ್ಷದ ಪುಸ್ತಕ ಬಹುಮಾನ ಪಡೆಯುವವರು.
‘ಹದಿನೆಂಟರಿಂದ ಇಪ್ಪತ್ತೆಂಟರ ಕವಿತೆಗಳು’ – ಅಕ್ಷಯ ಕಾಂತಬೈಲು, ‘ಚಪಡ ಇದು ಅಕ್ಷರದ ಪಯಣ’ – ಡಾ. ಶ್ರೀಧರ ಎಚ್.ಜಿ., ‘ಇದು ಬರಿ ಮಣ್ಣಲ್ಲ’ – ಸಹನಾ ಕಾಂತಬೈಲು, ‘ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್’ – ಡಾ. ನಾಗ ಎಚ್. ಹುಬ್ಬಿ, ‘ಬೆಡಗು ಬಿನ್ನಾಣ’ (ಆಧುನಿಕ ಸಾಹಿತ್ಯ ವಿಮರ್ಶೆ) – ಡಾ. ಪ್ರಸಾದಸ್ವಾಮಿ ಎಸ್., ಸೆಬಾಸ್ಟಿಯನ್ & ಸನ್ಸ್’ – ಸುಮಂಗಲಾ, ‘ಬಯಲಲಿ ತೇಲುತ ತಾನು’ – ಅಕ್ಷಯ ಪಂಡಿತ್, ‘ಅಸತ್ಯದ ಕೇಡು’ – ಡಾ. ಸುಶಿ ಕಾಡನಕುಪ್ಪೆ ಇವರುಗಳು 2021ನೆಯ ವರ್ಷದ ಅಕಾಡೆಮಿಯ ಪುಸ್ತಕ ದತ್ತಿ ಬಹುಮಾನ ಪಡೆಯುವವರು.