ಪೆರಿಯ : ಬೇಕಲ್ ಗೋಕುಲಂ ಗೋಶಾಲೆಯು ಈ ವರ್ಷದ ಪರಂಪರಾ ಪ್ರಶಸ್ತಿಗಳನ್ನು ಘೋಷಿಸಿದೆ. ಪ್ರಸಿದ್ಧ ಸಂಗೀತಜ್ಞರು ಮತ್ತು ವಯೋಲಿನ್, ಮೃದಂಗ ವಿದ್ವಾಂಸರಾದ ಟಿ.ವಿ. ಗೋಪಾಲಕೃಷ್ಣನ್ (ಟಿ.ವಿ.ಜಿ. ಎಂದು ಪ್ರಸಿದ್ಧ) ಇವರಿಗೆ ‘ಪರಂಪರಾ ವಿಭೂಷಣ ಪ್ರಶಸ್ತಿ’ ನೀಡಲಾಗುತ್ತಿದ್ದು ಈ ಪ್ರಶಸ್ತಿಯು ರೂ.61,000/- ನಗದು ಬಹುಮಾನ ಮತ್ತು ತಾಮ್ರ ಫಲಕವನ್ನು ಒಳಗೊಂಡಿದೆ.
‘ಪರಂಪರಾ ಶ್ರೀ ಪ್ರಶಸ್ತಿ’ಯನ್ನು ಪ್ರಸಿದ್ಧ ಡ್ರಮ್ ಮಾಂತ್ರಿಕ ಶಿವಮಣಿ ಇವರಿಗೆ ನೀಡಲಾಗುತ್ತಿದ್ದು, ಪ್ರಶಸ್ತಿಯು ರೂ.51,000/- ನಗದು ಮತ್ತು ತಾಮ್ರ ಫಲಕವನ್ನು ಒಳಗೊಂಡಿದೆ.
ಈ ವರ್ಷದ ‘ಗುರುರತ್ನ ಪ್ರಶಸ್ತಿ’ ಕೇರಳದ ಹೆಮ್ಮೆ, ವೀಣೆ ವಿದ್ವಾಂಸ ತ್ರಿಶೂರ್ ಅನಂತ ಪದ್ಮನಾಭನ್ ಇವರಿಗೆ ದೊರಕಿದೆ. ಪ್ರಶಸ್ತಿಯು ರೂ.30,000/- ನಗದು ಮತ್ತು ತಾಮ್ರಪತ್ರ ನೀಡಲಾಗುತ್ತದೆ.
‘ಯುವ ಪ್ರತಿಭಾ ಪ್ರಶಸ್ತಿ’ ಪ್ರಸಿದ್ಧ ಯುವ ಸಂಗೀತಜ್ಞೆ ಮತ್ತು ತೇಜಸ್ವಿ ಸೂರ್ಯ ಇವರ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್ ಇವರಿಗೆ ನೀಡಲಾಗುತ್ತದೆ. ಪ್ರಶಸ್ತಿಯಲ್ಲಿ ರೂ.25,000/- ನಗದು ಮತ್ತು ತಾಮ್ರಪತ್ರವಿದೆ.
ಮ್ಯಾಂಡೋಲಿನ್ ವಾದನದಲ್ಲಿ ಅದ್ಭುತ ತೋರಿಸಿರುವ ಸಿಂಗಪುರದ ರಾಗವ ಕೃಷ್ಣ ಇವರಿಗೆ ‘ಬಾಲ ಪ್ರತಿಭಾ ಪ್ರಶಸ್ತಿ’ ನೀಡಲಾಗುತ್ತದೆ. ಪ್ರಶಸ್ತಿಯು ರೂ.20,000/- ನಗದು ಮತ್ತು ತಾಮ್ರ ಫಲಕ ಒಳಗೊಂಡಿದೆ.
ಎಲ್ಲ ಪ್ರಶಸ್ತಿಗಳನ್ನು ದಿನಾಂಕ 01 ನವೆಂಬರ್ 2025ರಂದು ದೀಪಾವಳಿ ಸಂಗೀತೋತ್ಸವದ ಸಮಾಪನ ದಿನ ಪ್ರದಾನ ಮಾಡಲಾಗುತ್ತದೆ.