ಬೆಂಗಳೂರು : ಜಂಗಮ ಕಲೆಕ್ಟಿವ್ ಬೆಂಗಳೂರು ಪ್ರಸ್ತುತ ಪಡಿಸುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟಿದ ದಿನದ ಆಚರಣೆಯನ್ನು ದಿನಾಂಕ 13 ಏಪ್ರಿಲ್ 2025ರಂದು ಬೆಂಗಳೂರಿನ ಸ್ಪೂರ್ತಿಧಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 10-00 ಗಂಟೆಗೆ ‘ಬ್ಲೂಮಿಂಗ್ ಬಾಬಾ ಸಾಹೇಬ್’ ಕಲೆಯ ಮೂಲಕ ಮಕ್ಕಳಿಗೆ ಅಂಬೇಡ್ಕರ್ ಜಗತ್ತಿನ ಪರಿಚಯ, 11-00 ಗಂಟೆಗೆ ‘ವೈಟಿಂಗ್ ಫಾರ್ ಅ ವೀಸಾ’ ಅಂಬೇಡ್ಕರ್ ಅವರ ಕೃತಿಯ ಓದು ಮತ್ತು ಚರ್ಚೆ, 2-30 ಗಂಟೆಗೆ ‘ನಾಟಕ ಮತ್ತು ಹಾಡಿನ ಕಮ್ಮಟ’, ಅಂಬೇಡ್ಕರ್ ಫೋಟೋ ಪ್ರದರ್ಶನ ಮತ್ತು 7-00 ಗಂಟೆಗೆ ಜಂಗಮ ಕಲೆಕ್ಟಿವ್ ತಂಡದವರಿಂದ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕ ಪ್ರದರ್ಶನ ನಡೆಯಲಿದೆ.