ಮಂಗಳೂರು : ‘ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ ರಂಗಸ್ಥಳ ಮಂಗಳೂರು (ರಿ.) ಸಂಸ್ಥೆಗಳು ಅರಹೊಳೆ ಪ್ರತಿಷ್ಠಾನ, ರಂಗ ಸಂಗಾತಿ (ರಿ.) ಮಂಗಳೂರು, ಕೊಡಿಯಾಲ್ ಬೈಲ್ ಫ್ರೆಂಡ್ಸ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಕುಡ್ಲದಗಿಪ್ ಕುಂದಾಪ್ರ, ಮಂಗಳೂರು ಯಕ್ಷಾಭಿನಯ ಬಳಗ ಹಾಗೂ ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಇವರ ಸಹಕಾರದೊಂದಿಗೆ ಆಯೋಜಿಸುವ ‘ಬಳ್ಕೂರು ಯಕ್ಷ ಕುಸುಮ’ ಪುರಸ್ಕಾರ ಪ್ರಧಾನ ಸಮಾರಂಭ ಹಾಗೂ ಯಕ್ಷಗಾನ ಪ್ರದರ್ಶನವು ದಿನಾಂಕ 09 ಮಾರ್ಚ್ 2025ರ ಭಾನುವಾರ ಸಂಜೆ ಘಂಟೆ 4. 00ರಿಂದ ಮಂಗಳೂರಿನ ಶ್ರೀ ಕ್ಷೇತ್ರ, ಕುದ್ರೋಳಿ ಭಗವತೀ ದೇವಸ್ಥಾನದ ಕೂಟಕ್ಕಳ ಸಭಾಂಗಣದಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ವಿದ್ಯಾಧರ ರಾವ್ ಜಲವಳ್ಳಿ ಇವರಿಗೆ ‘ಬಳ್ಕೂರು ಯಕ್ಷ ಕುಸುಮ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಬಳಿಕ ಬಡಗು ತಿಟ್ಟಿನ ಶ್ರೀ ಕ್ಷೇತ್ರ ಹಟ್ಟಿಯಂಗಡಿ ಮೇಳ ಇವರಿಂದ ಕಾಲಮಿತಿ ಯಕ್ಷಗಾನ ಪೌರಾಣಿಕ ಪ್ರಸಂಗ ‘ಗದಾಯುದ್ಧ ರಾಜಾ ರುದ್ರಕೋಪ’ ಪ್ರದರ್ಶನ ಗೊಳ್ಳಲಿದೆ ಎಂದು ಕರುಣಾಕರ ಬಳ್ಕೂರು ತಿಳಿಸಿದ್ದಾರೆ.

