ಮಂಗಳೂರು : ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನ ಮತ್ತು ರಂಗಸ್ಥಳ (ರಿ.) ಮತ್ತು ಶ್ರೀ ಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನ ಇವರ ಸಹಕಾರದೊಂದಿಗೆ ಬಡಗುತಿಟ್ಟಿನ ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳ ಇವರಿಂದ ‘ಚಂದ್ರಹಾಸ ಶ್ರೀನಿವಾಸ ಕಲ್ಯಾಣ’ ಕಲಾಮಿತಿ ಯಕ್ಷಗಾನ ಪೌರಾಣಿಕ ಪ್ರಸಂಗದ ಪ್ರದರ್ಶನವು ದಿನಾಂಕ 11-02-2024ರಂದು ಸಂಜೆ 4.30ಕ್ಕೆ ಕೂಟಕ್ಕಳ ಸಭಾಂಗಣದಲ್ಲಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಸೂರಿಕುಮೇರು ಗೋವಿಂದ ಭಟ್ ಇವರಿಗೆ ‘ಬಳ್ಕೂರು ಯಕ್ಷ ಕುಸುಮ’ ಪುರಸ್ಕಾರ ಮತ್ತು ಸಾತ್ವಿಕ್ ನೆಲ್ಲಿತೀರ್ಥ ಇವರಿಗೆ ‘ಯಕ್ಷ ಕುಸುಮ’ ಯುವ ಪುರಸ್ಕಾರ ಪ್ರದಾನ ಮಾಡಲಾಗುವುದು.