ಹೃಷೀಕೇಶ : ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ.) ಬೆಂಗಳೂರು ಇವರ ವತಿಯಿಂದ ‘ಬನ್ನಂಜೆ 90ರ ವಿಶ್ವನಮನ’ ಸಮಾರಂಭವನ್ನು ದಿನಾಂಕ 05ರಿಂದ 11 ನವೆಂಬರ್ 2025ರಂದು ಹೃಷೀಕೇಶದ ಮುನಿ ಕಿ ರೇತಿ ಸ್ವರ್ಗಾಶ್ರಮ ವಾನಪ್ರಸ್ಥ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರತಿದಿನ ಬೆಳಿಗ್ಗೆ 08-00 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಸತ್ಸಂಗ, ಭಜನೆ, ಮಂತ್ರ ಮತ್ತು ಉಪನ್ಯಾಸ ನಡೆಯಲಿದೆ. ಡಾ. ಪ್ರತೋಷ ಏ.ಪಿ. ಇವರಿಂದ ‘ಮಧ್ವಸಿದ್ಧಾಂತ ವಿಜ್ಞಾನ ಬನ್ನಂಜೆ’, ಡಾ. ಗುರುರಾಜ ಕರ್ಜಗಿ ಇವರಿಂದ ದಿನಕ್ಕೊಂದು ಬನ್ನಂಜೆಯವರ ಕೃತಿ ಪರಿಚಯ ಮತ್ತು ಅಭಿಪ್ರಾಯ’, ವಿಜಯ ಸಿಂಹ ಆಚಾರ್ಯರು ‘ಆಚಾರ್ಯರ ಸರ್ವಮೂಲ ಗ್ರಂಥ’, ವಿಷ್ಣು ಸಹಸ್ರನಾಮ ಪಠನ, ಶ್ರೀ ಬ್ರಹ್ಮಣ್ಯಾಚಾರ್ಯರು ‘ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮ ವಿರಚಿತ ಶ್ರೀ ರಾಮಚಾರಿತ್ರಮಂಜರೀ’, ಶ್ರೀ ಶ್ರೀ ವಿದ್ಯಾಧೀಶ ತೀರ್ಥರು ಇವರಿಂದ ‘ಶ್ರೀಮದ್ಭಾಗವತ ಪ್ರವಚನ’, ಶ್ರೀಮತಿ ಕವಿತಾ ಉಡುಪ ಮತ್ತು ಶ್ರೀಮತಿ ಸುಮಾ ಶಾಸ್ತ್ರಿಯರಿಂದ ಹಾಡುಗಳ ಭಜನೆ ಹಾಗೂ ದಿನಾಂಕ 11 ನವೆಂಬರ್ 2025ರಂದು 4-00 ಗಂಟೆಗೆ ಶ್ರೀ ವಿದ್ಯಾಭೂಷಣರು ಮತ್ತು ತಂಡದವರಿಂದ ‘ಗೋವಿಂದ ಗಾನ’ ಪ್ರಸ್ತುತಗೊಳ್ಳಲಿದೆ.
 
 
									 
					