ಉಡುಪಿ : ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ.) ಬೆಂಗಳೂರು ಇವರ ವತಿಯಿಂದ ಹಾಗೂ ಪರ್ಯಾಯ ಶ್ರೀ ಪುತ್ತಿಗೆ ಮಠ ಮತ್ತು ಎಂ.ಜಿ.ಎಂ. ಕಾಲೇಜಿನ ಸಾಂಗತ್ಯದಲ್ಲಿ ‘ಬನ್ನಂಜೆ ಉಡುಪಿ ನಮನ’ ಕಾರ್ಯಕ್ರಮವನ್ನು ದಿನಾಂಕ 03 ಆಗಸ್ಟ್ 2025ರಂದು ಬೆಳಗ್ಗೆ 8-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 8-00 ಗಂಟೆಗೆ ಬನ್ನಂಜೆಯವರ ಮೂಡುಬೆಟ್ಟಿನ ಮೂಲ ಮನೆಯಲ್ಲಿ ಪ್ರಾರ್ಥನೆ, ಆದಿ ಉಡುಪಿ ಶಾಲೆಯಿಂದ ನಡೆಯುವ ಮೆರವಣಿಗೆಗೆ ನಾಡೋಜ ಪ್ರೊ. ಕೆ.ಪಿ. ರಾವ್ ಇವರು ಚಾಲನೆ ನೀಡಲಿದ್ದಾರೆ. 9-20 ಗಂಟೆಗೆ ಬನ್ನಂಜೆಯವರ ಕೃತಿ ಆಧಾರಿತ ಯಕ್ಷಗಾನ ಪ್ರಸ್ತುತಿ ನಡೆಯಲಿದೆ. 10-00 ಗಂಟೆಗೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ವೇದವ್ಯಾಸಾಚಾರ್ಯ ಶ್ರೀಶಾನಂದರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಹಿರಿಯ ಸಾಹಿತಿ ಶ್ರೀಮತಿ ವೈದೇಹಿಯವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. 11-45, 2-00ಮತ್ತು 3-45 ಗಂಟೆಗೆ ಕವಿತಾ ಉಡುಪ ಮತ್ತು ಸುಮಾ ಶಾಸ್ತ್ರಿ ಇವರಿಂದ ಬನ್ನಂಜೆಯವರ ಕವಿತೆಗಳ ಹಾಡು ಪ್ರಸ್ತುತಗೊಳ್ಳಲಿದೆ. 12-00 ಗಂಟೆಗೆ ನಡೆಯುವ ವಿಚಾರ ಗೋಷ್ಠಿಗಳಲ್ಲಿ ಗೋಷ್ಠಿ 01ರಲ್ಲಿ ‘ನಮ್ಮ ಹೆಮ್ಮೆಯ ಆಚಾರ್ಯರು’ ಎಂಬ ವಿಷಯದ ಬಗ್ಗೆ ವಿದ್ವಾಂಸ ಬ್ರಹ್ಮಣ್ಯಾಚಾರ್ಯರು, ಗೋಷ್ಠಿ 02ರಲ್ಲಿ ‘ತುಳುನಾಡ್ ದ ಪೆರ್ಮೆ ಬನ್ನಂಜೆ’ ಎಂಬ ವಿಷಯದ ಬಗ್ಗೆ ಲೇಖಕ ಶ್ರೀಕಾಂತ ಶೆಟ್ಟಿ ಕಾರ್ಕಳ, ಗೋಷ್ಠಿ 03ರಲ್ಲಿ ‘ಆಚಾರ್ಯರ ಸಂದರ್ಶನ ಅನುಭವ’ ಎಂಬ ವಿಷಯದ ಬಗ್ಗೆ ಹಿರಿಯ ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣು ಭಟ್, ಗೋಷ್ಠಿ 04ರಲ್ಲಿ ‘ಉದಯವಾಣಿ ಮತ್ತು ಬನ್ನಂಜೆ’ ಎಂಬ ವಿಷಯದ ಬಗ್ಗೆ ನಿವೃತ್ತ ಉಪ ಸಂಪಾದಕರಾದ ನಿತ್ಯಾನಂದ ಪಡ್ರೆ, ಗೋಷ್ಠಿ 05ರಲ್ಲಿ ‘ಬನ್ನಂಜೆಯವರ ಸಾಹಿತ್ಯ ಕೃತಿಗಳು’ ಎಂಬ ವಿಷಯದ ಬಗ್ಗೆ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ. ಎಂ.ಎಲ್. ಸಾಮಗ, ಗೋಷ್ಠಿ 06ರಲ್ಲಿ ‘ಬನ್ನಂಜೆಯವರ ಬರಹಗಳು ಮತ್ತು ಮೈಚಾರಿಕತೆ’ ಎಂಬ ವಿಷಯದ ಬಗ್ಗೆ ಡಾ. ಶಿವರಾಮ ಕಾರಂತ ಟ್ರಸ್ಟ್ ಇದರ ಅಧ್ಯಕ್ಷರಾದ ಡಾ. ಗಣನಾಥ ಎಕ್ಕಾರು ಇವರುಗಳು ವಿಷಯ ಮಂಡನೆ ಮಾಡಲಿದ್ದಾರೆ. ಸಂಜೆ 4-00 ಗಂಟೆಗೆ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಇದರ ಗೌರವಧ್ಯಕ್ಷರಾದ ವಿದ್ಯಾಭೂಷಣ ಇವರ ಸಭಾಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಚಿಂತಕರಾದ ಗಂಗಾವತಿ ಪ್ರಾಣೇಶ್ ಇವರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾಭೂಷಣ ಮತ್ತು ತಂಡದವರಿಂದ ಆಚಾರ್ಯರ ಹಾಡುಗಳ ‘ನಾದ ಲಹರಿ’ ಸಂಗೀತ ಕಾರ್ಯಕ್ರಮ ನಡೆಯಲಿದೆ.