ಕುಂದಾಪುರ : ಕುಂದಾಪುರ ತಾಲೂಕು ಯುವ ಬಂಟರ ಸಂಘ (ರಿ.) ಇದರ ವತಿಯಿಂದ ‘ಬಂಟರ ಯಕ್ಷ ಸಂಭ್ರಮ’ ಆಯ್ದ ಬಡಗು ತಿಟ್ಟಿನ ಬಂಟ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಮತ್ತು ಬಂಟ ಯಕ್ಷ ಭೂಷಣ ಪ್ರಶಸ್ತಿ ಪ್ರದಾನವು ದಿನಾಂಕ 30-12-2023ರಂದು ಅಪರಾಹ್ನ 2 ಗಂಟೆಗೆ ಬಂಟರ ಯಾನೆ ನಾಡವರ ಸಂಕೀರ್ಣ, ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ.
‘ಮಾಯಾಪುರಿ’ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಭಾಗವತರು : ಸುದೀಪಚಂದ್ರ ಶೆಟ್ಟಿ ಮೇಗದ್ದೆ (ಮಾರಣಕಟ್ಟೆ ಮೇಳ), ಗಣೇಶ ಶೆಟ್ಟಿ ಬೆಳ್ವೆ (ಮಂದಾರ್ತಿ ಮೇಳ), ಸಂತೋಷ ಶೆಟ್ಟಿ ಎಡಮೊಗೆ (ಸೌಕೂರು ಮೇಳ), ಚಂಡೆ : ಶ್ರೀಕಾಂತ್ ಶೆಟ್ಟಿ, ಎಡಮೊಗೆ (ಮಂದಾರ್ತಿ ಮೇಳ) ಮತ್ತು ಮದ್ದಳೆ : ಶಶಾಂಕ್ ಕುಮಾರ್. ಮುಮ್ಮೇಳದಲ್ಲಿ ಶತ್ರುಘ್ನ – ಅರೆಹೊಳೆ ಸಂಜೀವ ಶೆಟ್ಟ (ಮಾರಣಕಟ್ಟೆ ಮೇಳ), ದಮನ – ಕಾನ್ಕಿ ಸುಧಾಕರ ಶೆಟ್ಟಿ (ಮಾರಣಕಟ್ಟೆ ಮೇಳ), ಬಲ – ವಿಘ್ನೇಶ್ ಶೆಟ್ಟಿ ಎಡಮೊಗೆ (ಕಮಲಶಿಲೆ ಮೇಳ) ಮತ್ತು ನಂದನ್ ಶೆಟ್ಟಿ ಅಗುಂಬೆ (ಮಂದಾರ್ತಿ ಮೇಳ), ಪುಷ್ಕಳ – ಆಜ್ರಿ ಉದಯ ಶೆಟ್ಟಿ (ಮಂದಾರ್ತಿ ಮೇಳ), ಮದನಾಕ್ಷಿ – ಹೆನ್ನಾಬೈಲು ಸಂಜೀವ ಶೆಟ್ಟಿ (ಮಾರಣಕಟ್ಟಿ ಮೇಳ), ತಾರಾವಳಿ – ಪ್ರದೀಪ ಶೆಟ್ಟಿ, ನಾರ್ಕಳಿ (ಮಾರಣಕಟ್ಟೆ ಮೇಳ), ದೂತಿ – ಎಳಬೇರು ಶೇಖರ ಶೆಟ್ಟಿ (ಮಾರಣಕಟ್ಟೆ ಮೇಳ), ಕುಮುದಿನಿ – ಮಂಜುನಾಥ ಶೆಟ್ಟಿ ಹೆಬ್ಬಾಡಿ (ಸೌಕೂರು ಮೇಳ)
‘ವೀರಮಣಿ’ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಭಾಗವತರು : ನಗರ ಅಣ್ಣಪ್ಪ ಶೆಟ್ಟಿ, (ಮಾರಣಕಟ್ಟೆ ಮೇಳ), ಗಣಪತಿ ಶೆಟ್ಟಿ ಬೆಪ್ಡೆ (ಕಮಲಶಿಲೆ ಮೇಳ) ಮತ್ತು ಸಂತೋಷ ಶೆಟ್ಟಿ ಎಡಮೊಗೆ (ಸೌಕೂರು ಮೇಳ), ಚಂಡೆ : ಶ್ರೀಕಾಂತ್ ಶೆಟ್ಟಿ, ಎಡಮೊಗೆ (ಮಂದಾರ್ತಿ ಮೇಳ) ಮತ್ತು ಮದ್ದಳೆ : ಶಶಾಂಕ್ ಕುಮಾರ್. ಮುಮ್ಮೇಳದಲ್ಲಿ ವೀರಮಣಿ – ನರಾಡಿ ಭೋಜರಾಜ ಶೆಟ್ಟಿ (ಮಂದಾರ್ತಿ ಮೇಳ), ಹನುಮಂತ – ಸದಾಶಿವ ಶೆಟ್ಟಿ ಎಡಮೊಗೆ (ಶನೀಶ್ವರ ಮೇಳ), ರುಕ್ಮಾಂಗ – ವಾಟಾರ್ ರವಿ ಶೆಟ್ಟಿ (ಮಾರಣಕಟ್ಟೆ ಮೇಳ), ಶುಭಾಂಗ – ನಿತೀನ್ ಶೆಟ್ಟಿ ಸಿದ್ಧಾಪುರ (ಕಮಲಶಿಲೆ ಮೇಳ) ಮತ್ತು ಈಶ್ವರ – ಚಂದ್ರಶೇಖರ ಶೆಟ್ಟಿ, ಅರಳಸುರುಚಿ (ಸೌಕೂರು ಮೇಳ)
‘ಅಭಿಮನ್ಯು’ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಭಾಗವತರು : ಹೊಸಂಗಡಿ ರವೀಂದ್ರ ಶೆಟ್ಟಿ, (ಶನೀಶ್ವರ ಮೇಳ) ಮತ್ತು ಬೆಪ್ಡೆ ದಿನೇಶ ಶೆಟ್ಟ ಬೆಳ್ವೆ (ಮಾರಣಕಟ್ಟೆ ಮೇಳ), ಚಂಡೆ ಶ್ರೀಕಾಂತ್ ಶೆಟ್ಟಿ ಎಡಮೊಗೆ (ಮಂದಾರ್ತಿ ಮೇಳ) ಮತ್ತು ಮದ್ದಳೆ : ಶಶಾಂಕ್ ಕುಮಾರ್. ಮುಮ್ಮೇಳದಲ್ಲಿ ಕೌರವ- ಐರಬೈಲು ಆನಂದ ಶೆಟ್ಟಿ (ಮಾರಣಕಟ್ಟೆ ಮೇಳ), ದ್ರೋಣ – ಆಜ್ರ ಅರುಣ ಕುಮಾರ ಶೆಟ್ಟಿ (ಮಂದಾರ್ತಿ ಮೇಳ), ಸುಭದ್ರೆ – ಹೊಸಂಗಡಿ ರಾಜೀವ ಶೆಟ್ಟಿ, ಅಭಿಮನ್ಯು 1 – ಬೆಳಂಜೆ ಪ್ರಭಾಕರ ಶೆಟ್ಟಿ (ಮಂದಾರ್ತಿ ಮೇಳ), ಅಭಿಮನ್ಯು 2 – ಕೊಳಾಳಿ ಕೃಷ್ಣ ಶೆಟ್ಟಿ (ಮಾರಣಕಟ್ಟೆ ಮೇಳ), ಧರ್ಮರಾಯ – ಮಡಾಮಕ್ಕಿ ಪ್ರಭಾಕರ ಶೆಟ್ಟಿ (ಮಾರಣಕಟ್ಟಿ ಮೇಳ), ಕರ್ಣ – ಬಡಾಬಾಳು ರಾಘವೇಂದ್ರ ಶೆಟ್ಟಿ, (ಶನೀಶ್ವರ ಮೇಳ), ಜಯದ್ರತ – ಶ್ರೀಕಾಂತ ಶೆಟ್ಟಿ, ಸುರ್ಗಿಜೆಡ್ದು (ಮಡಾಮಕ್ಕಿ ಮೇಳ) ಮತ್ತು ದುಶ್ಯಾಸನ – ಸಂದೇಶ ಶೆಟ್ಟಿ ಆರ್ಡಿ (ಮಂದಾರ್ತಿ ಮೇಳ)
ಇದೇ ಸಂದರ್ಭದಲ್ಲಿ ಶ್ರೀ ಕಂದಾವರ ರಘುರಾಮ ಶೆಟ್ಟಿ (ಯಕ್ಷಗಾನ ಪ್ರಸಂಗಕರ್ತರು), ಹೊಳಂದೂರು ಸಂಜೀವ ಶೆಟ್ಟಿ (ಹಿರಿಯ ಯಕ್ಷಗಾನ ಸಂಚಾಲಕರು), ನಾರಾಯಣ ಶೆಟ್ಟಿ ಜನ್ಸಾಲೆ (ಹಿರಿಯ ಯಕ್ಷಗಾನ ವ್ಯವಸ್ಥಾಪಕರು), ರಾಜೀವ ಶೆಟ್ಟಿ ಹೊಸಂಗಡಿ (ಹಿರಿಯ ಸ್ತ್ರೀ ವೇಷಧಾರಿ), ನರಾಡಿ ಭೋಜರಾಜ ಶೆಟ್ಟಿ (ಹಿರಿಯ ಎರಡನೇ ವೇಷಧಾರಿ), ಹಳ್ಳಾಡಿ ಶ್ರೀ ಜಯ ರಾಮ ಶೆಟ್ಟಿ (ಹಿರಿಯ ಹಾಸ್ಯ ಕಲಾವಿದರು), ಶ್ರೀ ಐರಬೈಲು ಆನಂದ ಶೆಟ್ಟಿ (ಹಿರಿಯ ಎರಡನೇ ವೇಷಧಾರಿ), ಶ್ರೀ ಕಬ್ಬಿನ ಬೈಲ್ ಶಿವರಾಮ ಶೆಟ್ಟಿ (ಹಿರಿಯ ಮುಂಡಾಸು ವೇಷಧಾರಿ),ಶ್ರೀ ಸುರೇಶ ಶೆಟ್ಟಿ ಶಂಕರನಾರಾಯಣ (ಹಿರಿಯ ಭಾಗವತರು) (ಹಿರಿಯ ಭಾಗವತರು), ಶ್ರೀ ಕೊಳಾಳಿ ಕೃಷ್ಣ ಶೆಟ್ಟಿ (ಹಿರಿಯ ಪುಂಡು ವೇಷಧಾರಿ) ಇವರುಗಳಿಗೆ ‘ಬಂಟ ಯಕ್ಷ ಭೂಷಣ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ನಡೆಯಲಿದೆ.