ಬೆಂಗಳೂರು: ಬೆಂಗಳೂರಿನ ಮಹಿಳಾ ಅಧ್ಯಯನಕೇಂದ್ರ, ವಿಶ್ವವಿದ್ಯಾಲಯ ಮತ್ತು ಕ್ರಿಯಾ ಮಾಧ್ಯಮ ಪ್ರಸ್ತುತಪಡಿಸುವ ವೀಣಾ ಮಜುಂದಾರ್ ಅವರ ’ಉರುಳುವ ಕಲ್ಲಿನ ನೆನಪಿನ ಸುರುಳಿ’ ಕೃತಿಯ ಬಿಡುಗಡೆ ಮತ್ತು ರಾಷ್ಟ್ರೀಯ ವಿಚಾರಸಂಕಿರಣ ಕಾರ್ಯಕ್ರಮವು ದಿನಾಂಕ 31-07-2023ರ ಸೋಮವಾರ ಮಧ್ಯಾಹ್ನ 2 ಗಂಟೆಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಆವರಣದ ಸೆನೆಟ್ ಸಭಾಂಗಣದಲ್ಲಿ ನಡೆಯಲಿದೆ.
ನವದೆಹಲಿಯ ಮಹಿಳಾ ಅಭಿವೃದ್ಧಿ ಅಧ್ಯಯನ ಕೇಂದ್ರದ ಇಂದ್ರಾಣಿ ಮಂಜುದಾರ್ ಕೃತಿಯ ಆನಾವರಣ ಮಾಡಲಿದ್ದಾರೆ. ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಡಾ.ಕೆ.ಎಸ್.ವೈಶಾಲಿ ಕೃತಿಯ ಕುರಿತು ಮಾತುಗಳನ್ನಾಡಲಿರುವರು. ಕ್ರಿಯಾ ಮಾಧ್ಯಮದ ನಿರ್ದೇಶಕಿಯಾದ ಕೆ.ಎಸ್.ವಿಮಲ ಹಾಗೂ ಅನುವಾದಕರಾದ ಲೇಖಕಿ ಡಾ.ಎನ್.ಗಾಯತ್ರಿ ತಮ್ಮ ಅಭಿಪ್ರಾಯಗಳನ್ನು ಹಂಚಲಿದ್ದಾರೆ.
ಸಭಾಕಾರ್ಯಕ್ರಮದ ಬಳಿಕ ‘ಸಮಾನತೆಯೆಡೆಗೆ’ ವರದಿಯ ಅಪೂರ್ಣವಾಗುಳಿದ ಕಾರ್ಯಸೂಚಿಗಳು ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರಿನ ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ.ಆರ್.ಇಂದಿರಾ ವಹಿಸಲಿದ್ದಾರೆ ಮತ್ತು ಇಂದ್ರಾಣಿ ಮಂಜುದಾರ್ ಹಾಗೂ ಲೇಖಕಿಯಾದ ಡಾ.ದು.ಸರಸ್ವತಿ ವಿಚಾರ ಮಂಡಿಸಲಿರುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ಜಯಕರ್ ಎಸ್.ಎಮ್ ಭಾಗವಹಿಸಲಿದ್ದಾರೆ ಮತ್ತು ವಿಶ್ವವಿದ್ಯಾಲಯ ಮಹಿಳಾ ಅಧ್ಯಯನ ಕೇಂದ್ರದ ಅಸೋಸಿಯೇಟ್ ಪ್ರಾಧ್ಯಾಪಕರಾಗಿರುವ ಡಾ.ಸುಧೀಷ್ಣ ಮುಖರ್ಜಿ ಪ್ರಸ್ತಾವಿಕ ನುಡಿಗಳನ್ನಾಡುವರು. ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಎಂ.ಸಿದ್ದಪ್ಪ ಸ್ವಾಗತಿಸಿ. ಅಧ್ಯಯನ ಕೇಂದ್ರದ ಪ್ರೊ.ಸಿ.ಡಿ.ವೆಂಕಟೇಶ್ ವಂದನಾರ್ಪಣೆಗೈಯಲಿದ್ದಾರೆ.