ಮಂಗಳೂರು : ‘55 ನಿಮಿಷದ ಒಂದು ಪ್ರೇಮ ಕಥೆ’ ನಾಟಕವನ್ನು 2015ರಲ್ಲಿ 9 ಕಲಾವಿದರು ಒಂದೇ ಸಮಯಕ್ಕೆ ಬೆಂಗಳೂರಿನ 9 ರಂಗಮಂದಿರಗಳಲ್ಲಿ ಪ್ರಾರಂಭಿಸಿ ಒಂದೇ ಸಮಯಕ್ಕೆ ಮುಗಿಸಿ ಲಿಮ್ಕಾ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿತ್ತು.
ಈಗ ಇಡೀ ಕರ್ನಾಟಕದ ಮೂವತ್ತೊಂದು ಜಿಲ್ಲೆಗಳಲ್ಲೂ ಒಂದೇ ದಿನ ಪ್ರಯೋಗಗೊಳ್ಳುವ ಮುಖೇನ ಮತ್ತೊಮ್ಮೆ ರಂಗಭೂಮಿಯಲ್ಲಿ ಎರಡನೇ ಬಾರಿ ಲಿಮ್ಕಾ ದಾಖಲೆ ಬರೆಯುವ ಪ್ರಯತ್ನಕ್ಕೆ ದಾಪುಗಾಲಿಡಲು ಸಿದ್ಧವಾಗಿದೆ. 31 ಜುಲೈ, 31 ಜಿಲ್ಲೆ, 31 ಕಲಾವಿದರು, 31 ರಂಗಮಂದಿರ ಏಕಕಾಲಕ್ಕೆ ಇಡೀ ಕರ್ನಾಟಕದಾದ್ಯಂತ ಒಂದೇ ದಿನ ಒಂದೇ ಸಮಯಕ್ಕೆ ಪ್ರದರ್ಶನಗೊಳ್ಳುತ್ತಿರುವ ನಾಟಕ. ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟವಾಗಿ ದಾಖಲೆ ಮಾಡಲು, 2023ರ ಲಿಮ್ಕಾ ದಾಖಲೆಗೆ ಸಿದ್ಧವಾಗುತ್ತಿರುವ ನಾಟಕವೇ ‘55 ನಿಮಿಷದ ಒಂದು ಪ್ರೇಮಕಥೆ’. ಇದಕ್ಕಾಗಿ 3 ತಿಂಗಳಿಂದ ತಂಡ ಶ್ರಮವಹಿಸುತ್ತಿದ್ದು 220ಕ್ಕೂ ಹೆಚ್ಚು ತಂತ್ರಜ್ಞರು 31 ಕಲಾವಿದರು ಇತಿಹಾಸ ಸೃಷ್ಟಿಸುವಲ್ಲಿ ನಿರತರಾಗಿದ್ದಾರೆ.
ಕಲಾವಿದರ ಹೆಸರು, ಪ್ರದರ್ಶಿಸುತ್ತಿರುವ ಸ್ಥಳ ಹಾಗೂ ರಂಗಮಂದಿರದ ಹೆಸರು
1) ರಾಜಗುರು ಹೊಸಕೋಟೆ – ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಂಗಳೂರು
2) ನಾಗೇಶ್ ಭೋಧನ ಹೊಸಹಳ್ಳಿ – ಜನಪದರು ರಂಗಮಂದಿರ, ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯದ ಆವರಣ, ನಿಂಬೆಕಾಯಿಪುರ, ಹೊಸಕೋಟೆ ತಾಲೂಕು, ಬೆಂಗಳೂರು ಗ್ರಾಮಾಂತರ
3) ಸಿದ್ಧಲಿಂಗೇಶ್ವರ – ಸುವರ್ಣ ಸಾಂಸ್ಕೃತಿಕ ಭವನ, ರಂಗಾಯಣ ಶಿವಮೊಗ್ಗ
4) ಹರ್ಷವರ್ಧನ ಪ್ರಸಾದ – ಸ್ನೇಹರಂಗ ಸಾಂಸ್ಕೃತಿಕ ಭವನ, ಇಳಕಲ್ಲ ಬಾಗಲಕೋಟೆ ಜಿಲ್ಲೆ, ಸುವರ್ಣ ರಂಗಮಂದಿರದ ಹಿಂದೆ
5) ಶ್ರೀಧರ – ಎಂ.ಇ.ಎಸ್. ಶ್ರೀಮತಿ ಸುಂದರಮ್ಮ ಶಂಕರ ಮೂರ್ತಿ ಸಭಾಂಗಣ, ರತ್ನಗಿರಿ ರಸ್ತೆ, ಚಿಕ್ಕಮಗಳೂರು
6) ಹೇಮಂತ್ ಕುಮಾರ್ ಬಿ.ಆರ್. – ದಿ. ಎನ್.ಸಿ. ನಾಗಯ್ಯ ರೆಡ್ಡಿ ಸ್ಮಾರಕ, ಧ್ವಜ ಸತ್ಯಾಗ್ರಹ ಸಭಾಂಗಣ
7) ಶಿವಾನಂದ್ ಮರಿಶೆಟ್ಟಿ – ಅಂಬೇಡ್ಕರ್ ಭವನ, ಅಂಬಿಕಾ ನಗರ
8) ಶ್ರವಣಪ್ರಭಾ – ತಾರಾಸು ರಂಗಮಂದಿರ, ಬಿ.ಡಿ.ರೋಡ್, ಚಿತ್ರದುರ್ಗ
9) ಏಣಗಿ ಪ್ರಭಾಕರ್ – ರಂಗಭಾರತಿ ಕಲಾ ಮಂದಿರ, ಹೂವಿನ ಹಡಗಲಿ, ವಿಜಯ ನಗರ
10) ಶಿವಕುಮಾರ್ ಎಸ್. – ರಾಮಕೃಷ್ಣ ವಿಲಾಸ ವೇದಿಕೆ, ರಾಘವೇಂದ್ರ ಟಾಕೀಸ್ ಹತ್ತಿರ
11) ಶಶಿಕೃಷ್ಣ – ಗೀತಾಂಜಲಿ ಸಭಾಂಗಣ, ಎಂ.ಜಿ.ಎಂ. ಕಾಲೇಜು ಆವರಣ, ಉಡುಪಿ
12) ಕಿರಣ್ ಗೌಡ – ಮೊರಾರ್ಜಿ ದೇಸಾಯಿ ರೆಸಿಡೆನ್ಷಿಯಲ್ ಪಿ.ಯು. ಸೈನ್ಸ್ ಕಾಲೇಜ್, ಅಳವಂಡಿ ರೋಡ್, ಹೀರೇಸಿಂದೋಗಿ ಕೊಪ್ಪಳ
13) ಸುನೀಲ್ – ಗಾಂಧಿ ಶಾಂತಿ ಪ್ರತಿಷ್ಠಾನ, ರಂಗಾಯಣ ಹತ್ತಿರ ಕೋರ್ಟ್ ಸರ್ಕಲ್, ಧಾರವಾಡ
14) ಶ್ರವಣಕುಮಾರ್ ಪದಮಾನವರ್ – ಕಂದಗಲ್ ಹನುಮಂತರಾಯ ರಂಗಮಂದಿರ, ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ ಪಕ್ಕ, ವಿಜಯಪುರ
15) ರಾಜೇಶ್ ಆರ್. – ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರ, ಚಾಮರಾಜನಗರ
16) ಯಶವಂತ್ ಪ್ರಕಾಶ್ – ಸುವರ್ಣ ಸಭಾ ಭವನ, ಕನ್ನಡ ಭವನ, ಕಲಬುರಗಿ
17) ಸಂತೋಷ ರಾವ್ ಸುರ್ವೆ – ಮುಂಡರಗಿ ಬಯಲು ರಂಗಮಂದಿರ, ಪುರಸಭೆ ಮೈದಾನ
18) ಪುನೀತ್ ಗೌಡ – ಕೆ.ವಿ. ಶಂಕರೇಗೌಡ ಸಭಾಂಗಣ, ಕರ್ನಾಟಕ ಸಂಘ ಆವರಣ, ಮಂಡ್ಯ
19) ಚೇತನ್ ರಾವ್ – ಕಿರು ರಂಗಮಂದಿರ, ಕಲಾಮಂದಿರ ಆವರಣ, ಮೈಸೂರು
20) ಕಿರಣ್ ಆರ್. – ಜಾನಪದ ಲೋಕ, ರಾಮನಗರ
21) ಲಿಖಿತ್ ವಿ. – ಗುಬ್ಬಿವೀರಣ್ಣ ಕಲಾಕ್ಷೇತ್ರ, ಮಂಡಿಪೇಟೆ, ತುಮಕೂರು
22) ಸುಪ್ರೀತ್ ಟಿ.ಪಿ. – ಸಂಸ್ಕೃತ ಭವನ, ಅರಳೀಕಟ್ಟೆ ಹಾಸನ
23) ಶರತ್ ಬಹುಜನ್ – ಶ್ರೀ ಟಿ. ಚನ್ನಯ್ಯ ರಂಗಮಂದಿರ, ಕೋಲಾರ
24) ಶಿವರಾಜು ಎನ್. – ಗೋವಿಂದ ದಾಸ ಕಾಲೇಜ್, ಸುರತ್ಕಲ್
25) ಅನಿಲ್ ಕುಮಾರ್ ಎನ್. – ಶ್ರೀ ಮಹರ್ಷಿ ವಾಲ್ಮೀಕಿ ಭವನ, ಲಕ್ಷ್ಮೀನಗರ, ಯಾದಗಿರಿ
26) ಸಿದ್ದು ಕುಮ್ಮಟಗಿ – ಕನ್ನಡ ಸಾಹಿತ್ಯ ಭವನ, ಬೆಳಗಾವಿ
27) ಭರತ್ ಅಕಿರಾ – ಪತ್ರಿಕಾ ಭವನ, ಮಡಿಕೇರಿ
28) ಅಜಯ್ ನರೇಂದ್ರ – ಹಂಚಿನ ಮನೆ, ಆರ್ಟ್ ಗ್ಯಾಲರಿ, ಹಾವೇರಿ
29) ಅವಿನಾಶ್ ಶಿವಪುರೆ – ಆಲ್ ಅಜೀಜ್ ಅಡಿಟೋರಿಯಂ, ಶಾಹಿನ್ ಬಾಯ್ಸ್ ಕ್ಯಾಂಪಸ್, ಶಹಪೂರಗೇಟ ಬೀದರ
30) ರಂಜನ್ – ಫೀಟ್ ಆಫ್ ಫೈರ್ ಡಾನ್ಸ್ ಆಂಡ್ ಫಿಟ್ನೆಸ್ ಸ್ಟುಡಿಯೋ, ಸಿಂಧನೂರು ತಾಲೂಕು
31) ವಿನಯ್ – ಪದ್ಮಶ್ರೀ ಚಿಂದೋಡಿ ಲೀಲಾ, ಕಲಾಕ್ಷೇತ್ರ ದಾವಣಗೆರೆ
ರಂಗಪಯಣ ಇಲ್ಲಿಯ ತನಕ….
ಇಲ್ಲ ಏನೋ ಸಮಸ್ಯೆ ಇದೆ ಎಂದಾಗಲೇ ಹುಟ್ಟಿಕೊಂಡಿದ್ದು ರಂಗಭೂಮಿ. ರಂಗಭೂಮಿ ನಾಟಕಗಳ ಮೂಲಕ ಸಕಾರಾತ್ಮಕ ಬೆಳವಣಿಗೆಗಳು ಆಗಿರುವುದನ್ನು ನಾವಿಗಾಗಲೇ ಕಂಡಿದ್ದೇವೆ. ಕಲೆ, ಸಂಸ್ಕೃತಿ, ಸಾಹಿತ್ಯ ಇವೆಲ್ಲವೂ ಮನುಷ್ಯನ ಸೃಜನಾತ್ಮಕ ಬೆಳವಣಿಗೆಗೆ ಮತ್ತಷ್ಟು ಸಹಾಯ ಮಾಡುತ್ತದೆ. ಆ ನಿಟ್ಟಿನಲ್ಲಿ ಸತತ 14 ವರ್ಷಗಳಿಂದ ಬೆಂಗಳೂರಿನ ರಂಗತಂಡಗಳಲ್ಲಿ ಒಂದಿಲ್ಲೊಂದು ವೈವಿಧ್ಯಮಯ ನಾಟಕಗಳ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಜನರ ಮನದಲ್ಲಿ ನೆಲೆ ಊರಿರುವ ತಂಡವೇ ‘ರಂಗಪಯಣ’.
ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಕೊಂಡ ರಂಗಪಯಣವು ಮಕ್ಕಳ ಶಿಬಿರ, ನಾಟಕಗಳ ಮೂಲಕ ಸಕ್ರಿಯವಾಗಿತ್ತು. 8 ಜನರಲ್ಲಿ ಪ್ರಾರಂಭವಾದ ತಂಡ ಇದೀಗ 60ಕ್ಕೂ ಹೆಚ್ಚು ಕಲಾವಿದರನ್ನು ಒಳಗೊಂಡು ಸಾಮಾಜಿಕವಾಗಿ ನಾಟಕಗಳ ಪ್ರಯೋಗಗಳನ್ನು ಮಾಡಿಕೊಂಡು ಬಂದಿದೆ. ದೇಶಾದ್ಯಂತ ನಾಟಕಗಳ ಮೂಲಕ ಸಂಚರಿಸಿರುವ ತಂಡವು. ಪ್ರತೀ ವರ್ಷ ಶಂಕರ್ ನಾಗ್ ಹೆಸರಿನಲ್ಲಿ ನಾಟಕೋತ್ಸವ ಸಂವಾದ, ಮಹಿಳೆ ಮತ್ತು ರಂಗಭೂಮಿ, ನಾಗರಕಟ್ಟೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡು ಬಂದಿದ್ದು, ಕಾವ್ಯ, ನೃತ್ಯ, ಸಾಹಿತ್ಯ ಹೀಗೆ ಮಾರ್ಚ್ 8ರಂದು ಮಹಿಳೆಯರಿಗೋಸ್ಕರ ಮೀಸಲಿಟ್ಟಿರುವುದು ಈ ತಂಡದ ವಿಭಿನ್ನ ಆಲೋಚನೆಗೆ ಹಿಡಿದ ಕನ್ನಡಿ. ಹಾಗಾಗಿ ಮಹಿಳೆಯರ ನೋವು, ಸಂಕಟಗಳಿಗೆ ಹೋರಾಟದ ಮೂಲಕ ಉತ್ತರಕೊಡುತ್ತಾ, ನೊಂದ ಮಹಿಳೆಯರು ತಮ್ಮ ಇರುವನ್ನು ಉಳಿಸಿಕೊಳ್ಳಲು ಬೆನ್ನೆಲುಬಾಗಿ ನಿಂತ ಉತ್ತರಪ್ರದೇಶದ ಸಂಪತ್ ಪಾಲ್ ದೇವಿಯವರ ಹೋರಾಟದ ಹಾದಿಯನ್ನು “ಗುಲಾಬಿ ಗ್ಯಾಂಗ್” ನಾಟಕದ ಮೂಲಕ ಕಟ್ಟಿಕೊಟ್ಟದೆ. ಈ ನಾಟಕ ಈಗಾಗಲೇ 80 ಪ್ರದರ್ಶನಗಳನ್ನು ಕಂಡಿದ್ದು, ಪ್ರದರ್ಶನಗಳು ಇನ್ನೂ ಮುಂದುವರೆದಿದೆ.
ಇದಕ್ಕೂ ಮುಂಚೆ ಶ್ರದ್ಧಾ, ಚಂದ್ರಗಿರಿ ತೀರದಲ್ಲಿ, ಮಾದಾರಿ ಮಾದಯ್ಯ, ಭೂಮಿ, ಶರೀಫ, ಒಂದಾನೊಂದು ಕಾಲದಲ್ಲಿ, ಬದುಕು ಜಟಕಾ ಬಂಡಿ, ಅಕ್ಷರದವ್ವ, ಬಿದ್ದೂರಿನ ಬಿಗ್ವಿನ್, ಗುಲಾಬಿ ಗ್ಯಾಂಗ್ ಭಾಗ-1 ಮತ್ತು ಭಾಗ-2, ಸೊಮಾಲಿಯಾ ಕಡಲ್ಗಳ್ಳರು ಮತ್ತು ಗಾರ್ಗಿ ಇವೇ ಮುಂತಾದ ನಾಟಕಗಳು ಮತ್ತು ಬೀದಿ ನಾಟಕಗಳನ್ನು ಪ್ರಯೋಗಿಸುವ ಮುಖಾಂತರ, ರಂಗಪಯಣ ತಂಡವು ಇಲ್ಲಯವರೆಗೂ ಹಲವಾರು ಯಶಸ್ವಿ ಪ್ರದರ್ಶನಗಳನ್ನು ನೀಡಿದೆ. ಜನರನ್ನು ಸಕರಾತ್ಮಕವಾಗಿ ಪ್ರಭಾವಿಸುವಂತೆ ರಂಗಭೂಮಿಯೆಂಬ ಕ್ರಿಯಾಶೀಲ ವೇದಿಕೆಯನ್ನು ಬಳಸುವ ಉದ್ದೇಶವನ್ನು ಈ ಹಿಂದೆ ಸಾಕಷ್ಟು ಹಿರಿಯರು ಮಾಡಿದ್ದಾರೆ. ಆ ಪರಂಪರೆಯನ್ನು ಕಾಪಾಡುವ ಹಾಗೂ ಮುಂದುವರೆಸುವ ಸಣ್ಣ ಜವಬ್ದಾರಿ ನಮ್ಮದು.
ಸಾಮಾಜಿಕ ಕಳಕಳಿಗೆ ಸಣ್ಣದಾಗಿ ಕೈ ಜೋಡಿಸುವ ತಂಡ ಎಷ್ಟೋ ಸಮಸ್ಯೆಗಳು ಭಾರ ಎಂದೆನಿಸಿದರೂ ಅದನ್ನು ಹೊತ್ತು ನ್ಯಾಯ ಒದಗಿಸಿದೆ. ವಿದ್ಯಾರ್ಥಿಗಳ ಓದಿಗಾಗಿ ನಾಟಕ ಕಟ್ಟಿ ಹಣ ಸಂಗ್ರಹಿಸುವುದರೊಂದಿಗೆ, ಹಲವಾರು ವ್ಯಕ್ತಿಗಳ ಆರೋಗ್ಯ ಸುಧಾರಣೆಗಾಗಿ ಆಸ್ಪತ್ರೆಯ ಖರ್ಚಿಗಾಗಿ ಹಣ ಸಂಗ್ರಹಣೆ, ಕರೋನಾ ಕಾಲಗಟ್ಟದಲ್ಲಿ ಸಾಧ್ಯವಾದಷ್ಟು ಕಿಟ್ ವಿತರಣೆ, ಬೀದಿನಾಟಕಗಳ ಮೂಲಕ ಸಾಮಾಜಿಕ ಕಳಕಳಿಯುಳ್ಳ ನಾಟಕಗಳ ಪ್ರಯೋಗ, ಹೀಗೆ ಸಮಾಜದ ಜೊತೆ ಜೊತೆಗೆ ಸಮಾಜದಲ್ಲಿನ ವಿಚಾರಗಳನ್ನು ಮುಂದಿಟ್ಟುಕೊಂಡು ನಾಟಕಗಳನ್ನು ಪ್ರಯೋಗಿಸುತ್ತಾ ಬಂದಿದೆ.
ಇವತ್ತಿನ ಯುವಪೀಳಿಗೆ ಹೆಚ್ಚು ರಂಗಭೂಮಿಯ ಕಡೆಗೆ ಗಮನ ಹರಿಸಲಿ ಮತ್ತು ರಂಗಭೂಮಿ ಹೇಗೆ ನಮ್ಮ ಜೀವನಕ್ಕೆ ಹತ್ತಿರವಾಗಿದೆ, ಜೊತೆಗೆ ಇದರ ಪ್ರಾಮುಖ್ಯತೆ, ಹೀಗೆ ಒಂದಷ್ಟು ವಿಷಯಗಳನ್ನು ಹೊತ್ತು “ನಾಟಕದೊಳ್ ಕರ್ನಾಟಕ” ಎಂಬ ಶೀರ್ಷಿಕೆಯೊಂದಿಗೆ ಈಗ ಕರ್ನಾಟಕದಾದ್ಯಂತ ನಾಟಕ ಪ್ರಯೋಗಕ್ಕೆ ಸಜ್ಜಾದ ರಂಗಭೂಮಿಯ ಹೆಮ್ಮೆಯ ಮತ್ತು ದಾಖಲೆಗಾಗಿ ನಿಂತ ನಾಟಕವೇ ‘55 ನಿಮಿಷದ ಒಂದು ಪ್ರೇಮ ಕಥೆ’.
ಬೆಳ್ಳಿ ತೆರೆಯ ಬಾದ್ ಷಾ ಶಂಕರ್ ನಾಗ್ ರವರ ಬಂಗಾರದ ನೆನಪುಗಳನ್ನು ರಂಗಭೂಮಿಯಲ್ಲಿ ನಿರಂತರವಾಗಿ ಕಾಪಿಟ್ಟುಕೊಳ್ಳುವ ಕಾಯಕ ರಂಗಪಯಣ ತಂಡದ್ದು. ಈ ನಾಟಕವನ್ನು ಶಂಕರ್‌ನಾಗ್ ಅವರಿಗೆ ಅರ್ಪಿಸುತ್ತಿದ್ದಾರೆ.
ನಾಟಕದ ಕಥಾವಸ್ತು
ರಂಗಭೂಮಿ, ಸಿನಿಮಾ ಹಿನ್ನೆಲೆಯ ನಟ ಅವನು. ಆದರೆ ಕಾಲೇಜಿನಲ್ಲಿ ಪ್ರೀತಿಸಿದ ಹುಡುಗಿ ಬದುಕಿನಿಂದ ದೂರವಾಗಿ ಅವಳು ಉಳಿಸಿ ಹೋದ ನೆನಪುಗಳು ಮಾತ್ರ ಅವನಲ್ಲಿ ಸದಾ ಜಾಗೃತವಾಗಿರುತ್ತದೆ.
ಹೀಗಿದ್ದಾಗ ಒಂದು ದಿನ ಇದ್ದಕಿದ್ದಾಗೆ ಎದುರಾಗುತ್ತಾಳೆ. ನೋಟ, ಮಾತು, ಮರು ಮಿಲನದ ಸಂಭ್ರಮ ಮುಗಿಲು ಮುಟ್ಟುವ ಮುನ್ನವೇ ಹೊರಡುವ ಗಡಿಬಿಡಿಯಲ್ಲಿ ಅವಳು ತನ್ನ ಇರುವಿಕೆಯನ್ನು ವಿಳಾಸವಿಲ್ಲದ ಏರಿಯಾ ಹೆಸರು ಹೇಳಿ ಮರೆಯಾಗುತ್ತಾಳೆ ಎಂಬಲ್ಲಿಗೆ ‘55 ನಿಮಿಷದ ಒಂದು ಪ್ರೇಮಕಥೆ’ ನಾಟಕದ ಎಳೆ ಬಿಚ್ಚಿಕೊಳ್ಳುತ್ತದೆ.
ಮತ್ತೆ ಮತ್ತೆ ಅವಳನ್ನು ಕಣ್ತುಂಬಿಸಿಕೊಳ್ಳಲು ಅವಳನ್ನು ಅರಸಿ ಹೊರಟವನಿಗೆ ಎದುರಾಗುವ 10 ಮನೆಗಳಲ್ಲಿ ಅವಳ ಮನೆ ಯಾವುದೋ ಗೊತ್ತಿಲ್ಲ. ಆದರೆ ಪ್ರತಿ ಮನೆಯ ಕದ ತಟ್ಟುವಾಗಲೆಲ್ಲ ಬದುಕಿನ ನಾನಾ ಮಜಲುಗಳು ಬಾಗಿಲು ತೆರೆದುಗೊಳ್ಳುತ್ತವೆ. ಕಥೆ ಕೊನೆ ತಲುಪುವ ಹಂತದಲ್ಲಿ ವೀಕ್ಷಕನೇ 10 ಮನೆಯೊಳಗಿನ ಬದುಕಿನ ಕಿಟಕಿಯನ್ನು ಇಣುಕಿ ಒಂದೊಂದು ಸರಳನ್ನು ಎಣಿಸುವಲ್ಲಿಗೆ ಇದೊಂದು ಜೀವನಾನುಭವವಾಗಿ ಉಳಿಸುವಲ್ಲಿಗೆ ‘55 ನಿಮಿಷದ ಒಂದು ಪ್ರೇಮಕಥೆ’ ಏಕವ್ಯಕ್ತಿ ನಾಟಕ ದಾಖಲೆಯ ಪುಟ ಸೇರುತ್ತದೆ.
ಬೆಳ್ಳಿತೆರೆಯ ಮೇಲೆ ನಾಯಕನಾಗುವ ಕನಸು ಕಂಡಿದ್ದ ನಟನೊಬ್ಬನ ಪ್ರೇಮ ಕಥೆ, ನಾಯಕನಾಗ ಬಯಸಿದ್ದವ ಜೂನಿಯರ್ ಆರ್ಟಿಸ್ಟ್ ಆದ ಕಥೆ ತನ್ನ ಇಡೀ ಜೀವನದ ಅಮೂಲ್ಯ ಕ್ಷಣಗಳನ್ನು ಮತ್ತು ತನ್ನ ಪ್ರೇಮ ಕಥೆಯನ್ನು ಅತ್ಯಂತ ಸ್ವಾರಸ್ಯಕರ ರೀತಿಯಲ್ಲಿ ಬಿಚ್ಚಿಡುತ್ತಾ ಹೋಗುತ್ತಾನೆ. ಕಾಲೇಜಿನ ದಿನಗಳಲ್ಲಿ ಸಿಕ್ಕ ಪ್ರೀತಿ ತನ್ನ ಪ್ರೀತಿಯ ತೆಕ್ಕೆಯಿಂದ ಕೈ ಜಾರಿದಾಗ ಅವಳನ್ನು ಹುಡುಕಲು ಹೊರಡುತ್ತಾನೆ. ತನ್ನ ತಾಯಿ, ತಂದೆ, ಪ್ರೀತಿ ಮತ್ತು ಸಿನಿಮಾ ಇವು ನಾಲ್ಕು ದಿಕ್ಕುಗಳ ಕಥೆಯನ್ನು ಒಟ್ಟೋಟ್ಟಿಗೆ ಹಾಸ್ಯದ ಲೇಪನದೊಂದಿಗೆ ಹೇಳ ಹೊರಟ ‘ಸಂಜು’ವಿನ ಕಥೆ ಅದೇ ‘55 ನಿಮಿಷದ ಒಂದು ಪ್ರೇಮ ಕಥೆ’.