ಹರಿಹರಪುರ : ಕಲಾಭಿಮಾನಿ ಬಳಗ, ಯಕ್ಷವೇದಿಕೆ ಮತ್ತು ರೋಟರಿ ಸಮುದಾಯದಳ ಹರಿಹರಪುರ ಇವರ ಆಶ್ರಯದಲ್ಲಿ ಯಕ್ಷ ಗಾನಗಂಧರ್ವ ದಿ. ಕಾಳಿಂಗ ನಾವಡ ಹಾಗೂ ಗಾನ ಕೋಗಿಲೆ ದಿ. ಸುಬ್ರಹ್ಮಣ್ಯ ಧಾರೇಶ್ವರ ‘ಭಾಗವತರ ಸಂಸ್ಮರಣೆ ಗಾನಾರಾಧನೆ’ ಕಾರ್ಯಕ್ರಮವನ್ನು ದಿನಾಂಕ 25 ಮೇ 2025ರಂದು ಸಂಜೆ 4-30 ಗಂಟೆಗೆ ಹರಿಹರಪುರ ಶ್ರೀ ನುಗ್ಗಿಮಕ್ಕಿ ಮಲೇಶಯ್ಯನವರ ಛತ್ರದಲ್ಲಿ ಆಯೋಜಿಸಲಾಗಿದೆ.
ಗಾನಾರಾಧನೆಯಲ್ಲಿ ಸ್ವರವಾರಿಧಿ ಶ್ರೀಮತಿ ಕಾವ್ಯಶ್ರೀ ಅಜೇರು ಇವರಿಗೆ ಶ್ರೀಪತಿ ನಾಯಕ್ ಅಜೇರು ಮತ್ತು ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಇವರು ಮೃದಂಗ ಮತ್ತು ಚಂಡೆಯಲ್ಲಿ ಸಹಕರಿಸಲಿದ್ದಾರೆ.