ಸಿರಿಬಾಗಿಲು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಕಲೆ- ಸಂಸ್ಕೃತಿ- ಸಾಹಿತ್ಯ ಉಳಿಸುವ, ಬೆಳೆಸುವ ,ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಯೋಜನೆಯಂತೆ ಭಜನೆ- ಹರಿಸಂಕೀತನೆ- ಗಮಕ -ಹವ್ಯಾಸಿ ತಂಡಗಳ ಯಕ್ಷಗಾನ ತಾಳಮದ್ದಳೆ ಹಾಗೂ ವಿದ್ಯಾರ್ಥಿ ಸಮಾಗಮ ಕಾರ್ಯಕ್ರಮವು ಆಗಸ್ಟ್ ತಿಂಗಳ 15 ,16 ,17ನೇ ತಾರೀಕಿನಂದು ಜರಗಲಿದೆ.
ದಿನಾಂಕ 15 ರಂದು ಬೆಳಗ್ಗೆ 6.00 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಾಡಿನ ವಿವಿಧ ಭಜನಾ ತಂಡಗಳ ಭಜನಾ ಕಾರ್ಯಕ್ರಮ, ತದನಂತರ ಹರಿಸಂಕೀರ್ತನೆಯು ನಡೆಯಲಿದೆ. ಅದೇ ದಿನ ದೂರದ ಕುಂದಾಪುರದ ಶ್ರೀ ನಾದೋಪಾಸನ ಸಮೂಹ ,ಕೋಟೇಶ್ವರ ಇವರ ಪಾಲ್ಗೊಳ್ಳುವಿಕೆ ಮೆರಗು ನೀಡಲಿದೆ. ದಿನಾಂಕ 16 ,17 ರಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿಯವರೆಗೆ ಹವ್ಯಾಸಿ ಯಕ್ಷಗಾನ ಕಲಾವಿದರ ಒಟ್ಟು 9 ತಂಡಗಳ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಜತೆಗೆ ದಿನಾಂಕ 16ರಂದು ವಿಶೇಷವಾಗಿ 12-00 ಗಂಟೆಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜ್ ಉಜಿರೆ ಗ್ರೇಡ್ ಎ.+.+ಗ್ರೇಡ್ ಉಜಿರೆ ವಿದ್ಯಾರ್ಥಿಗಳಿಗೆ ಯಕ್ಷಗಾನ ಕುರಿತಾದ ಉಪನ್ಯಾಸ- ಪ್ರಾತ್ಯಕ್ಷಿಕೆ – ಸಂವಾದವು ತೆಂಕುತಿಟ್ಟು ಯಕ್ಷಗಾನ ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಂದ ನಡೆಲಿದೆ.
17 ರಂದು ಮಧ್ಯಾಹ್ನ 2 ಗಂಟೆಗೆ ‘ಗಮಕ ಶ್ರಾವಣ’ ಕಾರ್ಯಕ್ರಮವು ಕರ್ನಾಟಕ ಗಮಕ ಪರಿಷತ್ತು ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು ಇವರಿಂದ ನಡೆಯಲಿದೆ.
ಈ ಕಾರ್ಯಕ್ರಮವನ್ನು ದಿನಾಂಕ 16 ಆಗಸ್ಟ್ 2025ರಂದು ಬೆಳಿಗ್ಗೆ ಬ್ರಹ್ಮಶ್ರೀ ಗಣಾದಿರಾಜ ಉಪಾಧ್ಯಾಯ ಕೊಲ್ಲಂಗಾನ ಇವರು ದೀಪಪ್ರಜ್ವಲನೆ ಮೂಲಕ ಉಧ್ಘಾಟಿಸಲಿದ್ದಾರೆ. ಹವ್ಯಾಸಿ ಯಕ್ಷಗಾನ ಕಲಾವಿದ, ಸಂಘಟಕ ಶ್ರೀ ಗಣೇಶ್ ಭಟ್ ಬಾಯಾರು, ಪುಳ್ಕೂರು ಮಹಾದೇವ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಶೀನ ಶೆಟ್ಟಿ ಕಜೆ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಾರೆ. ದಿನಾಂಕ 17 ಆಗಸ್ಟ್ 2025ರಂದು ಮದ್ಯಾಹ್ನ ಘಂಟೆ 2.00ರಿಂದ ವಿಶೇಷವಾದ ಗಮಕ ಕಾರ್ಯಕ್ರಮವಿರುತ್ತದೆ. ಈ ಕಾರ್ಯಕ್ರಮದ ಸಮಾರೋಪವು ದಿನಾಂಕ 17 ಆಗಸ್ಟ್ 2025ರಂದು ಸಂಜೆ ಘಂಟೆ 4:00ಕ್ಕೆ ನಡೆಯಲಿದೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮುಕ್ತೇಸರರಾದ ಶ್ರೀ ಕೆ. ಜಿ. ಶ್ಯಾನುಭೋಗ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಹಿರಿಯ ವಕೀಲ, ಯಕ್ಷಗಾನ ಸಂಘಟಕ, ಕಲಾವಿದರಾದ ಶ್ರೀ ಸಂತೋಷ್ ಐತಾಳ್ ಪಣಂಬೂರು ಹಾಗೂ ಸತತ 48 ವರ್ಷಗಳಿಂದ ಶ್ರೀ ಧರ್ಮಸ್ಥಳ ಮೇಳದ ಹರಿಕೆಯಾಟವನ್ನು ಮಾನ್ಯದಲ್ಲಿ ನಡೆಸುತ್ತಿರುವ ಶ್ರೀ ರವಿಶಂಕರ್ ಮಾನ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ಸಿರಿಬಾಗಿಲು ಪ್ರತಿಷ್ಠಾನವು ತಿಳಿಸಿದೆ.

