Subscribe to Updates

    Get the latest creative news from FooBar about art, design and business.

    What's Hot

    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಬೇಸಿಗೆ ಕವಿಗೋಷ್ಠಿ

    April 30, 2026

    ಕನ್ನಡ ಸಾಹಿತ್ಯ ಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ‘ರಂಗಾಭಿನಯ ಕಾರ್ಯಾಗಾರ’

    April 30, 2026

    ಯಕ್ಷಗಾನ ಕಲಾವಿದ ಮಳಲಿ ಶೀನಯ್ಯ ನಿಧನ

    April 29, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳ ಖ್ಯಾತ ತಂಡಗಳಿಂದ ‘ಶಿವಗಾನಾಮೃತ’ ಭಜನೆ ಸೇವೆ ಸುಸಂಪನ್ನ
    Felicitation

    ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳ ಖ್ಯಾತ ತಂಡಗಳಿಂದ ‘ಶಿವಗಾನಾಮೃತ’ ಭಜನೆ ಸೇವೆ ಸುಸಂಪನ್ನ

    February 16, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಲ್ಮಾಡಿ : ಕಲ್ಮಾಡಿ ಶ್ರೀ ಭಗವತಿ ಮಾರಿಕಾಂಬ ಸನ್ನಿಧಿಯ ಸಹಕಾರದೊಂದಿಗೆ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಪೆರ್ಡೂರು ಹಾಗೂ ಮತ್ಸ್ಯರಾಜ್ ಗ್ರೂಪ್ ಮಲ್ಪೆ ಇವರ ಸಹಯೋಗದಲ್ಲಿ ಶ್ರೀಮನ್ಮಹಾ ಶಿವರಾತ್ರಿ ಪ್ರಯುಕ್ತ ದಿನಾಂಕ 15 ಫೆಬ್ರವರಿ 2026ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಹಮ್ಮಿಕೊಂಡಿದ್ದ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳ ಖ್ಯಾತ ತಂಡಗಳಿಂದ ‘ಶಿವಗಾನಾಮೃತ’ ಭಜನಾ ಯಜ್ಞ ಭಕ್ತ-ಗಾನ-ಲಹರಿ ಸೇವೆ ಕಾರ್ಯಕ್ರಮ ಭಕ್ತ ಜನರನ್ನು ಮಂತ್ರಮುಗ್ಧಗೊಳಿಸಿತು.

    ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದ ಕೊಡವೂರು ನಗರ ಸಭೆ ಸದಸ್ಯ ವಿಜಯ್ ಕೊಡವೂರು “ನಾವುಗಳು ಆರಾಧಿಸುವ ದೇವರುಗಳ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮಾನವತ್ವದಿಂದ ದೈವತ್ವದ ಕಡೆಗೆ ಹೊರಳುವ ಮನಸ್ಥಿತಿಯನ್ನ ಬೆಳೆಸಿಕೊಳ್ಳಬೇಕು. ಶಿಷ್ಟ ರಕ್ಷಣೆ ದುಷ್ಟ ಶಿಕ್ಷಣೆಯ ಹಾಗೆ ಸಮಾಜದಲ್ಲಿ ಸಜ್ಜನರನ್ನು ರಕ್ಷಿಸುತ್ತ ಸಮಾಜಘಾತುಕರನ್ನು ಮಾನವೀಯತೆಯೆಡೆಗೆ ಒಲವು ಬೆಳೆಸಿಕೊಳ್ಳುವಂತೆ ಮಾಡುವ ಕಾರ್ಯ ನಡೆಯಬೇಕಿದೆ” ಎಂದು ನುಡಿದರು.

    ಅಧ್ಯಕ್ಷತೆ ವಹಿಸಿದ್ದ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್ ಅವರು ಮಾತನಾಡಿ “ಕೇವಲ ನಮ್ಮ ಆತ್ಮತೃಪ್ತಿಗಾಗಿ ಮಾತ್ರವಲ್ಲ ಆತ್ಮೋದ್ಧಾರಕ್ಕಾಗಿ, ದೇವರ ಅನುಗ್ರಹಕ್ಕಾಗಿ ಸದಾ ಭಜನೆಯಿಂದ ಸ್ತುತಿಸಬೇಕು. ಭಜನೆ ನಡೆವ ಸ್ಥಳದ, ಪರಿಸರದ ಹಾಗೂ ದೇಶದ ಕಲ್ಯಾಣಕ್ಕಾಗಿ ಭಜಿಸಬೇಕು. ಇದರಿಂದ ದೇವರು ಸುಪ್ರಸನ್ನರಾಗುತ್ತಾರೆ” ಎಂದು ತಿಳಿಸಿದರು.

    ಇದೇ ಸಂದರ್ಭದಲ್ಲಿ ಭಜನಾ ಕ್ಷೇತ್ರದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ಮಲ್ಪೆ ಸಸಿತೋಟದ ಎಂ. ಜಗದೀಶ ಬಂಗೇರ, ಶ್ರೀ ವಿಠೋಬಾ ಭಜನಾ ಮಂದಿರ ಮತ್ತು ಕಾನಂಗಿಯ ಮಧುಕರ ಬಂಗೇರ, ಶ್ರೀ ದೇವಿ ಜ್ಞಾನೋದಯ ಪಾಂಡುರಂಗ ಭಜನಾ ಮಂದಿರ ಇವರನ್ನು ಸಮ್ಮಾನಿಸಲಾಯಿತು. ಸಮ್ಮಾನಿತರು ಮಾತನಾಡಿ ಅರಿಷಡ್ವರ್ಗಗಳ ನಿಯಂತ್ರಣದಲ್ಲಿ, ಮಾನಸಿಕ ಸ್ಥಿರತೆಯ ಸಾಧನೆಗೆ ಭಜನೆಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ, ಮತ್ಸ್ಯರಾಜ್ ಗ್ರೂಪ್ ನ ಕೇಶವ ಎಂ. ಕೋಟ್ಯಾನ್ ಉಪಸ್ಥಿತರಿದ್ದರು. ಉದ್ಯಮಿಗಳಾದ ಶೇಖರ ಪುತ್ರನ್, ಪ್ರಕಾಶ ಕರ್ಕೇರ, ಮತ್ಸ್ಯರಾಜ್ ಗ್ರೂಪ್ ನ ಅಭಿನಂದನ್ ಕೋಟ್ಯಾನ್ ವೇದಿಕೆಯಲ್ಲಿದ್ದರು. ರವೀಂದ್ರ ನಾಡಿಗ್ ಸ್ವಾಗತಿಸಿ, ಪ್ರಭಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

    baikady Literature Music roovari
    Share. Facebook Twitter Pinterest LinkedIn Tumblr WhatsApp Email
    Previous Articleಕವಿ ಸುಬ್ರಾಯ ಚೊಕ್ಕಾಡಿಯವರಿಗೆ ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ ಪ್ರದಾನ
    Next Article ಸಂಗೀತ ವಿಮರ್ಶೆ | ಶ್ರೋತೃಗಳನ್ನು ರಂಜಿಸಿದ ಪ್ರಜ್ಞಾ ಅಡಿಗ
    roovari

    Add Comment Cancel Reply


    Related Posts

    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಬೇಸಿಗೆ ಕವಿಗೋಷ್ಠಿ

    April 30, 2026

    ಕನ್ನಡ ಸಾಹಿತ್ಯ ಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ‘ರಂಗಾಭಿನಯ ಕಾರ್ಯಾಗಾರ’

    April 30, 2026

    ಯಕ್ಷಗಾನ ಕಲಾವಿದ ಮಳಲಿ ಶೀನಯ್ಯ ನಿಧನ

    April 29, 2026

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಕಾಜಾಣ ನಾಟಕೋತ್ಸವ’ 2026 | ಏಪ್ರಿಲ್ 30

    April 29, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.