ಉಡುಪಿ : ಶ್ರೀ ಉಡುಪಿ ಮಾಧವ ಬಲ್ಲಾಳ್ ಇವರಿಗೆ ಗೌರವಾರ್ಪಣೆ ಪ್ರಯುಕ್ತ ‘ಭಕ್ತಿ ಸಂಗೀತ’ ಮತ್ತು ‘ನೃತ್ಯ ರೂಪಕ’ ಕಾರ್ಯಕ್ರಮವನ್ನು ದಿನಾಂಕ 09 ಮಾರ್ಚ್ 2025 ರಂದು ಸಂಜೆ 5-00 ಗಂಟೆಗೆ ಉಡುಪಿ ಕುಂಜಿಬೆಟ್ಟಿನ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸಂಜೆ 5-00 ಗಂಟೆಗೆ ಶ್ರೀಮತಿ ಮಾನಸ ತಂತ್ರಿ, ಶ್ರವಣ್ ಉಪಾಧ್ಯಾಯ, ಕುಮಾರಿ ಶ್ರದ್ಧಾ, ಕುಮಾರಿ ಸ್ಮೃತಿ, ಕುಮಾರಿ ರಕ್ಷಾ ಮತ್ತು ಇತರರಿಂದ ನಡೆಯುವ ಭಕ್ತಿ ಸಂಗೀತಕ್ಕೆ ಬಾಲಚಂದ್ರ ಭಾಗವತ ಮೃದಂಗದಲ್ಲಿ ಮತ್ತು ಕುಮಾರಿ ಧನಶ್ರೀ ಶಬರಾಯ ವಯೋಲಿನ್ ನಲ್ಲಿ ಸಹಕರಿಸಲಿದ್ದಾರೆ. 6-30 ಗಂಟೆಗೆ ನೃತ್ಯ ನಿಕೇತನ ಕೊಡವೂರು ತಂಡ ದವರಿಂದ ‘ನಾರಸಿಂಹ’ ನೃತ್ಯ ರೂಪಕ ಪ್ರಸ್ತುತಗೊಳ್ಳಲಿದೆ.