ಮಂಗಳೂರು : ಭರತಾಂಜಲಿ (ರಿ.) ಕೊಟ್ಟಾರ ಮಂಗಳೂರು ಸಂಸ್ಥೆಯ 30 ವರ್ಷ ತುಂಬಿದ ಸಂಭ್ರಮದ ಪ್ರಯುಕ್ತ ‘ಭರತಾಂಜಲಿ ಕಿಂಕಿಣಿ ತ್ರಿಂಶತಿ’ ಕಾರ್ಯಕ್ರಮವು ದಿನಾಂಕ 29 ಮಾರ್ಚ್ 2025ರಂದು ಸಂಜೆ 5.15ರಿಂದ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ನಟರಾಜನಿಗೆ ದೀಪ ಪ್ರಜ್ವಲನೆಯನ್ನು ಸಂಸ್ಥೆಯ ಮಾರ್ಗದರ್ಶಕ ಗುರುಗಳಾದ ಉಳ್ಳಾಲ ಮೋಹನ ಕುಮಾರ್ ಮಾಡಲಿದ್ದು. ಕಟೀಲು ದೇವಳದ ಆನುವಂಶಿಕ ಅರ್ಚಕರಾದ ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕೇಂದ್ರೀಯ ಅಧ್ಯಕ್ಷರಾದ ಎಚ್. ಸತೀಶ ಹಂದೆ, ಉದ್ಯಮಿ ರಘುನಾಥ್ ಸೋಮಯಾಜಿ, ಧಾರ್ಮಿಕ ವಿದ್ವಾಂಸ ಕಶೆಕೋಡಿ ಸೂರ್ಯನಾರಾಯಣ ಭಟ್, ಉದ್ಯಮಿ ಜಿತೇಂದ್ರ ಕೊಟ್ಟಾರಿ, ಕ್ರೆಡೈ ನಿಕಟಪೂರ್ವ ಅಧ್ಯಕ್ಷ ಪುಷ್ಪರಾಜ್ ಜೈನ್, ಸಂಸ್ಥೆಯ ಹಿರಿಯ ವಿದ್ಯಾರ್ಥಿ ಡಾ. ಶ್ರೇಯಸ್ ಭಾಗವಹಿಸಲಿರುವರು.
ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಅನ್ನಪೂರ್ಣಾ ರಿತೇಶ್, ಪ್ರಕ್ಷಿಲಾ ಜೈನ್, ಶ್ರಾವ್ಯಾ ಅಮೋಫ್ ಶೆಟ್ಟಿ, ಮಧುರ ಕಾರಂತ್, ಮಾನಸ ಕಾರಂತ್, ಮಾನಸಾ ಕುಲಾಲ್, ವಂದನಾ ಸುಜ್ಞಾನ್ ಮೊದಲಾದವರು ನೃತ್ಯ ಪ್ರದರ್ಶನ ಮಾಡಲಿರುವರು ಎಂದು ಗುರು ಪ್ರತಿಮಾ ಶ್ರೀಧರ್ ತಿಳಿಸಿದ್ದಾರೆ.

