ಬೆಂಗಳೂರು : ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವತಿಯಿಂದ ‘ಭಾರತ ಭೂಷಣ’ ಹಾಗೂ ‘ಕರುನಾಡ ಭೂಷಣ’ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ನೃತ್ಯೋತ್ಸವ ಕಾರ್ಯಕ್ರಮ ದಿನಾಂಕ 07 ಡಿಸೆಂಬರ್ 2024ರಂದು ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕೆ. ಪಿ. ಸಿ. ಸಿ. ಸಂಯೋಜಕ ಮಂಜುನಾಥ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಶಿಧರ್ ಕೋಟೆ, ಡಾ. ಕೆಂಚನೂರು ಶಂಕರ್, ಡಾ. ಶ್ರೀಧರ್ ಹಾಗೂ ಕಾಂತಿ ಶೆಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತೋತಾಪುರಿ ಮಠದ ಸೋಮಶೇಖರ ಗುರೂಜಿ ಮಾತನಾಡಿ ಕಲೆಯನ್ನು ಪ್ರೋತ್ಸಾಹಿಸಬೇಕು ಎಂಬಂತೆ ಹಿತನುಡಿಗಳನ್ನಾಡಿದರು.
ಮಲ್ಲಿಕಾ ಕೇಶವ್, ವೆಂಕಟರಾಜು ಹಾಗೂ ವಿರಾಜಪೇಟೆಯ ‘ನಾಟ್ಯ ಮಯೂರಿ’ ನೃತ್ಯ ಟ್ರಸ್ಟ್ ಇದರ ಪ್ರೇಮಾಂಜಲಿ ಉಪಸ್ಥಿತರಿದ್ದು, ಅನೇಕ ಕಡೆಗಳಿಂದ ನೃತ್ಯ ತಂಡಗಳು ಆಗಮಿಸಿ ಉತ್ತಮ ನೃತ್ಯ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ 80 ಮಂದಿ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
Subscribe to Updates
Get the latest creative news from FooBar about art, design and business.
ಬೆಂಗಳೂರಿನ ನಯನ ಸಭಾಂಗಣದಲ್ಲಿ ‘ಭಾರತ ಭೂಷಣ’ ಹಾಗೂ ‘ಕರುನಾಡ ಭೂಷಣ’ ಪ್ರಶಸ್ತಿ ಪ್ರದಾನ
Previous Articleಶಿರ್ವದಲ್ಲಿ ಸಮಾರೋಪಗೊಂಡ ಮೂರು ದಿನಗಳ ಕಿಶೋರ ಯಕ್ಷಗಾನ ಸಂಭ್ರಮ
Next Article ಅಮೃತವರ್ಷಿಣಿ’ ಮ್ಯೂಸಿಕ್ ಅಕಾಡೆಮಿಯ ವಾರ್ಷಿಕೋತ್ಸವ
Related Posts
Comments are closed.