ಬೆಂಗಳೂರು : ಬೆಂಗಳೂರಿನ ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ ಮತ್ತು ಮೋಹನ ತರಂಗಿಣಿ ಸಂಗೀತ ಸಭಾ ಜಂಟಿಯಾಗಿ ಪ್ರಸ್ತುತ ಪಡಿಸುವ ‘76ನೇ ವಾರ್ಷಿಕ ಸಾಂಸ್ಕೃತಿಕ ಸಂಗೀತ ನೃತ್ಯ ಮಹೋತ್ಸವ’ದ ಅಂಗವಾಗಿ ‘ಭರತನಾಟ್ಯ ಮತ್ತು ಸಂಗೀತ ಕಛೇರಿ’ಯು ದಿನಾಂಕ 21-01-2024ರಂದು ಮಧ್ಯಾಹ್ನ 3 ಗಂಟೆಗೆ ನಾದಬ್ರಹ್ಮ ಶಾರದ ಮಂದಿರದ ವಿದ್ಯಾಲಯದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಆಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠಾಪನಾ ಅರ್ಪಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಕ್ಷಯ ನಗರದ ಆನಂದಿ ನೃತ್ಯ ಶಾಲೆಯ ಗುರು ವಿದುಷಿ ಶ್ರೀಮತಿ ಶ್ವೇತಾ ರಾಘವೇಂದ್ರ ಶಿಷ್ಯ ವೃಂದದವರಿಂದ ಭರತನಾಟ್ಯ ಮತ್ತು ಉಡುಪಿಯ ವಿದುಷಿ ಶ್ರೀಮತಿ ಜ್ಯೋತಿಲಕ್ಷ್ಮೀ ವಿಶ್ವನಾಥ ಮತ್ತು ಬೆಂಗಳೂರಿನ ವಿದುಷಿ ಶ್ರೀಮತಿ ಸುಮಾ ವೆಂಕಟೇಶ್ ಇವರ ಹಾಡುಗಾರಿಕೆಗೆ ವಿದ್ವಾನ್ ಶ್ರೀ ಅಭಯ್ ಸಂಪಿಗೆತಾಯ ಪಿಟೀಲು ಮತ್ತು ವಿದ್ವಾನ್ ಶ್ರೀ ಸುಧೀಂದ್ರ ಸಿ. ಆಪ್ಟೆ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ತುಮಕೂರಿನ ಡಾ. ಶ್ರೀ ಲಕ್ಷ್ಮಣ ದಾಸ್ (ಕಥಾ ಕೀರ್ತನ), ಬೆಂಗಳೂರಿನ ವಿದ್ವಾನ್ ಶ್ರೀ ಯಶಸ್ವಿ ಸುಬ್ಬರಾವ್ (ಕರ್ನಾಟಕ ಸಂಗೀತ) ಮತ್ತು ಡಾ. ಶ್ರೀ ಸತ್ಯಮಂಗಲ ಮಹದೇವ (ಸಾಹಿತ್ಯ) ಇವರುಗಳಿಗೆ ಮಂಜುದಾಸ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಗುವುದು. ಈ ಕಾರ್ಯಕ್ರಮಕ್ಕೆ ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀ ಕೆ.ಎನ್. ಮೋಹನ ಕುಮಾರ ಮತ್ತು ಶ್ರೀಮತಿ ಲಕ್ಷ್ಮೀದೇವಿ ಮೋಹನ ಕುಮಾರ ಹಾಗೂ ವಿದ್ಯಾರ್ಥಿ ವೃಂದದವರು ತಮಗೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.