ಮಂಗಳೂರು : ಗುರು ವಿದುಷಿ ಶ್ರೀಮತಿ ಸೌಮ್ಯ ಸುಧೀಂದ್ರ ರಾವ್ ಇವರ ನೃತ್ಯ ಸುಧಾ ಸಂಸ್ಥೆಯ ‘ನೃತ್ಯೋತ್ಕರ್ಷ- 2025’ ಕಾರ್ಯಕ್ರಮವು ದಿನಾಂಕ 20 ಏಪ್ರಿಲ್ 2025ರಂದು ಮಂಗಳೂರಿನ ಕುದ್ಮಲ್ ರಂಗರಾವ್ ಸಭಾಭವನದಲ್ಲಿ ನಡೆಯಿತು
ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ವಿಧಾನ ಪರಿಷತ್ ನ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ನಾಯಕ್, ಮೃದಂಗ ವಿದ್ವಾನ್ ಶ್ರೀ ಹೆಚ್. ರವಿ ಕುಮಾರ್, ವಿದ್ವಾನ್ ಚಂದ್ರಶೇಖರ ನಾವಾಡ, ಗುರು ವಿದುಷಿ ಸುಮಂಗಲ ರತ್ನಾಕರ್ ರಾವ್ ಹಾಗೂ ಸಂಸ್ಥೆಯ ನಿರ್ದೇಶಕ ಡಾ ಸುಧೀಂದ್ರ ರಾವ್ ಪಾಲ್ಗೊಂಡರು .
ಸಂಸ್ಥೆಯ ಐದು ವಿದುಷಿಯರಾದ ಹರ್ಷಿತಾ ಸಾಲ್ಯಾನ್, ಸಹನಾ ಹತ್ವಾರ್, ವಿಜೇತ ಮೊಂತೆರೋ, ಸರ್ವಮಂಗಲ ಹಾಗೂ ಸ್ನೇಹ ಆಚಾರ್ಯ ಇವರಿಗೆ ‘ನೃತ್ಯ ಸುಧಾ ಕುಸುಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ವಿದುಷಿ ಭಾಗೀರತಿ ಎಮ್ ಸ್ವಾಗತಿಸಿ, ವಿದುಷಿ ರಚನ ಶೆಟ್ಟಿ ಹಾಗೂ ವಿದುಷಿ ವೆನೆಸ್ಸಾ ಮೊಂತೆರೊ ಕಾರ್ಯಕ್ರಮ ನಿರೂಪಿಸಿ, ವಿದುಷಿ ನಿಧಿ ಡಿ. ಶೆಟ್ಟಿ ವಂದನಾರ್ಪಣೆಗೈದರು.
ವಿದುಷಿಯರಾದ ಸಿಂಚನ ಎಸ್., ದೀಪ್ತಿ ದೇವಾಡಿಗ, ಡಾ. ಶ್ರೀರಕ್ಷ ರಾವ್ ಹಾಗೂ ಕುಮಾರಿಯರಾದ ಶ್ರೀಪೂರ್ಣ ರಾವ್, ಯಜ್ಞಾ ಶೆಟ್ಟಿ, ಶ್ರವ್ಯಶ್ರೀ ಬಲ್ಲಾಳ್, ದಿಶಾ ರಾವ್ ‘ನೃತ್ಯ ನಿರೂಪಣೆ’ ಮಾಡಿದರು.