ಮಂಗಳೂರು : ಕದ್ರಿ ನೃತ್ಯ ವಿದ್ಯಾ ನಿಲಯ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಇವರು ಪ್ರಸ್ತುತ ಪಡಿಸುವ ಗುರು ಯು.ಕೆ. ಪ್ರವೀಣ್ ಇವರ ಶಿಷ್ಯೆ ಕುಮಾರಿ ಶರಣ್ಯ ಎಸ್. ರಾವ್ ಇವರ ‘ಭರತನಾಟ್ಯ ರಂಗಪ್ರವೇಶ’ವು ದಿನಾಂಕ 30 ಮಾರ್ಚ್ 2025ರಂದು ಸಂಜೆ 4-00ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕಿನ ಚೈರ್ಮನ್ ಪಿ. ಪ್ರದೀಪ್ ಕುಮಾರ್ ಮತ್ತು ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಬಿ. ಪುರಾಣಿಕ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭರತನಾಟ್ಯ ಕಾರ್ಯಕ್ರಮಕ್ಕೆ ನಟುವಾಂಗಂನಲ್ಲಿ ಗುರು ಯು.ಕೆ. ಪ್ರವೀಣ್, ಹಾಡುಗಾರಿಕೆಯಲ್ಲಿ ವಿದುಷಿ ಉಷಾ ಪ್ರವೀಣ್, ಮೃದಂಗದಲ್ಲಿ ವಿದ್ವಾನ್ ಗಿತೇಶ್ ಎ.ಜಿ. ನೀಲೇಶ್ವರಂ, ವಯೋಲಿನ್ ವಿದ್ವಾನ್ ಶ್ರೀಧರ್ ಆಚಾರ್ ಪಡಿಗಾರ್ ಉಡುಪಿ, ಕೊಳಲು ವಿದ್ವಾನ್ ರಾಜಗೋಪಾಲ್ ವಿ.ಪಿ. ಇವರುಗಳು ಸಹಕರಿಸಲಿದ್ದಾರೆ.