Subscribe to Updates

    Get the latest creative news from FooBar about art, design and business.

    What's Hot

    ಮೈಸೂರು ನಟನ ರಂಗಶಾಲೆಯಲ್ಲಿ ‘ಸಂಜೆ ಹಾಡು’ ನಾಟಕ | ಜೂನ್ 14

    June 12, 2026

    ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಯುಜಿ ಡಿಪ್ಲೋಮಾ – ಡ್ರಾಮಾ ಕೋರ್ಸ್

    June 12, 2026

    ನಾಟಕ ವಿಮರ್ಶೆ | ‘ಸ್ವಾತಂತ್ರ್ಯದ ಓಟ’ ಇತಿಹಾಸ, ಮಾನವೀಯತೆ ಮತ್ತು ರಂಗಸೌಂದರ್ಯದ ಅಪೂರ್ವ ಸಂಗಮ

    June 12, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಒಡಿಯೂರು ತುಳು ಸಮ್ಮೇಳನ ಅಧ್ಯಕ್ಷರಾಗಿ ಭಾಸ್ಕರ ರೈ ಕುಕ್ಕುವಳ್ಳಿ ಆಯ್ಕೆ
    Literature

    ಒಡಿಯೂರು ತುಳು ಸಮ್ಮೇಳನ ಅಧ್ಯಕ್ಷರಾಗಿ ಭಾಸ್ಕರ ರೈ ಕುಕ್ಕುವಳ್ಳಿ ಆಯ್ಕೆ

    January 31, 2025Updated:February 4, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು: ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್ ಇಲ್ಲಿ ನಡೆಯಲಿರುವ ‘25ನೇ ತುಳು ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷರಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ, ತುಳು – ಕನ್ನಡ ಸಾಹಿತಿ ಹಾಗೂ ಹಿರಿಯ ಯಕ್ಷಗಾನ ಅರ್ಥಧಾರಿಯಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಆಯ್ಕೆಯಾಗಿದ್ದಾರೆ. ದಿನಾಂಕ 06 ಫೆಬ್ರವರಿ 2025ರಂದು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ ‘ತುಳು ಬಾಸೆ ಸಂಸ್ಕೃತಿದ ಜಾಗೃತಿಗಾದ್’ಎಂಬ ಧ್ಯೇಯ ವಾಕ್ಯದೊಂದಿಗೆ ಒಡಿಯೂರು ಶ್ರೀ ದತ್ತಾಂಜನೇಯ ಕ್ಷೇತ್ರದಲ್ಲಿ ಸಮ್ಮೇಳನ ನಡೆಯಲಿದೆ.

    ಬಹುಮುಖೀ ಸಾಧಕ :
    ಶಿಕ್ಷಣ, ಸಾಹಿತ್ಯ, ಕಲೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಭಾಸ್ಕರ ರೈ ಕುಕ್ಕುವಳ್ಳಿ ಓರ್ವ ಬಹುಮುಖೀ ಸಾಧಕರು. ಪುತ್ತೂರು ತಾಲೂಕು ಇರ್ದೆ ಗ್ರಾಮದ ಪ್ರತಿಷ್ಠಿತ ಬಾಲ್ಯೊಟ್ಟು ಗುತ್ತು ಮನೆತನದಲ್ಲಿ ಜನಿಸಿದ ಇವರು ನವೋದಯ ಪ್ರೌಢಶಾಲೆ ಬೆಟ್ಟಂಪಾಡಿ ಮತ್ತು ಪುತ್ತೂರಿನ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸಿದರು. ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ, ಮಂಗಳೂರಿನ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ. ಎಡ್. ಹಾಗೂ ಮೈಸೂರು ಮಾನಸಗಂಗೋತ್ರಿಯಲ್ಲಿ ಎಂ. ಎ. ಎಂ. ಎಡ್. ಪದವಿಗಳನ್ನು ಗಳಿಸಿದರು. ಭಾರತೀಯ ಅಂಚೆ ಇಲಾಖೆಯಲ್ಲಿ 14 ವರ್ಷ ಸೇವೆ ಸಲ್ಲಿಸಿದ ಬಳಿಕ ಶಿಕ್ಷಣ ಇಲಾಖೆ ಸೇರಿ ಚೇಳಾಯ್ರು ಮತ್ತು ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಹಾಗೂ ಪ್ರಾಂಶುಪಾಲರಾಗಿ ನಿವೃತ್ತರಾದರು.

    ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಪ್ರಮುಖ ಅರ್ಥಧಾರಿ, ಹವ್ಯಾಸಿ ವೇಷಧಾರಿಯಾಗಿ, ಪುರಾಣ ಪ್ರವಚನಕಾರರಾಗಿಯೂ ಇವರು ಪ್ರಸಿದ್ಧರು. ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾಗಿರುವ ಇವರು ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ ಬಾನುಲಿ ಪಠ್ಯಗಳನ್ನು ರಚಿಸಿದ್ದಾರೆ. ಧ್ವನಿಸುರುಳಿ, ಸಾಕ್ಷ್ಯ ಚಿತ್ರಗಳಿಗೆ ಸಾಹಿತ್ಯ ಮತ್ತು ಗೀತೆಗಳನ್ನು ರಚಿಸಿದ್ದಾರೆ. ಪ್ರಪ್ರಥಮ ತುಳುವಾರ್ತಾ ವಾಹಿನಿ ‘ನಮ್ಮ ಕುಡ್ಲ’, ‘ಸಹಾಯ ಟಿವಿ’, ‘ವಿ4’, ‘ಡೈಜಿ ವರ್ಲ್ಡ್’, ‘ರೇಡಿಯೋ ಸಾರಂಗ್’, ‘ಕ್ಯಾಡ್ ಮೀಡಿಯಾ’ಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ದೇಶ ವಿದೇಶಗಳ ಯಕ್ಷಗಾನ ಮತ್ತು ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.

    ಕೃತಿಗಳು :
    ಕನ್ನಡ ಮತ್ತು ತುಳು ಭಾಷಾ ಸಾಹಿತಿಯಾಗಿರುವ ಕುಕ್ಕುವಳ್ಳಿ ಹಲವು ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ‘ಏಕಾಂತದಿಂದ ಲೋಕಾಂತರಕೆ’, ‘ಸೃಷ್ಟಿಸಿರಿಯಲಿ ಪುಷ್ಪವೃಷ್ಟಿ’, ‘ಯಕ್ಷಿಕಾ’, ‘ಪಂಚದುರ್ಗಾ’, ‘ಅಭಿರಾಮ’ (ಕನ್ನಡ), ‘ಗಾಂಪನ ಪುರಾಣ’, ‘ನೆಯಿ – ಪೇರ್’, ‘ಸೀಯನ’ (ತುಳು), ‘ಯಕ್ಷಪ್ರಮೀಳ’, ‘ಯಕ್ಷ ಬಂಟರು’, ‘ಯಕ್ಷರ ಚೆನ್ನ’, ‘ಪುಳಿಂಚ ಸ್ಮೃತಿ – ಕೃತಿ’, ‘ಅರ್ಬಿ’, ‘ಅಳಿಕೆ ರಾಮಯ್ಯ ರೈ ಶತಮಾನದ ನೆನಪು’, ‘ಯಕ್ಷ ಪುರುಷೋತ್ತಮ’, ‘ಗಂದಸಾಲೆ’ (ಸಂಪಾದಿತ), ‘ನೀಲಾಂಜನ’, ‘ಭರಣಿ ಜ್ಯೋತಿ’, ‘ಜಯ ಜನಾರ್ದನ’, ‘ಶ್ರೀ ಆದಿ ಮಹೇಶ್ವರಿ’, ‘ಪುಣ್ಯನೆಲ ಪೆರಣಂಕಿಲ’ (ದ್ವನಿ ಸುರುಳಿ ಸಾಹಿತ್ಯ), ‘ಜನ್ಮ ರಹಸ್ಯ’, ‘ರಂಭಾ ಶಾಪ’, ‘ಹರಣ ಹಾರಿತು ಎರೆಯ ನೆಡೆಗೆ’, ‘ತುಳುನಾಡ ಬಲಿಯೇಂದ್ರ’, ‘ಗರತಿ ಮಂಗನೆ’, ‘ದಳವಾಯಿ ದೇವುಪೂಂಜೆ’, ‘ಜನ್ಮ ರಹಸ್ಯ’ (ನಾಟಕ), ‘ಘೋರ ಮಾರಕ’, ‘ಗುನ್ಯಾಸುರ ವಧೆ’, ‘ಉಳ್ಳಾಲ ರಾಣಿ ಅಬ್ಬಕ್ಕ’, ‘ಕ್ರಾಂತಿ ಕಹಳೆ’, ‘ಸ್ವಾತಂತ್ರ್ಯ ಸಮರ’, ‘ಕಲಿ ಪ್ರಳಯ’, ‘ವಜ್ರನಾಭ ವೃತ್ತಾಂತ’, ‘ಸಾವಯವ ವಿಜಯ’, ‘ವಾತಾಸುರ ಬಂಧನ – ಕರ್ಕಶಾಸುರ ವಧೆ’, ‘ನಾರಾಯಣಾಸ್ತ್ರ – ಕೊರೋನಾಸ್ತ್ರ, ಜೀವಜಲ – ದೇವನೆಲ’ (ಜನಜಾಗ್ರತಿ ಯಕ್ಷಗಾನ ಪ್ರಸಂಗ ಸಾಹಿತ್ಯ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

    ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದ ಭಾಸ್ಕರ ರೈ ಮಂಗಳೂರಿನಲ್ಲಿ ಪ್ರಪ್ರಥಮ ಮಹಿಳಾ ಯಕ್ಷಗಾನ ಸಮ್ಮೇಳನವನ್ನು ಸಂಘಟಿಸಿದ್ದರು. 2015ರಲ್ಲಿ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ತುಳು ಭಾಷೆಯನ್ನು ಪ್ರತಿನಿಧಿಸಿದ್ದಾರೆ. ಪ್ರಸ್ತುತ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ, ಯಕ್ಷಾಂಗಣ ಮಂಗಳೂರು, ಕರ್ನಾಟಕ ಯಕ್ಷಭಾರತಿ ಪುತ್ತೂರು ಸಂಸ್ಥೆಗಳ ಅಧ್ಯಕ್ಷರಾಗಿದ್ದಾರೆ.

    ಪ್ರಶಸ್ತಿಗಳು :
    ಅಂತಾರಾಷ್ಟ್ರೀಯ ‘ಆರ್ಯಭಟ ಪ್ರಶಸ್ತಿ’ , ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’, ‘ಕಾರಂತ ಸದ್ಭಾವನ ಪ್ರಶಸ್ತಿ’, ‘ಸೌರಭ ಪ್ರಶಸ್ತಿ’, ‘ಸಾಧನಾ ಪ್ರಶಸ್ತಿ’, ‘ನೂಪುರ ಪ್ರಶಸ್ತಿ’, ‘ವಿದ್ಯಾರತ್ನ ಪ್ರಶಸ್ತಿ’, ‘ಯು. ಎ. ಇ. ಬಂಟ ವಿಭೂಷಣ ಪ್ರಶಸ್ತಿ’, ‘ಪೆರ್ಮೆದ ತುಳುವೆ ಪ್ರಶಸ್ತಿ’ , ‘ಶೇಣಿ ಶತಮಾನೋತ್ಸವ ಪ್ರಶಸ್ತಿ’, ‘ಮುಂಬೈ ಯಕ್ಷರಕ್ಷಾ ಪ್ರಶಸ್ತಿ’, ಕುದುರೆಮುಖ ಕನ್ನಡ ಸಂಘದ ‘ರಾಜ್ಯೋತ್ಸವ ಪ್ರಶಸ್ತಿ’ಗಳು ಇವರಿಗೆ ಸಂದಿವೆ.

    Literature Tulu
    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷ ರಂಗದ ಯುವ ಮಹಿಳಾ ಕಲಾವಿದೆ ಕುಮಾರಿ ಸುಷ್ಮಿತಾ ಸಾಲಿಗ್ರಾಮ
    Next Article ಬೆಂಗಳೂರಿನ ನಯನ ರಂಗ ಮಂದಿರದಲ್ಲಿ ‘ಭರತನಾಟ್ಯ ಯುಗಳ ನೃತ್ಯ’ ಪ್ರದರ್ಶನ | ಫೆಬ್ರವರಿ 02
    roovari

    Add Comment Cancel Reply


    Related Posts

    ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್ ಪ್ರಶಸ್ತಿಗೆ ಲೇಖಕಿಯ ಆಯ್ಕೆ

    June 12, 2026

    ಸಪ್ನ ಬುಕ್ ಹೌಸ್ ಶಿವಮೊಗ್ಗದಲ್ಲಿ ನೂತನ ಶಾಖೆಯ ಉದ್ಘಾಟನೆ ಸಮಾರಂಭ | ಜೂನ್ 13

    June 12, 2026

    ರಘು ಇಡ್ಕಿದುರವರ 33ನೇ ಕೃತಿ ಬಿಡುಗಡೆ ಸಮಾರಂಭ | ಜೂನ್ 13

    June 12, 2026

    ವಿಪ್ರ ವೇದಿಕೆಯ ಸಭಾಂಗಣದಲ್ಲಿ ತಿಂಗಳ ಕಾರ್ಯಕ್ರಮ

    June 11, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.