Subscribe to Updates

    Get the latest creative news from FooBar about art, design and business.

    What's Hot

    ನಾಮ ಸಂಕೀರ್ತನ (ಭಜನೆ) ಕಾರ್ಯಾಗಾರ, ಸ್ಪರ್ಧೆ ಮತ್ತು ಸಂಗೀತ ಕಛೇರಿ | ಜೂನ್ 18ರಿಂದ

    June 15, 2026

    ಡಾ. ಟಿ.ಎಂ.ಎ. ಪೈ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರಕ್ಕೆ ಆಯ್ಕೆ

    June 15, 2026

    ಕನಕದಾಸ ಸಾಹಿತ್ಯದ ತುಳು ಅನುವಾದ ಕೃತಿಗಳ ಅವಲೋಕನ

    June 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕಟೀಲು ಯಕ್ಷಗಾನ ಸ್ಪರ್ಧೆ – ‘ಭ್ರಾಮರೀ ಯಕ್ಷ ಝೇಂಕಾರ’ದ ಸಮಾರೋಪ ಮತ್ತು ಬಹುಮಾನ ವಿತರಣೆ
    Yakshagana

    ಕಟೀಲು ಯಕ್ಷಗಾನ ಸ್ಪರ್ಧೆ – ‘ಭ್ರಾಮರೀ ಯಕ್ಷ ಝೇಂಕಾರ’ದ ಸಮಾರೋಪ ಮತ್ತು ಬಹುಮಾನ ವಿತರಣೆ

    June 5, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ ಮೇ 30 ಮತ್ತು 31ರಂದು ನಡೆದ ಆಹ್ವಾನಿತ ಕಾಲೇಜು ತಂಡಗಳ ಯಕ್ಷಗಾನ ಸ್ಪರ್ಧೆಯಲ್ಲಿ ‘ತರಣಿಸೇನ ಕಾಳಗ’ ಪ್ರದರ್ಶಿಸಿದ ನಿಟ್ಟೆ ಡಾ. ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜು ತಂಡ ಪ್ರಥಮ ಸ್ಥಾನ, ‘ಶ್ರೀಹರಿ ಲೀಲಾ’ ಪ್ರದರ್ಶಿಸಿದ ಮೂಡುಬಿದಿರೆ ಆಳ್ವಾಸ್ ಕಾಲೇಜು ದ್ವಿತೀಯ, ‘ಸುದರ್ಶನ ವಿಜಯ’ ಪ್ರದರ್ಶಿಸಿದ ಮಂಗಳೂರು ಎಸ್‌.ಡಿ.ಎಂ. ಕಾನೂನು ಮಹಾವಿದ್ಯಾಲಯ ತೃತೀಯ ಪ್ರಶಸ್ತಿ ಪಡೆದವು.

    ರಾಜ ವೇಷದಲ್ಲಿ ಗೋವಿಂದ ದಾಸ ಕಾಲೇಜಿನ ಕಾರ್ತಿಕ್ ಅಮೀನ್, ಎಸ್‌.ಡಿ.ಎಂ.ನ ಅಜೇಯ ಸುಬ್ರಹ್ಮಣ್ಯ, ಪುಂಡುವೇಷದಲ್ಲಿ ಎಸ್.ಡಿ.ಎಂ.ನ ಪ್ರಶಾಂತ ಐತಾಳ, ಮಂಗಳೂರು ವಿವಿ ಕಾಲೇಜಿನ ಕೌಶಿಕ್, ಸ್ತ್ರೀ ವೇಷದಲ್ಲಿ ಆಳ್ವಾಸ್‌ನ ಈಶ್ವರೀ ಶೆಟ್ಟಿ, ಮಂಗಳೂರು ವಿವಿ ಕಾಲೇಜಿನ ವೀಕ್ಷಿತಾ, ಹಾಸ್ಯದಲ್ಲಿ ನಿಟ್ಟೆ ಎನ್‌ಎಸ್‌ಎಎಂನ ಪ್ರಣವ ಮೂಡಿತ್ತಾಯ, ಎಸ್.ಡಿ.ಎಂ.ನ ರೋಹಿಲ್ ಶೆಟ್ಟಿ, ಬಣ್ಣದ ವೇಷದಲ್ಲಿ ಎಸ್.ಡಿ.ಎಸ್‌.ನ ವೆಂಕಟ ಯಶಸ್ವಿ ಕೆ., ಆಳ್ವಾಸ್ ನ ಜೀವನ್ ಕಟೀಲ್ ಕ್ರಮವಾಗಿ ಪ್ರಥಮ, ದ್ವಿತೀಯ ಬಹುಮಾನ ಪಡೆದರು.

    ಸಮಗ್ರ ವೈಯಕ್ತಿಕ ಪ್ರಶಸ್ತಿಯನ್ನು ನಿಟ್ಟೆ ಕಾಲೇಜಿನ ವರುಣ್ ಆಚಾರ್ಯ (ತರಣಿಸೇನ), ಸ್ವಸ್ತಿಕ್ ನ್ಯಾಷನಲ್ ಸ್ಕೂಲ್ ಉರ್ವ ಸ್ಟೋರ್ ನ ಭುವನ್ ಶೆಟ್ಟಿ (ದಾಕ್ಷಾಯಿಣಿ), ನಿಟ್ಟೆ ಕಾಲೇಜಿನ ಅನ್ವೇಷ್ ಆರ್. ಶೆಟ್ಟಿ (ರಾಮ) ಪಡೆದರು.

    ಬಹುಮಾನ ವಿತರಣೆ ಸಮಾರಂಭದಲ್ಲಿ ಕಟೀಲು ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಕೊಡತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಅರ್ಚಕರಾದ ವೆಂಕಟರಮಣ ಆಸ್ರಣ್ಣ, ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಸಂತೋಷ್ ಕುಮಾರ ಹೆಗ್ಡೆ, ಯಾದವ ಕೋಟ್ಯಾನ್, ಬಿಪಿನ್‌ ಚಂದ್ರ ಶೆಟ್ಟಿ, ಮೋಹನ್ ರಾವ್, ಮಿಥುನ ಕೊಡೆತ್ತೂರು, ಕಿರಣ್ ಪಕ್ಕಳ, ಪ್ರಾಚಾರ್ಯರಾದ ಡಾ. ಕೃಷ್ಣ, ಬಾಲಕೃಷ್ಣ ಶೆಟ್ಟಿ, ಸುಜಾತಾ ಭಟ್, ಉಪನ್ಯಾಸಕರಾದ ಡಾ. ವಿಜಯ್ ವಿ., ಆಶಾಕೀರ್ತಿ ಮತ್ತಿತರರಿದ್ದರು.

    ತೀರ್ಪುಗಾರರಾದ ತಾರಾನಾಥ ವರ್ಕಾಡಿ, ಅಂಡಾಲ ದೇವೀಪ್ರಸಾದ ಶೆಟ್ಟಿ, ಕಟೀಲು ಮುರಳೀಧರ ರಾವ್ ಅವರನ್ನು ಅಭಿನಂದಿಸಲಾಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಕನ್ನಡ ಸಂಘ ಕಾಂತಾವರದಿಂದ ‘ಅರಿವು ತಿಳಿವು’ ಕಾರ್ಯಕ್ರಮ
    Next Article ‘ರಜಾರಂಗು-ರಂಗಮಂಚ’ ಮಕ್ಕಳ ಶಿಬಿರದ ಸಮಾರೋಪ ಹಾಗೂ ‘ಕಾಳಿಂಗ ನಾವುಡರ ಸಂಸ್ಮರಣೆ’
    roovari

    Add Comment Cancel Reply


    Related Posts

    ಚರಿತ್ರಾರ್ಹ ದಾಖಲೆಯ ಸಿರಿಬಾಗಿಲ ‘ಬೆಳಕಿನ ಕಿರಣ’ ವಿಚಾರಗೋಷ್ಠಿ

    June 15, 2026

    ಗುಂಡ್ಮಿ ಸಾಲಿಗ್ರಾಮದಲ್ಲಿ ಉಚಿತ ಯಕ್ಷಗಾನ ತರಬೇತಿ | ಜೂನ್ 20ರಿಂದ

    June 15, 2026

    ಪುಸ್ತಕ ವಿಮರ್ಶೆ | ‘ಮಾತು ಮದ್ದಳೆ’ ಅರ್ಥಗಾರಿಕೆಯ ವಿಶೇಷ ಜಿಜ್ಞಾಸೆ

    June 13, 2026

    ಮಂಗಳಾದೇವಿ ದೇವಸ್ಥಾನದಲ್ಲಿ ಸನ್ಮಾನ ಮತ್ತು ಯಕ್ಷಗಾನ ಪ್ರದರ್ಶನ | ಜೂನ್ 14

    June 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.